‘ಬಿಲ್ಕಿಸ್​ ಬಾನು ಬಗ್ಗೆ ಸ್ಕ್ರಿಪ್ಟ್​ ಸಿದ್ಧವಿದೆ, ಆದರೆ ಸಿನಿಮಾ ಮಾಡೋಕೆ ಆಗುತ್ತಿಲ್ಲ’: ಕಂಗನಾ ರಣಾವತ್​

‘ಬಿಲ್ಕಿಸ್​​ ಬಾನು ಜೀವನದ ಕಥೆಯನ್ನು ನಾನು ಸಿನಿಮಾ ಮಾಡಲು ಬಯಸಿದ್ದೇನೆ. ಸ್ಕ್ರಿಪ್ಟ್​ ಕೂಡ ಸಿದ್ಧವಿದೆ. ಆ ವಿಷಯದ ಮೇಲೆ ಮೂರು ವರ್ಷ ಅಧ್ಯಯನ ಮಾಡಿದ್ದೇನೆ’ ಎಂದು ಕಂಗನಾ ರಣಾವತ್​ ಹೇಳಿದ್ದಾರೆ. ಆದರೂ ಕೂಡ ಈ ಸಿನಿಮಾ ಸಿದ್ಧವಾಗಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಅಸಲಿ ಕಾರಣವನ್ನು ವಿವರಿಸಿದ್ದಾರೆ.

‘ಬಿಲ್ಕಿಸ್​ ಬಾನು ಬಗ್ಗೆ ಸ್ಕ್ರಿಪ್ಟ್​ ಸಿದ್ಧವಿದೆ, ಆದರೆ ಸಿನಿಮಾ ಮಾಡೋಕೆ ಆಗುತ್ತಿಲ್ಲ’: ಕಂಗನಾ ರಣಾವತ್​
ಕಂಗನಾ ರಣಾವತ್​, ಬಿಲ್ಕಿಸ್​ ಬಾನು
Follow us
ಮದನ್​ ಕುಮಾರ್​
|

Updated on: Jan 09, 2024 | 5:42 PM

ಬಿಲ್ಕಿಸ್​​ ಬಾನು ಪ್ರಕರಣದ (Bilkis Bano Case) ಬಗ್ಗೆ ಮತ್ತೆ ಚರ್ಚೆ ಜೋರಾಗಿದೆ. 2002ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಆರೋಪಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್​ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್​ ರದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ ಬಿಲ್ಕಿಸ್​ ಬಾನು (Bilkis Bano) ಅವರ ಜೀವನದ ಕುರಿತು ಸಿನಿಮಾ ಮಾಡುತ್ತೀರಾ ಎಂದು ಕಂಗನಾ ರಣಾವತ್​ (Kangana Ranaut) ಅವರಿಗೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಕಂಗನಾ ಅವರು ಕೆಲವು ಶಾಕಿಂಗ್​ ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ಈ ಪ್ರಕರಣದ ಕುರಿತು ಸ್ಕ್ರಿಪ್ಟ್​ ಸಿದ್ಧವಿದ್ದರೂ ಕೂಡ ಸಿನಿಮಾ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಅದಕ್ಕೆ ಕಾರಣ ಕೂಡ ತಿಳಿಸಿದ್ದಾರೆ.

‘ಆ ಕಥೆಯನ್ನು ನಾನು ಸಿನಿಮಾ ಮಾಡಲು ಬಯಸಿದ್ದೇನೆ. ಸ್ಕ್ರಿಪ್ಟ್​ ಕೂಡ ಸಿದ್ಧವಿದೆ. ಆ ವಿಷಯದ ಮೇಲೆ ಮೂರು ವರ್ಷ ಅಧ್ಯಯನ ಮಾಡಿದ್ದೇನೆ. ಇಂಥ ರಾಜಕೀಯ ಪ್ರೇರಿತ ವಿಷಯವನ್ನು ಇಟ್ಟುಕೊಂಡ ಸಿನಿಮಾ ಮಾಡುವುದು ಬೇಡ ಎಂದು ನನಗೆ ಅಮೇಜಾನ್​ ಪ್ರೈಂ ವಿಡಿಯೋ ಮತ್ತು ನೆಟ್​ಫ್ಲಿಕ್ಸ್​ ಸಂಸ್ಥೆಗಳು ಹೇಳಿವೆ. ನಾನು ಬಿಜೆಪಿಗೆ ಬೆಂಬಲ ನೀಡುತ್ತೇನೆ ಎಂಬ ಕಾರಣಕ್ಕೆ ಜಿಯೋ ಸಿನಿಮಾದವರು ನನ್ನ ಜೊತೆ ಕೆಲಸ ಮಾಡಲ್ಲ ಅಂತ ಹೇಳಿದ್ದಾರೆ. ಜೀ ಸಂಸ್ಥೆ ಬೇರೆಯವರ ಜೊತೆ ವಿಲೀನ ಆಗುತ್ತಿದೆ. ನನಗೆ ಬೇರೆ ಆಯ್ಕೆ ಏನಿದೆ’ ಎಂದು ಕಂಗನಾ ಪ್ರಶ್ನಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಕಂಗನಾ ರಣಾವತ್​ ಅವರು ಆ್ಯಕ್ಟೀವ್​ ಆಗಿದ್ದಾರೆ. ಈ ಹಿಂದೆ ಅವರು ಆಕ್ಷೇಪಾರ್ಹವಾಗಿ ಪೋಸ್ಟ್​ ಮಾಡಿದ್ದಕ್ಕೆ ಅವರ ಟ್ವಿಟರ್​ ಖಾತೆಯನ್ನು ಸಸ್ಪೆಂಡ್​ ಮಾಡಲಾಗಿತ್ತು. ಬಳಿಕ ಅವರು ತಮ್ಮ ಖಾತೆಯನ್ನು ಮರಳಿ ಪಡೆದರು. ಈಗ ಅವರು ಅನೇಕ ವಿಚಾರಗಳ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಹಲವು ವಿವಾದಗಳನ್ನು ಅವರು ಮೈಮೇಲೆ ಎಳೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಇರ್ಫಾನ್​ ಖಾನ್​ ಅವರ ಸ್ಥಾನವನ್ನು ಈ ನಟ ತುಂಬುತ್ತಾರೆ’; ವಿಕ್ರಾಂತ್​ ಮಾಸ್ಸಿಗೆ ಕಂಗನಾ ಹೊಗಳಿಕೆ

ನಟಿಯಾಗಿ ಮಾತ್ರವಲ್ಲದೇ ನಿರ್ದೇಶಕಿಯಾಗಿ ಮತ್ತು ನಿರ್ಮಾಪಕಿಯಾಗಿಯೂ ಕಂಗನಾ ರಣಾವತ್​ ಅವರು ಬ್ಯುಸಿ ಆಗಿದ್ದಾರೆ. ಬಹುನಿರೀಕ್ಷಿತ ‘ಎಮರ್ಜೆನ್ಸಿ’ ಸಿನಿಮಾಗೆ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಇಂದಿರಾ ಗಾಂಧಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕಾರಣಾಂತರಗಳಿಂದ ಈ ಸಿನಿಮಾದ ಬಿಡುಗಡೆ ದಿನಾಂಕ ತಡವಾಗಿದೆ. ‘ಎಮರ್ಜೆನ್ಸಿ’ ಸಿನಿಮಾದ ನಿರ್ದೇಶನದ ಜೊತೆಗೆ ನಿರ್ಮಾಣದಲ್ಲೂ ಅವರು ಪಾಲುದಾರಿಕೆ ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್