ಶೂಟಿಂಗ್ ಸೆಟ್ನಲ್ಲಿ ಮಾಧುರಿ ದೀಕ್ಷಿತ್ಗೆ ಬ್ಲೌಸ್ ಬಿಚ್ಚುವಂತೆ ಒತ್ತಾಯಿಸಿದ್ದ ನಿರ್ದೇಶಕ
‘ಅದು ಸಿನಿಮಾದ ಪ್ರಮುಖ ದೃಶ್ಯವಾಗಿದ್ದು, ಅದನ್ನು ಮೊದಲ ದಿನವೇ ಚಿತ್ರೀಕರಿಸಲು ನಾನು ನಿರ್ಧರಿಸಿದ್ದೆ. ಅದಕ್ಕೆ ಮಾಧುರಿ ಕೂಡ ಒಪ್ಪಿಕೊಂಡಿದ್ದರು. ಆದರೆ ಶೂಟಿಂಗ್ ಸಂದರ್ಭದಲ್ಲಿ ತಕರಾರು ತೆಗೆದರು’ ಎಂದು ಟಿನು ಆನಂದ್ ಹೇಳಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಅವರು ಮಾತನಾಡಿದ್ದಾರೆ.
ನಟಿ ಮಾಧುರಿ ದೀಕ್ಷಿತ್ (Madhuri Dixit) ಅವರು ಬಾಲಿವುಡ್ನಲ್ಲಿ ಮಿಂಚಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅನೇಕ ಕಷ್ಟಗಳನ್ನು ದಾಟಿಕೊಂಡು ಅವರು ಈ ಹಂತಕ್ಕೆ ಬಂದಿದ್ದಾರೆ. ಕೆಲವೊಮ್ಮೆ ಅವರು ಶೂಟಿಂಗ್ ಸೆಟ್ನಲ್ಲಿ ತೀರಾ ಮುಜುಗರದ ಸಂದರ್ಭಗಳನ್ನು ಎದುರಿಸಿದ್ದು ಕೂಡ ಉಂಟು. ‘ಶನಖ್ತ್’ ಸಿನಿಮಾದ ಶೂಟಿಂಗ್ ವೇಳೆ ಬ್ಲೌಸ್ ಬಿಚ್ಚುವಂತೆ ನಿರ್ದೇಶಕ ಟಿನು ಆನಂದ್ ಒತ್ತಾಯಿಸಿದ್ದರು. ಅದಕ್ಕೆ ಮಾಧುರಿ ದೀಕ್ಷಿತ್ ವಿರೋಧ ವ್ಯಕ್ತಪಡಿಸಿದ್ದರು. ಅಂದು ಶೂಟಿಂಗ್ ಸೆಟ್ನಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಅಲ್ಲಿ ಅಸಲಿಗೆ ನಡೆದಿದ್ದು ಏನು ಎಂಬುದನ್ನು ಟಿನು ಆನಂದ್ ಅವರು ವಿವರಿಸಿದ್ದಾರೆ. ಸಿನಿಮಾದ ದೃಶ್ಯದಲ್ಲಿ ಮಾಧುರಿ ದೀಕ್ಷಿತ್ ಅವರು ಬ್ಲೌಸ್ ತೆಗೆಯುವುದು ಅವಶ್ಯಕವಾಗಿತ್ತು ಎಂದು ಟಿನು ಆನಂದ್ (Tinnu Anand) ಹೇಳಿದ್ದಾರೆ.
ಆ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಹೀರೋ. ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ನಾಯಕನನ್ನು ವಿಲನ್ಗಳು ಸರಪಳಿಯಿಂದ ಕಟ್ಟಿ ಹಾಕಿರುತ್ತಾರೆ. ಆತನನ್ನು ಉಳಿಸುವ ನಾಯಕಿ (ಮಾಧುರಿ) ಒಂದು ಉಪಾಯ ಮಾಡುತ್ತಾಳೆ. ‘ಮಹಿಳೆಯಾದ ನಾನು ಇಲ್ಲಿ ನಿಂತಿರುವಾಗ ಪುರುಷನ ಮೇಲೆ ಸರಪಳಿಯಿಂದ ಯಾಕೆ ದಾಳಿ ಮಾಡುತ್ತೀರಿ’ ಎಂದು ಆಕೆ ಕೇಳುತ್ತಾಳೆ. ಆ ದೃಶ್ಯದಲ್ಲಿ ಮಾಧುರಿ ದೀಕ್ಷಿತ್ ಅವರು ತಮ್ಮ ಬ್ಲೌಸ್ ಬಿಚ್ಚಬೇಕು ಎಂದು ಒಪ್ಪಂದ ಆಗಿತ್ತು ಎಂಬುದು ಟಿನು ಆನಂದ್ ಅವರ ವಾದ.
Madhuri Dixit: ಪಾಕಿಸ್ತಾನಿ ಹುಡುಗಿಯ ಡ್ಯಾನ್ಸ್ ಕಾಪಿ ಮಾಡಿದ ಮಾಧುರಿ ದೀಕ್ಷಿತ್; ನೆಟ್ಟಿಗರಿಂದ ಬುದ್ಧಿಮಾತು
‘ಆ ದೃಶ್ಯದಲ್ಲಿ ಬ್ಲೌಸ್ ತೆಗೆಯಬೇಕು ಮತ್ತು ನಿಮ್ಮನ್ನು ಜನರು ಮೊದಲ ಬಾರಿಗೆ ಬ್ರಾನಲ್ಲಿ ನೋಡುತ್ತಾರೆ ಎಂದು ಮಾಧುರಿಗೆ ನಾನು ಮೊದಲೇ ಹೇಳಿದ್ದೆ. ಹೀರೋನನ್ನು ಕಾಪಾಡಲು ಆಕೆ ತನ್ನನ್ನು ತಾನು ವಿಲನ್ಗೆ ಒಪ್ಪಿಸಿಕೊಳ್ಳುವ ದೃಶ್ಯ ಅದಾಗಿತ್ತು. ಅದು ಸಿನಿಮಾದ ಪ್ರಮುಖ ದೃಶ್ಯವಾಗಿದ್ದು, ಅದನ್ನು ಮೊದಲ ದಿನವೇ ಚಿತ್ರೀಕರಿಸಲು ನಾನು ನಿರ್ಧರಿಸಿದ್ದೆ. ಅದಕ್ಕೆ ಮಾಧುರಿ ಕೂಡ ಒಪ್ಪಿಕೊಂಡಿದ್ದರು. ಆದರೆ ಶೂಟಿಂಗ್ ಸಂದರ್ಭದಲ್ಲಿ ತಕರಾರು ತೆಗೆದರು’ ಎಂದು ಟಿನು ಆನಂದ್ ಹೇಳಿದ್ದಾರೆ.
‘ಏಕ್ ದೋ ತೀನ್..’ ಹಾಡಿಗೆ ಡ್ಯಾನ್ಸ್ ಮಾಡಿದ ರವೀನಾ ಟಂಡನ್; ಮಾಧುರಿ ದೀಕ್ಷಿತ್ ಮೆಚ್ಚುಗೆ
‘ಏನಾಯಿತು ಎಂದು ಮಾಧುರಿಗೆ ಕೇಳಿದೆ. ಈ ಸೀನ್ ಮಾಡಲು ತಾವು ಸಿದ್ಧರಿಲ್ಲ ಎಂದು ಅವರು ಹೇಳಿದರು. ನೀವು ಈ ಸೀನ್ ಮಾಡಲೇಬೇಕು ಅಂತ ನಾನು ಹೇಳಿದೆ. ಆಗಲೂ ಅವರು ಒಪ್ಪಲಿಲ್ಲ. ಹಾಗಿದ್ದರೆ ಈ ಸಿನಿಮಾಗೆ ನೀವು ವಿದಾಯ ಹೇಳಿ, ನಾನು ಶೂಟಿಂಗ್ ಕ್ಯಾನ್ಸಲ್ ಮಾಡುತ್ತೇನೆ ಅಂತ ಹೇಳಿದೆ. ಅವರಿಗೆ ಆ ದೃಶ್ಯದ ಬಗ್ಗೆ ತಕರಾರು ಇದ್ದರೆ ಒಪ್ಪಂದಕ್ಕೆ ಸಹಿ ಹಾಕುವುದಕ್ಕಿಂತ ಮುನ್ನವೇ ಅದನ್ನು ಹೇಳಬೇಕಿತ್ತು’ ಎಂದು ಆ ದಿನದ ಘಟನೆಯನ್ನು ಟಿನು ಆನಂದ್ ನೆನಪಿಸಿಕೊಂಡಿದ್ದಾರೆ.
ಬಾಲಿವುಡ್ನಲ್ಲಿ ನಟನಾಗಿ ಮತ್ತು ನಿರ್ದೇಶಕನಾಗಿ ಟಿನು ಆನಂದ್ ಗುರುತಿಸಿಕೊಂಡಿದ್ದಾರೆ. ಈಗ ಅವರು ‘ಸಲಾರ್’ ಸಿನಿಮಾದಲ್ಲೂ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಬಿಡುಗಡೆ ಆಗಿರುವ ಟೀಸರ್ನಲ್ಲಿ ಅವರ ಪಾತ್ರ ಹೈಲೈಟ್ ಆಗಿದೆ. ಈ ಸಿನಿಮಾ ಮೇಲೆ ಪ್ರಭಾಸ್ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.