ಅಯೋಧ್ಯೆಯಲ್ಲಿ ಮನೆ ಮಾಡಲು ಭೂಮಿ ಖರೀದಿಸಿದ ಅಮಿತಾಭ್; ಬೆಲೆ ಎಷ್ಟು ಕೋಟಿ?

ಮುಂದಿನ ದಿನಗಳಲ್ಲಿ ಅಯೋಧ್ಯೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಈ ವೇಳೆ ಭೂಮಿಗೆ ಬೆಲೆ ಹೆಚ್ಚಲಿದೆ. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅಮಿತಾಭ್ ಬಚ್ಚನ್ ಅವರು ಹೂಡಿಕೆ ಮಾಡಿದ್ದಾರೆ ಎಂದು ವರದಿ ಆಗಿದೆ. ಜನವರಿ 22ರಂದು ಅದ್ದೂರಿಯಾಗಿ ರಾಮ ಜನ್ಮಭೂಮಿಯಲ್ಲಿ ಮಂದಿರ ಉದ್ಘಾಟನೆ ಆಗಲಿದೆ.

ಅಯೋಧ್ಯೆಯಲ್ಲಿ ಮನೆ ಮಾಡಲು ಭೂಮಿ ಖರೀದಿಸಿದ ಅಮಿತಾಭ್; ಬೆಲೆ ಎಷ್ಟು ಕೋಟಿ?
ಅಮಿತಾಭ್ ಬಚ್ಚನ್, ರಾಮ ಮಂದಿರ
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Jan 15, 2024 | 4:34 PM

ಅಯೋಧ್ಯೆಯಲ್ಲಿ ರಾಮ ಮಂದಿರ (Ram Mandir) ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಜನವರಿ 22ರಂದು ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶದ ಬೇರೆ ಬೇರೆ ಭಾಗಗಳಿಂದ ಜನರು ಬರುತ್ತಿದ್ದಾರೆ. ಹೀಗಿರುವಾಗಲೇ ಅಮಿತಾಭ್ ಬಚ್ಚನ್ (Amitabh Bachchan) ಅವರು ಅಯೋಧ್ಯೆಯಲ್ಲಿ ದೊಡ್ಡ ಭೂಮಿ ಖರೀದಿ ಮಾಡಿದ್ದಾರೆ. ಮುಂಬೈ ಮೂಲದ ಡೆವಲಪರ್​ನಿಂದ ಅವರು ಈ ಭೂಮಿ ಖರೀದಿ ಮಾಡಿದ್ದಾರೆ. 10 ಸಾವಿರ ಚದರ ಅಡಿ ಜಾಗವನ್ನು ಅಮಿತಾಭ್ ಖರೀದಿ ಮಾಡಿದ್ದಾರೆ. ಇದರ ಬೆಲೆ14.5 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಅಯೋಧ್ಯೆಯಲ್ಲಿ (Ayodhya) ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಈ ವೇಳೆ ಭೂಮಿಗೆ ಬೆಲೆ ಹೆಚ್ಚಲಿದೆ. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅಮಿತಾಭ್ ಬಚ್ಚನ್ ಅವರು ಹೂಡಿಕೆ ಮಾಡಿದ್ದಾರೆ ಎಂದು ವರದಿ ಆಗಿದೆ.

ಜನವರಿ 22ರಂದು ಅದ್ದೂರಿಯಾಗಿ ರಾಮ ಜನ್ಮಭೂಮಿಯಲ್ಲಿ ಮಂದಿರ ಉದ್ಘಾಟನೆ ಆಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದರ ಉದ್ಘಾಟನೆ ಮಾಡಲಿದ್ದಾರೆ. ಅದಕ್ಕೂ ಮೊದಲು ಅಮಿತಾಭ್ ಬಚ್ಚನ್ ಇಲ್ಲಿ ಜಾಗ ಖರೀದಿ ಮಾಡಿದ್ದಾರೆ. ಅವರು ಇಲ್ಲಿ ಮನೆ ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಮಿತಾಭ್ ಬಚ್ಚನ್ ಖರೀದಿ ಮಾಡಿರುವ ಜಾಗ ರಾಮ ಮಂದಿರದಿಂದ ಕೇವಲ 15 ನಿಮಿಷಗಳ ದಾರಿ. ಅಯೋಧ್ಯೆ ಇಂಟರ್​ ನ್ಯಾಷನಲ್ ಏರ್​ಪೋರ್ಟ್​ನಿಂದ 30 ನಿಮಿಷಕ್ಕೆ ಈ ಜಾಗ ತಲುಪಬಹುದು.

ರಾಮ ಮಂದಿರ ಉದ್ಘಾಟನೆಯಲ್ಲಿ ನರೇಂದ್ರ ಮೋದಿ, ಅಮಿತಾಭ್ ಬಚ್ಚನ್ ಸೇರಿ 3000 ವಿಐಪಿಗಳು ಭಾಗಿ ಆಗಲಿದ್ದಾರೆ. ಬಾಲಿವುಡ್​ನ ಅಕ್ಷಯ್ ಕುಮಾರ್, ಕಂಗನಾ ರಣಾವತ್, ಕ್ರಿಕೆಟರ್ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗ್ವತ್, ಉದ್ಯಮಿ ಮುಕೇಶ್ ಅಂಬಾನಿ, ರತನ್ ಟಾಟಾ, ಗೌತಮ್ ಅದಾನಿ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

ಇದನ್ನೂ ಓದಿ: ಉಡುಪಿ ಬೀಚ್​ನ ಸೌಂದರ್ಯ ಹೊಗಳಿದ ಸೆಹ್ವಾಗ್​; ಅಮಿತಾಭ್​ ಬಚ್ಚನ್​ ಪ್ರತಿಕ್ರಿಯೆ ಏನು?

ಅಮಿತಾಭ್ ಬಚ್ಚನ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಮೇ 9ರಂದು ರಿಲೀಸ್ ಆಗಲಿರುವ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಇದಲ್ಲದೆ, ‘ಬಟರ್​ಫ್ಲೈ’ ಮೊದಲಾದ ಸಿನಿಮಾಗಳಲ್ಲಿ ಅಮಿತಾಭ್ ಬಚ್ಚನ್ ನಟಿಸುತ್ತಿದ್ದಾರೆ. ಇತ್ತೀಚೆಗೆ ಅಮಿತಾಭ್ ಬಚ್ಚನ್, ಸೂರ್ಯ, ಅಕ್ಷಯ್ ಕುಮಾರ್ ಒಟ್ಟಾಗಿ ಪೋಸ್ ನೀಡಿದ್ದಾರೆ. ‘ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್’ ಶೀಘ್ರವೇ ಆರಂಭ ಆಗಲಿದೆ. ಇದರಲ್ಲಿ ಆಡುವ ತಂಡಗಳ ಮಾಲಿಕತ್ವವನ್ನು ಸೆಲೆಬ್ರಿಟಿಗಳು ಖರೀದಿಸಿದ್ದಾರೆ. ಆ ಕಾರಣದಿಂದ ಅಕ್ಷಯ್ ಕುಮಾರ್, ಸೂರ್ಯ, ಅಮಿತಾಭ್ ಬಚ್ಚನ್ ಮುಂತಾದ ನಟರು ಈ ಜಾಹೀರಾತಿನಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ