‘ಕಾಂತಾರ’ ಚಿತ್ರದ ಬಗ್ಗೆ ಅಪಸ್ವರ ತೆಗೆದ ಹಿಂದಿ ನಿರ್ಮಾಪಕ; ಫ್ಯಾನ್ಸ್ ಕೊಟ್ರು ಖಡಕ್ ಉತ್ತರ

ಅನೇಕರು ‘ಕಾಂತಾರ’ ಚಿತ್ರವನ್ನು ‘ತುಂಬಾಡ್​’ ಚಿತ್ರಕ್ಕೆ ಹೋಲಿಕೆ ಮಾಡಿದ್ದರು. ‘ತುಂಬಾಡ್​’ನ ಚಿತ್ರಕಥೆ ಬರಹಗಾರ ಹಾಗೂ ನಿರ್ಮಾಪಕರಲ್ಲಿ ಒಬ್ಬರಾದ ಆನಂದ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಕಾಂತಾರ’ ಚಿತ್ರದ ಬಗ್ಗೆ ಅಪಸ್ವರ ತೆಗೆದ ಹಿಂದಿ ನಿರ್ಮಾಪಕ; ಫ್ಯಾನ್ಸ್ ಕೊಟ್ರು ಖಡಕ್ ಉತ್ತರ
ಕಾಂತಾರ-ತುಂಬಾಡ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 03, 2022 | 5:02 PM

‘ಕಾಂತಾರ’ ಸಿನಿಮಾ (Kantara Movie) ರಿಲೀಸ್ ಆಗಿ ಎರಡು ತಿಂಗಳು ಕಳೆದರೂ ಈ ಚಿತ್ರದ ಬಗೆಗಿನ ಚರ್ಚೆ ಕಡಿಮೆ ಆಗಿಲ್ಲ. ಸಿನಿಮಾ ಒಟಿಟಿಯಲ್ಲಿ ಬಂದ ಹೊರತಾಗಿಯೂ ಅನೇಕ ಚಿತ್ರಮಂದಿರಗಳಲ್ಲಿ ಈ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ಮಂದಿ ಕೂಡ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈಗ ಈ ಸಿನಿಮಾ ಬಗ್ಗೆ ಬಾಲಿವುಡ್ ನಿರ್ಮಾಪಕ ಆನಂದ್ ಗಾಂಧಿ (Anand Gandhi) ಅಪಸ್ವರ ತೆಗೆದಿದ್ದಾರೆ. ಅವರ ನಿರ್ಮಾಣದ ‘ತುಂಬಾಡ್​’ ಚಿತ್ರವನ್ನು ಹೊಗಳಿರುವ ಅವರು, ‘ಕಾಂತಾರ’ ಚಿತ್ರವನ್ನು ತೆಗಳಿದ್ದಾರೆ. ಆನಂದ್ ಗಾಂಧಿಗೆ ‘ಕಾಂತಾರ’ ಸಿನಿಮಾ ನೋಡಿ ಅಭಿಮಾನಿಗಳಾದವರು ಕ್ಲಾಸ್ ತೆಗೆದುಕೊಂಡಿದ್ದಾರೆ.

2018ರಲ್ಲಿ ‘ತುಂಬಾಡ್​’ ಸಿನಿಮಾ ತೆರೆಗೆ ಬಂತು. ಹಾರರ್​ ಶೈಲಿಯಲ್ಲಿ ಮೂಡಿಬಂದ ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರಕ್ಕೆ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿತ್ತು. ಈ ಸಿನಿಮಾವನ್ನು ಅನೇಕರು ಈಗಲೂ ಇಷ್ಟಪಡುತ್ತಾರೆ. ಅನೇಕರು ‘ಕಾಂತಾರ’ ಚಿತ್ರವನ್ನು ‘ತುಂಬಾಡ್​’ ಚಿತ್ರಕ್ಕೆ ಹೋಲಿಕೆ ಮಾಡಿದ್ದರು. ‘ತುಂಬಾಡ್​’ನ ಚಿತ್ರಕಥೆ ಬರಹಗಾರ ಹಾಗೂ ನಿರ್ಮಾಪಕರಲ್ಲಿ ಒಬ್ಬರಾದ ಆನಂದ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಕಾಂತಾರ ಚಿತ್ರ ತುಂಬಾಡ್​ನಂತಲ್ಲ. ಸಂಕುಚಿತತೆ ಹಾಗೂ ಪುರಷತ್ವ ಸಂಕೇತವನ್ನು ಖಂಡಿಸುವ ರೀತಿಯಲ್ಲಿ ತುಂಬಾಡ್ ಇತ್ತು. ಆದರೆ, ಕಾಂತಾರ ಚಿತ್ರ ಅದನ್ನು ವೈಭವೀಕರಿಸುವಂತಿದೆ’ ಎಂದು ಹೇಳಿದ್ದಾರೆ ಆನಂದ್.  ಇದಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ಆನಂದ್ ಗಾಂಧಿಗೆ ಬುದ್ಧಿವಾದ ಹೇಳುವ ಕೆಲಸ ಆಗಿದೆ.

ಇದನ್ನೂ ಓದಿ: Varaha Roopam Song: ಮತ್ತೆ ಯೂಟ್ಯೂಬ್​ಗೆ ಮರಳಿದ ‘ವರಾಹ ರೂಪಂ‌’ ಹಾಡು: ಕಾನೂನು ಹೋರಾಟದಲ್ಲಿ ‘ಕಾಂತಾರ’ ಚಿತ್ರಕ್ಕೆ ಗೆಲುವು

‘ಕಾಂತಾರ ಸಿನಿಮಾ ವ್ಯಭಿಚಾರದಿಂದ ಜ್ಞಾನೋದಯದ ಕಡೆಗೆ ಪ್ರಯಾಣ ಬೆಳೆಸುವುದನ್ನು ಚಿತ್ರಿಸುತ್ತದೆ. ಸ್ಥಳೀಯತೆಯನ್ನು ಸಿನಿಮಾದಲ್ಲಿ ಹೆಚ್ಚಾಗಿ ತೋರಿಸಲಾಗಿದೆ. ತುಂಬಾಡ್ ಇದಕ್ಕೆ ವಿರುದ್ಧವಾಗಿದೆ. ನೀವು ಹೇಳಿದ್ದು ಸರಿ. ಕಾಂತಾರ ತುಂಬಾಡ್​ನಂತಲ್ಲ’ ಎಂದು ಅಭಿಮಾನಿಯೋರ್ವ ಕಮೆಂಟ್ ಮಾಡಿದ್ದಾನೆ. ‘ಚಿತ್ರದ ಕಥಾವಸ್ತುವು ಅಂತಹುದ್ದಾಗಿದೆ. ಅದು ಪಾತ್ರಕ್ಕೆ ಅಗತ್ಯವಾಗಿತ್ತು. ಕಥಾ ನಾಯಕನನ್ನು ಸೌಮ್ಯವಾಗಿ ತೋರಿಸಲು ಸಾಧ್ಯವಿರಲಿಲ್ಲ’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ