Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನಿಮಲ್​’ ಸಿನಿಮಾದ ನಟಿ ತೃಪ್ತಿ ದಿಮ್ರಿ ಬಾಯ್​ಫ್ರೆಂಡ್​ ಫೋಟೋ ವೈರಲ್​

ಈ ಮೊದಲು ಕೂಡ ತೃಪ್ತಿ ದಿಮ್ರಿ ಮತ್ತು ಸ್ಯಾಮ್​ ಮರ್ಚೆಂಟ್​ ಜೊತೆಯಾಗಿರುವ ಫೋಟೋ ವೈರಲ್​ ಆಗಿತ್ತು. ಅದಾದ ನಂತರ ಅವರಿಬ್ಬರ ರಿಲೇಷನ್​ಶಿಪ್​ ಬಗ್ಗೆ ಗಾಸಿಪ್​ ಹಬ್ಬಿತು. ಉದ್ಯಮಿ ಸ್ಯಾಮ್​ ಮರ್ಚೆಂಟ್​ ಹಾಗೂ ತೃಪ್ತಿ ದಿಮ್ರಿ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಗಾಸಿಪ್​ ಹಬ್ಬಿತು. ಆದರೆ ಈ ವಿಚಾರವನ್ನು ಸದ್ಯಕ್ಕೆ ಅವರು ಒಪ್ಪಿಕೊಂಡಿಲ್ಲ.

‘ಅನಿಮಲ್​’ ಸಿನಿಮಾದ ನಟಿ ತೃಪ್ತಿ ದಿಮ್ರಿ ಬಾಯ್​ಫ್ರೆಂಡ್​ ಫೋಟೋ ವೈರಲ್​
ತೃಪ್ತಿ ದಿಮ್ರಿ, ಸ್ಯಾಮ್​ ಮರ್ಚೆಂಟ್​
Follow us
ಮದನ್​ ಕುಮಾರ್​
|

Updated on: Jan 31, 2024 | 3:37 PM

ನಟಿ ತೃಪ್ತಿ ದಿಮ್ರಿ (Tripti Dimri) ಅವರು ಸಖತ್​ ಜನಪ್ರಿಯತೆ ಗಳಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್​ 1ರಂದು ಬಿಡುಗಡೆಯಾದ ಅನಿಮಲ್​’ (Animal) ಸಿನಿಮಾದಿಂದ ಅವರ ಖ್ಯಾತಿ ಹೆಚ್ಚಾಗಿದೆ. ಆ ಚಿತ್ರದಲ್ಲಿ ಅವರು ಬೋಲ್ಡ್​ ಪಾತ್ರ ಮಾಡಿದ್ದಾರೆ. ರಿಯಲ್​ ಲೈಫ್​ನಲ್ಲಿ ತೃಪ್ತಿ ದಿಮ್ರಿ ಹೇಗಿರುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಿಗೆ ಇದೆ. ಅವರಿಗೆ ಈಗ 29 ವರ್ಷ ವಯಸ್ಸು. ಮದುವೆ ಬಗ್ಗೆ ಅವರ ನಿರ್ಧಾರ ಏನಿದೆ ಎಂಬುದು ಸದ್ಯಕ್ಕೆ ತಿಳಿದಿಲ್ಲ. ಈ ನಡುವೆ ಅವರ ಬಾಯ್​ಫ್ರೆಂಡ್​ ಸ್ಯಾಮ್​ ಮರ್ಚೆಂಟ್​ (Sam Merchant) ಫೋಟೋ ವೈರಲ್​ ಆಗಿದೆ. ಈ ಫೋಟೋವನ್ನು ಸ್ವತಃ ತೃಪ್ತಿ ದಿಮ್ರಿ ಅವರೇ ಹಂಚಿಕೊಂಡಿದ್ದಾರೆ.

ಹೋಟೆಲ್​ ಉದ್ಯಮಿ ಆಗಿರುವ ಸ್ಯಾಮ್​ ಮರ್ಚೆಂಟ್​ ಜೊತೆ ತೃಪ್ತಿ ದಿಮ್ರಿ ಅವರು ಹಲವು ವರ್ಷಗಳಿಂದ ಸ್ನೇಹ ಹೊಂದಿದ್ದಾರೆ. ಇತ್ತೀಚೆಗೆ ಸ್ಯಾಮ್​ ಮರ್ಚೆಂಟ್​ ಅವರು ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಈ ಪ್ರಯುಕ್ತ ತೃಪ್ತಿ ದಿಮ್ರಿ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಆ ಮೂಲಕ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: ‘ಆ ಸೀನ್​ ಇಲ್ಲ’: ಒಟಿಟಿಯಲ್ಲಿ ‘ಅನಿಮಲ್​’ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಬೇಸರ

2017ರಲ್ಲಿ ತೆಗೆದ ಫೋಟೋ ಮತ್ತು 2023ರಲ್ಲಿ ತೆಗೆದ ಫೋಟೋವನ್ನು ಜೊತೆ ಸೇರಿಸಿ ತೃಪ್ತಿ ದಿಮ್ರಿ ಪೋಸ್ಟ್​ ಮಾಡಿದ್ದಾರೆ. ‘ಹ್ಯಾಪಿ ಬರ್ತ್​ಡೇ ಸ್ಯಾಮ್​ ಮರ್ಚೆಂಟ್​. ‘ರಾಮ್​ ಶ್ಯಾಮ್​ ಪಾನಿಪುರಿ’ ತಿನ್ನುವುದನ್ನು ಬಿಡದೆಯೂ ನಾವು ಮತ್ತೊಮ್ಮೆ ತೆಳ್ಳಗೆ ಆಗಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಅವರು ಈ ಫೋಟೋಗಳಿಗೆ ಕ್ಯಾಪ್ಷನ್​ ನೀಡಿದ್ದಾರೆ. ಎರಡೂ ಫೋಟೋದಲ್ಲಿ ಅವರಿಬ್ಬರು ಆಪ್ತವಾಗಿರುವುದು ಕಾಣಿಸಿದೆ.

ಇದನ್ನೂ ಓದಿ: ಒಟಿಟಿಯಲ್ಲಿ ‘ಅನಿಮಲ್’ ಬಂದಿದ್ದಕ್ಕೆ ರಶ್ಮಿಕಾಗೆ ಸಿಕ್ಕಾಪಟ್ಟೆ ಖುಷಿ

ಕಳೆದ ವರ್ಷ ತೃಪ್ತಿ ದಿಮ್ರಿ ಮತ್ತು ಸ್ಯಾಮ್​ ಮರ್ಚೆಂಟ್​ ಅವರು ಜೊತೆಯಾಗಿ ಆಪ್ತರ ಮದುವೆಯಲ್ಲಿ ಕಾಣಿಸಿಕೊಂಡ ಫೋಟೋ ವೈರಲ್​ ಆಗಿತ್ತು. ಆ ಬಳಿಕ ಅವರಿಬ್ಬರ ರಿಲೇಷನ್​ಶಿಪ್​ ಬಗ್ಗೆ ಸುದ್ದಿ ಹಬ್ಬಿತು. ಸ್ಯಾಮ್​ ಮರ್ಚೆಂಟ್​ ಮತ್ತು ತೃಪ್ತಿ ದಿಮ್ರಿ ಅವರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಗಾಳಿಸುದ್ದಿ ಹಬ್ಬಿದೆ. ಆದರೆ ಈ ವಿಚಾರವನ್ನು ಅವರಿನ್ನೂ ಒಪ್ಪಿಕೊಂಡಿಲ್ಲ. ‘ಅನಿಮಲ್​’ ಗೆಲುವಿನ ಬಳಿಕ ತೃಪ್ತಿ ದಿಮ್ರಿ ಅವರಿಗೆ ಹೊಸ ಹೊಸ ಅವಕಾಶಗಳು ಹರಿದು ಬರುತ್ತಿವೆ. ಈ ಮೊದಲು ಅವರು ನಟಿಸಿದ ‘ಕಲಾ’ ವೆಬ್​ ಸರಣಿ ಗಮನ ಸೆಳೆದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!