‘ಕಭಿ ಖುಷಿ ಕಭಿ ಗಮ್’ ಸಿನಿಮಾಗೆ 22 ವರ್ಷ; ನೆನಪಿನ ಪುಟ ತೆರೆದ ನಟಿ ಕಾಜೋಲ್
‘ಕಭಿ ಖುಷಿ ಕಭಿ ಗಮ್’ ಚಿತ್ರದ ಶೂಟಿಂಗ್ ಸಂದರ್ಭವನ್ನು ಕಾಜೋಲ್ ನೆನಪು ಮಾಡಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರು ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಚಿತ್ರದ ನಿರ್ದೇಶಕ ಕರಣ್ ಜೋಹರ್ ಕೂಡ ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಡಿಸೆಂಬರ್ 14 ಎಂದರೆ ನಟಿ ಕಾಜೋಲ್ (Kajol) ಅವರಿಗೆ ವಿಶೇಷ ದಿನ. ಅವರಿಗೆ ಮಾತ್ರವಲ್ಲದೇ ಶಾರುಖ್ ಖಾನ್, ಕರಣ್ ಜೋಹರ್ ಮುಂತಾದವರಿಗೂ ಈ ದಿನ ಸಖತ್ ಸ್ಪೆಷಲ್. ಯಾಕೆಂದರೆ ‘ಕಭಿ ಖುಷಿ ಕಭಿ ಗಮ್’ (Kabhi Khushi Kabhie Gham) ಸಿನಿಮಾ ಬಿಡುಗಡೆಯಾದ ದಿನಾಂಕ ಇದು. 2001ರ ಡಿಸೆಂಬರ್ 14ರಂದು ಈ ಸಿನಿಮಾ ಬಿಡುಗಡೆ ಆಗಿತ್ತು. ಇಂದಿಗೆ 22 ವರ್ಷಗಳನ್ನು ಪೂರೈಸಿದೆ. ಈ ಖುಷಿಯಲ್ಲಿ ನಟಿ ಕಾಜೋಲ್, ನಿರ್ದೇಶಕ ಕರಣ್ ಜೋಹರ್ (Karan Johar) ಮುಂತಾದವರು ನೆನಪಿನ ಪುಟ ತೆರೆದಿದ್ದಾರೆ. ಅಭಿಮಾನಿಗಳು ಕೂಡ ಈ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದಾರೆ.
22 ವರ್ಷಗಳು ಉರುಳಿದರೂ ಅಭಿಮಾನಿಗಳ ಫೇವರಿಟ್ ಸಿನಿಮಾಗಳ ಲಿಸ್ಟ್ನಲ್ಲಿ ‘ಕಭಿ ಖುಷಿ ಕಭಿ ಗಮ್’ ಸಿನಿಮಾ ಸ್ಥಾನ ಉಳಿಸಿಕೊಂಡಿದೆ. ಆ ಸಿನಿಮಾದ ಹಾಡುಗಳು ಇಂದಿಗೂ ಎವರ್ಗ್ರೀನ್ ಆಗಿವೆ. ರಾಣಿ ಮುಖರ್ಜಿ, ಹೃತಿಕ್ ರೋಷನ್, ಶಾರುಖ್ ಖಾನ್, ಕಾಜೋಲ್, ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಕರೀನಾ ಕಪೂರ್ ಮುಂತಾದವರು ನಟಿಸಿದ್ದ ಈ ಸಿನಿಮಾ ಎಂದರೆ ಸಿನಿಪ್ರಿಯರಿಗೆ ಬಹಳ ಇಷ್ಟ.
ಇದನ್ನೂ ಓದಿ: ‘ಕಾಫಿ ವಿತ್ ಕರಣ್’ ಶೋಗೆ ಬಂದು ಕೋಪ ಮಾಡಿಕೊಂಡ ನಟಿ ಕಾಜೋಲ್
‘ಕಭಿ ಖುಷಿ ಕಭಿ ಗಮ್’ ಸಿನಿಮಾದ ಪಾತ್ರಗಳನ್ನು ಪ್ರೇಕ್ಷಕರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಆ ದಿನದ ನೆನಪುಗಳನ್ನು ಕಾಜೋಲ್ ಅವರು ಮೆಲುಕು ಹಾಕಿದ್ದಾರೆ.
View this post on Instagram
ಆ ಸಿನಿಮಾದ ನೆನಪಿಗಾಗಿ ಕಾಜೋಲ್ ಅವರು ಇನ್ಸ್ಟಾಗ್ರಾಮ್ನಲ್ಲಿ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದು ಆರ್ಯನ್ ಖಾನ್ ಕಾಣಿಸಿಕೊಂಡ ಮೊದಲ ಸಿನಿಮಾ ಎಂದು ಕೂಡ ಅವರು ಹೇಳಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ, ಕಾಜೋಲ್ ಬಳಿಕ ನಟಿ ಆಲಿಯಾ ಭಟ್ಗೆ ಶುರುವಾಯ್ತು ಡೀಪ್ಫೇಕ್ ಕಾಟ
‘ಕಭಿ ಖುಷಿ ಕಭಿ ಗಮ್’ ಚಿತ್ರದ ಶೂಟಿಂಗ್ ಸಂದರ್ಭವನ್ನು ಕಾಜೋಲ್ ನೆನಪು ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ‘ಇದು ನಮ್ಮ ಫೇವರಿಟ್ ಸಿನಿಮಾ. ಬೇರೆ ಎಲ್ಲ ಚಿತ್ರಗಳಿಗಿಂತಲೂ ನಮಗೆ ಇದು ಹೆಚ್ಚು ಇಷ್ಟ’ ಎಂದಿದ್ದಾರೆ. ಕರಣ್ ಜೋಹರ್ ಕೂಡ ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.