‘ಇರ್ಫಾನ್​ ಖಾನ್​ ಅವರ ಸ್ಥಾನವನ್ನು ಈ ನಟ ತುಂಬುತ್ತಾರೆ’; ವಿಕ್ರಾಂತ್​ ಮಾಸ್ಸಿಗೆ ಕಂಗನಾ ಹೊಗಳಿಕೆ

ನೈಜ ಘಟನೆ ಆಧರಿಸಿದ ‘12th ಫೇಲ್​’ ಸಿನಿಮಾಗೆ ವಿಧು ವಿನೋದ್​ ಚೋಪ್ರಾ ನಿರ್ದೇಶನ ಮಾಡಿದ್ದಾರೆ. ವಿಕ್ರಾಂತ್​ ಮಾಸ್ಸಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಮಂದಿರದಲ್ಲಿ 54 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದ ಈ ಸಿನಿಮಾವನ್ನು ಈಗ ಒಟಿಟಿಯಲ್ಲಿ ನೋಡಿ ಕಂಗನಾ ರಣಾವತ್​ ಮೆಚ್ಚುಗೆ ಸೂಚಿಸಿದ್ದಾರೆ.

‘ಇರ್ಫಾನ್​ ಖಾನ್​ ಅವರ ಸ್ಥಾನವನ್ನು ಈ ನಟ ತುಂಬುತ್ತಾರೆ’; ವಿಕ್ರಾಂತ್​ ಮಾಸ್ಸಿಗೆ ಕಂಗನಾ ಹೊಗಳಿಕೆ
ಇರ್ಫಾನ್​ ಖಾನ್​, ಕಂಗನಾ ರಣಾವತ್​, ವಿಕ್ರಾಂತ್ ಮಾಸ್ಸಿ
Follow us
ಮದನ್​ ಕುಮಾರ್​
|

Updated on: Jan 05, 2024 | 2:58 PM

ನಟ ಇರ್ಫಾನ್​ ಖಾನ್​ (Irrfan Khan) ಅವರು ತಮ್ಮ ಪ್ರತಿಭೆಯ ಮೂಲಕ ಬಾಲಿವುಡ್​ನಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ಅಕಾಲಿಕ ಮರಣದಿಂದ ಚಿತ್ರರಂಗಕ್ಕೆ ನಷ್ಟ ಆಯಿತು. ಮುಂದಿನ ದಿನಗಳಲ್ಲಿ ಅವರ ಸ್ಥಾನವನ್ನು ನಟ ವಿಕ್ರಾಂತ್​ ಮಾಸ್ಸಿ (Vikrant Massey) ಅವರು ತುಂಬಬಲ್ಲರು ಎಂದು ಕಂಗನಾ ರಣಾವತ್​ ಹೇಳಿದ್ದಾರೆ. ಸಾಮಾನ್ಯವಾಗಿ ಕಂಗನಾ ರಣಾವತ್​ ಅವರು ಯಾರನ್ನೂ ಅಷ್ಟು ಸುಲಭಕ್ಕೆ ಹೊಗಳುವುದಿಲ್ಲ. ಅವರಿಂದ ವಿಕ್ರಾಂತ್ ಮಾಸ್ಸಿಗೆ ಮೆಚ್ಚುಗೆ ಸಿಕ್ಕಿದೆ. ‘12th ಫೇಲ್​’ ಸಿನಿಮಾದಲ್ಲಿನ ವಿಕ್ರಾಂತ್​ ಮಾಸ್ಸಿ ನಟನೆ ಕಂಡು ಕಂಗನಾ ರಣಾವತ್ (Kangana Ranaut)​ ಫಿದಾ ಆಗಿದ್ದಾರೆ.

2023ರ ಅಕ್ಟೋಬರ್ 27ರಂದು ‘12th ಫೇಲ್​’ ಸಿನಿಮಾ ಬಿಡುಗಡೆ ಆಗಿತ್ತು. ಅಚ್ಚರಿ ಎಂದರೆ, ಅದೇ ದಿನ ಕಂಗನಾ ರಣಾವತ್​ ನಟನೆಯ ‘ತೇಜಸ್​’ ಕೂಡ ತೆರೆಕಂಡಿತ್ತು. ಬಾಕ್ಸ್​ ಆಫೀಸ್​ನಲ್ಲಿ ‘ತೇಜಸ್​’ ಸಿನಿಮಾ ಹೀನಾಯವಾಗಿ ಸೋತಿತು. ಆದರೆ ‘12th ಫೇಲ್​’ ಸಿನಿಮಾ ಹಿಟ್ ಆಯಿತು. ಈಗ ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಿ ಕಂಗನಾ ರಣಾವತ್​ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ನಟಿ ಕಂಗನಾ ರಣಾವತ್​ಗೆ 10 ಸಿನಿಮಾಗಳ ಸೋಲಿನ ನೋವು; ಇಲ್ಲಿದೆ ವಿವರ..

ನೈಜ ಘಟನೆ ಆಧರಿಸಿದ ‘12th ಫೇಲ್​’ ಸಿನಿಮಾಗೆ ವಿಧು ವಿನೋದ್​ ಚೋಪ್ರಾ ನಿರ್ದೇಶನ ಮಾಡಿದ್ದಾರೆ. ವಿಕ್ರಾಂತ್​ ಮಾಸ್ಸಿ, ಮೇಧಾ ಶಂಕರ್​ ಮುಂತಾದವರು ನಟಿಸಿದ್ದಾರೆ. ಚಿತ್ರಮಂದಿರದಲ್ಲಿ 54 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ವಿಮರ್ಶಕರು ಮತ್ತು ಪ್ರೇಕ್ಷಕರು ಈ ಸಿನಿಮಾಗೆ ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಈಗ ‘ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​’ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ.

ಇದನ್ನೂ ಓದಿ: Y+ ಭದ್ರತೆಯೊಂದಿಗೆ ಲೋಕಲ್ ಅಂಗಡಿಯಲ್ಲಿ ಶಾಪಿಂಗ್ ಮಾಡಿದ ಕಂಗನಾ ರಣಾವತ್; ವಿಡಿಯೋ ವೈರಲ್

‘ವಿಧು ಸರ್​ ಮತ್ತೊಮ್ಮೆ ನನ್ನ ಹೃದಯ ಗೆದ್ದಿದ್ದಾರೆ. ವಿಕ್ರಾಂತ್​ ಮಾಸ್ಸಿ ತುಂಬ ಚೆನ್ನಾಗಿ ನಟಿಸಿದ್ದಾರೆ. ಇರ್ಫಾನ್​ ಖಾನ್​ ಅವರಿಂದ ತೆರವಾದ ಸ್ಥಾನವನ್ನು ಮುಂದಿನ ದಿನಗಳಲ್ಲಿ ವಿಕ್ರಾಂತ್​ ಮಾಸ್ಸಿ ತುಂಬಲಿದ್ದಾರೆ. ನಿಮ್ಮ ಪ್ರತಿಭೆಗೆ ನನ್ನ ಪ್ರಣಾಮಗಳು’ ಎಂದು ಕಂಗನಾ ರಣಾವತ್​ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸದ್ಯ ‘ಎಮರ್ಜೆನ್ಸಿ’ ಸಿನಿಮಾದ ಕೆಲಸಗಳಲ್ಲಿ ಕಂಗನಾ ರಣಾವತ್​ ಅವರು ಬ್ಯುಸಿ ಆಗಿದ್ದಾರೆ. ಆ ಚಿತ್ರಕ್ಕೆ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಕಾರಣಾಂತರಗಳಿಂದ ಆ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್