ಬೇರೆ ಹೀರೋಗಳ ಸಿನಿಮಾ ಸಾವಿರ ಕೋಟಿ ರೂ. ಗಳಿಸಿದ್ದಕ್ಕೆ ಅಕ್ಷಯ್​ ಕುಮಾರ್​ ಹೇಳೋದೇನು?

‘ಸಾವಿರ ಕೋಟಿ ರೂಪಾಯಿ ಮೈಲಿಗಲ್ಲು ಸೃಷ್ಟಿ ಆಗಿರುವುದು ಒಳ್ಳೆಯದು. ಹಾಲಿವುಡ್​ ಸಿನಿಮಾಗಳ ರೀತಿ ನಾವು 2 ಸಾವಿರ ಕೋಟಿ ಅಥವಾ ಮೂರು ಸಾವಿರ ಕೋಟಿ ರೂಪಾಯಿ ಕಲೆಕ್ಷನ್​ ಆಗುವಂತಹ ಸಿನಿಮಾಗಳನ್ನು ಮಾಡುತ್ತೇವೆ ಎಂಬ ನಂಬಿಕೆ ನನಗಿದೆ’ ಎಂದು ಅಕ್ಷಯ್​ ಕುಮಾರ್​ ಅವರು ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.

ಬೇರೆ ಹೀರೋಗಳ ಸಿನಿಮಾ ಸಾವಿರ ಕೋಟಿ ರೂ. ಗಳಿಸಿದ್ದಕ್ಕೆ ಅಕ್ಷಯ್​ ಕುಮಾರ್​ ಹೇಳೋದೇನು?
ಶಾರುಖ್​ ಖಾನ್​​
Follow us
ಮದನ್​ ಕುಮಾರ್​
|

Updated on: Oct 06, 2023 | 6:41 PM

ಒಂದು ಕಾಲದಲ್ಲಿ ನಟ ಅಕ್ಷಯ್​ ಕುಮಾರ್​ ಅವರು ನಟಿಸಿದ ಎಲ್ಲ ಸಿನಿಮಾಗಳು ಸಕ್ಸಸ್​ ಆಗುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಡಲ್​ ಆಗಿದ್ದಾರೆ. ಅವರ ಸಿನಿಮಾಗಳು ಸಾಲು ಸಾಲು ಸೋಲು ಕಂಡಿವೆ. ಅದರ ಮಧ್ಯೆ ಬೇರೆ ಹೀರೋಗಳ ಸಿನಿಮಾಗಳು ಸಾವಿರ ಕೋಟಿ ರೂಪಾಯಿ ಬಿಸ್ನೆಸ್​ ಮಾಡುತ್ತಿವೆ. ಶಾರುಖ್​ ಖಾನ್​ ನಟನೆಯ ‘ಜವಾನ್​’ (Jawan Movie), ‘ಪಠಾಣ್​’ ಚಿತ್ರಗಳು ಇಂಥ ಸಾಧನೆ ಮಾಡಿವೆ. ಈ ಕುರಿತು ಅಕ್ಷಯ್​ ಕುಮಾರ್​ ಮಾತನಾಡಿದ್ದಾರೆ. ಅವರು ನಟಿಸಿದ ‘ಮಿಷನ್​ ರಾಣಿಗಂಜ್​’ ಸಿನಿಮಾಗೆ ನಿರೀಕ್ಷಿತ ಮಟ್ಟದ ಓಪನಿಂಗ್​ ಸಿಕ್ಕಿಲ್ಲ. ಹಾಗಿದ್ದರೂ ಕೂಡ ಬಾಲಿವುಡ್​ನ ಬೇರೆ ಹೀರೋಗಳ ಗೆಲುವಿಗೆ ಅಕ್ಷಯ್​ ಕುಮಾರ್​ (Akshay Kumar) ಅವರು ಸಂಸತ ವ್ಯಕ್ತಪಡಿಸಿದ್ದಾರೆ.

‘ಇಂಡಿಯಾ ಟುಡೇ’ ನಡೆಸಿದ ಸಂದರ್ಶನದಲ್ಲಿ ಅಕ್ಷಯ್​ ಕುಮಾರ್​ ಅವರು ಈ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ‘ನಮ್ಮ ಚಿತ್ರರಂಗದಿಂದ ಇನ್ನೂ ಹೆಚ್ಚಿನ ಸೂಪರ್​ ಹಿಟ್​ ಸಿನಿಮಾಗಳು ಬರಲಿವೆ ಎಂಬ ನಂಬಿಕೆ ನನಗೆ ಇದೆ. ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾ ಅತ್ಯುತ್ತಮ ಬಿಸ್ನೆಸ್​ ಮಾಡಿದಾಗ ನನಗೆ ತುಂಬ ಖುಷಿ ಆಯಿತು. ‘ಗದರ್​ 2’, ‘ಒಎಂಜಿ 2’ ಮುಂತಾದ ಸಿನಿಮಾಗಳು ಕೂಡ ಉತ್ತಮವಾಗಿ ಪ್ರದರ್ಶನ ಕಂಡಿವೆ. ಇದು ಚಿತ್ರರಂಗಕ್ಕೆ ಒಳ್ಳೆಯದು’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: 56ನೇ ವಯಸ್ಸಲ್ಲೂ ಅಕ್ಷಯ್​ ಕುಮಾರ್​ ಫಿಟ್ನೆಸ್​ ಸೀಕ್ರೆಟ್​ ಏನು?

‘ಕೊವಿಡ್​ 19 ಸಂದರ್ಭದಲ್ಲಿ ನಮ್ಮ ಚಿತ್ರರಂಗಕ್ಕೆ ಬಹಳ ಕಷ್ಟ ಆಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದೆ. ಸಾವಿರ ಕೋಟಿ ರೂಪಾಯಿ ಮೈಲಿಗಲ್ಲು ಸೃಷ್ಟಿ ಆಗಿರುವುದು ಒಳ್ಳೆಯದು. ಹಾಲಿವುಡ್​ ಸಿನಿಮಾಗಳ ರೀತಿ ನಾವು 2 ಸಾವಿರ ಕೋಟಿ ಅಥವಾ ಮೂರು ಸಾವಿರ ಕೋಟಿ ರೂಪಾಯಿ ಕಲೆಕ್ಷನ್​ ಆಗುವಂತಹ ಸಿನಿಮಾಗಳನ್ನು ಮಾಡುತ್ತೇವೆ ಎಂಬ ನಂಬಿಕೆ ನನಗಿದೆ. ಹಾಲಿವುಡ್​ನವರ ಬಳಿಯೂ ಇಲ್ಲದೇ ಕಥೆ ಮತ್ತು ಚಿತ್ರಕಥೆ ನಮ್ಮ ಬಳಿ ಇದೆ’ ಎಂದು ಅಕ್ಷಯ್​ ಕುಮಾರ್​ ಅವರು ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಒಂದೇ ಸಿನಿಮಾದಲ್ಲಿ ಜೂ. ಎನ್​ಟಿಆರ್​, ಶಾರುಖ್​ ಖಾನ್​, ಸಲ್ಮಾನ್​, ಹೃತಿಕ್​ ರೋಷನ್​?

ಈ ವರ್ಷ ಕೆಲವು ಬಹುನಿರೀಕ್ಷಿತ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಉತ್ತಮವಾಗಿ ಕಲೆಕ್ಷನ್​ ಮಾಡಲು ವಿಫಲ ಆಗಿವೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾಗೆ ಅಂದುಕೊಂಡ ಮಟ್ಟಕ್ಕೆ ಗಳಿಕೆ ಆಗಿಲ್ಲ. ಅಕ್ಷಯ್​ ಕುಮಾರ್​ ನಟನೆಯ ‘ವಿಷನ್​ ರಾಣಿಗಂಜ್​’ ಸಿನಿಮಾ ಇಂದು (ಅಕ್ಟೋಬರ್​ 6) ಬಿಡುಗಡೆ ಆಗಿದ್ದು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಸಾಧಾರಣ ಓಪನಿಂಗ್​ ಪಡೆದುಕೊಂಡಿದೆ. ಈ ವರ್ಷ ದೀಪಾವಳಿಗೆ ಸಲ್ಮಾನ್​ ಖಾನ್​ ನಟನೆಯ ‘ಟೈಗರ್ 3’ ಹಾಗೂ ಡಿಸೆಂಬರ್​ 1ರಂದು ರಣಬೀರ್ ಕಪೂರ್​ ನಟನೆಯ ‘ಅನಿಮಲ್​’ ಸಿನಿಮಾಗಳು ರಿಲೀಸ್​ ಆಗಲಿವೆ. ಆ ಚಿತ್ರಗಳ ಮೇಲೆ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?