AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿ ಚಿಕ್ಕ ಬಟ್ಟೆ ಧರಿಸಿ ಬಂದ ಮೌನಿ ರಾಯ್​; ವೈರಲ್​ ವಿಡಿಯೋ ನೋಡಿ ಟ್ರೋಲ್​ ಮಾಡಿದ ನೆಟ್ಟಿಗರು

ಮೌನಿ ರಾಯ್​ ಅವರು ಗುರುವಾರ (ಡಿಸೆಂಬರ್​ 14) ರಾತ್ರಿ ಒಂದು ಪಾರ್ಟಿಗೆ ಬಂದಿದ್ದರು. ಆಗ ಅವರು ಧರಿಸಿದ್ದ ಬಟ್ಟೆ ಸಖತ್​ ಚಿಕ್ಕದಾಗಿದೆ. ಅದನ್ನು ನೋಡಿ ಅನೇಕರು ಟೀಕೆ ಮಾಡಿದ್ದಾರೆ. ಮೌನಿ ಧರಿಸಿದ್ದ ಬಟ್ಟೆ ನನ್ನ ರುಮಾಲಿಗಿಂತಲೂ ಚಿಕ್ಕದಾಗಿದೆ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

ಅತಿ ಚಿಕ್ಕ ಬಟ್ಟೆ ಧರಿಸಿ ಬಂದ ಮೌನಿ ರಾಯ್​; ವೈರಲ್​ ವಿಡಿಯೋ ನೋಡಿ ಟ್ರೋಲ್​ ಮಾಡಿದ ನೆಟ್ಟಿಗರು
ಮೌನಿ ರಾಯ್​
ಮದನ್​ ಕುಮಾರ್​
|

Updated on: Dec 15, 2023 | 10:40 AM

Share

ನಟಿ ಮೌನಿ ರಾಯ್​ (Mouni Roy) ಅವರು ಆಗಾಗ ಗ್ಲಾಮರಸ್​ ಆಗಿ ಕಾಣಿಸಿಕೊಳ್ಳುತ್ತಾರೆ. ಬೋಲ್ಡ್​ ಅವತಾರ ತಾಳಲು ಅವರು ಎಂದಿಗೂ ಹಿಂದೇಟು ಹಾಕಿಲ್ಲ. ಅದೇ ವಿಚಾರಕ್ಕೆ ಅವರು ಟ್ರೋಲ್​ ಆಗಿದ್ದೂ ಉಂಟು. ಈಗ ಮತ್ತೆ ಅವರನ್ನು ಟ್ರೋಲ್​ (Troll) ಮಾಡಲಾಗುತ್ತಿದೆ. ಗುರುವಾರ (ಡಿಸೆಂಬರ್​ 14) ರಾತ್ರಿ ಅವರು ಒಂದು ಪಾರ್ಟಿಗೆ ಬಂದಿದ್ದರು. ಆಗ ಅವರು ಧರಿಸಿದ್ದ ಬಟ್ಟೆ ಸಖತ್​ ಚಿಕ್ಕದಾಗಿದೆ. ಅದನ್ನು ನೋಡಿ ಅನೇಕರು ಟೀಕೆ ಮಾಡಿದ್ದಾರೆ. ಮೌನಿ ಧರಿಸಿದ್ದ ಬಟ್ಟೆ ನನ್ನ ರುಮಾಲಿಗಿಂತಲೂ ಚಿಕ್ಕದಾಗಿದೆ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

ಕಿರುತೆರೆಯಿಂದ ಬಂದವರು ಮೌನಿ ರಾಯ್​. ಹಿಂದಿ ಸೀರಿಯಲ್​ಗಳಲ್ಲಿ ನಟಿಸಿ ಫೇಮಸ್​ ಆದ ಅವರಿಗೆ ನಂತರ ಸಿನಿಮಾಗಳಲ್ಲಿ ಅವಕಾಶ ದೊರೆಯಿತು. ಬಾಲಿವುಡ್​ನ ಸ್ಟಾರ್​ ನಟರ ಜೊತೆ ಅಭಿನಯಿಸಿ ಅವರು ಖ್ಯಾತಿ ಗಳಿಸಿದರು. ಯಶ್​, ಅಕ್ಷಯ್​ ಕುಮಾರ್​ ಮುಂತಾದ ಹೀರೋಗಳ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ಹಿಂದಿ ವರ್ಷನ್​ನ ‘ಗಲಿ ಗಲಿ ಮೇ..’ ಹಾಡಿನಲ್ಲಿ ಯಶ್​ ಜೊತೆ ಅವರು ಡ್ಯಾನ್ಸ್​ ಮಾಡಿದ್ದರು.

ಸೋಶಿಯಲ್​ ಮೀಡಿಯಾದಲ್ಲಿ ಮೌನಿ ರಾಯ್​ ಅವರು ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ಅವರಿಗೆ ದೊಡ್ಡ ಫ್ಯಾನ್​ ಫಾಲೋಯಿಂಗ್​ ಇದೆ. ಇನ್​​ಸ್ಟಾಗ್ರಾಮ್​ನಲ್ಲಿ ಅವರನ್ನು ಬರೋಬ್ಬರಿ 2.8 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ. ಅಭಿಮಾನಿಗಳಿಗಾಗಿ ಆಗಾಗ ಅವರು ಬೋಲ್ಡ್​ ಆಗಿ ಫೋಟೋಶೂಟ್​ ಮಾಡಿಸಿ, ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ: ಪಡ್ಡೆ ಹುಡುಗರಿಗೆ ಮತ್ತೇರಿಸುವಂತೆ ಫೋಟೋಶೂಟ್​ ಮಾಡಿಸುವ ಬೆಡಗಿ ಮೌನಿ ರಾಯ್​

ಮೌನಿ ರಾಯ್​ ಅವರಿಗೆ ಈಗ 38 ವರ್ಷ ವಯಸ್ಸು. ದುಬೈನಲ್ಲಿ ಸೆಟ್ಲ್​ ಆಗಿರುವ ಉದ್ಯಮಿ ಸೂರಜ್​ ನಂಬಿಯಾರ್​ ಜೊತೆ ಅವರು ಮದುವೆ ಆಗಿದ್ದಾರೆ. ಹಾಗಾಗಿ ಅವರು ಆಗಾಗ ದುಬೈಗೆ ತೆರಳುತ್ತಾರೆ. 2022ರ ಜನವರಿ 27ರಂದು ಇವರಿಬ್ಬರ ಮದುವೆ ಬೆಂಗಾಲಿ ಮತ್ತು ಮಲಯಾಳಿ ಸಂಪ್ರದಾಯದಂತೆ ನೆರವೇರಿತ್ತು. ಮೌನಿ ರಾಯ್​ ಅವರಿಗೆ ಅನೇಕ ಪ್ರಶಸ್ತಿಗಳು ಸಿಕ್ಕಿವೆ. ಮ್ಯೂಸಿಕ್​ ವಿಡಿಯೋಗಳಲ್ಲೂ ಅವರು ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More