ಹೃತಿಕ್ ಕಟ್ಟುಮಸ್ತಾದ ಬಾಡಿ ಹಿಂದಿರುವ ಟ್ರೇನರ್ ಇವರೇ; ಹುಟ್ಟುಹಬ್ಬಕ್ಕೂ ಬಿಡಲಿಲ್ಲ ವರ್ಕೌಟ್
ಬಾಲಿವುಡ್ನ ಖ್ಯಾತ ನಟ ಹೃತಿಕ್ ರೋಷನ್ ಅಭಿನಯದ ‘ಫೈಟರ್’ ಸಿನಿಮಾ ಗಣರಾಜ್ಯೋತ್ಸವದ ಪ್ರಯುಕ್ತ ಜ.25ರಂದು ತೆರೆಕಂಡು ಉತ್ತಮವಾಗಿ ಕಲೆಕ್ಷನ್ ಮಾಡಿದೆ. ಈ ಚಿತ್ರದಲ್ಲಿ ಅವರು ಯುದ್ಧ ವಿಮಾನದ ಪೈಲೆಟ್ ಆಗಿ ನಟಿಸಿದ್ದಾರೆ. ಈ ಸಿನಿಮಾದ ಯಶಸ್ಸಿನ ನಂತರ ಹೃತಿಕ್ ರೋಷನ್ ಅವರ ಬೇಡಿಕೆ ಹೆಚ್ಚಾಗಿದೆ. ಈಗ ಅವರು ‘ವಾರ್ 2’ ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
ನಟ ಹೃತಿಕ್ ರೋಷನ್ (Hrithik Roshan) ಅವರು ಮನ ಸೆಳೆಯುವ ನಟನೆಯಿಂದ ಅಭಿಮಾನಿಗಳನ್ನು ರಂಜಿಸುತ್ತಾರೆ. ಅಷ್ಟೇ ಅಲ್ಲದೇ, ಕಟ್ಟುಮಸ್ತಾದ ದೇಹದ ಕಾರಣದಿಂದಲೂ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಫಿಟ್ನೆಸ್ ಬಗ್ಗೆ ಸಖತ್ ಕಾಳಜಿ ಹೊಂದಿರುವ ಅವರು ಒಂದು ದಿನವೂ ವರ್ಕೌಟ್ ತಪ್ಪಿಸುವುದಿಲ್ಲ. ಅಂದಹಾಗೆ, ಅವರಿಗೆ ವರ್ಕೌಟ್ ಹೇಳಿಕೊಡಲು ವಿಶೇಷ ತರಬೇತುರಾರರು ಇದ್ದಾರೆ. ಅವರ ಹೆಸರು ಸ್ವಪ್ನೀಲ್ ಹಜಾರೆ. ಇಂದು (ಜನವರಿ 31) ಸ್ವಪ್ನೀಲ್ ಹಜಾರೆ (Swapneel Hazare) ಅವರ ಜನ್ಮದಿನ. ಅದಕ್ಕಾಗಿ ಹೃತಿಕ್ ರೋಷನ್ ಅವರು ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ.
ಹೃತಿಕ್ ರೋಷನ್ ಅವರ ಸಿಕ್ಸ್ ಪ್ಯಾಕ್ ಆ್ಯಬ್ಸ್ ನೋಡಿ ಎಲ್ಲರೂ ವಾವ್ ಎನ್ನುತ್ತಾರೆ. ಅಂಥ ಕಟ್ಟುಮಸ್ತಾದ ಬಾಡಿ ಹೊಂದಲು ಪ್ರತಿದಿನವೂ ಕಷ್ಟಪಡಬೇಕು. ಸೂಕ್ತ ರೀತಿಯ ತರಬೇತಿ ಬೇಕು. ಅದರ ಜವಾಬ್ದಾರಿಯನ್ನು ಸ್ವಪ್ನೀಲ್ ಹಜಾರೆ ವಹಿಸಿಕೊಂಡಿದ್ದಾರೆ. ವಿಶೇಷ ಏನೆಂದರೆ, ತಮ್ಮ ಹುಟ್ಟುಹಬ್ಬದ ದಿನವೂ ಸ್ವಪ್ನೀಲ್ ಹಜಾರೆ ಅವರು ಟ್ರೇನಿಂಗ್ ನೀಡುವುದನ್ನು ತಪ್ಪಿಸಿಲ್ಲ.
ಇದನ್ನೂ ಓದಿ: ‘12th ಫೇಲ್’ ಸಿನಿಮಾ ನೋಡಿ ಮನಸಾರೆ ಹೊಗಳಿದ ಹೃತಿಕ್ ರೋಷನ್
‘ಹುಟ್ಟಹಬ್ಬದ ದಿನದ ವರ್ಕೌಟ್ ಮುಗಿಯಿತು. ಬರ್ತ್ಡೇ ವರ್ಕೌಟ್ಗಳು ತುಂಬ ಸ್ಪೆಷಲ್ ಆಗಿರುತ್ತವೆ. ನಿಮ್ಮ ಹುಟ್ಟುಹಬ್ಬದ ದಿನವೂ ನನ್ನನ್ನು ಸಾಯಿಸಿದ್ದಕ್ಕೆ ಧನ್ಯವಾದಗಳು. ಈ ವರ್ಷ ನಾವು ಹೊಸ ಗುರಿ ಮುಟ್ಟೋಣ. ಜನ್ಮದಿನದ ಶುಭಾಶಯಗಳು’ ಎಂದು ಹೃತಿಕ್ ರೋಷನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸ್ವಪ್ನೀಲ್ ಹಜಾರೆಗೆ ವಿಶ್ ಮಾಡಿದ್ದಾರೆ. ಇಬ್ಬರೂ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಹೃತಿಕ್ ರೋಷನ್ ಇನ್ಸ್ಟಾಗ್ರಾಮ್ ಪೋಸ್ಟ್:
View this post on Instagram
ಹೃತಿಕ್ ರೋಷನ್ ನಟನೆಯ ‘ಫೈಟರ್’ ಸಿನಿಮಾ ಜನವರಿ 25ರಂದು ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಸಿನಿಮಾದಲ್ಲಿ ಅವರು ಭಾರತೀಯ ವಾಯುಸೇನೆಯ ಪೈಲೆಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಈ ಚಿತ್ರದ ಗೆಲುವಿನ ಬಳಿಕ ಹೃತಿಕ್ ರೋಷನ್ ಅವರ ಡಿಮ್ಯಾಂಡ್ ಹೆಚ್ಚಿದೆ. ಈಗ ಅವರು ‘ವಾರ್ 2’ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಹಗಲಿರುಳು ವರ್ಕೌಟ್ ಮಾಡುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಕೂಡ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂಬುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ