Vivek Agnihotri: ಹೊಸ ಅಪಾರ್ಟ್‌ಮೆಂಟ್ ಖರೀದಿಸಿದ ವಿವೇಕ್ ಅಗ್ನಿಹೋತ್ರಿ? ತಮ್ಮದೇ ಸ್ಟೈಲ್ನಲ್ಲಿ ಉತ್ತರ ಕೊಟ್ಟ ನಿರ್ದೇಶಕ
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಯಶಸ್ವಿಯಾದ ಬಳಿಕ ವಿವೇಕ್ ಅಗ್ನಿಹೋತ್ರಿ ಅವರು 17.9 ಕೋಟಿ ರೂ. ಮೌಲ್ಯದ ಬೆಲೆಬಾಳುವ ಬಂಗಲೆಯನ್ನು ಖರೀದಿಸಿದ್ದಾರೆ ಎಂಬ ವದಂತಿಗೆ ಖಡ
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ’ (The Kashmir Files) ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಯಾವುದೇ ವಿಚಾರ ಮತ್ತು ಇತರರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಎಂದಿಗೂ ಹಿಂಜರಿಯುವುದಿಲ್ಲ. ಇತ್ತೀಚಿನ ದಿನಗಳಲ್ಲಿ ವಿವೇಕ್ ಅಗ್ನಿಹೋತ್ರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಇಸ್ರೇಲ್ ನಿರ್ದೇಶಕ ನಡಾವ್ ಲಪಿಡ್ ಅವರು ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಚಿತ್ರದ ಬಗ್ಗೆ ಅಪಸ್ವರ ತೆಗೆದಿದ್ದರು. ಈ ವಿಚಾರ ಎಲ್ಲೆಡೆ ಚರ್ಚೆಗೂ ಗ್ರಾಸವಾಗಿತ್ತು. ಇದಕ್ಕೆ ವಿವೇಕ್ ಅಗ್ನಿಹೋತ್ರಿ ಅವರು ಯಾವುದೇ ಮುಲಾಜಿಲ್ಲದೇ ಪ್ರತಿಕ್ರಿಯೆ ನೀಡಿದ್ದರು. ಚಿತ್ರದಲ್ಲಿನ ಯಾವುದೇ ಒಂದು ದೃಶ್ಯ ನಕಲಿ ಎಂದು ಸಾಬೀತಾದ್ರೆ ಸಿನಿಮಾ ಮಾಡುವುದನ್ನೇ ಬಿಟ್ಟು ಬಿಡುತ್ತೇನೆ ಎಂದು ಅವರು ಸವಾಲು ಹಾಕಿದ್ದರು. ಆದರೆ ಈಗ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಬೇರೆಯದ್ದೇ ವಿಷಯಕ್ಕೆ ಸುದ್ದಿಯಾಗಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರ ಈ ಹೇಳಿಕೆ ವ್ಯಾಪಕವಾಗಿ ಎಲ್ಲೆಡೆ ಹರಡಿತ್ತು. ಬಳಿಕ ನಡಾವ್ ಲಪಿಡ್ ಅವರು, ‘ನನ್ನ ಹೇಳಿಕೆಯಿಂದ ನಿಮ್ಮ ಭಾವನೆಗಳಿಗೆ ನೋವುಂಟು ಆಗಿದ್ದರೆ ಕ್ಷಮೆಯಾಚಿಸುತ್ತೇನೆ’ ಎಂದು ಹೇಳಿದ್ದರು. ಈ ಘಟನೆಯಾಗಿ ಕೆಲವು ದಿನಗಳು ಕಳೆದಿವೆಯಷ್ಟೇ. ಈಗ ವಿವೇಕ್ ಅಗ್ನಿಹೋತ್ರಿ ಅವರು ಮತ್ತೆ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಅದ್ಭುತ ಸಿನಿಮಾ ಎಂದು ಹಲವರು ಭಾವಿಸಿದ್ದಾರೆ, ಅದನ್ನು ನಾನು ಒಪ್ಪುವೆ: ನಾದವ್ ಲ್ಯಾಪಿಡ್
‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಯಶಸ್ವಿಯಾದ ಬಳಿಕ ವಿವೇಕ್ ಅಗ್ನಿಹೋತ್ರಿ ಅವರು 17.9 ಕೋಟಿ ರೂ. ಮೌಲ್ಯದ ಬೆಲೆಬಾಳುವ ಬಂಗಲೆಯನ್ನು ಖರೀದಿಸಿದ್ದಾರೆ. ಐಷಾರಾಮಿ ಪೀಠೋಪಕರಣಗಳನ್ನು ಹೊಂದಿರುವ ಹೊಸ ಅಪಾರ್ಟ್ಮೆಂಟ್ನ ಖರೀದಿಸಿದ್ದಾರೆ’ ಎಂದು ಸುದ್ದಿ ವೆಬ್ಸೈಟ್ ಒಂದು ವರದಿ ಮಾಡಿತ್ತು. ಇದನ್ನು ಗಮನಿಸಿದ ವಿವೇಕ್ ಅಗ್ನಿಹೋತ್ರಿ ಅವರು ಟ್ವೀಟ್ ಮಾಡುವ ಮೂಲಕ ಖಡಕ್ ಆಗಿ ಉತ್ತರ ನೀಡಿದ್ದಾರೆ.
I am really grateful to all the Congressis, AAPiyas and unemployed Bollywoodiyas for building new apartments for me everyday and also for furnishing them with luxury furniture. I really liked the sofa which came from 10 Janpath.
Thank you everyone. Thank you @ikaveri ji. pic.twitter.com/F15h9EysA5
— Vivek Ranjan Agnihotri (@vivekagnihotri) December 3, 2022
ವಿವೇಕ್ ಅಗ್ನಿಹೋತ್ರಿ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, ‘ನನಗಾಗಿ ಪ್ರತಿದಿನ ಹೊಸ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿದ್ದಕ್ಕೆ ಮತ್ತು ಐಷಾರಾಮಿ ಪೀಠೋಪಕರಣಗಳನ್ನು ಒದಗಿಸಿದ್ದಕ್ಕಾಗಿ ನಾನು ಎಲ್ಲಾ ಕಾಂಗ್ರೆಸ್ಸಿಗರಿಗೆ, ಆಪಿಯಾಸ್ ಮತ್ತು ಬಾಲಿವುಡ್ನ ಕೆಲ ನಿರುದ್ಯೋಗಿ ಜನರಿಗೆ ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಜನಪಥ್‌ನಿಂದ ಬಂದ ಹತ್ತು ಸೋಫಾ ನನಗೆ ತುಂಬಾ ಇಷ್ಟವಾಯಿತು. ಎಲ್ಲರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತಮ್ಮ ಬಗ್ಗೆ ಹಬ್ಬಿದ್ದ ವಂದತಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:50 pm, Sat, 3 December 22