ಆಸ್ಕರ್ ಗೆದ್ದ ‘ಜೈ ಹೋ’ ಹಾಡು ಕಂಪೋಸ್ ಮಾಡಿದ್ದು ಎಆರ್ ರೆಹಮಾನ್ ಅಲ್ಲ, ಮತ್ತಿನ್ಯಾರು?

AR Rahman: ಎಆರ್ ರೆಹಮಾನ್​ಗೆ ಆಸ್ಕರ್ ತಂದುಕೊಟ್ಟ 'ಜೈ ಹೋ' ಹಾಡನ್ನು ಕಂಪೋಸ್ ಮಾಡಿದ್ದು ಬೇರೊಬ್ಬ ಸಂಗೀತ ನಿರ್ದೇಶಕನಂತೆ. ಈ ವಿಷಯವನ್ನು ಜನಪ್ರಿಯ ನಿರ್ದೇಶಕನೊಬ್ಬ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಆಸ್ಕರ್ ಗೆದ್ದ 'ಜೈ ಹೋ' ಹಾಡು ಕಂಪೋಸ್ ಮಾಡಿದ್ದು ಎಆರ್ ರೆಹಮಾನ್ ಅಲ್ಲ, ಮತ್ತಿನ್ಯಾರು?
ಎಆರ್ ರೆಹಮಾನ್
Follow us
ಮಂಜುನಾಥ ಸಿ.
|

Updated on: Oct 06, 2023 | 4:20 PM

ಸಂಗೀತಕ್ಕೆ ಆಸ್ಕರ್ (Oscar) ಪಡೆದ ಮೊದಲ ಭಾರತೀಯ ಎಆರ್ ರೆಹಮಾನ್ (AR Rahman). ಒಂದೇ ವರ್ಷ ಎರಡು ಆಸ್ಕರ್ ಅನ್ನು ಎಆರ್ ರೆಹಮಾನ್ ಗೆದ್ದಿದ್ದರು. ಸ್ಲಂ ಡಾಗ್ ಮಿಲೇನಿಯರ್ ಸಿನಿಮಾಕ್ಕೆ ನೀಡಿದ್ದ ಸಂಗೀತ ಹಾಗೂ ಅದೇ ಸಿನಿಮಾದ ‘ಜೈ ಹೋ’ ಹಾಡಿಗಾಗಿ ಎಆರ್ ರೆಹಮಾನ್​ಗೆ ಆಸ್ಕರ್ ಬಂದಿತ್ತು. ಆದರೆ ಖ್ಯಾತ ನಿರ್ದೇಶಕರೊಬ್ಬರು ಇತ್ತೀಚೆಗಿನ ಸಂದರ್ಶನವೊಂದರಲ್ಲಿ ‘ಜೈ ಹೋ’ ಹಾಡನ್ನು ಕಂಪೋಸ್ ಮಾಡಿದ್ದು ಎಆರ್ ರೆಹಮಾನ್ ಅಲ್ಲ, ಬದಲಿಗೆ ಮತ್ತೊಬ್ಬ ಸಂಗೀತ ನಿರ್ದೇಶಕ ಎಂದಿದ್ದಾರೆ.

ಎಆರ್ ರೆಹಮಾನ್ ಜೊತೆಗೆ ಈ ಹಿಂದೆ ‘ರಂಗೀಲಾ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಿಗೆ ಕೆಲಸ ಮಾಡಿರುವ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಸಂದರ್ಶನವೊಂದರಲ್ಲಿ ಎಆರ್ ರೆಹಮಾನ್ ಬಗ್ಗೆ ಮಾತನಾಡುತ್ತಾ, ಆಸ್ಕರ್ ತಂದುಕೊಟ್ಟ ‘ಜೈ ಹೋ’ ಹಾಡನ್ನು ಎಆರ್ ರೆಹಮಾನ್ ಅಲ್ಲ ಕಂಪೋಸ್ ಮಾಡಿದ್ದು, ಬದಲಿಗೆ ಗಾಯಕ, ಸಂಗೀತ ನಿರ್ದೇಶಕ ಸುಖವೀಂದರ್ ಸಿಂಗ್ ಎಂದಿದ್ದಾರೆ.

ಘಟನೆ ವಿವರಿಸಿರುವ ರಾಮ್ ಗೋಪಾಲ್ ವರ್ಮಾ, ”ಸುಭಾಷ್ ಘೈ ನಿರ್ದೇಶನದ ’ಯುವರಾಜ’ ಸಿನಿಮಾಕ್ಕೆ ಎಆರ್ ರೆಹಮಾನ್ ಕೆಲಸ ಮಾಡುತ್ತಿದ್ದ. ಬಹಳ ತಡವಾಗಿ ಟ್ಯೂನ್​ಗಳನ್ನು ಕೊಡುವುದಕ್ಕೆ ಎಆರ್ ರೆಹಮಾನ್ ಕುಖ್ಯಾತಿ. ಅವರಷ್ಟು ತಡವಾಗಿ ಯಾರೂ ಟ್ಯೂನ್ ಕೊಡುವುದಿಲ್ಲ. ಸುಭಾಷ್ ಘೈಗೂ ಬೇಗ ಟ್ಯೂನ್ ಕೊಟ್ಟಿರಲಿಲ್ಲ. ಹಾಗಾಗಿ ಸುಭಾಷ್ ಘೈ ತುಸು ಒರಟಾಗಿ ಎಆರ್ ರೆಹಮಾನ್​ಗೆ ಸಂದೇಶ ಕಳಿಸಿದ್ದರು. ಆಗ ಲಂಡನ್​ನಲ್ಲಿದ್ದ ಎಆರ್ ರೆಹಮಾನ್, ‘ಸರಿ ಮುಂಬೈನ ಸುಖವೀಂದರ್ ಸಿಂಗ್ ಸ್ಟುಡಿಯೋಕ್ಕೆ ಇಂಥಹಾ ದಿನ ಬನ್ನಿ ನಾನು ಬರುತ್ತಿದ್ದೇನೆ’ ಎಂದರು. ಅಂತೆಯೇ ಸುಭಾಷ್ ಘೈ ಸುಖವೀಂದರ್ ಸಿಂಗ್ ಸ್ಟುಡಿಯೋಕ್ಕೆ ಹೋದರು” ಎಂದು ವರ್ಮಾ ಘಟನೆ ವಿವರಿಸಿದ್ದಾರೆ.

ಇದನ್ನೂ ಓದಿ:ಎಆರ್ ರೆಹಮಾನ್​ರ  ‘ರೋಜಾ ಜಾನೇ ಮನ್‘ ಹಾಡು ಹುಟ್ಟಿದ್ದು ಹೇಗೆ?

”ಸ್ಟುಡಿಯೋಕ್ಕೆ ಸುಭಾಷ್ ಘೈ ಹೋದಾಗ ಸುಖವೀಂದರ್ ಸಿಂಗ್ ಟ್ಯೂನ್ ಒಂದನ್ನು ಕೇಳುವಂತೆ ಸುಭಾಷ್​ಗೆ ಹೇಳಿದ್ದಾರೆ. ಯಾಕೆ ಕೇಳಬೇಕು ಎಂದಾಗ, ಎಆರ್ ರೆಹಮಾನ್ ಹೇಳಿದ್ದಾರೆ ನಿಮ್ಮ ಸಿನಿಮಾಕ್ಕೆ ಟ್ಯೂನ್ ಮಾಡುವಂತೆ, ಅದಕ್ಕೆ ಟ್ಯೂನ್ ಮಾಡಿದ್ದೇನೆ ಕೇಳಿ ಎಂದಿದ್ದಾರೆ ಸುಖವೀಂದರ್. ಇದರಿಂದ ಸುಭಾಷ್​ಗೆ ಇನ್ನಷ್ಟು ಸಿಟ್ಟು ಬಂದಿದೆ. ಬಳಿಕ ಎಆರ್ ರೆಹಮಾನ್, ಬಂದಾಗ ಸುಭಾಷ್ ತಮ್ಮ ಸಿಟ್ಟನ್ನೆಲ್ಲ ಹೊರಹಾಕಿ, ‘ನಾನು ನಿನ್ನಿಂದ ಟ್ಯೂನ್ ಮಾಡಿಸಲು ಹಣ ಕೊಟ್ಟಿರುವುದು, ಸುಖವೀಂಧರ್ ಇಂದ ಅಲ್ಲ‘ ಎಂದರಂತೆ. ಆಗ ರೆಹಮಾನ್, ‘ನನ್ನ ಹೆಸರು ಬಳಸಿಕೊಳ್ಳಲು ನೀವು ಹಣ ಕೊಟ್ಟಿದ್ದೀರಿ. ಟ್ಯೂನ್​ಗಾಗಿ ಅಲ್ಲ. ನಾನು ನಿಮಗೆ ಕೊಡುವ ಟ್ಯೂನ್​ ಅನ್ನು ನಾನು ಯಾರಿಂದ ಬೇಕಾದರೂ ಮಾಡಿಸಿಕೊಂಡಿರಲಿ ಅದಕ್ಕೂ ನಿಮಗೂ ಸಂಬಂಧವಿಲ್ಲ. ಟ್ಯೂನ್ ಇಷ್ಟವಾದರೆ ತೆಗೆದುಕೊಳ್ಳಿ, ಇಲ್ಲವಾದರೆ ಬಿಡಿ” ಎಂದರಂತೆ.

ಅಂದು ಸುಖವೀಂದರ್ ಕೇಳಿಸಿದ ಟ್ಯೂನ್ ಸಿಟ್ಟಿನಲ್ಲಿದ್ದ ಸುಭಾಷ್​ಗೆ ಇಷ್ಟವಾಗದೆ ಬೇರೆ ಟ್ಯೂನ್ ಬೇಕೆಂದು ಕೇಳಿದ್ದಾರೆ. ಆಗ ರೆಹಮಾನ್, ಸರಿ ನಾನು ಚೆನ್ನೈಗೆ ಹೋಗಿ ಕಳಿಸುತ್ತೇನೆ ಎಂದು ಹೊರಟುಬಿಟ್ಟರಂತೆ. ಆದರೆ ಸುಖವೀಂದರ್ ಮಾಡಿದ್ದ ಟ್ಯೂನ್ ಅನ್ನು ಮುಂದಿನ ವರ್ಷ ‘ಸ್ಲಂ ಡಾಗ್ ಮಿಲೇನಿಯರ್‘ ಸಿನಿಮಾಕ್ಕೆ ರೆಹಮಾನ್ ಬಳಸಿಕೊಂಡರಂತೆ. ಅದುವೇ ‘ಜೈ ಹೋ’ ಹಾಡಾಯಿತು. ‘ಸ್ಲಂ ಡಾಗ್ ಮಿಲೇನಿಯರ್’ ಸಿನಿಮಾಕ್ಕೆ ಆ ಟ್ಯೂನ್ ಬಳಸಿದ್ದಕ್ಕಾಗಿ ಸುಖವೀಂದರ್​ಗೆ ಐದು ಲಕ್ಷ ರೂ ಹಣ ಕೊಟ್ಟರಂತೆ ರೆಹಮಾನ್. ಆದರೆ ಮುಂದೆ ಹೋಗಿ ಅದೇ ಹಾಡಿಗೆ ರೆಹಮಾನ್​ಗೆ ಆಸ್ಕರ್ ಸಹ ಬಂತು. ಈ ಘಟನೆಯನ್ನು ರಾಮ್ ಗೋಪಾಲ್ ವರ್ಮಾ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ:AR Rahaman: ನನ್ನ ಆಸ್ಕರ್ ಭಾಷಣವನ್ನು ತಪ್ಪಾಗಿ ಅರ್ಥೈಸಲಾಗಿತ್ತು: ಎಆರ್ ರೆಹಮಾನ್

ಆದರೆ ಸುಭಾಷ್ ಘೈ, ಈ ಘಟನೆಯನ್ನು ಬೇರೆಯದ್ದೇ ರೀತಿ ಹಿಂದೊಮ್ಮೆ ಹೇಳಿದ್ದರು. ‘ಜೈ ಹೋ’ ಹಾಡನ್ನು ‘ಯುವರಾಜ’ ಸಿನಿಮಾಕ್ಕಾಗಿ ಎಆರ್ ರೆಹಮಾನ್ ಮಾಡಿಕೊಟ್ಟಿದ್ದರು, ಆ ಹಾಡು ನಮ್ಮ ಹೀರೋನ ಪಾತ್ರಕ್ಕೆ ಹೊಂದಿಕೆ ಆಗುವುದಿಲ್ಲ ಎನಿಸಿ ಹಾಡನ್ನು ಬಳಸಿರಲಿಲ್ಲ. ಹಾಡು ನನ್ನ ಬಳಿಯೇ ಇತ್ತು. ನಂತರ ಎಆರ್ ರೆಹಮಾನ್ ಬಂದು ಡ್ಯಾನಿ ಬೊಯ್ಲೆ ಅವರ ಸ್ಲಂ ಡಾಗ್ ಮಿಲೇನಿಯರ್ ಸಿನಿಮಾಕ್ಕೆ ಹಾಡು ಬೇಕು ಎಂದು ಕೇಳಿದಾಗ ನಾನು ಖುಷಿಯಿಂದಲೇ ಉಚಿತವಾಗಿ ಹಾಡು ಕೊಟ್ಟೆ” ಎಂದಿದ್ದರು.

ಇನ್ನು ಸುಖವೀಂದರ್ ಸಿಂಗ್, ‘ಜೈ ಹೋ’ ಹಾಡು ತಾವು ಕಂಪೋಸ್ ಮಾಡಿದ್ದು ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಎಆರ್ ರೆಹಮಾನ್ ಸಂಗೀತ ನಿರ್ದೇಶಿಸಿರುವ ‘ದಿಲ್ ಸೇ’ ಸಿನಿಮಾದ ಜನಪ್ರಿಯ ಹಾಡು ‘ಚಯ್ಯಾ ಚಯ್ಯಾ’ ಅನ್ನು ತಾವೇ ಕಂಪೋಸ್ ಮಾಡಿದ್ದು ಎಂದು ಹೇಳಿಕೊಂಡಿದ್ದರು. ಆ ಹಾಡು ನಾನು ಮಾಡಿದ್ದೆ, ಅದನ್ನು ಇಂಪ್ರೊವೈಸ್ ಮಾಡಿ ಎಆರ್ ರೆಹಮಾನ್ ಬಳಸಿಕೊಂಡರು ಎಂದಿದ್ದಾರೆ. ‘ಚಯ್ಯಾ ಚಯ್ಯಾ’ ಹಾಡನ್ನು ಎಲ್ಲ ಭಾಷೆಗಳಲ್ಲಿಯೂ ಸುಖವೀಂದರ್ ಸಿಂಗ್ ಅವರೇ ಹಾಡಿದ್ದಾರೆ. ಮಾತ್ರವಲ್ಲದೆ ಆಸ್ಕರ್ ಗೆದ್ದ ‘ಜೈ ಹೋ’ ಹಾಡನ್ನು ಸಹ ಸುಖವೀಂದರ್ ಸಿಂಗ್ ಅವರೇ ಹಾಡಿದ್ದಾರೆ.

ಸಿನಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ