‘ಅನಿಮಲ್​’ ಚಿತ್ರದಲ್ಲಿ ಕ್ರೂರಿಯಾದ ಬಾಬಿ ಡಿಯೋಲ್​ ನಿಜ ಜೀವನದಲ್ಲಿ ಎಷ್ಟು ಸ್ವೀಟ್​ ನೋಡಿ..

ನಟರ ಜನಪ್ರಿಯತೆ ಹೆಚ್ಚಾದ ಬಳಿಕ ಬೇಡಿಕೆ ಕೂಡ ಹೆಚ್ಚಾಗುತ್ತದೆ. ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಫ್ಯಾನ್ಸ್​ ಮುಗಿ ಬೀಳುತ್ತಾರೆ. ಅಂಥ ಸಂದರ್ಭಗಳಲ್ಲಿ ಕೆಲವು ಸೆಲೆಬ್ರಿಟಿಗಳಿಗೆ ಕಿರಿಕಿರಿ ಆಗುತ್ತದೆ. ಆಗ ಅವರು ರೇಗಾಡಿದ ಅನೇಕ ಉದಾಹರಣೆಗಳು ಇವೆ. ಆದರೆ ಬಾಬಿ ಡಿಯೋಲ್​ ಅವರು ಆ ರೀತಿ ಮಾಡಿಲ್ಲ.

‘ಅನಿಮಲ್​’ ಚಿತ್ರದಲ್ಲಿ ಕ್ರೂರಿಯಾದ ಬಾಬಿ ಡಿಯೋಲ್​ ನಿಜ ಜೀವನದಲ್ಲಿ ಎಷ್ಟು ಸ್ವೀಟ್​ ನೋಡಿ..
ಬಾಬಿ ಡಿಯೋಲ್​
Follow us
ಮದನ್​ ಕುಮಾರ್​
|

Updated on: Jan 05, 2024 | 11:50 AM

ನಟ ಬಾಬಿ ಡಿಯೋಲ್​ ಅವರಿಗೆ ಅನಿಮಲ್​’ (Animal Movie) ಸಿನಿಮಾದಿಂದ ಭಾರಿ ದೊಡ್ಡ ಗೆಲುವು ಸಿಕ್ಕಿದೆ. ಈ ಸಿನಿಮಾದಲ್ಲಿ ಅವರು ನೆಗೆಟಿವ್​ ಪಾತ್ರ ಮಾಡಿದ್ದಾರೆ. ಅಬ್ರಾರ್ ಹಖ್​ ಎಂಬ ವಿಲನ್​ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಆ ಪಾತ್ರಕ್ಕೆ ಒಂದೇ ಒಂದೂ ಡೈಲಾಗ್​ ಇಲ್ಲದಿದ್ದರೂ ಕೂಡ ಜನರ ಮನ ಗೆಲ್ಲುವಲ್ಲಿ ಬಾಬಿ ಡಿಯೋಲ್​ (Bobby Deol) ಯಶಸ್ವಿ ಆಗಿದ್ದಾರೆ. ಈ ಗೆಲುವಿನ ಬಳಿಕ ಅವರ ಫ್ಯಾನ್​ ಫಾಲೋಯಿಂಗ್​ ದೊಡ್ಡದಾಗಿದೆ. ಹೋದಲ್ಲಿ ಬಂದಲ್ಲಿ ಅವರಿಗೆ ಫ್ಯಾನ್ಸ್​ ಮುತ್ತಿಗೆ ಹಾಕುತ್ತಿದ್ದಾರೆ. ಅಭಿಮಾನಿಗಳ ಜೊತೆ ಬಾಬಿ ಡಿಯೋಲ್​ ತುಂಬ ಸೌಮ್ಯವಾಗಿ ನಡೆದುಕೊಂಡಿದ್ದಾರೆ.

ನಟರ ಜನಪ್ರಿಯತೆ ಹೆಚ್ಚಾದ ಬಳಿಕ ಬೇಡಿಕೆ ಕೂಡ ಹೆಚ್ಚಾಗುತ್ತದೆ. ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಫ್ಯಾನ್ಸ್​ ಮುಗಿ ಬೀಳುತ್ತಾರೆ. ಅಂಥ ಸಂದರ್ಭಗಳಲ್ಲಿ ಕೆಲವು ಸೆಲೆಬ್ರಿಟಿಗಳಿಗೆ ಕಿರಿಕಿರಿ ಆಗುತ್ತದೆ. ಆಗ ಅವರು ರೇಗಾಡಿದ ಅನೇಕ ಉದಾಹರಣೆಗಳು ಇವೆ. ಆದರೆ ಬಾಬಿ ಡಿಯೋಲ್​ ಅವರು ಆ ರೀತಿ ಮಾಡಿಲ್ಲ. ಸೆಲ್ಫಿ ಕೇಳಲು ಬಂದವರ ಜೊತೆ ಅವರು ಕೂಲ್​ ಆಗಿ ವರ್ತಿಸಿದ್ದಾರೆ.

ಇದನ್ನೂ ಓದಿ: ‘ಮೂವರು ಪತ್ನಿಯರನ್ನು ಹೊಂದಿದ ಅಬ್ರಾರ್​ ವಿಲನ್​ ಅಲ್ಲ, ಆತ ರೊಮ್ಯಾಂಟಿಕ್​’: ಬಾಬಿ ಡಿಯೋಲ್​

ಬಾಬಿ ಡಿಯೋಲ್​ ಅವರು ಬಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಸ್ಟಾರ್​ ಕಿಡ್​ ಆದ್ದರಿಂದ ಅವರಿಗೆ ಅವಕಾಶಗಳು ಸುಲಭವಾಗಿ ಸಿಕ್ಕವು. ಆದರೆ ಜನಪ್ರಿಯತೆಯನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿರಲಿಲ್ಲ. ಆದರೆ ‘ಅನಿಮಲ್​’ ಸಿನಿಮಾದಿಂದ ಅವರು ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದ್ದಾರೆ.

‘ಅನಿಮಲ್​’ ಸಿನಿಮಾದಲ್ಲಿ ಸಖತ್​ ರಫ್​ ಆ್ಯಂಡ್​ ಟಫ್​ ಆಗಿ ಕಾಣಿಸಿಕೊಂಡ ಬಾಬಿ ಡಿಯೋಲ್​ ಅವರು ರಿಯಲ್​ ಲೈಫ್​ನಲ್ಲಿ ತುಂಬ ಮೃದು ಸ್ವಭಾವ ಹೊಂದಿದ್ದಾರೆ. ಗಡಿಬಿಡಿಯಲ್ಲಿ ಇದ್ದಾಗ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಬಂದು ನೂಕುನುಗ್ಗಲು ಉಂಟಾದರೂ ಕೂಡ ಬಾಬಿ ಡಿಯೋಲ್​ ತಾಳ್ಮೆ ಕಳೆದುಕೊಂಡಿಲ್ಲ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದ್ದು, ಅದಕ್ಕೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್