Kriti Sanon: ‘ಇನ್ಯಾರೋ ನನ್ನ ಮದುವೆ ಡೇಟ್​ ತಿಳಿಸುವ ಮುನ್ನ..’: ಪ್ರಭಾಸ್​ ಜತೆಗಿನ ಲವ್​ ಸುದ್ದಿಗೆ ಕೃತಿ ಸ್ಪಷ್ಟನೆ

Kriti Sanon | Prabhas: ವರುಣ್​ ಧವನ್​ ಆಡಿದ ಮಾತುಗಳು ಪ್ರಚಾರದ ಗಿಮಿಕ್​ ಆಗಿರಲಿಲ್ಲ ಎಂದು ಕೃತಿ ಸನೋನ್​ ಹೇಳಿದ್ದಾರೆ. ಪ್ರಭಾಸ್​ ಕುರಿತ ವದಂತಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.

Kriti Sanon: ‘ಇನ್ಯಾರೋ ನನ್ನ ಮದುವೆ ಡೇಟ್​ ತಿಳಿಸುವ ಮುನ್ನ..’: ಪ್ರಭಾಸ್​ ಜತೆಗಿನ ಲವ್​ ಸುದ್ದಿಗೆ ಕೃತಿ ಸ್ಪಷ್ಟನೆ
ಕೃತಿ ಸನೋನ್, ಪ್ರಭಾಸ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 30, 2022 | 9:51 AM

ಬಣ್ಣದ ಲೋಕದಲ್ಲಿ ಯಾರಿಗೆ, ಯಾವಾಗ, ಯಾರ ಮೇಲೆ ಲವ್​ ಆಗುತ್ತೆ ಅನ್ನೋದನ್ನು ಹೇಳೋಕಾಗಲ್ಲ. ನಟಿ ಕೃತಿ ಸನೋನ್​ ಅವರು ಪ್ರಭಾಸ್​ (Prabhas) ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಅನುಮಾನ ಇತ್ತೀಚೆಗೆ ಬಲವಾಗಿತ್ತು. ಇವರಿಬ್ಬರು ‘ಆದಿಪುರುಷ್​’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಒಂದು ರಿಯಾಲಿಟಿ ಶೋ ವೇದಿಕೆಯಲ್ಲಿ ಬಾಲಿವುಡ್​ ನಟ ವರುಣ್​ ಧವನ್​ (Varun Dhawan) ಅವರು ಕೃತಿ ಸನೋನ್​ ಮತ್ತು ಪ್ರಭಾಸ್​ ನಡುವಿನ ಲವ್​ ಲೈಫ್​ ಬಗ್ಗೆ ಸುಳಿವು ನೀಡಿದ್ದರು. ಆ ವೇಳೆ ಕೃತಿ ಸನೋನ್​ ಮುಖ ಅರಳಿತ್ತು. ಈ ಘಟನೆ ನಡೆದ ಬಳಿಕ ಹಲವು ಬಗೆಯ ವರದಿಗಳು ಪ್ರಕಟ ಆದವು. ಈಗ ಅವುಗಳಿಗೆಲ್ಲ ಕೃತಿ ಸನೋನ್​ (Kriti Sanon) ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲು ಅವರು ಪ್ರಯತ್ನಿಸಿದ್ದಾರೆ.

‘ಅದು ಪ್ರೀತಿ ಅಲ್ಲ. ಪ್ರಚಾರದ ಗಿಮಿಕ್ ಕೂಡ ಅಲ್ಲ. ರಿಯಾಲಿಟಿ ಶೋನಲ್ಲಿ ವರುಣ್​ ಧವನ್​ ಸ್ವಲ್ಪ ವೈಲ್ಡ್​ ಆಗಿ ನಡೆದುಕೊಂಡರು ಅಷ್ಟೇ. ತಮಾಷೆಗೆ ಆಡಿದ ಮಾತಿನಿಂದ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ. ಬೇರೆ ಯಾವುದೋ ಮಾಧ್ಯಮದವರು ನನ್ನ ಮದುವೆ ಡೇಟ್ ಅನೌನ್ಸ್​ ಮಾಡುವ ಮುನ್ನ ನಾನೇ ಆ ಭ್ರಮೆಯನ್ನು ಹೊಡೆದುಹಾಕುತ್ತೇನೆ. ಎಲ್ಲ ವದಂತಿಗಳು ಆಧಾರರಹಿತವಾಗಿವೆ’ ಎಂದು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಕೃತಿ ಸನೋನ್​ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ರಿಯಾಲಿಟಿ ಶೋವೊಂದರಲ್ಲಿ ವರುಣ್​ ಧವನ್​ ಅವರು ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಕೃತಿ ಸನೋನ್​ ಕೂಡ ಇದ್ದರು. ಕರಣ್​ ಜೋಹರ್​ ಕೇಳಿದ ಒಂದು ಪ್ರಶ್ನೆಗೆ ಉತ್ತರಿಸುವಾಗ ನಾಯಕಿಯರ ಪಟ್ಟಿ ಮಾಡಿದ ವರುಣ್​ ಧವನ್​ ಅವರು ಕೃತಿ ಸನೋನ್​ ಹೆಸರನ್ನು ಕೈ ಬಿಟ್ಟಿದ್ದರು. ಯಾಕೆ ಎಂದು ಪ್ರಶ್ನಿಸಿದಾಗ ವರುಣ್​ ಧವನ್​ ಹೊಸ ವಿಷಯ ಬಾಯ್ಬಿಟ್ಟಿದ್ದರು.

ಇದನ್ನೂ ಓದಿ
Image
Adipurush: ಪ್ರಭಾಸ್​ ಫ್ಯಾನ್ಸ್​ ಮನ ಗೆದ್ದ ‘ಆದಿಪುರುಷ್​’ ಟೀಸರ್​; ಇಲ್ಲಿದೆ ರಾಮ-ರಾವಣರ ಮುಖಾಮುಖಿ
Image
Adipurush Teaser: ‘ಆದಿಪುರುಷ್​’ ಟೀಸರ್​ ಬಿಡುಗಡೆ; ಅಯೋಧ್ಯೆಯಲ್ಲಿ ರಾಮನಾಗಿ ದರ್ಶನ ನೀಡಿದ ಪ್ರಭಾಸ್​
Image
Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್​; ‘ಸಲಾರ್​’ ಶೂಟಿಂಗ್​ ಮತ್ತೆ ಶುರು
Image
Prabhas: ದೊಡ್ಡಪ್ಪನ ಅಂತ್ಯ ಸಂಸ್ಕಾರಕ್ಕೆ ಬಂದ ಫ್ಯಾನ್ಸ್​ಗೆ ಊಟದ ವ್ಯವಸ್ಥೆ ಮಾಡಿಸಿ ಕಾಳಜಿ ತೋರಿದ ಪ್ರಭಾಸ್​

ವರುಣ್​ ಧವನ್​ ಹೇಳಿದ್ದೇನು?

‘ಈ ಪಟ್ಟಿಯಲ್ಲಿ ಕೃತಿ ಸನೋನ್​ ಹೆಸರು ಇಲ್ಲ. ಯಾಕೆಂದರೆ ಅವರ ಹೆಸರು ಬೇರೆ ವ್ಯಕ್ತಿಯ ಹೃದಯದಲ್ಲಿದೆ. ಅವರು ಈಗ ಮುಂಬೈನಲ್ಲಿ ಇಲ್ಲ. ಈಗ ದೀಪಿಕಾ ಪಡುಕೋಣೆ ಜೊತೆ ಶೂಟಿಂಗ್​ ಮಾಡುತ್ತಿದ್ದಾರೆ’ ಎಂದು ವರುಣ್​ ಧವನ್​ ಹೇಳಿದ್ದ ವಿಡಿಯೋ ವೈರಲ್​ ಆಗಿದೆ. ‘ಪ್ರಾಜೆಕ್ಟ್​ ಕೆ’ ಸಿನಿಮಾಗಾಗಿ ಪ್ರಭಾಸ್​ ಅವರು ದೀಪಿಕಾ ಜೊತೆ ಶೂಟಿಂಗ್​ ಮಾಡುತ್ತಿದ್ದಾರೆ. ಹಾಗಾಗಿ ವರುಣ್​ ಧವನ್​ ಹೇಳಿದ್ದು ಪ್ರಭಾಸ್​ ಬಗ್ಗೆಯೇ ಎಂದು ಎಲ್ಲರೂ ಊಹಿಸುತ್ತಿದ್ದಾರೆ. ವದಂತಿ ಹೆಚ್ಚಾಗುವುದಕ್ಕೂ ಮುನ್ನವೇ ಕೃತಿ ಸನೋನ್​ ಅವರು ಸ್ಪಷ್ಟನೆ ನೀಡಿ, ಎಲ್ಲರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ