‘ಮೂವರು ಪತ್ನಿಯರನ್ನು ಹೊಂದಿದ ಅಬ್ರಾರ್​ ವಿಲನ್​ ಅಲ್ಲ, ಆತ ರೊಮ್ಯಾಂಟಿಕ್​’: ಬಾಬಿ ಡಿಯೋಲ್​

ಕೆಟ್ಟ ಭಾಷೆಯ ಬಳಕೆ, ಅತಿಯಾದ ಹಿಂಸೆ, ಮಹಿಳೆಯರನ್ನು ಅವಹೇಳನ ಮಾಡುವಂತಹ ದೃಶ್ಯಗಳು ಇವೆ ಎಂಬ ಕಾರಣಕ್ಕೆ ‘ಅನಿಮಲ್​’ ಸಿನಿಮಾವನ್ನು ಅನೇಕರು ಟೀಕಿಸಿದ್ದಾರೆ. ಈ ನಡುವೆ ತಾವು ಮಾಡಿರುವ ಪಾತ್ರವನ್ನು ಬಾಬಿ ಡಿಯೋಲ್​ ಅವರು ಸಮರ್ಥಿಸಿಕೊಂಡಿದ್ದಾರೆ.

‘ಮೂವರು ಪತ್ನಿಯರನ್ನು ಹೊಂದಿದ ಅಬ್ರಾರ್​ ವಿಲನ್​ ಅಲ್ಲ, ಆತ ರೊಮ್ಯಾಂಟಿಕ್​’: ಬಾಬಿ ಡಿಯೋಲ್​
ಬಾಬಿ ಡಿಯೋಲ್​
Follow us
ಮದನ್​ ಕುಮಾರ್​
|

Updated on: Dec 15, 2023 | 12:49 PM

ಬಾರಿ ಸದ್ದು ಮಾಡುತ್ತಿರುವ ಅನಿಮಲ್​’ (Animal) ಸಿನಿಮಾದಲ್ಲಿ ಬಾಬಿ ಡಿಯೋಲ್​ ಅವರು ವಿಲನ್​ ಪಾತ್ರ ಮಾಡಿದ್ದಾರೆ. ಆದರೆ ಈ ಪಾತ್ರವನ್ನು ಅವರು ವಿಲನ್​ ಎಂದು ಕರೆಯಲು ಸಿದ್ಧರಿಲ್ಲ. ಈ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ‘ಅನಿಮಲ್​’ ಸಿನಿಮಾದಲ್ಲಿ ರಣಬೀರ್​ ಕಪೂರ್ (Ranbir Kapoor)​ ಹೀರೋ ಆಗಿ ನಟಿಸಿದ್ದಾರೆ. ಅವರಿಗೆ ರಶ್ಮಿಕಾ ಮಂದಣ್ಣ ಜೋಡಿ ಆಗಿದ್ದಾರೆ. ಅನಿಲ್​ ಕಪೂರ್​, ಶಕ್ತಿ ಕಪೂರ್​, ತೃಪ್ತಿ ದಿಮ್ರಿ ಮುಂತಾದವರು ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಬಾಬಿ ಡಿಯೋಲ್​ (Bobby Deol) ಅವರಿಗೆ ಈ ಚಿತ್ರದಿಂದ ಖ್ಯಾತಿ ಹೆಚ್ಚಾಗಿದೆ.

‘ಅನಿಮಲ್​’ ಸಿನಿಮಾದಲ್ಲಿ ಬಾಬಿ ಡಿಯೋಲ್​ ಅವರು ಅಬ್ರಾರ್​ ಹಖ್​ ಎಂಬ ಪಾತ್ರ ಮಾಡಿದ್ದಾರೆ. ಅಬ್ರಾರ್​ಗೆ ಮೂವರು ಪತ್ನಿಯರು ಇರುತ್ತಾರೆ. ಆ ಪತ್ನಿಯರ ಮೇಲೆ ಆತ ದೌರ್ಜನ್ಯ ಎಸಗುತ್ತಾನೆ. ತುಂಬ ಕ್ರೂರವಾಗಿ ನಡೆದುಕೊಳ್ಳುತ್ತಾನೆ. ಹಾಗಿದ್ದರೂ ಕೂಡ ಆ ಪಾತ್ರವನ್ನು ಕೆಟ್ಟ ವರ್ತನೆಗಳಿರುವ ಪಾತ್ರ ಎಂದು ಒಪ್ಪಿಕೊಳ್ಳಲು ಬಾಬಿ ಡಿಯೋಲ್​ ಸಿದ್ಧರಿಲ್ಲ ಎಂಬುದು ಅಚ್ಚರಿ.

ಇದನ್ನೂ ಓದಿ: ‘ಅನಿಮಲ್​’ ನಟಿಯ 8 ವರ್ಷದ ಹಳೇ ವಿಡಿಯೋ ವೈರಲ್​; ತೃಪ್ತಿ ದಿಮ್ರಿ ಆಗಲೇ ಬೋಲ್ಡ್​

‘ನನ್ನ ಆ ಪಾತ್ರವನ್ನು ನಾನು ವಿಲನ್​ ಎಂದು ಪರಿಗಣಿಸುವುದಿಲ್ಲ. ಅಜ್ಜ ಆತ್ಮಹತ್ಯೆ ಮಾಡಿಕೊಳ್ಳುವುದು ನೋಡಿ ಆಘಾತಕ್ಕೆ ಒಳಗಾದ ಮಗು ಆತ. ಹಾಗಾಗಿ ಅವನಿಗೆ ಮಾತು ಹೊರಟು ಹೋಗುತ್ತದೆ. ಅಜ್ಜನ ಸಾವಿಗೆ ಸೇಡು ತೀರಿಸಿಕೊಳ್ಳಲು ಆತ ಕಾದಿರುತ್ತಾನೆ. ಅವನು ಫ್ಯಾಮಿಲಿ ಮ್ಯಾನ್​. ಆತನಿಗೆ ಮೂವರು ಹೆಂಡತಿಯರು. ಹಾಗಾಗಿ ಅವನು ರೊಮ್ಯಾಂಟಿಕ್​ ವ್ಯಕ್ತಿ. ಕುಟುಂಬಕ್ಕಾಗಿ ಅವನು ಪ್ರಾಣ ತೆಗೆಯಬಲ್ಲ ಮತ್ತು ಪ್ರಾಣ ಕೊಡಬಲ್ಲ’ ಎಂದು ಬಾಬಿ ಡಿಯೋಲ್​ ಹೇಳಿದ್ದಾರೆ.

ಇದನ್ನೂ ಓದಿ: ‘ಅನಿಮಲ್ ಸಿನಿಮಾದ ಕೆಲ ದೃಶ್ಯಗಳು ನನಗೆ ಇಷ್ಟ ಆಗಿಲ್ಲ’; ನೇರವಾಗಿ ಹೇಳಿದ ಸನ್ನಿ ಡಿಯೋಲ್

ಕೆಟ್ಟ ಭಾಷೆಯ ಬಳಕೆ, ಅತಿಯಾದ ಹಿಂಸೆ, ಮಹಿಳೆಯರನ್ನು ಅವಹೇಳನ ಮಾಡುವಂತಹ ದೃಶ್ಯಗಳು ಇವೆ ಎಂಬ ಕಾರಣಕ್ಕೆ ‘ಅನಿಮಲ್​’ ಸಿನಿಮಾವನ್ನು ಅನೇಕರು ಟೀಕಿಸಿದ್ದಾರೆ. ಈ ಚಿತ್ರದ ಕೆಲವು ದೃಶ್ಯ ತಮಗೆ ಇಷ್ಟ ಆಗಿಲ್ಲ ಎಂದು ಬಾಬಿ ಡಿಯೋಲ್​​ ಸಹೋದರ ಸನ್ನಿ ಡಿಯೋಲ್​ ಹೇಳಿದ್ದಾರೆ. ಕೆಲವು ಸೆಲೆಬ್ರಿಟಿಗಳಿಗೆ ಈ ಸಿನಿಮಾ ಇಷ್ಟ ಆಗಿದೆ. ಅಲ್ಲು ಅರ್ಜುನ್ ಅವರು ಇದನ್ನು ಕ್ಲಾಸಿಕ್​ ಎಂದು ಕರೆದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್