AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಚಿತ್ರದ ನಿರ್ದೇಶಕನ ಬಗ್ಗೆಯೂ ಅನುಷ್ಕಾ ಶರ್ಮಾಗೆ ಗೊತ್ತಿರಲಿಲ್ಲ; ಇದು ನಟಿಯ ಸಿನಿ ಜರ್ನಿ

Anushka Sharma Birthday: ಚಿತ್ರರಂಗದಲ್ಲಿ ಯಶಸ್ಸು ಕಾಣಬೇಕು ಎಂದರೆ ಸಾಕಷ್ಟು ಸ್ಟ್ರಗಲ್ ಮಾಡಬೇಕು. ಆದರೆ, ಅದೃಷ್ಟ ಇದ್ದರೆ ಯಶಸ್ಸು ನಮ್ಮನ್ನೇ ಹುಡುಕಿ ಬರುತ್ತದೆ. ಅನುಷ್ಕಾ ಶರ್ಮಾಗೆ ಆಗಿದ್ದೂ ಇದೆ.

ಮೊದಲ ಚಿತ್ರದ ನಿರ್ದೇಶಕನ ಬಗ್ಗೆಯೂ ಅನುಷ್ಕಾ ಶರ್ಮಾಗೆ ಗೊತ್ತಿರಲಿಲ್ಲ; ಇದು ನಟಿಯ ಸಿನಿ ಜರ್ನಿ
ಅನುಷ್ಕಾ ಶರ್ಮಾ
ರಾಜೇಶ್ ದುಗ್ಗುಮನೆ
|

Updated on:May 01, 2023 | 9:20 AM

Share

ನಟಿ ಅನುಷ್ಕಾ ಶರ್ಮಾ (Anushka Sharma) ಅವರು ಬಾಲಿವುಡ್​ನ ಬೇಡಿಕೆಯ ಹೀರೋಯಿನ್. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇಂದು (ಮೇ 1) ಅವರಿಗೆ ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ಅಭಿಮಾನಿಗಳು, ಸೆಲೆಬ್ರಿಟಿಗಳು ಅನುಷ್ಕಾಗೆ ಬರ್ತ್​ಡೇ ವಿಶ್ ತಿಳಿಸಿದ್ದಾರೆ. ಅನುಷ್ಕಾ ಸ್ಟಾರ್ ಕಿಡ್ ಅಲ್ಲ. ಅವರಿಗೆ ಚಿತ್ರರಂಗದ ಹಿನ್ನೆಲೆ ಇರಲಿಲ್ಲ. ಗಾಡ್ ಫಾದರ್ ದೂರದ ಮಾತು. ಹೀಗಿದ್ದರೂ ಬಾಲಿವುಡ್​ನಲ್ಲಿ ಅವರು ನೆಲೆ ಕಂಡುಕೊಂಡರು. ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಅಚ್ಚರಿಯ ವಿಚಾರ ಎಂದರೆ ಮೊದಲ ಸಿನಿಮಾ ನಿರ್ದೇಶಕ ಆದಿತ್ಯ ಚೋಪ್ರಾ (Aditya Chopra) ಬಗ್ಗೆ ಅವರಿಗೆ ತಿಳಿದೂ ಇರಲಿಲ್ಲ. ಅವಕಾಶ ಸಿಕ್ಕಿದೆ ಎಂದು ನಟಿಸಿದ್ದರು.

ಚಿತ್ರರಂಗದಲ್ಲಿ ಯಶಸ್ಸು ಕಾಣಬೇಕು ಎಂದರೆ ಸಾಕಷ್ಟು ಸ್ಟ್ರಗಲ್ ಮಾಡಬೇಕು. ಆದರೆ, ಅದೃಷ್ಟ ಇದ್ದರೆ ಯಶಸ್ಸು ನಮ್ಮನ್ನೇ ಹುಡುಕಿ ಬರುತ್ತದೆ. ಅನುಷ್ಕಾ ಶರ್ಮಾಗೆ ಆಗಿದ್ದೂ ಇದೆ. ಅವರು ನಟಿಸಿದ ಮೊದಲ ಸಿನಿಮಾ ‘ರಬ್​ ನೆ ಬನಾದಿ ಜೋಡಿ’. ಈ ಚಿತ್ರಕ್ಕೆ ಹೀರೋ ಶಾರುಖ್ ಖಾನ್. ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿತ್ತು. ಆದಿತ್ಯ ಚೋಪ್ರಾ ನಿರ್ದೇಶನ ಚಿತ್ರಕ್ಕೆ ಇತ್ತು. ಮೊದಲ ಸಿನಿಮಾದಲ್ಲೇ ಇಷ್ಟು ದೊಡ್ಡ ಅವಕಾಶ ಅನುಷ್ಕಾ ಪಾಲಾಗಿತ್ತು.

‘ನಾನು ಹೊರಗಿನವನಾದರೂ ಬಾಲಿವುಡ್​ನಲ್ಲಿ ನೆಲೆ ಕಂಡುಕೊಂಡಿದ್ದೇನೆ. ರಬ್​ ನೆ ಬನಾದಿ ಜೋಡಿ ಸಿನಿಮಾ ಸಿಕ್ಕಾಗ ನನಗೆ ಇದು ಇಷ್ಟೊಂದು ಮಹತ್ವದ ಸಿನಿಮಾ ಆಗುತ್ತದೆ ಎಂದುಕೊಂಡಿರಲಿಲ್ಲ. ಆದಿತ್ಯ ಚೋಪ್ರಾ ಯಾರು ಎಂಬುದೂ ಗೊತ್ತಿರಲಿಲ್ಲ. ನನ್ನ ಮನಸ್ಸಿನ ಮಾತು ಕೇಳಿದೆ. ನಾನು ಆಡಿಷನ್ ಕೊಡುತ್ತಾ ಬಂದೆ. ರಬ್​ ನೆ ಬನಾದಿ ಜೋಡಿ ಸಿನಿಮಾಗೆ ನಾನು ಆಯ್ಕೆ ಆದೆ. ಹೀಗೆ ಬಣ್ಣದ ಬದುಕು ಆರಂಭಿಸಿದೆ’ ಎಂದು ಅನುಷ್ಕಾ ಶರ್ಮಾ ಈ ಮೊದಲು ಹೇಳಿದ್ದರು.

ಇದನ್ನೂ ಓದಿ: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ಅನುಷ್ಕಾ ಶರ್ಮಾ; ‘ಎಂದೆಂದಿಗೂ ನೀವೇ ನಮ್ಮ ಫೇವರಿಟ್​’ ಎಂದ ಫ್ಯಾನ್ಸ್​

2008ರಲ್ಲಿ ‘ರಬ್​ ನೆ ಬನಾದಿ ಜೋಡಿ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಯಶಸ್ಸು ಕಂಡಿತು. ಅಲ್ಲಿಂದ ಅನುಷ್ಕಾ ಶರ್ಮಾ ಬದುಕು ಬದಲಾಯಿತು. ನಂತರ ‘ಪಿಕೆ’, ‘ಸುಲ್ತಾನ್’ ಸೇರಿ ಹಲವು ಸೂಪರ್ ಹಿಟ್​ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಸದ್ಯ ಅವರು ‘ಚಕ್ದಾ ಎಕ್ಸ್​ಪ್ರೆಸ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:13 am, Mon, 1 May 23