Boycott Maldives: ಪ್ರಧಾನಿ ಮೋದಿಯ ಲಕ್ಷದ್ವೀಪ ಭೇಟಿ ಲೇವಡಿ ಮಾಡಿದ ಮಾಲ್ಡೀವ್ಸ್​ ಸಚಿವ, ಭಾರತೀಯರು ಮಾಡಿದ್ದೇನು?

ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿ ಕುರಿತು ಲೇವಡಿ ಮಾಡಿದ್ದ ಮಾಲ್ಡೀವ್ಸ್​ ಸಚಿವರಿಗೆ ಭಾರತೀಯರು ತಿರುಗೇಟು ನೀಡಿದ್ದಾರೆ. ಪ್ರವಾಸೋದ್ಯಮವನ್ನೇ ನಂಬಿ ಕುಳಿತಿರುವ ಮಾಲ್ಡೀವ್ಸ್​ ಈ ವಿಚಾರದಿಂದ ಸಾಕಷ್ಟು ಪ್ರವಾಸಿಗರನ್ನು ಕಳೆದುಕೊಳ್ಳುವ ಸಾಧ್ಯತೆ ಎದ್ದು ತೋರುತ್ತಿದೆ.

Boycott Maldives: ಪ್ರಧಾನಿ ಮೋದಿಯ ಲಕ್ಷದ್ವೀಪ ಭೇಟಿ ಲೇವಡಿ ಮಾಡಿದ ಮಾಲ್ಡೀವ್ಸ್​ ಸಚಿವ, ಭಾರತೀಯರು ಮಾಡಿದ್ದೇನು?
ನರೇಂದ್ರ ಮೋದಿ
Follow us
ನಯನಾ ರಾಜೀವ್
|

Updated on:Jan 07, 2024 | 3:04 PM

ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿ ಕುರಿತು ಲೇವಡಿ ಮಾಡಿದ್ದ ಮಾಲ್ಡೀವ್ಸ್​ ಸಚಿವರಿಗೆ ಭಾರತೀಯರು ತಿರುಗೇಟು ನೀಡಿದ್ದಾರೆ. ಪ್ರವಾಸೋದ್ಯಮವನ್ನೇ ನಂಬಿ ಕುಳಿತಿರುವ ಮಾಲ್ಡೀವ್ಸ್​ ಈ ವಿಚಾರದಿಂದ ಸಾಕಷ್ಟು ಪ್ರವಾಸಿಗರನ್ನು ಕಳೆದುಕೊಳ್ಳುವ ಸಾಧ್ಯತೆ ಎದ್ದು ತೋರುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರತದಲ್ಲಿ ಮಾಲ್ಡೀವ್ಸ್ ಮತ್ತು ಲಕ್ಷದ್ವೀಪಗಳ ನಡುವಿನ ಹೋಲಿಕೆಗಳು ಪ್ರಾರಂಭವಾದವು.

ಮಾಲ್ಡೀವ್ಸ್​ ಸಚಿವ ಅಬ್ದುಲ್ಲಾ ಮೊಹ್ಜುಮ್ ಮಜೀಸ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಮಾಲ್ಡೀವ್ಸ್​ ಹಾಗೂ ಭಾರತದ ಪ್ರವಾಸೋದ್ಯಮಕ್ಕೆ ಹೋಲಿಕೆ ಮಾಡಿದ್ದಾರೆ, ಭಾರತಕ್ಕಿಂತ ಅಲ್ಲಿ ರೆಸಾರ್ಟ್​ನಿಂದ ಹಿಡಿದು ಎಲ್ಲಾ ಮೂಲಸೌಕರ್ಯಗಳು ಹೆಚ್ಚು ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ಓದಿ: ಲಕ್ಷದ್ವೀಪದಲ್ಲಿ ಸ್ನೋರ್ಕೆಲ್ಲಿಂಗ್ ನಡೆಸಿ ಮತ್ತೊಮ್ಮೆ ತಮ್ಮ ಸಾಹಸಮಯ ಪ್ರವೃತ್ತಿ ಪ್ರದರ್ಶಿಸಿದ ಪ್ರಧಾನಿ ನರೇಂದ್ರ ಮೋದಿ

ಮಾಲ್ಡೀವ್ಸ್​ನ ಮತ್ತೊಬ್ಬ ನಾಯಕ ಜಾಹಿದ್ ರಮೀಜ್ ಪೋಸ್ಟ್​ ಮಾಡಿದ್ದು, ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುವ ಬಗ್ಗೆ ಮಾತನಾಡಿದ್ದು, ಖಂಡಿತವಾಗಿಯೂ ಮೋದಿಯವರದ್ದು ಉತ್ತಮ ಹೆಜ್ಜೆ, ಆದರೆ ನಮ್ಮೊಂದಿಗೆ ಸ್ಪರ್ಧಿಸುವುದು ಭ್ರಮೆ. ನಮ್ಮಂತಹ ಸೇವೆಯನ್ನು ಒದಗಿಸುವುದು ಸಾಧ್ಯವೇ ಎಂದು ಬರೆದಿದ್ದಾರೆ.

ಈ ಹೇಳಿಕೆಯಿಂದಾಗಿ ಇದೀಗ ಎಕ್ಸ್​ನಲ್ಲಿ Boycott Maldives ಹ್ಯಾಶ್​ಟ್ಯಾಗ್​ನಲ್ಲಿ ಅಭಿಯಾನ ಶುರುವಾಗಿದೆ. ಪ್ರವಾಸೋದ್ಯಮವನ್ನು ಅವಲಂಬಿಸಿರುವ ಮಾಲ್ಡೀವ್ಸ್‌ಗೆ ಭಾರತದ ಶಕ್ತಿಯ ಬಗ್ಗೆ ತಿಳಿದಿಲ್ಲ ಎಂದು ಭಾರತೀಯರು ಹೇಳುತ್ತಿದ್ದಾರೆ. ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸಿದ ನಂತರ ಲಕ್ಷದ್ವೀಪಕ್ಕೆ ಆದ್ಯತೆ ನೀಡುವವರು ಅನೇಕರಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಮಾಲ್ಡೀವ್ಸ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವ ರೀತಿ ನೋಡಿದರೆ ಮಾಲ್ಡೀವ್ಸ್ ಗೆ ಶಾಕ್ ಆಗುವುದು ಖಚಿತ. ಮಾಲ್ಡೀವ್ಸ್‌ನ ಆರ್ಥಿಕತೆಯು ಮುಖ್ಯವಾಗಿ ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಇಂತಹ ಅನೇಕ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಇದರಲ್ಲಿ ಜನರು ತಮ್ಮ ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸುವ ಬಗ್ಗೆ ಮಾಹಿತಿಯನ್ನು ನೀಡುವ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಫೆಬ್ರವರಿ 2 ರಂದು ಬರುವ ನನ್ನ ಹುಟ್ಟುಹಬ್ಬಕ್ಕೆ ಮಾಲ್ಡೀವ್ಸ್‌ಗೆ ಹೋಗಲು ಯೋಜಿಸುತ್ತಿದ್ದೆ. ನನ್ನ ಟ್ರಾವೆಲ್ ಏಜೆಂಟ್‌ನೊಂದಿಗೆ ಒಪ್ಪಂದವನ್ನು ಬಹುತೇಕ ಅಂತಿಮಗೊಳಿಸಿದ್ದೇವೆ, ಆದರೆ ಮಾಲ್ಡೀವ್ಸ್ ಸಚಿವರ ಟ್ವೀಟ್​ ನೋಡಿದ ಬಳಿಕ ಅದನ್ನು ರದ್ದುಗೊಳಿಸಿದ್ದೇನೆ ಎಂದು ಡಾ. ಫಲಕ್ ಜೋಶಿಪುರ್ ಬರೆದಿದ್ದಾರೆ.

ಮತ್ತೊಬ್ಬರು ಮಗ ಹಾಗೂ ಸೊಸೆಗೆ ಹನಿಮೂನ್​ಗೆಂದು ಟಿಕೆಟ್ ಬುಕ್ ಮಾಡಿದ್ದೆ ಆದರೆ ಅದನ್ನು ರದ್ದುಗೊಳಿಸಿದ್ದೇನೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್​ ಸೇರಿದಂತೆ ಹಲವರು ಮಾಲ್ಡೀವ್ಸ್​ಗೆ ತೆರಳದೆ ಭಾರತದ ದ್ವೀಪಗಳಿಗೆ ತೆರಳಲು ಸಲಹೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:39 pm, Sun, 7 January 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ