ಪ್ರಧಾನಿ ಮೋದಿ ವಿರುದ್ಧ ಲೇವಡಿ, ಮಾಲ್ಡೀವ್ಸ್‌ಗೆ ತೆರಳುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದ EaseMyTrip
ಕೇವಲ ಪ್ರವಾಸೋದ್ಯಮವನ್ನೇ ನಂಬಿರುವ ಮಾಲ್ಡೀವ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ವಿರುದ್ಧದ ಲೇವಡಿಯಿಂದ ಭಾರಿ ಹೊಡೆತ ಬಿದ್ದಿದೆ. ಈಗಾಗಲೇ ಹಲವು ಮಂದಿ ಮಾಲ್ಡೀವ್ಸ್‌ಗೆ ಪ್ರವಾಸಕ್ಕೆಂದು ವಿಮಾನ, ಹೋಟೆಲ್ಗಳನ್ನು ಬುಕ್ ಮಾಡಿದವರು ರದ್ದುಗೊಳಿಸಿದ್ದಾರೆ. ಇದೀಗ ಈಸಿಮೈಟ್ರಿಪ್(EaseMyTrip) ಸಹ ಸಂಸ್ಥಾಪಕ ನಿಶಾಂತ್ ಪಿಟ್ಟಿ ಅವರು ಮಾಲ್ಡೀವ್ಸ್‌ಗೆ ತೆರಳಬೇಕಿದ್ದ ಎಲ್ಲಾ ವಿಮಾನಗಳ ಬುಕಿಂಗ್ಗಳನ್ನು ರದ್ದುಗೊಳಿಸಿದ್ದಾರೆ.

ನರೇಂದ್ರ ಮೋದಿಯವರ ವಿರುದ್ಧ ಮಾಲ್ಡೀವ್ಸ್ ಸಚಿವರು ನೀಡಿರುವ ಹೇಳಿಕೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ #BoycottMaldives ಎಂಬುದು ಹೆಚ್ಚು ಟ್ರೆಂಡ್ ಆಗಿತ್ತು.
ಭಾರತದಿಂದ ಹೆಚ್ಚಿನ ಸಂಖ್ಯೆಯ ಜನರು ಮಾಲ್ಡೀವ್ಸ್‌ಗೆ ಭೇಟಿ ನೀಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಈಗ ದೊಡ್ಡ ಹೊಡೆತ ಬೀಳಬಹುದು ಎಂದು ಅಂದಾಜಿಸಲಾಗಿದೆ.
ನಿಶಾಂತ್ ಪಿಟ್ಟಿ ಎಕ್ಸ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ EaseMyTrip ಎಲ್ಲಾ ಮಾಲ್ಡೀವ್ಸ್ ವಿಮಾನ ಬುಕಿಂಗ್ ಅನ್ನು ರದ್ದುಗೊಳಿಸಿದೆ, ಇದರೊಂದಿಗೆ EaseMyTrip #ChaloLakshadweep ಅಭಿಯಾನವನ್ನು ಪ್ರಾರಂಭಿಸಿದೆ ಎಂಬುದಾಗಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: Boycott Maldives: ಪ್ರಧಾನಿ ಮೋದಿಯ ಲಕ್ಷದ್ವೀಪ ಭೇಟಿ ಲೇವಡಿ ಮಾಡಿದ ಮಾಲ್ಡೀವ್ಸ್ ಸಚಿವ, ಭಾರತೀಯರು ಮಾಡಿದ್ದೇನು?
ಲಕ್ಷದ್ವೀಪದ ನೀರು ಮತ್ತು ಕಡಲತೀರಗಳು ಮಾಲ್ಡೀವ್ಸ್‌ನಂತೆಯೇ ಉತ್ತಮವಾಗಿವೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಭೇಟಿ ನೀಡಿದ ಈ ತಾಣವನ್ನು ನಾವು ಮತ್ತಷ್ಟು ಪ್ರಚಾರ ಮಾಡಲಿದ್ದೇವೆ ಜತೆಗೆ ವಿಶೇಷ ಕೊಡುಗೆಯನ್ನೂ ಕೂಡ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸಿಗರು ಮಾಲ್ಡೀವ್ಸ್‌ಗೆ ಹೋಗುವ ಬದಲು ಲಕ್ಷದ್ವೀಪಕ್ಕೆ ಭೇಟಿ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಪ್ರಸ್ತುತ ಮಾಲ್ಡೀವ್ಸ್ ಸರ್ಕಾರವು ಚೀನಾದತ್ತ ಒಲವು ತೋರುತ್ತಿದೆ ಎಂಬ ಆರೋಪವೂ ಇದೆ.
ಭಾರತದೊಂದಿಗಿನ ವಿವಾದದ ನಡುವೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಇಂದು ಚೀನಾಕ್ಕೆ ಭೇಟಿ ನೀಡುತ್ತಿದ್ದಾರೆ. ಕಳೆದ ನವೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ಮುಯಿಝು, ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡುವ ಮೊದಲು ಚೀನಾಕ್ಕೆ ಭೇಟಿ ನೀಡುವುದಾಗಿ ಘೋಷಿಸುವ ಮೂಲಕ ಸಂಪ್ರದಾಯವನ್ನು ಮುರಿದಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ಲೇವಡಿ ಮಾಡಿದ್ದ ಮೂವರು ಸಚಿವರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತುಗೊಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ