ಬಾಲಿವುಡ್​ನ ಟಾಪ್​ 10 ಶ್ರೀಮಂತ ನಟಿಯರು ಇವರೇ ನೋಡಿ.. ಇಲ್ಲಿದೆ ವಿವರ

ಐಶ್ವರ್ಯಾ ರೈ ಬಚ್ಚನ್ ಅವರು ಬಾಲಿವುಡ್​ನ ಶ್ರೀಮಂತ ನಟಿಯರ ಪೈಕಿ ಟಾಪ್​ನಲ್ಲಿದ್ದಾರೆ. ಅವರು ಪ್ರತಿ ಚಿತ್ರಕ್ಕೆ 10 ಕೋಟಿ ರೂಪಾಯಿ ಪಡೆಯುತ್ತಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಜಾಹೀರಾತು ಲೋಕದಲ್ಲೂ ಅವರಿಗೆ ಬೇಡಿಕೆ ಇದೆ.

ಬಾಲಿವುಡ್​ನ ಟಾಪ್​ 10 ಶ್ರೀಮಂತ ನಟಿಯರು ಇವರೇ ನೋಡಿ.. ಇಲ್ಲಿದೆ ವಿವರ
ಬಾಲಿವುಡ್​ನ ಟಾಪ್​ 10 ಶ್ರೀಮಂತ ನಟಿಯರು ಇವರೇ ನೋಡಿ.. ಇಲ್ಲಿದೆ ವಿವರ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Dec 14, 2023 | 8:11 AM

ಹೀರೋಗಳಿಗೆ ಹೋಲಿಕೆ ಮಾಡಿದರೆ ಹೀರೋಯಿನ್​ಗಳಿಗೆ ಸಂಭಾವನೆ ಕಡಿಮೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಹಾಗಂತ ಇದು ಎಲ್ಲಾ ನಟಿಯರಿಗೂ ಅನ್ವಯ ಆಗುವುದಿಲ್ಲ. ಕೆಲ ಹೀರೋಯಿನ್​ಗಳು ಹೀರೋಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಬಾಲಿವುಡ್​ನಲ್ಲಿ (Bollywood News) ಅನೇಕ ಶ್ರೀಮಂತ ನಟಿಯರಿದ್ದಾರೆ. ಅವರ ಬಳಿ ನೂರಾರು ಕೋಟಿ ರೂಪಾಯಿ ಆಸ್ತಿ ಇದೆ. ಅನೇಕ ಉದ್ಯಮಗಳನ್ನು ಅವರು ಹೊಂದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಐಶ್ವರ್ಯಾ ರೈ ಬಚ್ಚನ್

ಐಶ್ವರ್ಯಾ ರೈ ಬಚ್ಚನ್ ಅವರು ಬಾಲಿವುಡ್​ನ ಶ್ರೀಮಂತ ನಟಿಯರ ಪೈಕಿ ಟಾಪ್​ನಲ್ಲಿದ್ದಾರೆ. ಅವರು ಪ್ರತಿ ಚಿತ್ರಕ್ಕೆ 10 ಕೋಟಿ ರೂಪಾಯಿ ಪಡೆಯುತ್ತಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಜಾಹೀರಾತು ಲೋಕದಲ್ಲೂ ಅವರಿಗೆ ಬೇಡಿಕೆ ಇದೆ. ಬ್ರ್ಯಾಂಡ್ ಪ್ರಚಾರಕ್ಕೆ ಅವರು 7-8 ಕೋಟಿ ರೂಪಾಯಿ ಪಡೆಯುತ್ತಾರೆ. ಅವರ ಆಸ್ತಿ 800 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾಗೂ ಬಾಲಿವುಡ್​ಗೂ ಈಗ ಯಾವುದೇ ಸಂಬಂಧ ಉಳಿದುಕೊಂಡಿಲ್ಲ. ಅವರು ಹಿಂದಿ ಚಿತ್ರರಂಗವನ್ನು ಸಂಪೂರ್ಣವಾಗಿ ತೊರೆದಿದ್ದಾರೆ. ಈಗ ಅವರಿಗೆ ಹಾಲಿವುಡ್ ನಟಿ ಎನ್ನುವ ಪಟ್ಟ ಸಿಕ್ಕಿದೆ. ಆದರೆ, ಅವರು ಬಣ್ಣದ ಬದುಕು ಕಟ್ಟಿಕೊಂಡಿದ್ದು ಹಿಂದಿ ಚಿತ್ರರಂಗದ ಮೂಲಕವೇ. ಪ್ರಿಯಾಂಕಾ ಚೋಪ್ರಾ ಅವರು 600 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ನ್ಯೂಯಾರ್ಕ್​ನಲ್ಲಿ ಅವರು ಹೋಟೆಲ್ ಉದ್ಯಮ ಆರಂಭಿಸಿದ್ದರು. ಈಗ ಅದರಿಂದ ಹೊರ ಬಂದಿದ್ದಾರೆ.

ಆಲಿಯಾ ಭಟ್

ನೆಪೋಟಿಸಂ ಆರೋಪದ ನಡುವೆಯೂ ಆಲಿಯಾ ಭಟ್ ಅವರು ಚಿತ್ರರಂಗದಲ್ಲಿ ಮಿಂಚಿದ್ದಾರೆ. ಇವರು ಪ್ರತಿ ಚಿತ್ರಕ್ಕೆ 9-10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅವರ ಆಸ್ತಿ 550 ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರು ತಮ್ಮದೇ ಬಟ್ಟೆ ಬ್ರ್ಯಾಂಡ್ ಕೂಡ ಹೊಂದಿದ್ದಾರೆ. ವರ್ಷಕ್ಕೆ ಇದರ ಟರ್ನ್​ಓವರ್ 150 ಕೋಟಿ ರೂಪಾಯಿಗೂ ಅಧಿಕವಾಗಿದೆ.

ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ ಅವರು ಪ್ರತಿ ಚಿತ್ರಕ್ಕೆ ಬರೋಬ್ಬರಿ 25-30 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಇದು ಅಚ್ಚರಿ ಎನಿಸಿದರೂ ನಿಜ. ಈ ನಟಿಗೆ ಜಾಹೀರಾತುಗಳಿಂದ ಕೋಟ್ಯಂತರ ರೂಪಾಯಿ ಹರಿದು ಬರುತ್ತಿದೆ. ಹಲವು ಸಿನಿಮಾ ಒಪ್ಪಿ ನಟಿಸುತ್ತಿರುವ ಇವರ ಆಸ್ತಿ 500 ಕೋಟಿ ರೂಪಾಯಿಗೂ ಅಧಿಕ ಇದೆ.

ಕರೀನಾ ಕಪೂರ್

ಕರೀನಾ ಕಪೂರ್ ಅವರು ಇತ್ತೀಚೆಗೆ ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಾರೆ. ಅವರು ಪ್ರತಿ ಚಿತ್ರಕ್ಕೆ 6 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಇವರ ಆಸ್ತಿ 485 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಕತ್ರಿನಾ ಕೈಫ್

ನಟಿ ಕತ್ರಿನಾ ಕೈಫ್ ಅವರು ಪ್ರತಿ ಚಿತ್ರಕ್ಕೆ ಪಡೆಯೋದು 7-8 ಕೋಟಿ ರೂಪಾಯಿ. ಕತ್ರಿನಾ ಅವರು ಬ್ರ್ಯಾಂಡ್ ಪ್ರಚಾರಕ್ಕೆ ಪಡೆಯೋದು 7 ಕೋಟಿ ರೂಪಾಯಿ. ಇವರು ತಮ್ಮದೇ ಆದ ಬ್ಯೂಟಿ ಬ್ರ್ಯಾಂಡ್ ಹೊಂದಿದ್ದಾರೆ. ಇವರ ಆಸ್ತಿ 264 ಕೋಟಿ ರೂಪಾಯಿಗೂ ಮೀರಿದೆ. ಹಲವು ಉದ್ಯಮಗಳಿಗೆ ಇವರು ಹೂಡಿಕೆ ಮಾಡಿದ್ದಾರೆ.

ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ ಅವರು ಇತ್ತೀಚೆಗೆ ಚಿತ್ರರಂಗದಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಅವರು ತಮ್ಮದೇ ಆದ ಕೆಲವು ಬ್ರ್ಯಾಂಡ್​ಗಳನ್ನು ಹೊಂದಿದ್ದಾರೆ. ಅವರ ಆಸ್ತಿ 255 ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಮಾಧುರಿ ದೀಕ್ಷಿತ್

ಮಾಧುರಿ ದೀಕ್ಷಿತ್ ಅವರ ಒಟ್ಟೂ ಆಸ್ತಿ 250 ಕೋಟಿ ರೂಪಾಯಿ ಇದೆ. ಅವರು ಹಿಂದಿ ಚಿತ್ರರಂಗದಲ್ಲಿ ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮೊಟ್ಟೆ ಯಾರಿಗೆ? ಅವಿನಾಶ್ ಉತ್ತರ ಕೇಳಿ ಬಿದ್ದು-ಬಿದ್ದು ನಕ್ಕ ವರ್ತೂರು-ತುಕಾಲಿ

ಕಾಜೋಲ್

ನಟಿ ಕಾಜೋಲ್ ಅವರು ಶ್ರೀಮಂತ ನಟಿಯರ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ಇವರ ಆಸ್ತಿ 235 ಕೋಟಿ ರೂಪಾಯಿಗೂ ಅಧಿಕ ಆಗಿದೆ.

 ರಾಣಿ ಮುಖರ್ಜಿ

ರಾಣಿ ಮುಖರ್ಜಿ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಇವರ ಆಸ್ತಿ 206 ಕೋಟಿ ರೂಪಾಯಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:50 am, Thu, 14 December 23