ಉಡುಪಿ ಬೀಚ್ನ ಸೌಂದರ್ಯ ಹೊಗಳಿದ ಸೆಹ್ವಾಗ್; ಅಮಿತಾಭ್ ಬಚ್ಚನ್ ಪ್ರತಿಕ್ರಿಯೆ ಏನು?
ಉಡುಪಿ, ಪಾಂಡಿಚೆರಿ, ಅಂಡಮಾನ್ ಮುಂತಾದ ಬೀಚ್ಗಳು ಸುಂದರವಾಗಿವೆ. ಭಾರತದಲ್ಲಿ ಇಂಥ ಅನೇಕ ಪ್ರೇಕ್ಷಣೀಯ ಸ್ಥಳಗಳು ಇವೆ. ಇವುಗಳಿಗೆ ಮೂಲ ಸೌಕರ್ಯ ಕಲ್ಪಿಸಿ, ಪ್ರವಾಸೋದ್ಯಮ ವೃದ್ಧಿಸಬೇಕು. ನಿಮಗೆ ತಿಳಿದಿರುವ ಇಂತಹ ಸ್ಥಳಗಳ ಬಗ್ಗೆ ಹೇಳಿ ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾಲ್ಡೀವ್ಸ್ (Maldives) ಸಚಿವರು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದನ್ನು ವಿರೋಧಿಸಿ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇಷ್ಟು ದಿನಗಳ ಕಾಲ ಬಹುತೇಕ ಎಲ್ಲ ಸೆಲೆಬ್ರಿಟಿಗಳು ರಜೆಯ ದಿನಗಳನ್ನು ಎಂಜಾಯ್ ಮಾಡಲು ಮಾಲ್ಡೀವ್ಸ್ಗೆ ತೆರಳುತ್ತಿದ್ದರು. ಆದರೆ ಈಗ ಮಾಲ್ಡೀವ್ಸ್ನ ಬಹಿಷ್ಕರಿಸುವ ಅಭಿಯಾನ ನಡೆಯುತ್ತಿದೆ. ಅದರ ಬದಲಾಗಿ ಭಾರತದಲ್ಲಿನ ಸುಂದರ ಬೀಚ್ಗಳ ಬಗ್ಗೆ ಬೆಳಕು ಚೆಲ್ಲಲಾಗುತ್ತಿದೆ. ವಿರೇಂದ್ರ ಸೆಹ್ವಾಗ್ ಅವರು ಉಡುಪಿ (Udupi) ಮುಂತಾದ ಬೀಚ್ಗಳ ಸೌಂದರ್ಯವನ್ನು ಕೊಂಡಾಡಿದ್ದಾರೆ. ಅದಕ್ಕೆ ಅಮಿತಾಭ್ ಬಚ್ಚನ್ (Amitabh Bachchan) ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿ, ಪಾಂಡಿಚೆರಿ, ಅಂಡಮಾನ್ ಮುಂತಾದ ಬೀಚ್ಗಳು ಸುಂದರವಾಗಿವೆ. ಭಾರತದಲ್ಲಿ ಇಂಥ ಅನೇಕ ಪ್ರೇಕ್ಷಣೀಯ ಸ್ಥಳಗಳು ಇವೆ. ಇವುಗಳಿಗೆ ಮೂಲ ಸೌಕರ್ಯ ಕಲ್ಪಿಸಿ, ಪ್ರವಾಸೋದ್ಯಮ ವೃದ್ಧಿಸಬೇಕು. ನಿಮಗೆ ತಿಳಿದಿರುವ ಇಂತಹ ಸ್ಥಳಗಳ ಬಗ್ಗೆ ಹೇಳಿ ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅಮಿತಾಭ್ ಬಚ್ಚನ್ ಅವರು ಲಕ್ಷದ್ವೀಪ ಮತ್ತು ಅಂಡಮಾನ್ ಕುರಿತು ತಮ್ಮ ಅನಿಸಿಕೆ ತಿಳಿಸಿದ್ದಾರೆ.
Viru paji .. this is so relevant and in the right spirit of our land .. our own are the very best .. I have been to Lakshadweep and Andamans and they are such astonishingly beautiful locations .. stunning waters beaches and the underwater experience is simply unbelievable .. हम… https://t.co/NM400eJAbm
— Amitabh Bachchan (@SrBachchan) January 8, 2024
‘ಇದು ಸೂಕ್ತ ಸಮಯ. ನಮ್ಮ ಸ್ಥಳಗಳೇ ಅತ್ಯುತ್ತಮವಾಗಿವೆ. ನಾನು ಅಂಡಮಾನ್ ಮತ್ತು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದೇನೆ. ಅವು ತುಂಬ ಸುಂದರವಾದ ಸ್ಥಳಗಳು. ಅಲ್ಲಿನ ಅಂಡರ್ವಾಟರ್ ಅನುಭವ ತುಂಬ ಚೆನ್ನಾಗಿದೆ’ ಎಂದು ಅಮಿತಾಭ್ ಬಚ್ಚನ್ ಅವರು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಾವಿರಾರು ನೆಟ್ಟಿಗರು ಸಹಮತ ಸೂಚಿಸಿದ್ದಾರೆ. ಭಾರತದ ಪ್ರವಾಸಿ ತಾಣಗಳು ಅದ್ಭುತವಾಗಿವೆ ಎಂದು ನೆಟ್ಟಿಗರು ದನಿಗೂಡಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಲೇವಡಿ, ಮಾಲ್ಡೀವ್ಸ್ಗೆ ತೆರಳುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದ EaseMyTrip
ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಅಕ್ಷಯ್ ಕುಮಾರ್ ಕಂಗನಾ ರಣಾವತ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಭಾರತವನ್ನು ಅವಹೇಳನ ಮಾಡುವಂತಹ ಹೇಳಿಕೆ ನೀಡಿದ ಮಾಲ್ಡೀವ್ಸ್ ಸಚಿವರ ವಿರುದ್ಧ ಅನೇಕರು ಗರಂ ಆಗಿದ್ದಾರೆ. ನಮ್ಮ ಆತ್ಮಗೌರವವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಪೋಸ್ಟ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Mon, 8 January 24