Raveena Tandon: ‘ಏಕ್ ದೋ ತೀನ್..’ ಹಾಡಿಗೆ ಡ್ಯಾನ್ಸ್ ಮಾಡಿದ ರವೀನಾ ಟಂಡನ್; ಮಾಧುರಿ ದೀಕ್ಷಿತ್ ಮೆಚ್ಚುಗೆ
Madhuri Dixit: ಸೋಶಿಯಲ್ ಮೀಡಿಯಾದಲ್ಲಿ ಈ ರೀಲ್ಸ್ ವೈರಲ್ ಆಗಿದೆ. ರವೀನಾ ಟಂಡನ್ ಅವರ ಇನ್ಸ್ಟಾಗ್ರಾಮ್ನಲ್ಲಿ 5 ಲಕ್ಷಕ್ಕೂ ಅಧಿಕ ಬಾರಿ ಇದು ವೀಕ್ಷಣೆ ಕಂಡಿದೆ.
ನಟಿ ರವೀನಾ ಟಂಡನ್ (Raveena Tandon) ಅವರಿಗೆ ಚಿತ್ರರಂಗದಲ್ಲಿ ಅಪಾರ ಅನುಭವ ಇದೆ. 1991ರಿಂದಲೂ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಫಿಲ್ಮ್ಫೇರ್, ರಾಷ್ಟ್ರ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಅವರಿಗೆ ಸಂದಿವೆ. ಇಂದಿಗೂ ಅವರು ಬಹುಬೇಡಿಕೆಯ ನಟಿಯಾಗಿ ಚಾರ್ಮ್ ಉಳಿಸಿಕೊಂಡಿದ್ದಾರೆ. ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿ ರವೀನಾ ಟಂಡನ್ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ಅಂತಾರಾಷ್ಟ್ರೀಯ ಡ್ಯಾನ್ಸ್ ದಿನ ( International Dance Day) ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಬಾಲಿವುಡ್ ರೆಟ್ರೋ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ‘ತೇಜಾಬ್’ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ (Madhuri Dixit) ಡ್ಯಾನ್ಸ್ ಮಾಡಿದ್ದ ‘ಏಕ್ ದೋ ತೀನ್..’ ಹಾಡಿಗೆ ಈಗ ರವೀನಾ ಟಂಡನ್ ಕುಣಿದಿದ್ದಾರೆ. ಅದು ಮಾಧುರಿ ದೀಕ್ಷಿತ್ಗೆ ಸಖತ್ ಇಷ್ಟ ಆಗಿದೆ.
ಡ್ಯಾನ್ಸ್ ವಿಚಾರದಲ್ಲಿ ಮಾಧುರಿ ದೀಕ್ಷಿತ್ ಅವರಿಗೆ ಬೇರೆ ಯಾರೂ ಸಾಟಿ ಇಲ್ಲ ಎಂಬುದು ಅಭಿಮಾನಿಗಳ ಅಭಿಪ್ರಾಯ. ರವೀನಾ ಟಂಡನ್ ಕೂಡ ಅದೇ ಮಾತನ್ನು ಹೇಳಿದ್ದಾರೆ. ‘ಚಿತ್ರೀಕರಣದ ಸೆಟ್ನಲ್ಲಿ ನಮ್ಮ ಮಸ್ತಿ. ಸ್ವಲ್ಪ ತಡವಾಗಿ ವಿಶ್ವ ಡ್ಯಾನ್ಸ್ ಡೇ ಪ್ರಯುಕ್ತ ನನ್ನೊಳಗೆ ಇರುವ ಮಾಧುರಿ ದೀಕ್ಷಿತ್ಗೆ ಒಂದು ಸವಾಲು. ಅವರಿಗೆ ಯಾರೂ ಸಾಟಿ ಇಲ್ಲ. ಮಾಧುರಿ ದೀಕ್ಷಿತ್ ಐ ಲವ್ ಯೂ’ ಎಂಬ ಕ್ಯಾಪ್ಷನ್ನೊಂದಿಗೆ ರವೀನಾ ಟಂಡನ್ ಅವರು ಈ ರೀಲ್ಸ್ ಹಂಚಿಕೊಂಡಿದ್ದಾರೆ.
View this post on Instagram
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ರವೀನಾ ಟಂಡನ್ ಅವರ ಇನ್ಸ್ಟಾಗ್ರಾಮ್ನಲ್ಲಿ 5 ಲಕ್ಷಕ್ಕೂ ಅಧಿಕ ಬಾರಿ ಇದು ವೀಕ್ಷಣೆ ಕಂಡಿದೆ. 50 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸ್ವತಃ ಮಾಧುರಿ ದೀಕ್ಷಿತ್ ಅವರೂ ಈ ರೀಲ್ಸ್ ಗಮನಿಸಿದ್ದಾರೆ. ‘ಓ ಮೈ ಗಾಡ್.. ಈಗತಾನೇ ಇದನ್ನು ನೋಡಿದೆ. ನೀವೆಷ್ಟು ಅದ್ಭುತ. ನೀವು ಮತ್ತು ನಿಮ್ಮ ನೃತ್ಯ ನನಗೆ ಬಹಳ ಇಷ್ಟ’ ಎಂದು ಮಾಧುರಿ ದೀಕ್ಷಿತ್ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ನಟಿ ಮಾಧುರಿ ದೀಕ್ಷಿತ್ ಅವರ ಅಪರೂಪದ ಹಳೆಯ ಫೋಟೋಗಳು ಇಲ್ಲಿವೆ
ಮಾಧುರಿ ದೀಕ್ಷಿತ್ ಮತ್ತು ರವೀನಾ ಟಂಡನ್ ಅವರು ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಇಬ್ಬರ ನಡುವೆ ಉತ್ತಮ ಸ್ನೇಹ ಇದೆ. ಈ ನಟಿಯರು ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ರವೀನಾ ಟಂಡನ್ ಅವರು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ಮಾಡಿದ ರಮಿಕಾ ಸೇನ್ ಪಾತ್ರ ಸಖತ್ ಫೇಮಸ್ ಆಯಿತು. ಆ ಬಳಿಕ ಅವರಿಗೆ ಇದ್ದ ಬೇಡಿಕೆ ಡಬಲ್ ಆಯಿತು. ಸೋಶಿಯಲ್ ಮೀಡಿಯಾದಲ್ಲಿ ಅವರು ಆ್ಯಕ್ಟೀವ್ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:45 pm, Mon, 1 May 23