Madhuri Dixit: ಟ್ರೆಂಡಿಂಗ್​ ಹಾಡಿಗೆ ಹೆಜ್ಜೆ ಹಾಕಿದ ಮಾಧುರಿ; ವೈರಲ್ ಆಯ್ತು ವಿಡಿಯೋ​

My Money Don't Jiggle Jiggle trend: ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸಕ್ರಿಯರಾಗಿದ್ದಾರೆ ಮಾಧುರಿ ದೀಕ್ಷಿತ್. ಇತ್ತೀಚೆಗೆ ನಟಿ ಟ್ರೆಂಡಿಂಗ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು ವೈರಲ್ ಆಗಿದೆ.

Madhuri Dixit: ಟ್ರೆಂಡಿಂಗ್​ ಹಾಡಿಗೆ ಹೆಜ್ಜೆ ಹಾಕಿದ ಮಾಧುರಿ; ವೈರಲ್ ಆಯ್ತು ವಿಡಿಯೋ​
ಮಾಧುರಿ ದೀಕ್ಷಿತ್​
Follow us
TV9 Web
| Updated By: shivaprasad.hs

Updated on: May 26, 2022 | 9:03 AM

ಬಾಲಿವುಡ್​ನ ತಾರಾ ನಟಿ ಮಾಧುರಿ ದೀಕ್ಷಿತ್​ಗೆ (Madhuri Dixit) ಈಗ 55ರ ಪ್ರಾಯ. ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾದರೂ ಸಾಮಾಜಿಕ ಜಾಲತಾಣಗಳಲ್ಲಿ ಅವರು ಸಖತ್ ಸಕ್ರಿಯರಾಗಿರುತ್ತಾರೆ. ರೀಲ್ಸ್​ಗಳಲ್ಲಿ ಟ್ರೆಂಡ್​​ ಆಗಿರುವ ಹಾಡುಗಳಿಗೆ ಮಾಧುರಿ ಹೆಜ್ಜೆ ಹಾಕುತ್ತಾರೆ. ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಹೀಗೆ ಹಲವು ಚಟುವಟಿಕೆ ನಡೆಸುತ್ತಾ ಇನ್​ಸ್ಟಾಗ್ರಾಂನಲ್ಲಿ ಅವರು ಸಕ್ರಿಯರಾಗಿದ್ದಾರೆ. ಟ್ರೆಂಡಿಂಗ್ ಹಾಡುಗಳಿಗೆ ಮಾಧುರಿ ಹೆಜ್ಜೆ ಹಾಕುತ್ತಾರೆ. ನೋಡುಗರ ಮುಖದಲ್ಲಿ ಮಂದಹಾಸ ಮೂಡಿಸುವಂತಹ ಅವರ ವಿಡಿಯೋಗಳನ್ನು ಅಭಿಮಾನಿಗಳು ಮೆಚ್ಚುತ್ತಾರೆ. ಹೀಗಾಗಿಯೇ ಅವು ದೊಡ್ಡ ಮಟ್ಟದಲ್ಲಿ ವೀಕ್ಷಣೆಯನ್ನೂ ಪಡೆಯುತ್ತವೆ. ಇದೀಗ ಮಾಧುರಿ ಹೊಸ ವಿಡಿಯೋವೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ‘ಮೈ ಮನಿ ಡೋನ್ಟ್​​ ಜಿಗಲ್ ಜಿಗಲ್’ ಎಂಬ ಶೀರ್ಷಿಕೆಯ ಈ ಟ್ರೆಂಡಿಂಗ್​ ಹಾಡು ಸದ್ಯ ಸಖತ್ ಸದ್ದು ಮಾಡುತ್ತಿದೆ. ಇದಕ್ಕೆ ಮಾಧುರಿ ಹೆಜ್ಜೆ ಹಾಕಿದ್ದು ಹೇಗೆ? ನೀವೇ ನೋಡಿ.

ಮಾಧುರಿ ಹೆಜ್ಜೆ ಹಾಕಿರುವ ವಿಡಿಯೋ ಇಲ್ಲಿದೆ:​

ಇದನ್ನೂ ಓದಿ
Image
Nayanthara: ಮತ್ತಷ್ಟು ಜೋರಾಯ್ತು ನಯನತಾರಾ ಮದುವೆಯ ವಿಚಾರ; ಎಲ್ಲಕ್ಕೂ ಕಾರಣ ಆ ಒಂದು ಭೇಟಿ!
Image
ಒಟಿಟಿಗೆ ಲಗ್ಗೆ ಇಡುತ್ತಿದೆ ‘ಹೀರೋಪಂತಿ 2’; ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿಕೊಂಡ ಟೈಗರ್
Image
Keerthy Suresh: ಸಾಂಪ್ರದಾಯಿಕ ಗೆಟಪ್​ನಲ್ಲಿ ಅಭಿಮಾನಿಗಳ ಮನಗೆದ್ದ ಕೀರ್ತಿ ಸುರೇಶ್​
Image
Gujarat Titans: ಐಪಿಎಲ್​ 2022ರ ಮೊದಲ ಫೈನಲಿಸ್ಟ್ ‘ಗುಜರಾತ್ ಟೈಟನ್ಸ್’ ಆಟಗಾರರ ಪತ್ನಿಯರು ಇವರೇ ನೋಡಿ

‘ಮೈ ಮನಿ ಡೋನ್ಟ್​​ ಜಿಗಲ್ ಜಿಗಲ್’ ಈ ಹಾಡು ಟಿಕ್​ ಟಾಕ್​ನಲ್ಲಿ ಟ್ರೆಂಡ್ ಆಗಿತ್ತು. ಮಾತುಗಳನ್ನು ಸೇರಿಸಿ ಮಾಡಿದ ಈ ಹಾಡು ವೈರಲ್ ಆಗಿದ್ದು 2022ರ ಆರಂಭದಲ್ಲಿ. ಲೂಯಿಸ್ ಥೆರಾಕ್ಸ್​ ಇದನ್ನು ಸೃಷ್ಟಿಸಿದ್ದರು. ಈಗ ಅದು ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, ಸೆಲೆಬ್ರಿಟಿಗಳು ಕಾಲು ಕುಣಿಸುತ್ತಾ ಸಿಂಪಲ್​ ಸ್ಟೆಪ್​ಗಳ ಮೂಲಕ ರಂಜಿಸುತ್ತಿದ್ದಾರೆ​​.

ಇದನ್ನೂ ಓದಿ: Madhuri Dixit: ಮಾಧುರಿ ದೀಕ್ಷಿತ್ ಜನ್ಮದಿನ; 55ರ ಪ್ರಾಯದಲ್ಲೂ ಬೇಡಿಕೆ ಉಳಿಸಿಕೊಂಡ ನಟಿಯ ಆಸ್ತಿ ಮೌಲ್ಯ ಎಷ್ಟು?

ಮಾಧುರಿ ನೃತ್ಯದ ವಿಡಿಯೋ ಸುಮಾರು 2 ಮಿಲಿಯನ್ ವೀಕ್ಷಣೆ ಕಂಡಿದೆ. 2.14 ಲಕ್ಷಕ್ಕೂ ಅಧಿಕ ಜನ ಇಷ್ಟಪಟ್ಟಿದ್ದಾರೆ. ಮಾಧುರಿ ಅಭಿಮಾನಿಗಳು ವಿಡಿಯೋಗೆ ವಿಧವಿಧವಾಗಿ ಪ್ರತಿಕ್ರಿಯಿಸಿದ್ದು, ಓರ್ವರು ಇದು ಹೊಸ ಮಾಧುರಿ ದೀಕ್ಷಿತ್ ಎಂದು ಬರೆದಿದ್ದಾರೆ. ಬಹಳಷ್ಟು ಜನ ಅದ್ಭುತ ಎಂದು ಉದ್ಗರಿಸಿದ್ದಾರೆ.

ಮಾಧುರಿ ದೀಕ್ಷಿತ್ ಪ್ರಸ್ತುತ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷ ‘ದಿ ಫೇಮ್​ ಗೇಮ್’ ಮೂಲಕ ಅವರು ಒಟಿಟಿ ಪ್ರವೇಶಿಸಿದ್ದರು. ಇದೀಗ ‘ಮಜಾ ಮಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನು ಅಮೆಜಾನ್ ಪ್ರೈಮ್ ವಿಡಿಯೋ ನಿರ್ಮಾಣ ಮಾಡುತ್ತಿದೆ. ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ ‘ಮಜಾ ಮಾ’ದ ಸಲಿಂಗಕಾಮದ ಕತೆಯನ್ನು ಒಳಗೊಂಡಿದೆ. ವಿಚಾರ ಸೂಕ್ಷ್ಮವಾಗಿದ್ದು ಅದನ್ನು ಸೂಕ್ತ ರೀತಿಯಲ್ಲಿ ತೆರೆ ಮೇಲೆ ಕಟ್ಟಿಕೊಡುವ ಭರವಸೆ ಸಿಕ್ಕ ಮೇಲೆ ಮಾಧುರಿ ಅಂತಹ ಪಾತ್ರವನ್ನು ನಿರ್ವಹಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ