AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನಿಮಲ್ ಸಿನಿಮಾದ ಕೆಲ ದೃಶ್ಯಗಳು ನನಗೆ ಇಷ್ಟ ಆಗಿಲ್ಲ’; ನೇರವಾಗಿ ಹೇಳಿದ ಸನ್ನಿ ಡಿಯೋಲ್

ಬಾಬಿ ಡಿಯೋಲ್ ಬಗ್ಗೆ ಸನ್ನಿ ಡಿಯೋಲ್​ಗೆ ವಿಶೇಷ ಪ್ರಿತಿ ಇದೆ. ‘ಅನಿಮಲ್' ಸಿನಿಮಾ ನೋಡಿದ ಬಳಿಕ ಆ ಪ್ರೀತಿ, ಗೌರವ ಹೆಚ್ಚಿದೆ. ಅವರಿಗೆ ಹೊಸ ನಿಕ್​ನೇಮ್ ಕೂಡ ನೀಡಿದ್ದಾರೆ ಸನ್ನಿ.

‘ಅನಿಮಲ್ ಸಿನಿಮಾದ ಕೆಲ ದೃಶ್ಯಗಳು ನನಗೆ ಇಷ್ಟ ಆಗಿಲ್ಲ’; ನೇರವಾಗಿ ಹೇಳಿದ ಸನ್ನಿ ಡಿಯೋಲ್
ಬಾಬಿ-ಸನ್ನಿ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Dec 15, 2023 | 12:19 PM

Share

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಸಿನಿಮಾ (Animal Movie) ಈ ವರ್ಷದ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಒಂದು. ಡಿಸೆಂಬರ್ 1ರಂದು ಬಿಡುಗಡೆಯಾಗಿರುವ ಈ ಚಿತ್ರ ವಿಶ್ವದಾದ್ಯಂತ 800 ಕೋಟಿ ರೂಪಾಯಿ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ಬಾಬಿ ಡಿಯೋಲ್, ಅನಿಲ್​ ಕಪೂರ್ ಮೊದಲಾದವರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈ ಚಿತ್ರಕ್ಕೆ ಜನಸಾಮಾನ್ಯರ ಜೊತೆಗೆ ಅನೇಕ ಸೆಲೆಬ್ರಿಟಿಗಳು ಕೂಡ ಪ್ರತಿಕ್ರಿಯಿಸಿದ್ದಾರೆ. ಈಗ ಬಾಬಿ ಡಿಯೋಲ್ ಸಹೋದರ ಸನ್ನಿ ಡಿಯೋಲ್ ‘ಅನಿಮಲ್’ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಈ ಚಿತ್ರದ ಕೆಲವು ದೃಶ್ಯಗಳು ನನಗೆ ಇಷ್ಟವಾಗಲಿಲ್ಲ’ ಎಂದು ನೇರ ಮಾತಲ್ಲಿ ಹೇಳಿದ್ದಾರೆ.

‘ಅನಿಮಲ್’ ಚಿತ್ರದ ಕೆಲವು ದೃಶ್ಯಗಳು ಅನೇಕರಿಗೆ ಇಷ್ಟ ಆಗಿಲ್ಲ. ಸನ್ನಿ ಡಿಯೋಲ್​ಗೂ ಹಾಗೆಯೇ ಆಗಿದೆ. ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸನ್ನಿ ಡಿಯೋಲ್ ಮಾತನಾಡಿದ್ದಾರೆ. ‘ನನಗೆ ಬಾಬಿ ಬಗ್ಗೆ ನಿಜವಾಗಿಯೂ ಖುಷಿ ಇದೆ. ಅವರ ‘ಅನಿಮಲ್’ ಸಿನಿಮಾ ನೋಡಿ ಇಷ್ಟಪಟ್ಟೆ. ಇದೊಂದು ಒಳ್ಳೆಯ ಸಿನಿಮಾ. ಆದರೆ ಈ ಚಿತ್ರದಲ್ಲಿ ಹಲವು ದೃಶ್ಯಗಳು ಇಷ್ಟವಾಗಿಲ್ಲ. ನನ್ನ ಸಿನಿಮಾಗಳ ಕೆಲವು ದೃಶ್ಯಗಳೂ ನನಗೆ ಇಷ್ಟ ಆಗುವುದಿಲ್ಲ. ಒಬ್ಬ ಪ್ರೇಕ್ಷಕನಾಗಿ ಆ ವಿಷಯಗಳನ್ನು ಇಷ್ಟಪಡುವ ಅಥವಾ ಇಷ್ಟಪಡದಿರಲು ನನಗೆ ಹಕ್ಕಿದೆ’ ಎಂದಿದ್ದಾರೆ ಅವರು.

ಬಾಬಿ ಡಿಯೋಲ್ ಬಗ್ಗೆ ಸನ್ನಿ ಡಿಯೋಲ್​ಗೆ ವಿಶೇಷ ಪ್ರಿತಿ ಇದೆ. ‘ಅನಿಮಲ್’ ಸಿನಿಮಾ ನೋಡಿದ ಬಳಿಕ ಆ ಪ್ರೀತಿ, ಗೌರವ ಹೆಚ್ಚಿದೆ. ಅವರಿಗೆ ಹೊಸ ನಿಕ್​ನೇಮ್ ಕೂಡ ನೀಡಿದ್ದಾರೆ ಸನ್ನಿ. ‘ಇದು ಒಂದು ಒಳ್ಳೆಯ ಸಿನಿಮಾ. ಇದರ ಮ್ಯೂಸಿಕ್ ಚೆನ್ನಾಗಿದೆ. ಬಾಬಿ ಯಾವಾಗಲೂ ಬಾಬಿ. ಆದರೆ ಈಗ ಈ ಚಿತ್ರದ ನಂತರ ಅವರು ಲಾರ್ಡ್ ಬಾಬಿ ಆಗಿದ್ದಾರೆ’ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಸನ್ನಿ ಡಿಯೋಲ್ ಹಾಗೂ ಬಾಬಿ ಡಿಯೋಲ್ ಸಹೋದರರು. ಇಬ್ಬರಿಗೂ ಈ ವರ್ಷ ದೊಡ್ಡ ಗೆಲುವು ಸಿಕ್ಕಿದೆ. ಸನ್ನಿ ಡಿಯೋಲ್ ನಟನೆಯ ‘ಗದರ್ 2’ ಈ ವರ್ಷ ಭಾರತದ ಬಾಕ್ಸ್ ಆಫೀಸ್​ನಲ್ಲಿ 500 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಅನಿಮಲ್’ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ 500 ಕೋಟಿ ರೂಪಾಯಿ ಕ್ಲಬ್ ಸೇರುವುದರಲ್ಲಿದೆ.

‘ಅನಿಮಲ್ ಕಲೆಕ್ಷನ್ ಬಗ್ಗೆ..’

‘ಅನಿಮಲ್’ ಸಿನಿಮಾದ ಮೂರನೇ ವಾರದ ಗಳಿಕೆ ತಗ್ಗಿದೆ. ಈ ಚಿತ್ರದ ಭಾರತದ ಗಳಿಕೆ 476 ಕೋಟಿ ರೂಪಾಯಿ ಆಗಿದೆ. ಈ ವೀಕೆಂಡ್​ನಲ್ಲಿ ಸಿನಿಮಾದ ಗಳಿಕೆ ಮತ್ತೆ ಹೆಚ್ಚುವ ಸಾಧ್ಯತೆ ಇದೆ. ಈ ಮೂಲಕ ಸಿನಿಮಾ 500 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಚಿತ್ರ 772 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಇದನ್ನೂ ಓದಿ: ‘ಅನಿಮಲ್​’ ನಟಿಯ 8 ವರ್ಷದ ಹಳೇ ವಿಡಿಯೋ ವೈರಲ್​; ತೃಪ್ತಿ ದಿಮ್ರಿ ಆಗಲೇ ಬೋಲ್ಡ್​

‘ಅನಿಮಲ್’ ಚಿತ್ರಕ್ಕೆ ‘ಅರ್ಜುನ್ ರೆಡ್ಡಿ’, ‘ಕಬೀರ್ ಸಿಂಗ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡಿದ್ದಾರೆ. ರಣಬೀರ್ ಕಪೂರ್ ಹಲವು ಶೇಡ್​ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ, ಅನಿಲ್ ಕಪೂರ್, ಬಾಬಿ ಡಿಯೋಲ್ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ