ದಿ ಕಾಶ್ಮೀರ್ ಫೈಲ್ಸ್ ಅದ್ಭುತ ಸಿನಿಮಾ ಎಂದು ಹಲವರು ಭಾವಿಸಿದ್ದಾರೆ, ಅದನ್ನು ನಾನು ಒಪ್ಪುವೆ: ನಾದವ್ ಲ್ಯಾಪಿಡ್
ಪ್ರಚಾರದ ಕುರಿತು ಹೇಳುವುದಾದರೆ ಪ್ರಚಾರವನ್ನು ಯಾರೂ ನಿರ್ಧರಿಸಲು ಸಾಧ್ಯವಿಲ್ಲ, ಇದು ಅದ್ಭುತ ಸಿನಿಮಾ ಎಂದು ಹಲವರು ಹೇಳಿದ್ದು ನಾನು ಈ ಸತ್ಯವನ್ನು ಒಪ್ಪಿಕೊಳ್ಳುತ್ತೇನೆ, ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ
ದಿ ಕಾಶ್ಮೀರ್ ಫೈಲ್ಸ್ (The Kashmir Files)ಚಿತ್ರವನ್ನು ವಲ್ಗರ್ (ಅಸಭ್ಯ) ಎಂದು ಟೀಕಿಸಿದ್ದ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ (Nadav Lapid) ಈಗ, ಅದೊಂದು ‘ಅದ್ಭುತ ಸಿನಿಮಾ’ ಎಂದು ಹೇಳುವುದನ್ನು ನಾನು ಗೌರವಿಸುತ್ತೇನೆ ಎಂದಿದ್ದಾರೆ. ಆದರೆ ‘ಪ್ರಚಾರ ಏನು ಎಂಬುದನ್ನು ಯಾರೂ ನಿರ್ಧರಿಸಲು ಸಾಧ್ಯವಿಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ. ಅಂದಹಾಗೆ ಸೋಮವಾರ ನಡೆದ ಭಾರತದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಚಿತ್ರದ ಬಗ್ಗೆ ಅವರು ನೀಡಿದ ಹೇಳಿಕೆಯಿಂದ ಅವರು ಹಿಂದೆ ಸರಿದಿಲ್ಲ.ಗೋವಾದಲ್ಲಿ ಸರ್ಕಾರ ಆಯೋಜಿಸಿದ್ದ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ನೇತೃತ್ವ ವಹಿಸಿದ್ದ ನಾದವ್ ಲ್ಯಾಪಿಡ್, ಕಾಶ್ಮೀರ್ ಫೈಲ್ಸ್ “ಪ್ರಚಾರದ ಚಲನಚಿತ್ರ” (propaganda movie) ಎಂದು ಹೇಳಿದ್ದರು. ಈ ಸಿನಿಮಾ ಚಲನಚಿತ್ರೋತ್ಸವದಲ್ಲಿರಬಾರದಿತ್ತು ಎಂದು ಲ್ಯಾಪಿಡ್ ಹೇಳಿದ್ದು ಭಾರೀ ಆಕ್ರೋಶವನ್ನುಂಟು ಮಾಡಿತ್ತು. ಇದೀಗ ಇಂಡಿಯಾ ಟುಡೇ ಜತೆ ಮಾತನಾಡಿದ ಲ್ಯಾಪಿಡ್, “ಪ್ರಚಾರದ ಕುರಿತು ಹೇಳುವುದಾದರೆ ಪ್ರಚಾರವನ್ನು ಯಾರೂ ನಿರ್ಧರಿಸಲು ಸಾಧ್ಯವಿಲ್ಲ, ಇದು ಅದ್ಭುತ ಸಿನಿಮಾ ಎಂದು ಹಲವರು ಹೇಳಿದ್ದು ನಾನು ಈ ಸತ್ಯವನ್ನು ಒಪ್ಪಿಕೊಳ್ಳುತ್ತೇನೆ, ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ನಾನು ನೋಡಿದ್ದನ್ನು ನಾನು ಹೇಳಿದ್ದೇನೆ. ಇದು ತುಂಬಾ ವಸ್ತುನಿಷ್ಠ ರೀತಿಯಾಗಿತ್ತು, ಆದಾಗ್ಯೂ,ತಮ್ಮ ಹೇಳಿಕೆ ಮೇಲಿನ ಆಕ್ರೋಶ ಜನರನ್ನು ಪ್ರಚೋದಿಸುವ ಸಲುವಾಗಿ ಮಾಡಿದ ಅಗ್ಗದ ಉಪಾಯ ಆಗಿತ್ತು. ಇತರ ತೀರ್ಪುಗಾರರ ಸದಸ್ಯರದ್ದೂ ಅದೇ ಅಭಿಪ್ರಾಯವಾಗಿತ್ತು. ಆದರೆ ಅವರು ಬಹಿರಂಗವಾಗಿ ಮಾತನಾಡಲಿಲ್ಲ ಎಂದಿದ್ದಾರೆ ಲ್ಯಾಪಿಡ್.
ವಿವೇಕ್ ಅಗ್ನಿಹೋತ್ರಿ ಚಿತ್ರಕತೆ, ನಿರ್ದೇಶನ ಮತ್ತು ಝೀ ಸ್ಟುಡಿಯೋಸ್ ನಿರ್ಮಿಸಿದ ದಿ ಕಾಶ್ಮೀರ್ ಫೈಲ್ಸ್ ಬಿಡುಗಡೆಯಾದಾಗ ವಿಮರ್ಶಕರು ಮತ್ತು ಲೇಖಕರು ಈ ಸಿನಿಮಾ ಬಗ್ಗೆ ಟೀಕೆ ಮಾಡಿದ್ದರು. ಆದರೆ ಈ ಸಿನಿಮಾ ₹ 330 ಕೋಟಿಗೂ ಹೆಚ್ಚು ಹಣವನ್ನು ಗಳಿಸುವ ಮೂಲಕ ಬಾಕ್ಸ್ ಆಫೀಸಿನಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿತ್ತು. ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಗುಜರಾತ್ ಸೇರಿದಂತೆ ಹಲವು ಬಿಜೆಪಿ ಆಡಳಿತದ ರಾಜ್ಯಗಳು ಮನರಂಜನಾ ತೆರಿಗೆಯಿಂದ ವಿನಾಯಿತಿ ನೀಡಿದ ನಂತರ ಚಲನಚಿತ್ರವು ರಾಜಕೀಯ ಪಕ್ಷಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿತು.
ನಾದವ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿವೇಕ್, ದಿ ಕಾಶ್ಮೀರ್ ಫೈಲ್ಸ್ ನ ಯಾವುದೇ ಶಾಟ್, ಸಂಭಾಷಣೆ ಅಥವಾ ಘಟನೆಯು ಸಂಪೂರ್ಣ ಸತ್ಯವಲ್ಲ ಎಂದು ಸಾಬೀತುಪಡಿಸಿದರೆ ನಾನು ಸಿನಿಮಾ ಮಾಡುವುದನ್ನು ನಿಲ್ಲಿಸುತ್ತೇನೆ ಎಂದು ನಾನು ವಿಶ್ವದ ಬುದ್ಧಿಜೀವಿಗಳು, ನಗರ ನಕ್ಸಲರು ಮತ್ತು ಇಸ್ರೇಲ್‌ನಿಂದ ಬಂದ ಮಹಾನ್ ಚಲನಚಿತ್ರ ನಿರ್ಮಾಪಕರಿಗೆ ಸವಾಲು ಹಾಕುತ್ತೇನೆ. ನಾನು ಹಿಂದೆ ಸರಿಯುವವನಲ್ಲ. ನಿಮಗೆ ಬೇಕಾದಷ್ಟು ಫತ್ವಾಗಳನ್ನು ನೀಡಿ, ಆದರೆ ನಾನು ಹೋರಾಡುತ್ತಲೇ ಇರುತ್ತೇನೆ ಎಂದಿದ್ದಾರೆ.
ಭಾರತ, ಶ್ರೀಲಂಕಾ ಮತ್ತು ಭೂತಾನ್‌ಗೆ ಇಸ್ರೇಲ್‌ನ ರಾಯಭಾರಿ ನೌರ್ ಗಿಲೋನ್ ಅವರು ನಾದವ್ ಅವರ ಹೇಳಿಕೆಗಳಿಗೆ ಟ್ವಿಟರ್‌ನಲ್ಲಿ ಕ್ಷಮೆಯಾಚಿಸಿದ್ದಾರೆ. “ಮನುಷ್ಯನಾಗಿ ನಾನು ನಾಚಿಕೆಪಡುತ್ತೇನೆ.ನಮ್ಮ ಆತಿಥೇಯರ ಉದಾರತೆ ಮತ್ತು ಸ್ನೇಹಕ್ಕಾಗಿ ನಾವು ಮರುಪಾವತಿ ಮಾಡಿದ ಕೆಟ್ಟ ವಿಧಾನಕ್ಕಾಗಿ ಕ್ಷಮೆಯಾಚಿಸಲು ಬಯಸುತ್ತೇನೆ” ಎಂದು ಹೇಳಿದ್ದಾರೆ.
ವಿವಾದ ಬಗ್ಗೆ ನಾದವ್ ಹೇಳಿದ್ದೇನು?
53ನೇ ಐಎಫ್‌ಎಫ್‌ಐನಲ್ಲಿ ಮಾತನಾಡುತ್ತಾ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ ದಿ ಕಾಶ್ಮೀರ್ ಫೈಲ್ಸ್ ಅನ್ನು ‘ಅಶ್ಲೀಲ’ ಚಿತ್ರ ಎಂದು ಕರೆದಿದ್ದಾರೆ. ಈ ಸಿನಿಮಾ ‘ಪ್ರಚಾರ’ ಎಂದು ಹೇಳಿದ ಅವರು ತೀರ್ಪುಗಾರರ ಪರವಾಗಿ ಮಾತನಾಡಿದ್ದೇನೆ ಎಂದು ಹೇಳಿದರು. ಲ್ಯಾಪಿಡ್ ಅವರ ಹೇಳಿಕೆಗೆ ಭಾರೀ ಆಕ್ರೋಶವುಂಟಾಗಿದ್ದು ಇಂಡಿಯಾ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಶಿಂಡ್ಲರ್ಸ್ ಲಿಸ್ಟ್ ಅನ್ನು ‘ಪ್ರಚಾರ’ ಚಿತ್ರವೆಂದು ಪರಿಗಣಿಸುತ್ತೀರಾ ಎಂದು ಅವರಲ್ಲಿ ಕೇಳಲಾಗಿದೆ. ನೀವು ಚಲನಚಿತ್ರ ನಿರ್ಮಾಪಕರಾಗಿರುವುದರಿಂದ, ಇದನ್ನು ಕೇಳುವ ಮೂಲಕ ನಾನು ನಿಮಗೆ ಸವಾಲು ಹಾಕುತ್ತೇನೆ. ಶಿಂಡ್ಲರ್ಸ್ ಲಿಸ್ಟ್ ಪ್ರಚಾರವೇ? ಯಾರು ನಿರ್ಧರಿಸುತ್ತಾರೆ? ಇದು ನಿರ್ದಿಷ್ಟ ದೃಷ್ಟಿಕೋನದಿಂದ ಮಾಡಲ್ಪಟ್ಟಿದೆ. ಫೌಡಾ (ಇಸ್ರೇಲಿ ದೂರದರ್ಶನ ಸರಣಿ) ಪ್ರಚಾರವೇ? ಫೌಡಾ ಅದು ಪ್ರಚಾರವೇ? ಯಾರು ನಿರ್ಧರಿಸುತ್ತಾರೆ? ಇದು ಒಂದು ನಿರ್ದಿಷ್ಟ ಸಮುದಾಯಕ್ಕಾಗಿ ಒಂದು ನಿರ್ದಿಷ್ಟ ದೃಷ್ಟಿಕೋನಕ್ಕಾಗಿ ಮಾಡಲ್ಪಟ್ಟಿದೆ. ಆ ಸಮುದಾಯದಲ್ಲಿ ಮಾತ್ರವಲ್ಲ, ಹೊರಗಿನ ಜನರು ಫೌಡಾ, ಕಾಶ್ಮೀರ ಫೈಲ್ಸ್ ಮತ್ತು ಶಿಂಡ್ಲರ್ಸ್ ಲಿಸ್ಟ್ ವೀಕ್ಷಿಸಿದ್ದಾರೆ. ನಿಜವಾಗಿಯೂ ಅದು ನೋಡುವಂತದ್ದು ಎಂದಿದ್ದಾರೆ. ಹಾಗಾದರೆ, ಇದೆಲ್ಲ ಪ್ರಚಾರವೇ ಎಂದು ಕೇಳಿದಾಗ,ಅದು ಏನೆಂಬುದನ್ನು ನಿರ್ಧರಿಸಲು ಯಾವುದೇ ಮಾನದಂಡವಿಲ್ಲ ಎಂದು ಅವರು ಹೇಳಿದರು.
“ಪ್ರಚಾರ ಏನೆಂದು ಯಾರೂ ನಿರ್ಧರಿಸಲು ಸಾಧ್ಯವಿಲ್ಲ, ಶಿಂಡ್ಲರ್ಸ್ ಲಿಸ್ಟ್ ಒಂದು ಪ್ರಚಾರದ ಚಿತ್ರ ಎಂದು ಒಬ್ಬರು ಭಾವಿಸಬಹುದು. ಅನೇಕ ಜನರು ಈ ಚಲನಚಿತ್ರವನ್ನು ಇಷ್ಟಪಟ್ಟಿದ್ದಾರೆ ಅಥವಾ ಇದು ಅದ್ಭುತ ಚಲನಚಿತ್ರವೆಂದು ಭಾವಿಸುತ್ತಾರೆ ಎಂಬ ಅಂಶವನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ ಮತ್ತು ಸ್ವೀಕರಿಸುತ್ತೇನೆ. ಹಾಗೆಯೇ ಜನರು ಭಯಾನಕವೆಂದು ಭಾವಿಸುವ ಸತ್ಯವನ್ನು ನಾನು ಗೌರವಿಸುತ್ತೇನೆ. ನಾನು ನೋಡುವುದನ್ನು ಹೇಳುವುದು ನನ್ನ ಕರ್ತವ್ಯವಾಗಿದೆ. ಇದು ತುಂಬಾ ವ್ಯಕ್ತಿನಿಷ್ಠ ಮಾರ್ಗವಾಗಿದೆ ಎಂದು ಅವರು ಹೇಳಿದ್ದಾರೆ.
Published On - 9:05 pm, Wed, 30 November 22