ಶಾರುಖ್ ಖಾನ್​ನ ಸಿನಿಮಾ ದೇವರು ಎಂದು ಹೊಗಳಿದ ಕಂಗನಾ ರಣಾವಾತ್

ಕಂಗನಾ ರಣಾವತ್ ತುಂಬಾನೇ ಕಷ್ಟದಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಅವರ ರೀತಿ ಕಷ್ಟಪಟ್ಟವರು ಅನೇಕರಿದ್ದಾರೆ. ಆದರೆ, ಸ್ಟಾರ್​ ಕಿಡ್​ಗಳಿಗೆ ಸುಲಭದಲ್ಲಿ ಅವಕಾಶ ಸಿಗುತ್ತದೆ. ಈ ತಾರತಮ್ಯ ಕಂಡರೆ ಕಂಗನಾಗೆ ಆಗುವುದಿಲ್ಲ. ಈ ಕಾರಣಕ್ಕೆ ಅವರು ರಣಬೀರ್ ಕಪೂರ್, ಆಲಿಯಾ ಭಟ್ ಮೊದಲಾದವರನ್ನು ದ್ವೇಷಿಸುತ್ತಾರೆ.

ಶಾರುಖ್ ಖಾನ್​ನ ಸಿನಿಮಾ ದೇವರು ಎಂದು ಹೊಗಳಿದ ಕಂಗನಾ ರಣಾವಾತ್
ಶಾರುಖ್
Follow us
ರಾಜೇಶ್ ದುಗ್ಗುಮನೆ
|

Updated on: Sep 08, 2023 | 7:04 AM

ನಟಿ ಕಂಗನಾ ರಣಾವತ್ ಅವರು ಅನೇಕರನ್ನು ಟೀಕೆ ಮಾಡಿಕೊಂಡೇ ಇರುತ್ತಾರೆ. ಅವರಿಗೆ ಬಾಲಿವುಡ್​ನ ಬಹುತೇಕರನ್ನು ಕಂಡರೆ ಆಗೋದಿಲ್ಲ. ಹೀಗಾಗಿ, ಮಾಡಿದ್ದೆಲ್ಲವೂ ತಪ್ಪು ಎನ್ನುತ್ತಾರೆ. ಆದರೆ ಅಪರೂಪಕ್ಕೊಮ್ಮೆ ಒಬ್ಬೊಬ್ಬರನ್ನು ಹೊಗಳಿ ಅಚ್ಚರಿ ಮೂಡಿಸುತ್ತಾರೆ. ಈಗ ಶಾರುಖ್ ಖಾನ್ (Shah Rukh Khan)​ ಕೆಲಸದ ಮೇಲೆ ಅವರಿಗೆ ಪ್ರೀತಿ ಬಂದಿದೆ. ಶಾರುಖ್ ಖಾನ್ ಅವರನ್ನು ಬಾಯ್ತುಂಬ ಹೊಗಳಿದ್ದಾರೆ. ಅವರನ್ನು ಸಿನೆಮಾ ದೇವರು ಎಂದು ಘೋಷಣೆ ಮಾಡಿದ್ದಾರೆ. ಇನ್​ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ಶಾರುಖ್ ಖಾನ್ ಬಗ್ಗೆ ಕಂಗನಾ ಬರೆದುಕೊಂಡಿದ್ದಾರೆ. ಇದಕ್ಕೆ ಶಾರುಖ್ ಯಾವ ರೀತಿಯಲ್ಲಿ ಉತ್ತರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಕಂಗನಾ ರಣಾವತ್ ತುಂಬಾನೇ ಕಷ್ಟದಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಅವರ ರೀತಿ ಕಷ್ಟಪಟ್ಟವರು ಅನೇಕರಿದ್ದಾರೆ. ಆದರೆ, ಸ್ಟಾರ್​ ಕಿಡ್​ಗಳಿಗೆ ಸುಲಭದಲ್ಲಿ ಅವಕಾಶ ಸಿಗುತ್ತದೆ. ಈ ತಾರತಮ್ಯ ಕಂಡರೆ ಕಂಗನಾಗೆ ಆಗುವುದಿಲ್ಲ. ಈ ಕಾರಣಕ್ಕೆ ಅವರು ರಣಬೀರ್ ಕಪೂರ್, ಆಲಿಯಾ ಭಟ್ ಮೊದಲಾದವರನ್ನು ದ್ವೇಷಿಸುತ್ತಾರೆ. ಕೆಲವೊಮ್ಮೆ ಆಲಿಯಾರನ್ನು ಅವರು ಹೊಗಳಿದ್ದಿದೆ. ‘ಜವಾನ್’ ಸಿನಿಮಾ ಮೂಲಕ ಅಬ್ಬರಿಸಿದ ಶಾರುಖ್ ಬಗ್ಗೆ ಕಂಗನಾ ಮೆಚ್ಚುಗೆ ಸೂಚಿಸಿದ್ದಾರೆ.

‘ತೊಂಬತ್ತರ ದಶಕದಲ್ಲಿ ಲವರ್ ಬಾಯ್ ಆಗಿದ್ದ ಈ ವ್ಯಕ್ತಿ ಈಗ ಸುಮಾರು 60ನೇ ವಯಸ್ಸಿನಲ್ಲಿ ಸೂಪರ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಜನರು ಅವರ ಸಿನಿಮಾ ಆಯ್ಕೆಯ ಬಗ್ಗೆ ಅಪಹಾಸ್ಯ ಮಾಡಿದ ಸಮಯ ನನಗೆ ನೆನಪಿದೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದು, ಮತ್ತೊಮ್ಮೆ ಸ್ಥಾಪಿತಗೊಳ್ಳಬೇಕು ಎಂದು ಕನಸು ಕಾಣುತ್ತಿರುವ ಎಲ್ಲಾ ಕಲಾವಿದರಿಗೆ ಶಾರುಖ್ ಖಾನ್ ಅವರು ಮಾದರಿ. ಶಾರುಖ್ ಖಾನ್ ಸಿನಿಮಾ ದೇವರು. ಕಠಿಣ ಪರಿಶ್ರಮ ಮತ್ತು ನಮ್ರತೆಗೆ ಕಿಂಗ್ ಖಾನ್ ನಿಮಗೆ ನಮನಗಳು’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್ ನಿವಾಸದ ಎದುರು ಭಾರೀ ಪ್ರತಿಭಟನೆ; ಮನ್ನತ್​ಗೆ ಬಿಗಿ ಭದ್ರತೆ ನೀಡಿದ ಪೊಲೀಸರು

‘ಜವಾನ್’ ಸಿನಿಮಾ ಮೊದಲ ದಿನ ಬಹುತೇಕ ಕಡೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಂಡಿದೆ. ಸಿನಿಮಾದ ಮಾಸ್ ಮಸಾಲ ಅಂಶ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅಟ್ಲಿ ನಿರ್ದೇಶನ ಇರುವ ಈ ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಸಂಜಯ್ ದತ್, ದೀಪಿಕಾ ಪಡುಕೋಣೆ ಮೊದಲಾದವರು ಬಣ್ಣ ಹಚ್ಚಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ