ಸೆಪ್ಟೆಂಬರ್ 8 ರಿಂದ 10ರ ವರೆಗೆ ಬೆಂಗಳೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋ

ರಿಯಲ್ ಎಸ್ಟೇಟ್ ವೆಬ್‌ಸೈಟ್‌ಗಳಲ್ಲಿ ಹುಡುಕಾಡಿ ಸುಸ್ತಾಗಿದೆಯೇ? ಹೆಚ್ಚಿನ ರಿಯಲ್ ಎಸ್ಟೇಟ್ ಹೂಡಿಕೆ ಅವಕಾಶಗಳಿಗಾಗಿ ಹುಡುಕುತ್ತಿದ್ದೀರಾ? ನಿಮಗಾಗಿಯೇ ಟಿವಿ9 ಕನ್ನಡ ಸ್ವೀಟ್ ಹೋಮ್ ಎಕ್ಸ್​​ಪೋ ಆಯೋಜನೆ ಮಾಡುತ್ತಿದೆ. ಸ್ವೀಟ್ ಹೋಮ್ ಎಕ್ಸ್‌ಪೋಗೆ ಭೇಟಿ ನೀಡಿ ನೀವು ಮಾರುಕಟ್ಟೆಯ ಬಗ್ಗೆ, ವೆಚ್ಚದ ಬಗ್ಗೆ, ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಿ ಹಾಗೂ ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿನ ಸತ್ಯಗಳನ್ನು ತಿಳಿದುಕೊಳ್ಳಬಹುದಾಗಿದೆ.

ಸೆಪ್ಟೆಂಬರ್ 8 ರಿಂದ 10ರ ವರೆಗೆ ಬೆಂಗಳೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋ
ಸೆಪ್ಟೆಂಬರ್ 8 ರಿಂದ 10ರ ವರೆಗೆ ಬೆಂಗಳೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋ
Follow us
| Updated By: ಗಣಪತಿ ಶರ್ಮ

Updated on: Sep 02, 2023 | 5:06 PM

ಬೆಂಗಳೂರು, ಸೆಪ್ಟೆಂಬರ್ 2: ಗಳಿಸಿದ ಆದಾಯದಲ್ಲಿ ಉಳಿಸುವುದು, ಹೂಡಿಕೆ ಮಾಡುವುದು ಬಹು ಮುಖ್ಯ. ಹೂಡಿಕೆಗೆ ಉತ್ತಮ ಕ್ಷೇತ್ರಗಳ ಪೈಕಿ ಸದ್ಯ ದೇಶದಲ್ಲಿ ರಿಯಲ್ ಎಸ್ಟೇಟ್ ಮೊದಲ ಸಾಲಿನಲ್ಲಿದೆ. ರಿಯಲ್ ಎಸ್ಟೇಟ್​​ನಲ್ಲಿ (Real Estate) ಹೂಡಿಕೆ ಮಾಡಿದವರು ನಷ್ಟಹೊಂದಿರುವುದು ವಿರಳಾತಿವಿರಳ ಎನ್ನಲಾಗಿದೆ. ಅದಕ್ಕೇ ಹಿರಿಯರು ಕೂಡ ಸ್ವಲ್ಪ ಹಣವಿದ್ದರೆ ಒಂದಿಷ್ಟು ಜಮೀನು ಖರೀದಿಸಿ ಎಂದು ಸಲಹೆ ನೀಡುತ್ತಾರೆ. ಮನೆ, ನಿವೇಶನ, ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌ನಲ್ಲಿ ಹೂಡಿಕೆ ಮಾಡಲು ಹಲವರು ಯೋಚಿಸುತ್ತಾರೆ. ನಿಮ್ಮ ಬಳಿ ಹಣವಿದ್ದರೆ ಅದನ್ನು ಎಲ್ಲಿ ಹೂಡಿಕೆ ಮಾಡಬೇಕು? ಹೂಡಿಕೆ ಮಾಡುವುದು ಹೇಗೆ ಎಂಬ ಹಲವು ಅನುಮಾನಗಳಿರಬಹುದು. ಆದರೆ ಇಂತಹ ಎಲ್ಲಾ ಅನುಮಾನಗಳನ್ನು ನಿವಾರಿಸಲು ಟಿವಿ9 ಕನ್ನಡ (Tv9 Kannada) ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸುತ್ತಿದೆ. ಅದುವೇ, ‘ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋ 2023 (Sweet Home Real Estate Expo 2023).

ರಿಯಲ್ ಎಸ್ಟೇಟ್ ವೆಬ್‌ಸೈಟ್‌ಗಳಲ್ಲಿ ಹುಡುಕಾಡಿ ಸುಸ್ತಾಗಿದೆಯೇ? ಹೆಚ್ಚಿನ ರಿಯಲ್ ಎಸ್ಟೇಟ್ ಹೂಡಿಕೆ ಅವಕಾಶಗಳಿಗಾಗಿ ಹುಡುಕುತ್ತಿದ್ದೀರಾ? ನಿಮಗಾಗಿಯೇ ಟಿವಿ9 ಕನ್ನಡ ಸ್ವೀಟ್ ಹೋಮ್ ಎಕ್ಸ್​​ಪೋ ಆಯೋಜನೆ ಮಾಡುತ್ತಿದೆ. ಸ್ವೀಟ್ ಹೋಮ್ ಎಕ್ಸ್‌ಪೋಗೆ ಭೇಟಿ ನೀಡಿ ನೀವು ಮಾರುಕಟ್ಟೆಯ ಬಗ್ಗೆ, ವೆಚ್ಚದ ಬಗ್ಗೆ, ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಿ ಹಾಗೂ ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿನ ಸತ್ಯಗಳನ್ನು ತಿಳಿದುಕೊಳ್ಳಬಹುದಾಗಿದೆ.

ಸ್ವೀಟ್ ಹೋಮ್ ಎಕ್ಸ್‌ಪೋ ಯಾವಾಗ, ಎಲ್ಲಿ ನಡೆಯಲಿದೆ?

ಟಿವಿ9 ಕನ್ನಡ ಸ್ವೀಟ್ ಹೋಮ್ ಎಕ್ಸ್‌ಪೋ ಬೆಂಗಳೂರಿನ ನಾಯಂಡಹಳ್ಳಿ ಸಮೀಪದ ನಂದಿ ಲಿಂಕ್ ಗ್ರೌಂಡ್ಸ್​​ನಲ್ಲಿ ಸೆಪ್ಟೆಂಬರ್ 8, 9, ಹಾಗೂ 10ರಂದು ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೆ ಎಕ್ಸ್​ಪೋ ನಡೆಯಲಿದೆ.

ಇದನ್ನೂ ಓದಿ: ಬೆಂಗಳೂರು ಬಳಿ ನಾಲೆಜ್ ಸಿಟಿ ಸ್ಥಾಪನೆ ಘೋಷಣೆ ಮಾಡಿದ ಎಂಬಿ ಪಾಟೀಲ್; ಏನಿದರ ವಿಶೇಷ?

‘ಉತ್ತಮ ಸಮಾಜಕ್ಕಾಗಿ’ ಎಂಬ ಧ್ಯೇಯದೊಂದಿಗೆ ಕೆಲಸ ಮಾಡುವ ಟಿವಿ9, ಎಕ್ಸ್​​ಪೋ ಮೂಲಕ ಮನೆ ಖರೀದಿದಾರರನ್ನು ಅಥವಾ ಹೂಡಿಕೆದಾರರನ್ನು ರಿಯಲ್ ಎಸ್ಟೇಟ್ ಉದ್ಯಮದ ಪ್ರಮುಖರೊಂದಿಗೆ ಬೆಸೆಯಲಿದೆ. ಇದರಿಂದಾಗಿ ಮಾರಾಟಗಾರರು ಮತ್ತು ಖರೀದಿದಾರರಿಗೆ ಪ್ರಯೋಜನವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ