ಸಲಿಂಗಕಾಮಿ ಪಾತ್ರದಲ್ಲಿ ಮಾಧುರಿ ದೀಕ್ಷಿತ್​? ಹೊರಬಿತ್ತು ಫ್ಯಾನ್ಸ್​ ಅಚ್ಚರಿಪಡುವಂತಹ ಬ್ರೇಕಿಂಗ್​ ನ್ಯೂಸ್​

Madhuri Dixit | Maja Maa: ಮಾಧುರಿ ದೀಕ್ಷಿತ್​ ಅವರು ಚಾಲೆಂಜಿಂಗ್​ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಮಜಾ ಮಾ’ ಸಿನಿಮಾದಲ್ಲಿ ಅವರಿಗೆ ಅಂಥದ್ದೊಂದು ಸವಾಲಿನ ಪಾತ್ರ ಸಿಕ್ಕಿದೆ.

ಸಲಿಂಗಕಾಮಿ ಪಾತ್ರದಲ್ಲಿ ಮಾಧುರಿ ದೀಕ್ಷಿತ್​? ಹೊರಬಿತ್ತು ಫ್ಯಾನ್ಸ್​ ಅಚ್ಚರಿಪಡುವಂತಹ ಬ್ರೇಕಿಂಗ್​ ನ್ಯೂಸ್​
‘ಮಜಾ ಮಾ’ ಪೋಸ್ಟರ್​​
Follow us
TV9 Web
| Updated By: ಮದನ್​ ಕುಮಾರ್​

Updated on:May 14, 2022 | 3:39 PM

ನಟಿ ಮಾಧುರಿ ದೀಕ್ಷಿತ್​ (Madhuri Dixit) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಅನೇಕ ಬಗೆಯ ಪಾತ್ರಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಂದಿಗೂ ಮಾಧುರಿ ದೀಕ್ಷಿತ್​ ಅವರ ಚಾರ್ಮ್​ ಕಡಿಮೆ ಆಗಿಲ್ಲ. ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ಅವರು ಸಕ್ರಿಯರಾಗಿದ್ದಾರೆ. ರಿಯಾಲಿಟಿ ಶೋಗಳ ಜಡ್ಜ್​ ಆಗಿ ಕೆಲಸ ಮಾಡುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗೆ ಒಟಿಟಿ ಪ್ಲಾಟ್​ಫಾರ್ಮ್​ನಲ್ಲೂ ಅವರು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಹೊಸ ಹೊಸ ವೆಬ್​ಸಿರೀಸ್ ಮತ್ತು ಸಿನಿಮಾ​ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದು ಮಾಧುರಿ ದೀಕ್ಷಿತ್​ ಅಭಿಮಾನಿಗಳಿಗೆ ಖುಷಿ ನೀಡುವ ವಿಚಾರವೇ ಸರಿ. ಆದರೆ ಈಗ ಒಂದು ಅಚ್ಚರಿಯ ಸುದ್ದಿ ಕೇಳಿಬಂದಿದೆ. ಮಾಧುರಿ ದೀಕ್ಷಿತ್ ಅವರು ಸಲಿಂಗಕಾಮಿ ಮಹಿಳೆಯ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಮೇಜಾನ್ ​ಪ್ರೈಂ ವಿಡಿಯೋ (Amazon Prime Video) ನಿರ್ಮಾಣ ಮಾಡಲಿರುವ ಹೊಸ ಸಿನಿಮಾದಲ್ಲಿ ಅವರು ಈ ರೀತಿಯ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದು ವರದಿ ಆಗಿದೆ. ಈ ಚಿತ್ರಕ್ಕೆ ‘ಮಜಾ ಮಾ’ (Maja Maa Movie) ಎಂದು ಶೀರ್ಷಿಕೆ ಇಡಲಾಗಿದೆ. ಈ ಕುರಿತು ‘ಬಾಲಿವುಡ್​ ಹಂಗಾಮಾ’ ಸುದ್ದಿ ಪ್ರಕಟಿಸಿದೆ.

ಒಟಿಟಿ ಪ್ಲಾಟ್​ಫಾರ್ಮ್​ ವ್ಯಾಪ್ತಿ ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ. ಹೊಸ ಹೊಸ ಬಗೆಯ ಕಂಟೆಂಟ್​ಗಳನ್ನು ಪ್ರೇಕ್ಷಕರಿಗೆ ನೀಡುವಲ್ಲಿ ಎಲ್ಲ ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಒರಿಜಿನಲ್​ ಸಿನಿಮಾಗಳ ನಿರ್ಮಾಣದಲ್ಲೂ ಸ್ಪರ್ಧೆ ಏರ್ಪಟ್ಟಿದೆ. ನೆಟ್​ಫ್ಲಿಕ್ಸ್​​ ಹಾಗೂ ಅಮೇಜಾನ್​ ಪ್ರೈಂ ವಿಡಿಯೋ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಇತ್ತೀಚೆಗೆ ಅಮೇಜಾನ್​ ಪ್ರೈಂ ವಿಡಿಯೋ ಕಡೆಯಿಂದ ಬರೋಬ್ಬರಿ 41 ಹೊಸ ಶೋ, ವೆಬ್​ ಸಿರೀಸ್​ ಮತ್ತು ಸಿನಿಮಾಗಳನ್ನು ಅನೌನ್ಸ್​ ಮಾಡಲಾಯಿತು. ಆ ಪೈಕಿ ಮಾಧುರಿ ದೀಕ್ಷಿತ್​ ನಟಿಸಲಿರುವ ‘ಮಜಾ ಮಾ’ ಚಿತ್ರದ ಬಗ್ಗೆ ಕೌತುಕ ಸೃಷ್ಟಿ ಆಗಿದೆ.

‘ಪ್ರೇಕ್ಷಕರು ಈಗಾಗಲೇ ಊಹಿಸಿರುವಂತೆ ‘ಮಜಾ ಮಾ’ ಒಂದು ಮಾಮೂಲಿ ಫ್ಯಾಮಿಲಿ ಡ್ರಾಮಾ ಅಲ್ಲ. ಇದರಲ್ಲಿ ಮಾಧರಿ ದೀಕ್ಷಿತ್​ ಅವರು ಸಲಿಂಗಕಾಮಿಯ ಪಾತ್ರ ಮಾಡಲಿದ್ದಾರೆ. ಆ ಪಾತ್ರದ ಲೈಂಗಿಕ ಆಸಕ್ತಿಯಿಂದಾಗಿ ಕಥೆಯಲ್ಲಿ ಟ್ವಿಸ್ಟ್​ಗಳು ಎದುರಾಗುತ್ತವೆ. ಇದು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲಿದೆ’ ಅಂತ ಮೂಲಗಳು ತಿಳಿಸಿವೆ ಎಂದು ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ.

ಇದನ್ನೂ ಓದಿ
Image
54ನೇ ವಯಸ್ಸಿನಲ್ಲೂ ಯುವತಿಯರನ್ನು ನಾಚಿಸುತ್ತಾರೆ ಮಾಧುರಿ ದೀಕ್ಷಿತ್; ಇಲ್ಲಿದೆ ಹೊಸ ಫೋಟೋಶೂಟ್  
Image
ಸಲಿಂಗಕಾಮ ಪಾತ್ರದಿಂದ ಈ ದೇಶಗಳಲ್ಲಿ ಬ್ಯಾನ್ ಆದ ‘ಡಾಕ್ಟರ್​ ಸ್ಟ್ರೇಂಜ್​’ ಸಿನಿಮಾ
Image
ಮಾಧುರಿ ದೀಕ್ಷಿತ್​ಗೂ ಹತ್ತಿದೆ ‘ಕಚ್ಚಾ ಬಾದಾಮ್​’ ಗುಂಗು; ರಿತೇಶ್​​ ಜತೆ ಮಸ್ತ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ
Image
ಗಂಡು-ಹೆಣ್ಣು ಇಬ್ಬರ ಜತೆಗೂ ಲೈಂಗಿಕ ಆಸಕ್ತಿ ಇರುವ ಮಹಿಳೆ ಪಾತ್ರದಲ್ಲಿ ಸಮಂತಾ; ಮತ್ತೆ ವಿವಾದಕ್ಕೆ ನಾಂದಿ?

ಈ ಸಿನಿಮಾದಲ್ಲಿ ಮಾಧರಿ ದೀಕ್ಷಿತ್​ ಜೊತೆ ಗಜರಾಜ್​ ರಾವ್​, ರಜತ್​ ಕಪೂರ್​, ಬರ್ಖಾ ಸಿಂಗ್​ ಮುಂತಾದವರು ನಟಿಸುತ್ತಿದ್ದಾರೆ. ಆನಂದ್​ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಮಾಧುರಿ ದೀಕ್ಷಿತ್​ ಅವರು ನಿಭಾಯಿಸುತ್ತಿರುವ ಪಾತ್ರ ತುಂಬ ಸೂಕ್ಷ್ಮವಾಗಿದೆ. ಅದನ್ನು ಸೂಕ್ತ ರೀತಿಯಲ್ಲಿ ತೆರೆಮೇಲೆ ಕಟ್ಟಿಕೊಡಬೇಕು. ಇಲ್ಲದಿದ್ದರೆ ಪ್ರೇಕ್ಷಕರಿಂದ ತಿರಸ್ಕಾರಕ್ಕೆ ಒಳಗಾಗಬೇಕಾಗುತ್ತದೆ. ಆ ವಿಚಾರದಲ್ಲಿ ನಿರ್ದೇಶಕರು ಸಂಪೂರ್ಣ ಭರವಸೆ ನೀಡಿದ್ದರಿಂದ ಮಾಧುರಿ ದೀಕ್ಷಿತ್​ ಅವರ ಸಲಿಂಗಕಾಮಿ ಮಹಿಳೆಯ ಮಾತ್ರ ಮಾಡಲು ಒಪ್ಪಿಕೊಂಡರು ಎನ್ನಲಾಗಿದೆ.

ಈ ಕಥಾಹಂದರದ ಬಗ್ಗೆ ಚಿತ್ರತಂಡದಿಂದ ಯಾರೂ ಈವರೆಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಮಾಧುರಿ ದೀಕ್ಷಿತ್​ ಮೌನ ಮುರಿಯಬಹುದು ಎಂದು ಫ್ಯಾನ್ಸ್​ ನಿರೀಕ್ಷಿಸುತ್ತಿದ್ದಾರೆ. ಈಗಾಗಲೇ ಬಾಲಿವುಡ್​ನಲ್ಲಿ ಕೆಲವು ನಟ-ನಟಿಯರು ಈ ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಮಾಧುರಿ ದೀಕ್ಷಿತ್​ ಅವರು ಯಾವ ರೀತಿ ನಿಭಾಯಿಸಲಿದ್ದಾರೆ ಎಂಬುದನ್ನು ತಿಳಿಯುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

‘ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:39 pm, Sat, 14 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ