‘ಅನಿಮಲ್​’ ನಟಿಯ 8 ವರ್ಷದ ಹಳೇ ವಿಡಿಯೋ ವೈರಲ್​; ತೃಪ್ತಿ ದಿಮ್ರಿ ಆಗಲೇ ಬೋಲ್ಡ್​

ಹುಡುಗಿಯರು ಹೇಗೆಲ್ಲ ಇರುತ್ತಾರೆ ಎಂಬುದನ್ನು ವಿವರಿಸುವ ಸ್ಕಿಟ್​ನಲ್ಲಿ ತೃಪ್ತಿ ದಿಮ್ರಿ ನಟಿಸಿದ್ದರು. ಅದನ್ನು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಅನೇಕ ವಿಚಾರಗಳ ಬಗ್ಗೆ ಅವರು ಸಖತ್​ ಬೋಲ್ಡ್​ ಆಗಿ ಡೈಲಾಗ್​ ಹೊಡೆದಿದ್ದರು. ಇದು ಈಗ ವೈರಲ್​ ಆಗುತ್ತಿದೆ. ಅದನ್ನು ನೋಡಿದವರು ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

‘ಅನಿಮಲ್​’ ನಟಿಯ 8 ವರ್ಷದ ಹಳೇ ವಿಡಿಯೋ ವೈರಲ್​; ತೃಪ್ತಿ ದಿಮ್ರಿ ಆಗಲೇ ಬೋಲ್ಡ್​
ತೃಪ್ತಿ ದಿಮ್ರಿ
Follow us
ಮದನ್​ ಕುಮಾರ್​
|

Updated on: Dec 14, 2023 | 5:36 PM

ಬಾಲಿವುಡ್​ ನಟಿ ತೃಪ್ತಿ ದಿಮ್ರಿ (Tripti Dimri) ಅವರು ‘ನ್ಯಾಷನಲ್​ ಕ್ರಶ್​’ ಎಂಬ ಪಟ್ಟ ಪಡೆದಿದ್ದಾರೆ. ‘ಅನಿಮಲ್​’ (Animal Movie) ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರಿಗೆ ಈ ಬಿರುದು ಸಿಕ್ಕಿದೆ. ರಣಬೀರ್​ ಕಪೂರ್​ ಜೊತೆ ಅವರು ನಟಿಸಿದ ಬೋಲ್ಡ್​ ದೃಶ್ಯಗಳ ಬಗ್ಗೆ ಎಲ್ಲೆಲ್ಲೂ ಚರ್ಚೆ ಆಗುತ್ತಿದೆ. ಈ ಮೊದಲು ಕೆಲವು ಸಿನಿಮಾಗಳಲ್ಲಿ, ವೆಬ್​ ಸಿರೀಸ್​ಗಳಲ್ಲಿ ತೃಪ್ತಿ ದಿಮ್ರಿ ನಟಿಸಿದ್ದರು. ಆದರೆ ಅವರಿಗೆ ಈ ಪರಿ ಜನಪ್ರಿಯತೆ ಸಿಕ್ಕಿರಲಿಲ್ಲ. ಅಚ್ಚರಿ ಏನೆಂದರೆ, 8 ವರ್ಷಗಳ ಹಿಂದೆಯೇ ತೃಪ್ತಿ ದಿಮ್ರಿ ಅವರು ಬೋಲ್ಡ್​ ಆಗಿ ನಟಿಸಿದ್ದರು. ಆ ವಿಡಿಯೋ (Tripti Dimri Viral Video) ಈಗ ವೈರಲ್​ ಆಗಿದೆ.

ಭಾರತದ ಹುಡುಗಿಯರು ಹೇಗೆ ಇರುತ್ತಾರೆ ಎಂದು ತೋರಿಸುವ ಒಂದು ಸ್ಕಿಟ್​ನಲ್ಲಿ ತೃಪ್ತಿ ದಿಮ್ರಿ ನಟಿಸಿದ್ದರು. ಅದನ್ನು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಸೆ*ಕ್ಸ್​ ಲೈಫ್​, ರಿಲೇಷನ್​ಶಿಪ್​ ಟಿಪ್ಸ್​ ಮುಂತಾದ ವಿಚಾರಗಳ ಬಗ್ಗೆ ಅವರು ಸಖತ್​ ಬೋಲ್ಡ್​ ಆಗಿ ಡೈಲಾಗ್​ ಹೊಡೆದಿದ್ದರು. ಇದು ಈಗ ವೈರಲ್​ ಆಗುತ್ತಿದೆ. ಅದನ್ನು ನೋಡಿದ ಅಭಿಮಾನಿಗಳು ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಈ ಮೊದಲು ತೃಪ್ತಿ ದಿಮ್ರಿ ಅವರು ‘ಲೈಲಾ ಮಜ್ನು’, ‘ಬುಲ್​ಬುಲ್​’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆದ ‘ಕಲಾ’ ವೆಬ್​ ಸರಣಿಯಲ್ಲಿ ಕೂಡ ಅವರು ಬೋಲ್ಡ್​ ಆದಂತಹ ಪಾತ್ರ ಮಾಡಿದ್ದರು. ಇರ್ಫಾನ್​ ಖಾನ್​ ಪುತ್ರ ಬಬಿಲ್​ ಖಾನ್​ ಜೊತೆ ಅವರು ತೆರೆ ಹಂಚಿಕೊಂಡಿದ್ದರು. ಅದರಲ್ಲಿನ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ‘ಅನಿಮಲ್​’ ರಿಲೀಸ್​ ಆದ ಬಳಿಕ ತೃಪ್ತಿ ದಿಮ್ರಿ ಅವರು ಬಹಳ ಫೇಮಸ್​ ಆಗಿದ್ದಾರೆ.

ಇದನ್ನೂ ಓದಿ: ದೊಡ್ಡ ಸಿನಿಮಾ ಅವಕಾಶ ಬಾಚಿಕೊಂಡ ‘ಅನಿಮಲ್’ ಸ್ಟಾರ್ ತೃಪ್ತಿ ದಿಮ್ರಿ

‘ಅನಿಮಲ್​’ ಸಿನಿಮಾ ತೆರೆ ಕಾಣುವುದಕ್ಕೂ ಮುನ್ನ ತೃಪ್ತಿ ದಿಮ್ರಿ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಕೇವಲ 6 ಲಕ್ಷ ಫಾಲೋವರ್ಸ್​ ಇದ್ದರು. ಆದರೆ ಈಗ 37 ಲಕ್ಷಕ್ಕೂ ಅಧಿಕ ಮಂದಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಅವರಿಗೆ ಹೊಸ ಅವಕಾಶಗಳು ಸಿಗುತ್ತಿವೆ. ಈಗ ತೃಪ್ತಿ ದಿಮ್ರಿ ಅವರಿಗೆ 28 ವರ್ಷ ವಯಸ್ಸು. ಈ ಮೊದಲು ಅನುಷ್ಕಾ ಶರ್ಮಾ ಅವರ ಸಹೋದರ ಕರ್ಣೇಶ್​ ಶರ್ಮಾ ಜೊತೆ ತೃಪ್ತಿ ದಿಮ್ರಿ ರಿಲೇಷನ್​ಶಿಪ್​ನಲ್ಲಿ ಇದ್ದರು. ಬಳಿಕ ಬ್ರೇಕಪ್​ ಮಾಡಿಕೊಂಡರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್