Madhuri Dixit: ಪಾಕಿಸ್ತಾನಿ ಹುಡುಗಿಯ ಡ್ಯಾನ್ಸ್​ ಕಾಪಿ ಮಾಡಿದ ಮಾಧುರಿ ದೀಕ್ಷಿತ್​; ನೆಟ್ಟಿಗರಿಂದ ಬುದ್ಧಿಮಾತು

Madhuri Dixit Reels: ಕೆಲವೇ ಗಂಟೆಗಳಲ್ಲಿ ಇದು 40 ಲಕ್ಷ ಬಾರಿ ವೀಕ್ಷಣೆ ಕಂಡಿದೆ. 5 ಲಕ್ಷಕ್ಕೂ ಅಧಿಕ ಜನರು ಲೈಕ್​ ಮಾಡಿ​ದ್ದಾರೆ. ಸಾವಿರಾರು ಮಂದಿ ಕಮೆಂಟ್​ ಮಾಡಿದ್ದಾರೆ.

Madhuri Dixit: ಪಾಕಿಸ್ತಾನಿ ಹುಡುಗಿಯ ಡ್ಯಾನ್ಸ್​ ಕಾಪಿ ಮಾಡಿದ ಮಾಧುರಿ ದೀಕ್ಷಿತ್​; ನೆಟ್ಟಿಗರಿಂದ ಬುದ್ಧಿಮಾತು
ಮಾಧುರಿ ದೀಕ್ಷಿತ್, ಆಯೇಷಾ
Follow us
TV9 Web
| Updated By: ಮದನ್​ ಕುಮಾರ್​

Updated on:Dec 04, 2022 | 11:15 AM

ನಟಿ ಮಾಧುರಿ ದೀಕ್ಷಿತ್​ (Madhuri Dixit) ಅವರು ಡ್ಯಾನ್ಸ್​ ವಿಚಾರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ಹೆಜ್ಜೆ ಹಾಕುವ ಪರಿ ಕಂಡು ಕೋಟ್ಯಂತರ ಮಂದಿ ಫಿದಾ ಆಗಿದ್ದಾರೆ. ಈಗಲೂ ಅವರು ತಮ್ಮ ಚಾರ್ಮ್​ ಉಳಿಸಿಕೊಂಡಿದ್ದಾರೆ. ಸಿನಿಮಾಗಳ ಆಯ್ಕೆಯಲ್ಲಿ ಸಖತ್​ ಚ್ಯೂಸಿ ಆಗಿರುವ ಮಾಧುರಿ ದೀಕ್ಷಿತ್​ ಅವರು ಅಲ್ಲೊಂದು ಇಲ್ಲೊಂದು ಸಿನಿಮಾ ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಕಿರುತೆರೆ ಡ್ಯಾನ್ಸ್​ ರಿಯಾಲಿಟಿ ಶೋಗಳಿಗೆ ಅವರು ಜಡ್ಜ್​ ಆಗಿ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಅವರು ಮಾಡಿದ ಒಂದು ರೀಲ್ಸ್ (Madhuri Dixit Reels)​ ವೈರಲ್​ ಆಗಿದೆ. ಅದರಲ್ಲಿ ಪಾಕಿಸ್ತಾನಿ ಹುಡುಗಿಯ (Pakistani girl Ayesha) ಡ್ಯಾನ್ಸ್​ ಸ್ಟೆಪ್ ಕಾಪಿ ಮಾಡಲಾಗಿದೆ. ಈ ವಿಡಿಯೋ ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡಿ​ದ್ದಾರೆ.

ಇದು ಸೋಶಿಯಲ್​ ಮೀಡಿಯಾ ಜಮಾನ. ರಾತ್ರೋರಾತ್ರಿ ಯಾರು ಬೇಕಾದರೂ ಫೇಮಸ್​ ಆಗಬಹುದು. ಕೆಲವೇ ದಿನಗಳ ಹಿಂದೆ ಪಾಕಿಸ್ತಾನದ ಆಯೇಷಾ ಎಂಬ ಯುವತಿ ‘ನಾಗಿನ್​’ ಸಿನಿಮಾದ ‘ಮೇರಾ ದಿಲ್​ ಯೇ ಪುಕಾರೆ ಆಜಾ..’ ಹಾಡಿಗೆ ಡ್ಯಾನ್ಸ್​ ಮಾಡಿದ್ದು ವೈರಲ್​ ಆಗಿತ್ತು. ಬಳಿಕ ಅನೇಕರು ಅದೇ ರೀತಿ ಸ್ಟೆಪ್​ ಹಾಕುವ ಮೂಲಕ ಟ್ರೆಂಡ್​ ಸೃಷ್ಟಿ ಮಾಡಿದ್ದರು. ಈಗ ಆ ಟ್ರೆಂಡ್​ನಲ್ಲಿ ಮಾಧುರಿ ದೀಕ್ಷಿತ್​ ಕೂಡ ಭಾಗಿ ಆಗಿದ್ದಾರೆ. ಪಾಕಿಸ್ತಾನಿ ಯುವತಿ ಆಯೇಷಾ ರೀತಿಯೇ ಮಾಧುರಿ ದೀಕ್ಷಿತ್​ ಅವರು ಡ್ಯಾನ್ಸ್​ ಮಾಡಿದ್ದಾರೆ.

ಇದನ್ನೂ ಓದಿ
Image
Madhuri Dixit: ಟ್ರೆಂಡಿಂಗ್​ ಹಾಡಿಗೆ ಹೆಜ್ಜೆ ಹಾಕಿದ ಮಾಧುರಿ; ವೈರಲ್ ಆಯ್ತು ವಿಡಿಯೋ​
Image
55ನೇ ವಸಂತಕ್ಕೆ ಕಾಲಿಟ್ಟ ಮಾಧುರಿ ದೀಕ್ಷಿತ್; ಜನ್ಮದಿನಕ್ಕೆ ಹರಿದುಬಂತು ಶುಭಾಶಯಗಳ ಮಹಾಪೂರ
Image
Madhuri Dixit: ಮಾಧುರಿ ದೀಕ್ಷಿತ್ ಜನ್ಮದಿನ; 55ರ ಪ್ರಾಯದಲ್ಲೂ ಬೇಡಿಕೆ ಉಳಿಸಿಕೊಂಡ ನಟಿಯ ಆಸ್ತಿ ಮೌಲ್ಯ ಎಷ್ಟು?
Image
54ನೇ ವಯಸ್ಸಿನಲ್ಲೂ ಯುವತಿಯರನ್ನು ನಾಚಿಸುತ್ತಾರೆ ಮಾಧುರಿ ದೀಕ್ಷಿತ್; ಇಲ್ಲಿದೆ ಹೊಸ ಫೋಟೋಶೂಟ್  

ಸೋಶಿಯಲ್​ ಮೀಡಿಯಾದಲ್ಲಿ ಮಾಧುರಿ ದೀಕ್ಷಿತ್​ ಅವರು ಆ್ಯಕ್ಷೀವ್​ ಆಗಿದ್ದಾರೆ. ಶೂಟಿಂಗ್​ ಬಿಡುವಿನಲ್ಲಿ ರೀಲ್ಸ್​ ಮಾಡಿ, ಇನ್​ಸ್ಟಾಗ್ರಾಮ್​ನಲ್ಲಿ ಅದನ್ನು ಹಂಚಿಕೊಳ್ಳುತ್ತಾರೆ. ಅದೇ ರೀತಿ ಇತ್ತೀಚೆಗೆ ಅವರು ತಮ್ಮ ಕ್ಯಾರವ್ಯಾನ್​ನಲ್ಲಿ ‘ಮೇರಾ ದಿಲ್​ ಯೇ ಪುಕಾರೆ ಆಜಾ..’ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಅದೀಗ ವೈರಲ್​ ಆಗಿದೆ. ಕೆಲವೇ ಗಂಟೆಗಳಲ್ಲಿ ಇದು 40 ಲಕ್ಷ ಬಾರಿ ವೀಕ್ಷಣೆ ಕಂಡಿದೆ. 5 ಲಕ್ಷಕ್ಕೂ ಅಧಿಕ ಜನರು ಲೈಕ್​ ಮಾಡಿ​ದ್ದಾರೆ. ಸಾವಿರಾರು ಮಂದಿ ಕಮೆಂಟ್​ ಮಾಡಿದ್ದಾರೆ.

‘ಮೇರಾ ದಿಲ್​ ಯೇ ಪುಕಾರೆ ಆಜಾ..’ ಹಾಡಿಗೆ ಮಾಧುರಿ ಸೂಪರ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ ಎಂದು ಅನೇಕ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಪಾಕಿಸ್ತಾನಿ ಯುವತಿಯ ಸ್ಟೆಪ್ಸ್​ ಕಾಪಿ ಮಾಡಿದನ್ನು ಕೆಲವರು ಟೀಕಿಸಿದ್ದಾರೆ. ‘ನೀವು ಮಾಧುರಿ ದೀಕ್ಷಿತ್​ ಅನ್ನೋದು ಮರೆಯಬೇಡಿ. ಬೇರೆಯವರನ್ನು ಕಾಪಿ ಮಾಡಬೇಡಿ. ಇಂಥ ಟ್ರೆಂಡ್​ಗಳಲ್ಲಿ ನೀವು ಭಾಗಿ ಆಗಬೇಡಿ’ ಎಂದು ಒಂದಷ್ಟು ಮಂದಿ ಬುದ್ಧಿಮಾತು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:15 am, Sun, 4 December 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ