ವಿಪರೀತ ಚಳಿ, ದೆಹಲಿಯ ಶಾಲೆಗಳೆಲ್ಲವೂ ಜನವರಿ 12ರವರೆಗೆ ಬಂದ್

ದೆಹಲಿಯಲ್ಲಿ ಚಳಿ ಹೆಚ್ಚಾದ ಹಿನ್ನೆಲೆಯಲ್ಲಿ ಜನವರಿ 12ರವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ನರ್ಸರಿಯಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂದಿನ 5 ದಿನಗಳ ಕಾಲ ರಜೆ ನೀಡಲಾಗಿದೆ ಎಂದು ಶಿಕ್ಷಣ ಸಚಿವರಾದ ಅತಿಶಿ ತಿಳಿಸಿದ್ದಾರೆ. ಚಲಿತ ಶೀತ ಹವಾಮಾನದ ಕಾರಣದಿಂದ ದೆಹಲಿಯ ಶಾಲೆಗಳು ಮುಂದಿನ ಐದು ದಿನಗಳವರೆಗೆ ಮುಚ್ಚಿರುತ್ತವೆ, ಇದು ನರ್ಸರಿಯಿಂದ 5 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಎಂದು ಬರೆಯಲಾಗಿದೆ.

ವಿಪರೀತ ಚಳಿ, ದೆಹಲಿಯ ಶಾಲೆಗಳೆಲ್ಲವೂ ಜನವರಿ 12ರವರೆಗೆ ಬಂದ್
ವಿದ್ಯಾರ್ಥಿಗಳುImage Credit source: Delhi Capital
Follow us
ನಯನಾ ರಾಜೀವ್
|

Updated on: Jan 07, 2024 | 12:10 PM

ದೆಹಲಿಯಲ್ಲಿ ಚಳಿ ಹೆಚ್ಚಾದ ಹಿನ್ನೆಲೆಯಲ್ಲಿ ಜನವರಿ 12ರವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ನರ್ಸರಿಯಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂದಿನ 5 ದಿನಗಳ ಕಾಲ ರಜೆ ನೀಡಲಾಗಿದೆ ಎಂದು ಶಿಕ್ಷಣ ಸಚಿವರಾದ ಅತಿಶಿ ತಿಳಿಸಿದ್ದಾರೆ. ಚಲಿತ ಶೀತ ಹವಾಮಾನದ ಕಾರಣದಿಂದ ದೆಹಲಿಯ ಶಾಲೆಗಳು ಮುಂದಿನ ಐದು ದಿನಗಳವರೆಗೆ ಮುಚ್ಚಿರುತ್ತವೆ, ಇದು ನರ್ಸರಿಯಿಂದ 5 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಎಂದು ಬರೆಯಲಾಗಿದೆ.

ದೆಹಲಿಯಲ್ಲಿ ಜನವರಿ 1 ರಿಂದ ಚವಳಿಗಾಲದ ರಜೆಯನ್ನು ಘೋಷಿಸಲಾಗಿತ್ತು, ನಾಳೆಯಿಂದ ಶಾಲೆಗಳು ಪುನಃ ಆರಂಭಗೊಳ್ಳಬೇಕಿತ್ತು, ಆದರೆ ಈ ರಜೆಯನ್ನು 12ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಲಾಗಿದೆ. ಕಳೆದ ಕೆಲವು ದಿನಗಳಿಂದ, ದೆಹಲಿ ಮತ್ತು ಅದರ ನೆರೆಹೊರೆಯ ರಾಜ್ಯಗಳಲ್ಲಿ ಶೀತ ಹೆಚ್ಚಳವಾಗಿದೆ. ಮಂಜು ಕವಿದ ವಾತಾವರಣವಿರಲಿದ್ದು, ಸೂರ್ಯನ ಶಾಖ ಭೂಮಿಗೆ ತಾಕದ ಪರಿಣಾಮ ಚಳಿಯ ತೀವ್ರತೆ ವಿಪರೀತವಾಗಿದೆ.

ಮುಂದಿನ ಎರಡು ದಿನಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ರಾಜಸ್ಥಾನದಲ್ಲಿ ಶೀತ ದಿನದಿಂದ ತೀವ್ರ ಚಳಿಯ ವಾತಾವರಣ ಮುಂದುವರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮತ್ತಷ್ಟು ಓದಿ: Karnataka Weather: ಒಂದೆಡೆ ಚಳಿ, ಬೆಂಗಳೂರು ಸೇರಿದಂತೆ ಹಲವೆಡೆ ಜನವರಿ 8ರವರೆಗೆ ಮಳೆ ಸಾಧ್ಯತೆ

ಶನಿವಾರ ದೆಹಲಿಯಲ್ಲಿ ಗರಿಷ್ಠ ತಾಪಮಾನ 15.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಭಾನುವಾರ ಬೆಳಿಗ್ಗೆ ಕನಿಷ್ಠ ತಾಪಮಾನವು 8.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಗೌತಮ್ ಬುದ್ಧ ನಗರ ಜಿಲ್ಲಾಡಳಿತವು ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಎಲ್ಲಾ ಶಾಲೆಗಳಿಗೆ 8 ಜನವರಿ 14 ರವರೆಗೆ ರಜೆ ಇರುತ್ತದೆ ಎಂದು ಘೋಷಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ