Deepika Padukone in TTD: ತಿರುಮಲಕ್ಕೆ ಬಂದು ವೆಂಕಟೇಶ್ವರನ ದರ್ಶನ ಪಡೆದ ನಟಿ ದೀಪಿಕಾ ಪಡುಕೋಣೆ

ದೇವಾಲಯ ತಲುಪಲು ದೀಪಿಕಾ ಪಡುಕೋಣೆ ಅವರು ಎರಡೂವರೆ ಗಂಟೆಗಳ ಕಾಲ ಜನರ ಜೊತೆ ನಡೆದುಬಂದಿದ್ದಾರೆ. ಅವರ ಜೊತೆ ಸಹೋದರಿ ಅನಿಶಾ ಪಡುಕೋಣೆ ಕೂಡ ಇದ್ದರು. ವಿಐಪಿ ಪಾಸ್​ ಮೂಲಕ ಅವರು ದೇವರ ದರ್ಶನ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಅವರು ಈಗ ‘ಫೈಟರ್​’ ಸಿನಿಮಾದ ಬಿಡುಗಡೆಗೆ ಕಾದಿದ್ದಾರೆ.

Deepika Padukone in TTD: ತಿರುಮಲಕ್ಕೆ ಬಂದು ವೆಂಕಟೇಶ್ವರನ ದರ್ಶನ ಪಡೆದ ನಟಿ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ
Follow us
ಮದನ್​ ಕುಮಾರ್​
|

Updated on: Dec 15, 2023 | 12:09 PM

ಬಾಲಿವುಡ್​ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ತಿರುಮಲ ದೇವಸ್ಥಾನಕ್ಕೆ (Venkateswara Swami temple) ಭೇಟಿ ನೀಡಿದ್ದಾರೆ. ಡಿಸೆಂಬರ್​ 14ರಂದು ಅವರು ತಿರುಪತಿಗೆ ಆಗಮಿಸಿದ್ದರು. ಶುಕ್ರವಾರ (ಡಿಸೆಂಬರ್​ 15) ಮುಂಜಾನೆ ಸಹೋದರಿ ಅನಿಶಾ ಪಡುಕೋಣೆ ಜೊತೆ ಸೇರಿ ಅವರು ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದ ಅವರ ವಿಡಿಯೋ ವೈರಲ್​ ಆಗಿದೆ. 2023ರ ವರ್ಷ ದೀಪಿಕಾ ಪಡುಕೋಣೆ ಅವರ ಪಾಲಿಗೆ ಆಶಾದಾಯಕ ಆಗಿತ್ತು. ವರ್ಷಾಂತ್ಯದಲ್ಲಿ ಅವರು ದೇವರ ದರ್ಶನಕ್ಕೆ ಬಂದಿದ್ದಾರೆ.

ದೇವಾಲಯ ತಲುಪಲು ದೀಪಿಕಾ ಪಡುಕೋಣೆ ಅವರು ಎರಡೂವರೆ ಗಂಟೆಗಳ ಕಾಲ ಜನರ ಜೊತೆ ನಡೆದುಬಂದಿದ್ದಾರೆ. ಅವರ ಜೊತೆ ಸಹೋದರಿ ಅನಿಶಾ ಪಡುಕೋಣೆ ಕೂಡ ಇದ್ದರು. ವಿಐಪಿ ಪಾಸ್​ ಮೂಲಕ ಅವರು ದೇವರ ದರ್ಶನ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಅವರು ಈಗ ‘ಫೈಟರ್​’ ಸಿನಿಮಾದ ಬಿಡುಗಡೆಗೆ ಕಾದಿದ್ದಾರೆ. ಅದಕ್ಕೂ ಮುನ್ನ ಅವರು ದೇವರ ಮೊರೆ ಹೋಗಿದ್ದಾರೆ.

ದಿನದಿಂದ ದಿನಕ್ಕೆ ದೀಪಿಕಾ ಪಡುಕೋಣೆ ಅವರ ಖ್ಯಾತಿ ಹೆಚ್ಚುತ್ತಿದೆ. ಹಲವು ವರ್ಷಗಳಿಂದ ಅವರು ಬಾಲಿವುಡ್​ನಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ‘ಪಠಾಣ್​’ ಮತ್ತು ‘ಜವಾನ್​’ ಸಿನಿಮಾದಿಂದ ಅವರು ಈ ವರ್ಷ ಭರ್ಜರಿ ಗೆಲುವು ಕಂಡಿದ್ದಾರೆ. ಹೃತಿಕ್​ ರೋಷನ್​ ಜೊತೆ ‘ಫೈಟರ್​’ ಸಿನಿಮಾದಲ್ಲಿ ನಟಿಸಿದ್ದು, 2024ರ ಜನವರಿ 25ರಂದು ಆ ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ.

ಇದನ್ನೂ ಓದಿ: ‘ಫೈಟರ್’ ಮಾತ್ರವಲ್ಲ ಈ ಸಿನಿಮಾಗಳಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ದೀಪಿಕಾ ಪಡುಕೋಣೆ..

‘ಫೈಟರ್​’ ಸಿನಿಮಾಗೆ ಸಿದ್ದಾರ್ಥ್​ ಆನಂದ್​ ಅವರು ನಿರ್ದೇಶನ ಮಾಡಿದ್ದಾರೆ. ಯುದ್ಧ ವಿಮಾನಗಳ ಸಾಹಸ ದೃಶ್ಯಗಳು ಈ ಸಿನಿಮಾದಲ್ಲಿ ಹೈಲೈಟ್​ ಆಗಲಿವೆ. ಇತ್ತೀಚೆಗೆ ಇದರ ಟೀಸರ್​ ಬಿಡುಗಡೆ ಆಯಿತು. ಇದರಲ್ಲಿ ಆ್ಯಕ್ಷನ್​ ಅಬ್ಬರ ಕಾಣಿಸಿದೆ. ಜೊತೆಗೆ, ಹೃತಿಕ್​ ರೋಷನ್​ ಮತ್ತು ದೀಪಿಕಾ ಪಡುಕೋಣೆ ನಡುವಿನ ಕೆಲವು ಬೋಲ್ಡ್​ ದೃಶ್ಯಗಳು ಕೂಡ ಸಿನಿಪ್ರಿಯರ ಕಣ್ಣು ಕುಕ್ಕಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ