AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜವಾನ್’ ಸಿನಿಮಾ ನೋಡಿದ ಮಹೇಶ್ ಬಾಬು-ರಾಜಮೌಳಿ ಹೇಳಿದ್ದು ಹೀಗೆ

Jawan: ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ನಿನ್ನೆ ಬಿಡುಗಡೆ ಆಗಿದ್ದು, ಸಿನಿಮಾವನ್ನು ಮಹೇಶ್ ಬಾಬು, ಎಸ್​ಎಸ್ ರಾಜಮೌಳಿ ವೀಕ್ಷಿಸಿದ್ದಾರೆ. ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

'ಜವಾನ್' ಸಿನಿಮಾ ನೋಡಿದ ಮಹೇಶ್ ಬಾಬು-ರಾಜಮೌಳಿ ಹೇಳಿದ್ದು ಹೀಗೆ
ಜವಾನ್
ಮಂಜುನಾಥ ಸಿ.
|

Updated on: Sep 08, 2023 | 6:09 PM

Share

ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್‘ (Jawan) ಸಿನಿಮಾ ನಿನ್ನೆಯಷ್ಟೆ (ಸೆಪ್ಟೆಂಬರ್ 08) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಶಾರುಖ್ ಖಾನ್​ರ ಈ ಹಿಂದಿನ ಸಿನಿಮಾಗಳಿಗೆ ಸಿಕ್ಕಿದಕ್ಕಿಂತಲೂ ಹೆಚ್ಚಿನ ಪ್ರತಿಕ್ರಿಯೆ ಜನಾದರ ದಕ್ಷಿಣ ಭಾರತದಿಂದ ಈ ಸಿನಿಮಾಕ್ಕೆ ಸಿಗುತ್ತಿದೆ. ದಕ್ಷಿಣದ ನಿರ್ದೇಶಕ, ನಟರು ನಟಿಸಿರುವುದು ಸಹ ಇದಕ್ಕೆ ಕಾರಣ ಆಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ದಕ್ಷಿಣದ ಕೆಲವು ಸ್ಟಾರ್ ನಟರು, ನಿರ್ದೇಶಕರು ಸಹ ‘ಜವಾನ್’ ಸಿನಿಮಾಕ್ಕೆ ಬೆಂಬಲ ನೀಡಿದ್ದು, ನಟ ಮಹೇಶ್ ಬಾಬು ಹಾಗೂ ಸ್ಟಾರ್ ನಿರ್ದೇಶಕ ರಾಜಮೌಳಿ ‘ಜವಾನ್’ ಸಿನಿಮಾ ವೀಕ್ಷಿಸಿ ಕೊಂಡಾಡಿದ್ದಾರೆ.

‘ಜವಾನ್’ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಟ್ವೀಟ್ ಮಾಡಿದ್ದ ಮಹೇಶ್ ಬಾಬು ತಾನು ಸಿನಿಮಾ ನೋಡುವುದಾಗಿ ಹೇಳಿದ್ದರು. ಅಂತೆಯೇ ಇದೀಗ ಸಿನಿಮಾ ವೀಕ್ಷಿಸಿದ್ದು, ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಟ್ವಿಟರ್​ ಮೂಲಕ ಹಂಚಿಕೊಂಡಿದ್ದಾರೆ. ”ಜವಾನ್’ ಬ್ಲಾಕ್ ಬಸ್ಟರ್ ಸಿನಿಮಾ. ಅಟ್ಲಿ, ಕಿಂಗ್ ಸೈಜ್ ಎಂಟರ್ಟೈನ್​ಮೆಂಟ್ ಬ್ಲಾಕ್ ಬಸ್ಟರ್ ಕೊಟ್ಟಿದ್ದಾರೆ, ಅದೂ ನಿಜವಾದ ಕಿಂಗ್ (ಶಾರುಖ್ ಖಾನ್) ಅನ್ನು ಇಟ್ಟುಕೊಂಡು. ಅಟ್ಲಿಯ ಈ ವರೆಗಿನ ಅತ್ಯುತ್ತಮ ಸಿನಿಮಾ ಇದು. ಶಾರುಖ್ ಖಾನ್​ರ ಚರಿಶ್ಮಾ, ಸ್ಕ್ರೀನ್ ಪ್ರೆಸೆನ್ಸ್, ಸ್ವಾಗ್ ಗೆ ಯಾರೂ ಸಮನಾಗಲಾರರು. ‘ಜವಾನ್’ ಸಿನಿಮಾ ಅವರದ್ದೇ ಸಿನಿಮಾಗಳ ದಾಖಲೆಗಳನ್ನು ಮುರಿಯಲಿದೆ. ಇದು ಲೆಜೆಂಡ್​ಗಳಿಗೆ ಮಾತ್ರವೇ ಸಾಧ್ಯ” ಎಂದಿದ್ದಾರೆ.

ಮಹೇಶ್ ಬಾಬು ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಶಾರುಖ್ ಖಾನ್, ”ನಿಮಗೆ ಸಿನಿಮಾ ಇಷ್ಟವಾಗಿರುವುದು ತಿಳಿದು ಚಿತ್ರತಂಡ ಸಂತಸಗೊಂಡಿದೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಸಪ್ರೇಮ ಧನ್ಯವಾದ. ನಿಮ್ಮ ಪ್ರೀತಿ ತುಂಬಿದ ಮಾತುಗಳು ಸ್ಪೂರ್ತಿ ತುಂಬಿವೆ. ಜನರ ಮನರಂಜಿಸಲು ಇನ್ನಷ್ಟು ಶ್ರಮವಹಿಸಿ ಕೆಲಸ ಮಾಡುವ ಉತ್ಸಾಹ ಸಿಕ್ಕಿದೆ. ನಿನಗೆ ನನ್ನ ಪ್ರೀತಿಗಳು ಗೆಳೆಯ” ಎಂದಿದ್ದಾರೆ.

ಇದನ್ನೂ ಓದಿ:ಹೇಗಿದೆ ಜವಾನ್ ಸಿನಿಮಾದ ಫಸ್ಟ್ ಹಾಫ್? ಶಾರುಖ್ ಖಾನ್-ಅಟ್ಲಿ ಕಾಂಬಿನೇಷನ್‌ನಲ್ಲಿ ಏನೆಲ್ಲ ಇದೆ?

ಸ್ಟಾರ್ ನಿರ್ದೇಶಕ ಎಸ್​ಎಸ್ ರಾಜಮೌಳಿ ಸಹ ಸಿನಿಮಾ ವೀಕ್ಷಿಸಿದ್ದು, ”ಶಾರುಖ್ ಖಾನ್ ಅನ್ನು ಬಾಕ್ಸ್ ಆಫೀಸ್ ಬಾದ್​ಶಾ ಎಂದು ಏಕೆ ಕರೆಯುತ್ತಾರೆಂಬುದಕ್ಕೆ ಇದೇ ಉದಾಹರಣೆ, ‘ಜವಾನ್’ ಸಿನಿಮಾದ್ದು ಅತ್ಯದ್ಭುತವಾದ ಓಪನಿಂಗ್. ಉತ್ತರ ಭಾರತದಲ್ಲಿಯೂ ಯಶಸ್ಸನ್ನು ಮುಂದುವರೆಸಿದ್ದಕ್ಕೆ ಅಟ್ಲಿಗೆ ಅಭಿನಂದನೆಗಳು. ಅತ್ಯದ್ಭುತವಾದ ಯಶಸ್ಸು ಗಳಿಸಿರುವ ‘ಜವಾನ್’ ಸಿನಿಮಾ ತಂಡಕ್ಕೆ ಅಭಿನಂದನೆಗಳು” ಎಂದಿದ್ದಾರೆ ರಾಜಮೌಳಿ.

‘ಜವಾನ್’ ಸಿನಿಮಾ ಸೆಪ್ಟೆಂಬರ್ 7ರಂದು ಬಿಡುಗಡೆ ಆಗಿದ್ದು, ಮೊದಲ ದಿನವೇ ಸೂಪರ್ ಹಿಟ್ ಎನಿಸಿಕೊಂಡಿದೆ. ಮೊದಲ ದಿನವೇ 75 ಕೋಟಿಗೂ ಹೆಚ್ಚು ಹಣವನ್ನು ಗಳಿಸಿದೆ. ಸಿನಿಮಾವನ್ನು ಅಟ್ಲಿ ನಿರ್ದೇಶನ ಮಾಡಿದ್ದು, ನಯನತಾರಾ, ದೀಪಿಕಾ ಪಡುಕೋಣೆ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ವಿಜಯ್ ಸೇತುಪತಿ, ಯೋಗಿ ಬಾಬು, ಸುನಿಲ್ ಗ್ರೋವರ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ನಿರ್ಮಾಣ ಮಾಡಿದೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ