AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘12th ಫೇಲ್​’ ಸಿನಿಮಾ ನೋಡಿ ಮನಸಾರೆ ಹೊಗಳಿದ ಹೃತಿಕ್​ ರೋಷನ್​

ಹಿಂದುಳಿದ ಗ್ರಾಮೀಣ ಪ್ರದೇಶದಿಂದ ಬಂದ ಬಡ ಹುಡುಗನೊಬ್ಬ ಕಷ್ಟಪಟ್ಟು ಐಪಿಎಸ್​ ಅಧಿಕಾರಿ ಆಗುವ ಕಥೆಯನ್ನು ‘12th ಫೇಲ್​’ ಸಿನಿಮಾ ಒಳಗೊಂಡಿದೆ. ಈ ಸಿನಿಮಾಗೆ ವಿಧು ವಿನೋದ್​ ಚೋಪ್ರ ನಿರ್ದೇಶನ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿ ವಿಕ್ರಾಂತ್​ ಮಾಸ್ಸಿ ನಟಿಸಿದ್ದಾರೆ. ಹೃತಿಕ್​ ರೋಷನ್​ ಅವರಿಗೆ ಈ ಚಿತ್ರ ತುಂಬ ಇಷ್ಟವಾಗಿದೆ.

‘12th ಫೇಲ್​’ ಸಿನಿಮಾ ನೋಡಿ ಮನಸಾರೆ ಹೊಗಳಿದ ಹೃತಿಕ್​ ರೋಷನ್​
ಹೃತಿಕ್​ ರೋಷನ್​, ವಿಕ್ರಾಂತ್​ ಮಾಸ್ಸಿ
ಮದನ್​ ಕುಮಾರ್​
|

Updated on: Jan 15, 2024 | 12:35 PM

Share

ಬಾಲಿವುಡ್​ ನಟ ಹೃತಿಕ್ ರೋಷನ್​ (Hrithik Roshan) ಅವರು ಹಲವು ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ‘ಫೈಟರ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ರಿಲೀಸ್​ ಹೊಸ್ತಿಲಿನಲ್ಲಿ ಅವರು ಬೇರೆ ನಟರ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸಿದ್ದಾರೆ. ಹೌದು, ಹೃತಿಕ್​ ರೋಷನ್​ ಅವರು ಇತ್ತೀಚೆಗೆ ‘12th ಫೇಲ್​’ ಸಿನಿಮಾ (12th Fail Movie) ನೋಡಿದ್ದಾರೆ. ಈ ಚಿತ್ರ ಅವರಿಗೆ ಸಖತ್​ ಇಷ್ಟ ಆಗಿದೆ. ನೈಜ ಘಟನೆ ಆಧರಿಸಿ ನಿರ್ಮಾಣ ಆಗಿರುವ ಈ ಸಿನಿಮಾದಿಂದ ತಾವು ತುಂಬ ಸ್ಫೂರ್ತಿ ಪಡೆದಿರುವುದಾಗಿ ಹೃತಿಕ್​ ರೋಷನ್​ ಹೇಳಿದ್ದಾರೆ. ಇಡೀ ತಂಡದ ಪ್ರಯತ್ನವನ್ನು ಅವರು ಕೊಂಡಾಡಿದ್ದಾರೆ. ನಿರ್ದೇಶಕ ವಿಧು ವಿನೋದ್​ ಚೋಪ್ರ ಅವರಿಗೂ ಹೃತಿಕ್​ ರೋಷನ್​ ಅಭಿನಂದನೆ ತಿಳಿಸಿದ್ದಾರೆ.

ಹಿಂದುಳಿದ ಗ್ರಾಮೀಣ ಪ್ರದೇಶದಿಂದ ಬಂದ ಬಡ ಹುಡುಗನೊಬ್ಬ ಕಷ್ಟಪಟ್ಟು ಐಪಿಎಸ್​ ಅಧಿಕಾರಿ ಆಗುವ ಕಥೆಯನ್ನು ‘12th ಫೇಲ್​’ ಸಿನಿಮಾ ಒಳಗೊಂಡಿದೆ. ಈ ಸಿನಿಮಾಗೆ ವಿಧು ವಿನೋದ್​ ಚೋಪ್ರ ನಿರ್ದೇಶನ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿ ವಿಕ್ರಾಂತ್​ ಮಾಸ್ಸಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಮೇಧಾ ಶಂಕರ್​ ನಟಿಸಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಹಿಟ್​ ಆದ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿಯೂ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಮಿತಿ ಇಲ್ಲದ ದೀಪಿಕಾ ಪಡುಕೋಣೆ ಗ್ಲಾಮರ್​; ಹೃತಿಕ್​ ಡ್ಯಾನ್ಸ್ ಖದರ್​

ತಮ್ಮ ಬ್ಯುಸಿ ದಿನಚರಿ ನಡುವೆಯೂ ಹೃತಿಕ್​ ರೋಷನ್​ ಅವರು ‘12th ಫೇಲ್​’ ಚಿತ್ರ ವೀಕ್ಷಿಸಿದ್ದಾರೆ. ‘ಕೊನೆಯೂ 12th ಫೇಲ್​ ಚಿತ್ರ ನೋಡಿದೆ. ಸಿನಿಮಾ ಮೇಕಿಂಗ್​ನಲ್ಲಿ ಇದು ಮಾಸ್ಟರ್​ ಕ್ಲಾಸ್​. ಎಲ್ಲಕ್ಕಿಂತ ಮುಖ್ಯವಾಗಿ ಈ ಸಿನಿಮಾದಲ್ಲಿ ಸೌಂಡ್​ ಎಫೆಕ್ಟ್​ ಚೆನ್ನಾಗಿದೆ. ಅಭಿನಯ ತುಂಬ ಚೆನ್ನಾಗಿದೆ. ಮಿಸ್ಟರ್​ ಚೋಪ್ರ.. ಎಂಥಾ ಸಿನಿಮಾ! ಈ ಚಿತ್ರ ನೀಡಿದ್ದಕ್ಕೆ ಧನ್ಯವಾದಗಳು. ನಾನು ಇದರಿಂದ ಸ್ಫೂರ್ತಿ ಪಡೆದಿದ್ದೇನೆ’ ಎಂದು ಹೃತಿಕ್​ ರೋಷನ್​ ಅವರು ‘ಎಕ್ಸ್​’ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಬಾಕ್ಸ್​ ಆಫೀಸ್​ನಲ್ಲಿ ‘12th ಫೇಲ್​’ ಸಿನಿಮಾ 54 ಕೋಟಿ ರೂಪಾಯಿ ಗಳಿಕೆ ಮಾಡಿದೆ. ‘ಡಿಸ್ನಿ ಪ್ಲಸ್ ಹಾಟ್​ ಸ್ಟಾರ್​’ ಒಟಿಟಿ ಮೂಲಕ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ಸಿನಿಮಾ ನೋಡಿ ಜನಸಾಮಾನ್ಯರು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಜಾನ್ವಿ ಕಪೂರ್​, ಕತ್ರಿನಾ ಕೈಫ್​, ಅನುರಾಗ್​ ಕಶ್ಯಪ್​ ಮುಂತಾದವರು ಈ ಸಿನಿಮಾ ನೋಡಿ ಫಿದಾ ಆಗಿದ್ದಾರೆ. ವಿಕ್ರಾಂತ್​ ಮಾಸ್ಸಿ ಅವರ ನಟನೆಗೆ ಪ್ರಶಂಸೆ ಸಿಗುತ್ತಿದೆ. ಅನೇಕ ಬಡ ವಿದ್ಯಾರ್ಥಿಗಳಿಗೆ ಈ ಸಿನಿಮಾ ಸ್ಫೂರ್ತಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು