ಅಕ್ಷಯ್ ಕುಮಾರ್ಗೆ ಯಾವುದೇ ಧರ್ಮದ ಮೇಲೆ ನಂಬಿಕೆ ಇಲ್ಲ; ಹಾಗಾದ್ರೆ ಅವರ ನಿಲುವು ಏನು?
‘ಸೂರ್ಯವಂಶಿ’ ಸಿನಿಮಾದ ಪ್ರಚಾರದ ವೇಳೆ ಅಕ್ಷಯ್ ಕುಮಾರ್ ಅವರಿಗೆ ಧರ್ಮದ ಬಗ್ಗೆ ಪ್ರಶ್ನೆ ಎದುರಾಗಿತ್ತು. ‘ಈ ಸಿನಿಮಾ ಯಾವುದೇ ನಿರ್ದಿಷ್ಟ ಧರ್ಮದ ಬಗ್ಗೆ ತಾರತಮ್ಯ ಮಾಡುವ ರೀತಿಯಲ್ಲಿ ಇದೆಯಾ’ ಎಂದು ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ್ದ ಅಕ್ಷಯ್ ಕುಮಾರ್ ಅವರು ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿದ್ದರು.
ನಟ ಅಕ್ಷಯ್ ಕುಮಾರ್ (Akshay Kumar) ಅವರು ಬಾಲಿವುಡ್ನಲ್ಲಿ ಬಹುಬೇಡಿಕೆಯ ಹೀರೋ. ಇತ್ತೀಚಿನ ವರ್ಷಗಳಲ್ಲಿ ಅವರಿಗೆ ನಿರೀಕ್ಷಿತ ಪ್ರಮಾಣದ ಯಶಸ್ಸ ಸಿಕ್ಕಿರಲಿಲ್ಲ. ಈ ವರ್ಷ ಬಿಡುಗಡೆ ಆದ ‘ಒಎಂಜಿ 2’ ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡಿದೆ. ಆದರೆ ಆ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರದ್ದು ಮುಖ್ಯಪಾತ್ರವಲ್ಲ. ಮುಂಬರುವ ಸಿನಿಮಾಗಳಲ್ಲಾದರೂ ಅವರು ದೊಡ್ಡ ಯಶಸ್ಸು ಕಾಣಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. ಅಂದಹಾಗೆ, ಇಂದು (ಸೆಪ್ಟೆಂಬರ್ 9) ಅಕ್ಷಯ್ ಕುಮಾರ್ ಅವರಿಗೆ ಜನ್ಮದಿನದ (Akshay Kumar Birthday) ಸಂಭ್ರಮ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಇದರ ಜೊತೆಗೆ ಧರ್ಮದ (Religion) ಬಗ್ಗೆ ಅಕ್ಷಯ್ ಕುಮಾರ್ ಹೇಳಿದ್ದ ಒಂದು ಮಾತನ್ನು ನೆನಪಿಸಿಕೊಳ್ಳಲಾಗಿದೆ. ಈ ಕುರಿತು ಚರ್ಚೆ ಆಗುತ್ತಿದೆ.
2021ರಲ್ಲಿ ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರದ ಪ್ರಚಾರದ ವೇಳೆ ಅವರಿಗೆ ಧರ್ಮದ ಬಗ್ಗೆ ಪ್ರಶ್ನೆ ಎದುರಾಗಿತ್ತು. ‘ಈ ಸಿನಿಮಾ ಯಾವುದೇ ನಿರ್ದಿಷ್ಟ ಧರ್ಮದ ಬಗ್ಗೆ ತಾರತಮ್ಯ ಮಾಡುವ ರೀತಿಯಲ್ಲಿ ಇದೆಯಾ’ ಎಂದು ಕೇಳಲಾಯಿತು. ಅದಕ್ಕೆ ಉತ್ತರಿಸಿದ್ದ ಅಕ್ಷಯ್ ಕುಮಾರ್ ಅವರು ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿದ್ದರು. ಆಗ ಅವರು ನೀಡಿದ್ದ ಹೇಳಿಕೆಯನ್ನು ಅಭಿಮಾನಿಗಳು ಬೇರೆ ಬೇರೆ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾರೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ಗಿಂತ ಪಂಕಜ್ ತ್ರಿಪಾಠಿಗೆ ಹೆಚ್ಚು ಸಂಭಾವನೆ; ‘ಒಎಂಜಿ 2’ ಚಿತ್ರದ ಒಟ್ಟು ಬಜೆಟ್ ಎಷ್ಟು?
‘ನನಗೆ ಯಾವುದೇ ಧರ್ಮದಲ್ಲಿ ನಂಬಿಕೆ ಇಲ್ಲ. ಭಾರತೀಯನಾಗಿ ಇರುವುದರಲ್ಲಿ ಮಾತ್ರ ನನ್ನ ನಂಬಿಕೆ. ಸಿನಿಮಾದಲ್ಲೂ ಅದನ್ನೇ ತೋರಿಸುತ್ತೇವೆ. ಧರ್ಮದ ಆಧಾರದಲ್ಲಿ ನಾವು ಏನನ್ನೂ ನೋಡಿಲ್ಲ. ಭಾರತೀಯ ಎಂಬ ಪರಿಕಲ್ಪನೆ ಈ ಸಿನಿಮಾದಲ್ಲಿ ಇದೆಯೇ ಹೊರತು ಹಿಂದೂ, ಮುಸ್ಲಿಂ, ಪಾರ್ಸಿ ಎಂಬುದಲ್ಲ’ ಎಂದು ಅಕ್ಷಯ್ ಕುಮಾರ್ ಅವರು ಹೇಳಿದ್ದರು. ಸಿನಿಮಾದಲ್ಲಿ ಯಾವುದೇ ಒಂದು ಧರ್ಮದ ವ್ಯಕ್ತಿಯನ್ನು ವಿಲನ್ ರೀತಿ ತೋರಿಸಿರುವುದು ಪ್ರಜ್ಞಾಪೂರ್ವಕ ನಿರ್ಧಾರ ಅಲ್ಲ ಎಂದು ಅವರು ತಿಳಿಸಿದ್ದರು.
ಇದನ್ನೂ ಓದಿ: ಚಂದ್ರನ ಮೇಲೆ ಹೆಜ್ಜೆಯಿಟ್ಟ ಇಸ್ರೋ ಸಾಧನೆಗೆ ಸೆಲೆಬ್ರಿಟಿಗಳ ಅಭಿನಂದನೆ; ಯಶ್, ಅಕ್ಷಯ್ ಕುಮಾರ್ ಹೇಳಿದ್ದೇನು?
‘ನಾವು ನೆಗೆಟಿವ್ ಮತ್ತು ಪಾಸಿಟಿವ್ ಪಾತ್ರಗಳನ್ನು ಹೊಂದಿರುವ ಸಿನಿಮಾವನ್ನು ಮಾಡುತ್ತೇವೆ. ನಾನು ಒಂದು ಪಾತ್ರ ಮಾಡುತ್ತಿರುತ್ತೇನೆ ಅಷ್ಟೇ. ಎಲ್ಲ ಸಿನಿಮಾದಲ್ಲಿ ಒಳ್ಳೆಯ ಮತ್ತು ಕೆಟ್ಟ ಪಾತ್ರಗಳು ಇರುತ್ತವೆ. ಯಾವುದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ತಿಳಿವಳಿಕೆ ಪ್ರೇಕ್ಷಕರಿಗೆ ಇದೆ’ ಎಂದು ಅಕ್ಷಯ್ ಕುಮಾರ್ ಹೇಳಿದ್ದರು. ಹಲವು ಸಿನಿಮಾಗಳಲ್ಲಿ ಅವರು ಈಗ ಬ್ಯುಸಿ ಆಗಿದ್ದಾರೆ. ಈ ಮೊದಲು ಅವರಿಗೆ ಕೆನಡಾದ ಪೌರತ್ವ ಇತ್ತು. ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅವರು ಭಾರತದ ಪೌರತ್ವ ಪಡೆದುಕೊಂಡರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.