ಹೊಸ ಚಿತ್ರಕ್ಕೆ ಸಹಿ ಹಾಕಿದ ಶಾರುಖ್ ಖಾನ್? ಈ ಬಾರಿ ಮತ್ತೊಂದು ಪ್ರಯೋಗ
ಶಾರುಖ್ ಖಾನ್ ಅವರು ಬ್ಯಾಕ್ ಟು ಬ್ಯಾಕ್ ಮೂರು ಹಿಟ್ ಚಿತ್ರಗಳನ್ನು ನೀಡಿರುವುದರಿಂದ ಸಹಜವಾಗಿಯೇ ಅವರ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ‘ಡಂಕಿ’ ಬಳಿಕ ಅವರು ವಿಶಾಲ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಶಾರುಖ್ ಖಾನ್ (Shah Rukh Khan) ಅವರು 2023ರಲ್ಲಿ ದಾಖಲೆ ಬರೆದಿದ್ದಾರೆ. ಅವರ ನಟನೆಯ ಮೂರು ಸಿನಿಮಾಗಳ ಕಳೆದ ವರ್ಷ ರಿಲೀಸ್ ಆಗಿದ್ದು, ಮೂರೂ ಸಿನಿಮಾಗಳು ಹಿಟ್ ಆಗಿವೆ. ಇದರಿಂದ ಒಂದೇ ವರ್ಷ ಶಾರುಖ್ ಖಾನ್ ಅವರು ಹ್ಯಾಟ್ರಿಕ್ ಗೆಲುವು ಕಂಡಿದ್ದಾರೆ. ಈಗ ಅವರ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಮೂಡಿದೆ. ಕೆಲವು ವರದಿಗಳ ಪ್ರಕಾರ ಶಾರುಖ್ ಖಾನ್ ಮುಂದಿನ ಚಿತ್ರಕ್ಕಾಗಿ ನಿರ್ದೇಶಕ ವಿಶಾಲ್ ಭಾರದ್ವಾಜ್ ಜೊತೆ ಕೈ ಜೋಡಿಸುತ್ತಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಶಾರುಖ್ ಖಾನ್ ಅವರು ಬ್ಯಾಕ್ ಟು ಬ್ಯಾಕ್ ಮೂರು ಹಿಟ್ ಚಿತ್ರಗಳನ್ನು ನೀಡಿರುವುದರಿಂದ ಸಹಜವಾಗಿಯೇ ಅವರ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ‘ಡಂಕಿ’ ಬಳಿಕ ಅವರು ವಿಶಾಲ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ತಮ್ಮ ಸಿನಿಮಾ ಆಯ್ಕೆ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುವ ಆಲೋಚನೆಯಲ್ಲಿ ಶಾರುಖ್ ಖಾನ್ ಇದ್ದಾರೆ ಎಂದು ವರದಿ ಆಗಿದೆ.
ವಿಶಾಲ್ ಭಾರದ್ವಾಜ್ ಅವರು ಭಿನ್ನವಾದ ಸಿನಿಮಾಗಳನ್ನು ನೀಡಿದ್ದಾರೆ. ಈಗ ಶಾರುಖ್ ಖಾನ್ ಮಾಡಲಿರುವ ಸಿನಿಮಾ ಟಿಪಿಕಲ್ ವಿಶಾಲ್ ಭಾರದ್ವಾಜ್ ಚಿತ್ರದ ರೀತಿ ಇರಲಿದೆಯಂತೆ. ಶಾರುಖ್ ಈವರೆಗೂ ಮಾಡದೇ ಇರುವ ಪಾತ್ರ ಇದಾಗಿದೆ. ಶಾರುಖ್ ಖಾನ್ ಅವರು ಚಿತ್ರದ ಸ್ಕ್ರಿಪ್ಟ್ ಇಷ್ಟಪಟ್ಟಿದ್ದಾರೆ. ಸದ್ಯ ಮಾತುಕತೆ ಪ್ರಗತಿಯಲ್ಲಿವೆ.
ಶಾರುಖ್ ಖಾನ್ ಅವರು ‘ಪಠಾಣ್’ ಚಿತ್ರದಿಂದ 2023ನೇ ವರ್ಷವನ್ನು ಆರಂಭಿಸಿದರು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಸಿದ್ದಾರ್ಥ್ ಆನಂದ್. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಇದಾದ ಬಳಿಕ ‘ಜವಾನ್’ ಸಿನಿಮಾ ಬಿಡುಗಡೆ ಆಯಿತು. ಈ ಚಿತ್ರಕ್ಕೆ ತಮಿಳು ನಿರ್ದೇಶಕ ‘ಅಟ್ಲಿ’ ಆ್ಯಕ್ಷನ್ ಕಟ್ ಹೇಳಿದ್ದರು. ಇದು ಕೂಡ ಆ್ಯಕ್ಷನ್ನಿಂದ ಕೂಡಿತ್ತು. ಈ ಚಿತ್ರ ಕೂಡ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿತ್ತು.
ಇದನ್ನೂ ಓದಿ: ವಿಶ್ವಾದ್ಯಂತ 444 ಕೋಟಿ ರೂಪಾಯಿ ಗಳಿಸಿದ ‘ಡಂಕಿ’; ಶಾರುಖ್ಗೆ ಹ್ಯಾಟ್ರಿಕ್ ಗೆಲುವು
‘ಡಂಕಿ’ ಚಿತ್ರದಲ್ಲಿ ಶಾರುಖ್ ಖಾನ್ ಅವರು ಭಿನ್ನ ಪಾತ್ರ ಆಯ್ಕೆ ಮಾಡಿಕೊಂಡಿದ್ದರು. ಕ್ಲಾಸ್ ಶೈಲಿಯಲ್ಲಿ ‘ಡಂಕಿ’ ಮೂಡಿ ಬಂದಿತ್ತು. ಈ ಸಿನಿಮಾ ವಿಶ್ವಾದ್ಯಂತ 444 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಯೋಗಾತ್ಮಕ ಪಾತ್ರಗಳನ್ನು ಮಾಡಲು ಅವರು ಆಸಕ್ತಿ ತೋರಿಸುತ್ತಿದ್ದಾರೆ.
ವಿಶಾಲ್ ಭಾರದ್ವಾಜ್ ಬಗ್ಗೆ
ವಿಶಾಲ್ ಭಾರದ್ವಾಜ್ ಉತ್ತರ ಪ್ರದೇಶದವರು. ಅವರು ಸದ್ಯ, ಮುಂಬೈನಲ್ಲಿ ಸೆಟ್ಲ್ ಆಗಿದ್ದಾರೆ. ಅವರು ಚಿತ್ರರಂಗದಲ್ಲಿ ಸಂಗೀತ ಸಂಯೋಜಕರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. 1995ರಲ್ಲಿ ಸಂಗೀತ ನಿರ್ದೇಶಕರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. 2002ರಲ್ಲಿ ‘ಮಕ್ಡೀ’ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು. ಆ ಬಳಿಕ ಹಲವು ಸಿನಿಮಾ ನಿರ್ದೇಶನ ಮಾಡಿದರು. ಇದಲ್ಲದೆ, ನಿರ್ಮಾಪಕರಾಗಿ ಹಾಗೂ ಚಿತ್ರಕಥೆ ಬರಹಗಾರನಾಗಿಯೂ ವಿಶಾಲ್ ಗುರುತಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ