2024ರಲ್ಲಿ 102 ದಿನ ರಜೆ ಪಡೆಯಲಿರುವ ಅಕ್ಷಯ್​ ಕುಮಾರ್​; ಇಲ್ಲಿದೆ ನೋಡಿ ಪ್ಲ್ಯಾನ್​

ಅಕ್ಷಯ್​ ಕುಮಾರ್​ ಅವರ ದಿನಚರಿ ತುಂಬ ಕಟ್ಟುನಿಟ್ಟಾಗಿ ಇರುತ್ತದೆ. ಬೆಳಗ್ಗೆ 9 ರಿಂದ ಸಂಜೆ 6 ಗಂಟೆ ತನಕ ಅವರು ಶೂಟಿಂಗ್​ನಲ್ಲಿ ಭಾಗಿ ಆಗುತ್ತಾರೆ. ಈ ವರ್ಷ ಬರೋಬ್ಬರಿ 5 ಸಿನಿಮಾಗಳ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. 20ಕ್ಕೂ ಅಧಿಕ ಬ್ರ್ಯಾಂಡ್​ಗಳ ಜಾಹೀರಾತು ಚಿತ್ರೀಕರಣದಲ್ಲೂ ಅವರು ಭಾಗಿಯಾಗಬೇಕಿದೆ.

2024ರಲ್ಲಿ 102 ದಿನ ರಜೆ ಪಡೆಯಲಿರುವ ಅಕ್ಷಯ್​ ಕುಮಾರ್​; ಇಲ್ಲಿದೆ ನೋಡಿ ಪ್ಲ್ಯಾನ್​
ಅಕ್ಷಯ್​ ಕುಮಾರ್​
Follow us
ಮದನ್​ ಕುಮಾರ್​
|

Updated on: Jan 05, 2024 | 11:13 AM

ಬಾಲಿವುಡ್​ನ ಖ್ಯಾತ ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡುತ್ತಾರೆ. ಸಿನಿಮಾ ಕೆಲಸಗಳನ್ನು ಅತಿ ವೇಗವಾಗಿ ಮುಗಿಸುವಲ್ಲಿ ಅವರಿಗೆ ಬೇರೆ ಯಾರೂ ಸಾಟಿ ಇಲ್ಲ. ವರ್ಷಕ್ಕೆ ಅವರ 3-4 ಸಿನಿಮಾಗಳು ಬಿಡುಗಡೆ ಆಗುತ್ತವೆ. ಕೆಲಸದ ಅವಧಿ ಬಗ್ಗೆ ಅವರು ಹೆಚ್ಚು ಕಟ್ಟುನಿಟ್ಟಾಗಿದ್ದಾರೆ. ಉಳಿದ ಸಮಯವನ್ನು ಅವರು ಫ್ಯಾಮಿಲಿಗಾಗಿ ಮೀಸಲಿಡುತ್ತಾರೆ. ಅಚ್ಚರಿ ಏನೆಂದರೆ 2024ರಲ್ಲಿ ಅಕ್ಷಯ್​ ಕುಮಾರ್​ ಅವರು ಬರೋಬ್ಬರಿ 102 ದಿನಗಳ ಕಾಲ ರಜೆ (Holiday) ಪಡೆಯಲಿದ್ದಾರೆ. ಅವರ ಪ್ಲ್ಯಾನ್​ ಏನು ಎಂಬ ಬಗ್ಗೆ ಇಲ್ಲಿದೆ ವಿವರ..

102 ದಿನಗಳು ಎಂದರೆ ಅಕ್ಷಯ್​ ಕುಮಾರ್​ ಅವರು ಸತತವಾಗಿ ಮೂರು ತಿಂಗಳು ಕೆಲಸಕ್ಕೆ ಚಕ್ಕರ್​ ಹಾಕುವುದಿಲ್ಲ. ಶೂಟಿಂಗ್​ ನಡುವೆಯೇ ತಮಗೆ ಅಗತ್ಯ ಇರುವ ದಿನಗಳಲ್ಲಿ ಅವರು ರಜೆ ಪಡೆಯುತ್ತಾರೆ. 52 ಭಾನುವಾರ, 30 ದಿನ ಬೇಸಿಗೆ ರಜೆ, ಆಪ್ತರ ಜನ್ಮದಿನ ಸೆಲೆಬ್ರೇಟ್​ ಮಾಡಲು 10 ದಿನ, ದೀಪಾವಳಿ ಹಬ್ಬದ ಸಂಭ್ರಮಕ್ಕೆ 10 ದಿನಗಳ ಕಾಲ ರಜೆ ಪಡೆಯುತ್ತಾರೆ. ಹೀಗೆ ಒಟ್ಟು 102 ದಿನಗಳ ಕಾಲ ಸಿನಿಮಾ ಕೆಲಸಗಳಿಂದ ದೂರ ಉಳಿಯಲಿದ್ದಾರೆ.

ಅಕ್ಷಯ್​ ಕುಮಾರ್​ ಅವರ ದಿನಚರಿ ತುಂಬ ಕಟ್ಟುನಿಟ್ಟಾಗಿ ಇರುತ್ತದೆ. ಬೆಳಗ್ಗೆ 9 ರಿಂದ ಸಂಜೆ 6 ಗಂಟೆ ತನಕ ಅವರು ಶೂಟಿಂಗ್​ನಲ್ಲಿ ಭಾಗಿ ಆಗುತ್ತಾರೆ. ಈ ವರ್ಷ ಬರೋಬ್ಬರಿ 5 ಸಿನಿಮಾಗಳ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. 20ಕ್ಕೂ ಅಧಿಕ ಬ್ರ್ಯಾಂಡ್​ಗಳ ಜಾಹೀರಾತು ಚಿತ್ರೀಕರಣದಲ್ಲೂ ಅವರು ಭಾಗಿಯಾಗಬೇಕಿದೆ. ಇಷ್ಟೆಲ್ಲ ಬ್ಯುಸಿ ಇದ್ದರೂ ಕೂಡ ಕುಟುಂಬಕ್ಕಾಗಿ ಸಮಯ ಮೀಸಲಿಡುವುದನ್ನು ಅವರು ತಪ್ಪಿಸುವುದಿಲ್ಲ.

ಇದನ್ನೂ ಓದಿ: ಬೇರೆ ಹೀರೋಗಳ ಸಿನಿಮಾ ಸಾವಿರ ಕೋಟಿ ರೂ. ಗಳಿಸಿದ್ದಕ್ಕೆ ಅಕ್ಷಯ್​ ಕುಮಾರ್​ ಹೇಳೋದೇನು?

ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್​ ಕುಮಾರ್​ ಅವರಿಗೆ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ಅವಸರದಲ್ಲಿ ಸಿನಿಮಾ ಮಾಡುವುದೇ ಇದಕ್ಕೆ ಕಾರಣ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಸಿನಿಮಾಗಳ ಸಂಖ್ಯೆ ಜಾಸ್ತಿ ಮಾಡುವುದಕ್ಕಿಂತ ಗುಣಮಟ್ಟದ ಸಿನಿಮಾ ಮಾಡುವಲ್ಲಿ ಅಕ್ಷಯ್​ ಕುಮಾರ್​ ಗಮನ ಹರಿಸಬೇಕು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ