ರಿಯಲ್ ಎಸ್ಟೇಟ್ ಬ್ಯುಸಿನೆಸ್ ವಿಸ್ತರಿಸಿದ ಅಮಿತಾಬ್ ಬಚ್ಚನ್, ಸಾರಾ-ಕಾರ್ತಿಕ್​ ಸಹ ಹಿಂದುಳಿದಿಲ್ಲ

Amitabh Bachchan: ನಟ ಅಮಿತಾಬ್ ಬಚ್ಚನ್ ಮುಂಬೈನ ದುಬಾರಿ ಏರಿಯಾನಲ್ಲಿ ಆಫೀಸ್ ಸ್ಪೇಸ್ ಒಂದನ್ನು ಖರೀದಿ ಮಾಡಿದ್ದಾರೆ. ಇದಕ್ಕಾಗಿ ಭಾರಿ ಮೊತ್ತವನ್ನು ಬಚ್ಚನ್ ನೀಡಿದ್ದಾರೆ. ಇದೇ ಪ್ರಾಜೆಕ್ಟ್​ನಲ್ಲಿ ಹಲವು ಬಾಲಿವುಡ್ ನಟ-ನಟಿಯರು ಹೂಡಿಕೆ ಮಾಡಿರುವುದು ವಿಶೇಷ.

ರಿಯಲ್ ಎಸ್ಟೇಟ್ ಬ್ಯುಸಿನೆಸ್ ವಿಸ್ತರಿಸಿದ ಅಮಿತಾಬ್ ಬಚ್ಚನ್, ಸಾರಾ-ಕಾರ್ತಿಕ್​ ಸಹ ಹಿಂದುಳಿದಿಲ್ಲ
ಅಮಿತಾಬ್ ಬಚ್ಚನ್
Follow us
ಮಂಜುನಾಥ ಸಿ.
|

Updated on: Sep 08, 2023 | 7:17 PM

ಹಣವಂತರ ಅಚ್ಚು-ಮೆಚ್ಚಿನ ಹೂಡಿಕೆ ರಿಯಲ್ ಎಸ್ಟೇಟ್ (Real Estate). ಹಲವಾರು ಮಂದಿ ಸಿನಿಮಾ ನಟರು ಸಹ ರಿಯಲ್ ಎಸ್ಟೇಟ್​ನಲ್ಲಿ ಹೂಡಿಕೆ ಮಾಡಿದ್ದಾರೆ. ಅದರಲ್ಲಿಯೂ ಬಾಲಿವುಡ್​ನ ತಾರೆಯರ ಮೆಚ್ಚಿನ ಹೂಡಿಕೆ ಅವಕಾಶ ರಿಯಲ್ ಎಸ್ಟೇಟ್. ದೇಶದ ಇತರೆ ನಗರಗಳಿಗೆ ಹೋಲಿಸಿದರೆ ಮುಂಬೈನಲ್ಲಿ ರಿಯಲ್ ಎಸ್ಟೇಟ್​ಗೆ ಭಾರಿ ಬೇಡಿಕೆ ಇದೆ. ಹಾಗಾಗಿ ಶಾರುಖ್, ಸಲ್ಮಾನ್, ಶಿಲ್ಪಾ ಶೆಟ್ಟಿ, ದೀಪಿಕಾ ಪಡುಕೋಣೆ ಇನ್ನೂ ಹಲವಾರು ಮಂದಿ ರಿಯಲ್ ಎಸ್ಟೇಟ್​ನಲ್ಲಿ ಹೂಡಿಕೆ ಮಾಡಿದ್ದಾರೆ. ಅಮಿತಾಬ್ ಬಚ್ಚನ್ (Amitabh Bachchan) ಸಹ ರಿಯಲ್ ಎಸ್ಟೇಟ್​ನಲ್ಲಿ ಮೊದಲಿನಿಂದಲೂ ಹೂಡಿಕೆ ಮಾಡುತ್ತಲೇ ಬರುತ್ತಿದ್ದು, ಇತ್ತೀಚೆಗೆ ಹೊಸದೊಂದು ಪ್ರಾಪರ್ಟಿ ಖರೀದಿ ಮಾಡಿದ್ದಾರೆ.

ಮುಂಬೈನಲ್ಲಿ ಇತ್ತೀಚೆಗೆ ಆಫೀಸ್​ ಸ್ಪೇಸ್​ಗೆ ದೊಡ್ಡ ಬೇಡಿಕೆ ಉಂಟಾಗಿದೆ. ಜನವಸತಿ ಅಪಾರ್ಟ್​ಮೆಂಟ್​ಗಳಿಗಿಂತಲೂ ಆಫೀಸ್​ ಸ್ಪೇಸ್​ ಹೆಚ್ಚು ಲಾಭ ತಂದುಕೊಡುತ್ತಿದೆ. ಇದೇ ಕಾರಣಕ್ಕೆ ಆಫೀಸ್​ ಸ್ಪೇಸ್​ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಮುಂಬೈನಲ್ಲಿ ಕೆಲವು ಫ್ಲ್ಯಾಟ್​ಗಳನ್ನು ಹೊಂದಿರುವ ಅಮಿತಾಬ್ ಬಚ್ಚನ್, ಇತ್ತೀಚೆಗೆ ಕೆಲವು ಆಫೀಸ್​ ಸ್ಪೇಸ್​ಗಳನ್ನು ಭಾರಿ ದೊಡ್ಡ ಬೆಲೆಗೆ ಖರೀದಿಸಿದ್ದಾರೆ. ಮುಂಬೈನ ಓಷಿವಾರಾ ಪ್ರದೇಶದಲ್ಲಿ ಸುಮಾರು 8500 ಚದರ ಅಡಿಗಳ ಆಫೀಸ್ ಸ್ಪೇಸ್ ಅನ್ನು ಅಮಿತಾಬ್ ಬಚ್ಚನ್ ಖರೀದಿ ಮಾಡಿದ್ದು, ಇದಕ್ಕಾಗಿ ಸುಮಾರು 29 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ. 21 ಫ್ಲೋರ್​ನಲ್ಲಿ ಈ ಆಫೀಸ್ ಸ್ಪೇಸ್ ಇದ್ದು, ಇದರ ನೊಂದಣಿಗಾಗಿ 1.72 ಕೋಟಿ ಸ್ಟ್ಯಾಂಪ್ ಡ್ಯೂಟಿಯನ್ನು ಅಮಿತಾಬ್ ಬಚ್ಚನ್ ಪಾವತಿಸಿದ್ದಾರೆ.

ಇದನ್ನೂ ಓದಿ:17 ವರ್ಷದ ಒಟ್ಟಿಗೆ ನಟಿಸಲಿರುವ ಶಾರುಖ್ ಖಾನ್-ಅಮಿತಾಬ್ ಬಚ್ಚನ್

ಇದೇ ಅಪಾರ್ಟ್​ಮೆಂಟ್​ನಲ್ಲಿ ನಟಿಯಾದ ಕಿಯಾರಾ ಅಡ್ವಾಣಿ ಸಹ ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ಮಾತ್ರವಲ್ಲದೆ ಯುವ ನಟಿ ಸಾರಾ ಅಲಿ ಖಾನ್ ತನ್ನ ತಾಯಿ ಅಮೃತಾ ಅವರೊಟ್ಟಿಗೆ ಸೇರಿಕೊಂಡು ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ಸಾರಾ ಅಲಿ ಖಾನ್, 2100 ಚದರ ಅಡಿಯ ಪ್ಲ್ಯಾಟ್ ಅನ್ನು 9 ಕೋಟಿ ಹಣ ನೀಡಿ ಖರೀದಿ ಮಾಡಿದ್ದಾರೆ. ಕಾರ್ತಿಕ್ ಆರ್ಯನ್ ಸಹ ಇದೇ ಪ್ರಾಜೆಕ್ಟ್​ನಲ್ಲಿ 2100 ಚದರ ಅಡಿಯ ಫ್ಲ್ಯಾಟ್ ಅನ್ನು 10 ಕೋಟಿ ಹಣ ನೀಡಿ ಖರೀದಿ ಮಾಡಿದ್ದಾರೆ. ಇದೇ ವರ್ಷದ ಜುಲೈ ತಿಂಗಳಲ್ಲಿ ಕಾರ್ತಿ ಕ್ ಆರ್ಯನ್ ಜುಹು ಏರಿಯಾನಲ್ಲಿನ ಸಿದ್ಧಿ ವಿನಾಯಕ ಅಪಾರ್ಟ್​ಮೆಂಟ್​ನಲ್ಲಿ 17.50 ಕೋಟಿ ಖರ್ಚು ಮಾಡಿ 1916 ಚದರ ಅಡಿಯ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದಾರೆ.

ಈಗ ಅಮಿತಾಬ್ ಬಚ್ಚನ್ ಫ್ಲ್ಯಾಟ್ ಖರೀದಿ ಮಾಡಿರುವ ಪ್ರಾಜೆಕ್ಟ್​ನಲ್ಲಿಯೇ ಅಜಯ್ ದೇವಗನ್ ಹಾಗೂ ಕಾಜೊಲ್ ಕೆಲವು ತಿಂಗಳ ಹಿಂದೆ ಆಫೀಸ್ ಸ್ಪೇಸ್ ಅನ್ನು ಖರೀದಿ ಮಾಡಿದ್ದರು. ಸುಮಾರು 45 ಕೋಟಿ ಹಣವನ್ನು ಇದಕ್ಕಾಗಿ ಈ ಜೋಡಿ ವೆಚ್ಚ ಮಾಡಿದ್ದರು. ಸುಮಾರು ನಾಲ್ಕು ವಿವಿಧ ಫ್ಲ್ಯಾಟ್​ಗಳನ್ನು ಈ ಜೋಡಿ ಖರೀದಿ ಮಾಡಿತ್ತು. ಇತ್ತೀಚೆಗೆ ಬಾಲಿವುಡ್​ನ ಸ್ಟಾರ್ ನಟ-ನಟಿಯರು ರಿಯಲ್ ಎಸ್ಟೇಟ್​ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಬೆಂಗಳೂರಿನ ರಿಯಲ್ ಎಸ್ಟೇಟ್​ ಮೇಲೆ ಹೂಡಿಕೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ