ಸೋತ ಸಿನಿಮಾವನ್ನು ಗೆಲ್ಲಿಸಲು ಅಕ್ಷಯ್ ಕುಮಾರ್ ಪ್ಲ್ಯಾನ್; ಒಂದು ಟಿಕೆಟ್ಗೆ ಇನ್ನೊಂದು ಫ್ರೀ
ಸತ್ಯ ಘಟನೆಯನ್ನು ಆಧರಿಸಿ ‘ಮಿಷನ್ ರಾಣಿಗಂಜ್’ ಸಿನಿಮಾ ಸಿದ್ಧವಾಗಿದೆ. ಈ ಮೊದಲು ಇಂಥ ಕಥೆಗಳನ್ನು ಹೊಂದಿರುವ ಸಿನಿಮಾ ಮಾಡಿ ಅಕ್ಷಯ್ ಕುಮಾರ್ ಗೆಲುವು ಕಂಡಿದ್ದರು. ಆದರೆ ಈಗ ಅವರ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ‘ಮಿಷನ್ ರಾಣಿಗಂಜ್’ ಸಿನಿಮಾ ಈವರೆಗೂ ಗಳಿಸಿದ್ದು ಕೇವಲ 18 ಕೋಟಿ ರೂಪಾಯಿ ಮಾತ್ರ.
ನಟ ಅಕ್ಷಯ್ ಕುಮಾರ್ (Akshay Kumar) ಅವರು ಮೊದಲಿನ ಚಾರ್ಮ್ಗೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಒಂದು ಕಾಲದಲ್ಲಿ ಅವರು ನಟಿಸಿದ ಸಿನಿಮಾಗಳು ಉತ್ತಮವಾಗಿ ಬಿಸ್ನೆಸ್ ಮಾಡುತ್ತಿದ್ದವು. ಆದರೆ ಅವಸರದಲ್ಲಿ ಸಿನಿಮಾ ಮಾಡುವ ಅವರ ಪಾಲಿಸಿಯಿಂದಾಗಿ ಗುಣಮಟ್ಟದ ಚಿತ್ರ ನೀಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಆ ಕಾರಣದಿಂದಲೇ ಅಕ್ಷಯ್ ಕುಮಾರ್ ಆಗಾಗ ಟ್ರೋಲ್ ಆಗುತ್ತಾರೆ. ಇತ್ತೀಚೆಗೆ ಅವರು ನಟಿಸಿದ ‘ಮಿಷನ್ ರಾಣಿಗಂಜ್’ (Mission Raniganj) ಸಿನಿಮಾ ಬಿಡುಗಡೆಯಾಗಿ ನೀರಸ ಗಳಿಕೆ ಮಾಡಿದೆ. ಹಾಗಾಗಿ ಚಿತ್ರವನ್ನು ಹೇಗಾದರೂ ಗೆಲ್ಲಿಸಬೇಕು ಎಂದು ಬೇರೆ ಬೇರೆ ತಂತ್ರಗಳನ್ನು ರೂಪಿಸಲಾಗಿದೆ. ಈಗ ಒಂದು ಟಿಕೆಟ್ ಖರೀದಿಸಿದರೆ ಇನ್ನೊಂದು ಟಿಕೆಟ್ ಉಚಿತ (Buy One Get One Free) ಎಂದು ಘೋಷಿಸಲಾಗಿದೆ. ಈ ಮೂಲಕವಾದರೂ ಸಿನಿಮಾಗೆ ಪ್ರೇಕ್ಷಕರು ಬರಲಿ ಎಂಬುದು ಚಿತ್ರತಂಡದ ಆಶಯ.
ಅಕ್ಟೋಬರ್ 13ರಂದು ‘ರಾಷ್ಟ್ರೀಯ ಸಿನಿಮಾ ದಿನ’ ಆಚರಿಸಲಾಯಿತು. ಅಂದು ಎಲ್ಲ ಸಿನಿಮಾಗಳ ಟಿಕೆಟ್ ಬೆಲೆಯನ್ನು ತಗ್ಗಿಸಲಾಗಿತ್ತು. ಅದರ ಪರಿಣಾಮವಾಗಿ ‘ಮಿಷನ್ ರಾಣಿಗಂಜ್’ ಚಿತ್ರಕ್ಕೆ ಅಂದಾಜು 5 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಇದರಿಂದ ಖುಷಿಯಾಗಿರುವ ಚಿತ್ರತಂಡ ಈಗ ‘ಬೈ ಒನ್ ಗೆಟ್ ಒನ್ ಫ್ರೀ’ ಆಫರ್ ನೀಡಿದೆ. ಅಕ್ಟೋಬರ್ 14 ಮತ್ತು 15ರಂದು ಮಾತ್ರ ಈ ಅವಕಾಶ ಲಭ್ಯವಿದೆ. ‘ಬುಕ್ ಮೈ ಶೋ’ ಮೂಲಕ ಟಿಕೆಟ್ ಖರೀದಿಸಿದರೆ ಈ ಆಫರ್ ಸಿಗಲಿದೆ. ಇದರಿಂದ ಚಿತ್ರದ ಕಲೆಕ್ಷನ್ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಬೇರೆ ಹೀರೋಗಳ ಸಿನಿಮಾ ಸಾವಿರ ಕೋಟಿ ರೂ. ಗಳಿಸಿದ್ದಕ್ಕೆ ಅಕ್ಷಯ್ ಕುಮಾರ್ ಹೇಳೋದೇನು?
ರಿಯಲ್ ಘಟನೆಗಳನ್ನು ಆಧರಿಸಿ ‘ಮಿಷನ್ ರಾಣಿಗಂಜ್’ ಸಿನಿಮಾ ಸಿದ್ಧವಾಗಿದೆ. ಈ ಮೊದಲು ಇಂಥ ಕಥೆಗಳನ್ನು ಹೊಂದಿರುವ ಸಿನಿಮಾ ಮಾಡಿ ಅಕ್ಷಯ್ ಕುಮಾರ್ ಗೆಲುವು ಕಂಡಿದ್ದರು. ಆದರೆ ಈಗ ಅಂಥ ಪ್ರಯತ್ನಗಳಿಗೆ ಫಲ ಸಿಕ್ಕುತ್ತಿಲ್ಲ. ‘ಮಿಷನ್ ರಾಣಿಗಂಜ್’ ಸಿನಿಮಾ ಅಕ್ಟೋಬರ್ 6ರಂದು ಬಿಡುಗಡೆ ಆಯಿತು. 9 ದಿನ ಕಳೆದರೂ ಈ ಸಿನಿಮಾ ಗಳಿಸಿದ್ದು ಕೇವಲ 18 ಕೋಟಿ ರೂಪಾಯಿ. ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ ನಟರ ಸಿನಿಮಾಗೆ ಇದು ತೀರಾ ಕಳಪೆ ಕಲೆಕ್ಷನ್. ‘ಬೈ ಒನ್ ಗೆಟ್ ಒನ್ ಫ್ರೀ’ ಆಫರ್ನಿಂದ ಚಿತ್ರಕ್ಕೆ ಎಷ್ಟು ಅನುಕೂಲ ಆಗಲಿದೆ ಎಂಬುದು ಸದ್ಯದಲ್ಲೇ ತಿಳಿಯಲಿದೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ಗೆ ಯಾವುದೇ ಧರ್ಮದ ಮೇಲೆ ನಂಬಿಕೆ ಇಲ್ಲ; ಹಾಗಾದ್ರೆ ಅವರ ನಿಲುವು ಏನು?
ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ಬೆಲೆ ದುಬಾರಿ ಆಗಿರುತ್ತದೆ ಎಂಬ ಕಾರಣಕ್ಕೆ ಅನೇಕರು ಸಿನಿಮಾ ನೋಡಲು ಹಿಂದೇಟು ಹಾಕುತ್ತಾರೆ. ಆಫರ್ ಬೆಲೆಯಲ್ಲಿ ಟಿಕೆಟ್ ನೀಡಿದರೆ ಅಂಥವರು ಖಂಡಿತವಾಗಿಯೂ ಮಲ್ಟಿಪ್ಲೆಕ್ಸ್ಗೆ ಬರುತ್ತಾರೆ. ಈ ವರ್ಷ ಅನೇಕ ಸಿನಿಮಾಗಳು ಈ ತಂತ್ರವನ್ನು ಪ್ರಯೋಗಿಸಿವೆ. ‘ಡ್ರೀಮ್ ಗರ್ಲ್ 2’, ‘ದಿ ವ್ಯಾಕ್ಸಿನ್ ವಾರ್’, ‘ಸ್ಪೈಡರ್ ಮ್ಯಾನ್’, ‘ಜವಾನ್’ ಚಿತ್ರಗಳು ಕೂಡ ಈ ಆಫರ್ ನೀಡಿದ್ದವು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಟಿವಿ9 ಕನ್ನಡ ಡಿಜಿಟಲ್ ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va59SztJ93wRPiKKuF1U