ಆಸ್ಕರ್​ಗೆ ಭಾರತದ ಅಧಿಕೃತ ಆಯ್ಕೆ: ಯಾವ ಭಾಷೆಯ ಸಿನಿಮಾಗಳಿಗೆ ಹೆಚ್ಚು ಅವಕಾಶ?

Indian Movies at Oscars: ಈವರೆಗೆ 56 ಸಿನಿಮಾಗಳನ್ನು ಆಸ್ಕರ್​ಗೆಂದು ಭಾರತದಿಂದ ಅಧಿಕೃತವಾಗಿ ಕಳಿಸಲಾಗಿದೆ. ಯಾವ ಭಾಷೆಯ ಸಿನಿಮಾಗಳನ್ನು ಹೆಚ್ಚು ಬಾರಿ ಕಳಿಸಲಾಗಿದೆ. ಕನ್ನಡ ಸಿನಿಮಾಗಳು ಪಟ್ಟಿಯಲ್ಲಿ ಇವೆಯೇ? ಇಲ್ಲಿದೆ ಮಾಹಿತಿ.

ಆಸ್ಕರ್​ಗೆ ಭಾರತದ ಅಧಿಕೃತ ಆಯ್ಕೆ: ಯಾವ ಭಾಷೆಯ ಸಿನಿಮಾಗಳಿಗೆ ಹೆಚ್ಚು ಅವಕಾಶ?
ಭಾರತೀಯ ಸಿನಿಮಾ
Follow us
ಮಂಜುನಾಥ ಸಿ.
|

Updated on: Sep 27, 2023 | 6:29 PM

ಭಾರತೀಯರು ಆಸ್ಕರ್ (Oscars)​ ಗೆಲ್ಲಬಲ್ಲರು ಎಂಬುದನ್ನು ಸತ್ಯಜಿತ್ ರೇ, ಭಾನು ಅಥಯಾ, ಎ.ಆರ್.ರೆಹಮಾನ್ , ರಸೂಲ್ ಪೂಕುಟ್ಟಿ, ಗುಲ್ಜಾರ್, ಇತ್ತೀಚೆಗೆ ಎಂಎಂ ಕೀರವಾಣಿ, ಚಂದ್ರಭೋಸ್, ಕಾರ್ತಿಕಿ ಗೊನ್ಸಾಲ್ವಾಸ್, ಗುನೀತ್ ಮೋಂಗಾ ಅಂಥಹವರು ತೋರಿಸಿಕೊಟ್ಟಿದ್ದಾರೆ. ಆದರೆ ಭಾರತೀಯರಿಗೆ ಹಲವು ವರ್ಷಗಳ ಕಾಲ ಆಸ್ಕರ್​ ಕೈಗೆಟುದ ಹುಳಿ ದ್ರಾಕ್ಷಿಯಾಗಿತ್ತು. 1957ರಿಂದಲೂ ಭಾರತದ ಸಿನಿಮಾಗಳು ಆಸ್ಕರ್ ಅಂಗಳಕ್ಕೆ ಹೋಗುತ್ತಲೇ ಇವೆ. ಸತತ ನಿರಾಸೆ ಅನುಭವಿಸುತ್ತಲೇ ಇದ್ದವು. 2023ರರವರೆಗೆ ಸುಮಾರು 56 ಸಿನಿಮಾಗಳನ್ನು ಭಾರತ ಆಸ್ಕರ್​ಗೆ ಕಳಿಸಿದೆ. ಯಾವ ಭಾಷೆಯ ಎಷ್ಟು ಸಿನಿಮಾಗಳು ಆಸ್ಕರ್​ಗೆ ಹೋಗಿವೆ? ಇಲ್ಲಿದೆ ಪಟ್ಟಿ.

ಆಸ್ಕರ್ ಪ್ರಾರಂಭವಾಗಿದ್ದು 1929ರಲ್ಲಿ, ಭಾರತದಲ್ಲಿ ಮೊದಲ ಸಿನಿಮಾ ತಯಾರಾಗಿದ್ದು 1913ರಲ್ಲಿ. ಆದರೆ ಭಾರತ, ಆಸ್ಕರ್​ಗೆ ಮೊದಲ ಸಿನಿಮಾ ಕಳಿಸಿದ್ದು 1957ರಲ್ಲಿ. ಸಿನಿಮಾ ನಿರ್ಮಾಣ ಆರಂಭಿಸಿದ 44 ವರ್ಷಗಳ ಬಳಿಕ ಭಾರತ ಮೊದಲ ಬಾರಿಗೆ ಆಸ್ಕರ್​ಗೆ ಸಿನಿಮಾ ಕಳಿಸಿತ್ತು. ಆ ವೇಳೆಗಾಗಲೆ 30 ಆಸ್ಕರ್ ಅವಾರ್ಡ್ ಕಾರ್ಯಕ್ರಮಗಳು ಮುಗಿದಿದ್ದವು.

ಆಸ್ಕರ್​ಗೆ ಸಿನಿಮಾ ಕಳಿಸಿದ ಮೊದಲ ವರ್ಷವೇ ಭಾರತ ಆಸ್ಕರ್ ವೇದಿಕೆಯ ಮೇಲೆ ಗಮನ ಸೆಳೆದಿತ್ತು. ಆಸ್ಕರ್ ಸ್ಪರ್ಧೆಗೆ ಹೋದ ಮೊದಲ ಭಾರತೀಯ ಸಿನಿಮಾ ‘ಮದರ್ ಇಂಡಿಯಾ’ ನಾಮಿನೇಟ್ ಆಗಿತ್ತು. ಆಸ್ಕರ್ ಗೆಲ್ಲಲು ಈ ಸಿನಿಮಾ ವಿಫಲವಾಯ್ತಾದರೂ, ಗೆಲ್ಲಬಹುದೆಂಬ ಭರವಸೆಯನ್ನಂತೂ ಹುಟ್ಟುಹಾಕಿತ್ತು. 1957ರಿಂದ ಈವರೆಗೆ 56 ಸಿನಿಮಾಗಳು ಆಸ್ಕರ್​ಗೆ ಭಾರತದಿಂದ ಅಧಿಕೃತವಾಗಿ ಕಳಿಸಲ್ಪಟ್ಟಿವೆ. ಅವುಗಳಲ್ಲಿ ಅತಿ ಹೆಚ್ಚು ಸಿನಿಮಾಗಳು ಹಿಂದಿ ಭಾಷೆಯದ್ದಾಗಿವೆ. ಹಿಂದೂಸ್ತಾನಿ ಭಾಷೆ, ಉರ್ದು ಭಾಷೆಯನ್ನು ಸೇರಿಸಿ ಈವರೆಗೆ ಬರೋಬ್ಬರಿ 34 ಹಿಂದಿ ಭಾಷೆಯ ಸಿನಿಮಾಗಳನ್ನು ಈ ವರೆಗೆ ಆಸ್ಕರ್​ಗೆ ಅಧಿಕೃತವಾಗಿ ಭಾರತದಿಂದ ಕಳಿಸಲಾಗಿದೆ.

ಇದನ್ನೂ ಓದಿ:ಆಸ್ಕರ್​ಗೆ ಭಾರತದ ಅಧಿಕೃತ ಆಯ್ಕೆ ಪ್ರಕಟ: ಈ ಬಾರಿ ಮಲಯಾಳಂ ಸಿನಿಮಾಕ್ಕೆ ಮಣೆ

ಹಿಂದಿ ಹೊರತುಪಡಿಸಿದರೆ ಅತಿ ಹೆಚ್ಚು ಕಳಿಸಲ್ಪಟ್ಟಿರುವುದು ತಮಿಳು ಭಾಷೆಯ ಸಿನಿಮಾಗಳನ್ನು. ಈವರೆಗೆ 10 ತಮಿಳು ಸಿನಿಮಾಗಳನ್ನು ಆಸ್ಕರ್​ಗೆ ಅಧಿಕೃತವಾಗಿ ಕಳಿಸಲಾಗಿದೆ. ಆದರೆ ಯಾವೊಂದು ತಮಿಳು ಸಿನಿಮಾ ಸಹ ಈವರೆಗೆ ನಾಮಿನೇಟ್ ಆಗಿಲ್ಲ. ತಮಿಳು ಭಾಷೆಯ ಬಳಿಕದ ಸ್ಥಾನ ಮಲಯಾಳಂಗೆ, ಈಗ ನಾಮಿನೇಟ್ ಆಗಿರುವ ‘2018’ ಸಿನಿಮಾ ಸೇರಿಸಿ ನಾಲ್ಕು ಮಲಯಾಳಂ ಸಿನಿಮಾಗಳು ಈ ವರೆಗೆ ಆಸ್ಕರ್​ಗೆ ನಾಮಿನೇಟ್ ಆಗಿವೆ.

ಮರಾಠಿ ಭಾಷೆಯ ಮೂರು ಸಿನಿಮಾಗಳು, ಗುಜರಾತಿ ಹಾಗೂ ಬೆಂಗಾಲಿ ಭಾಷೆಯ ತಲಾ ಎರಡು ಸಿನಿಮಾಗಳು ಈವರೆಗೆ ಆಸ್ಕರ್​ ಸ್ಪರ್ಧೆಗಾಗಿ ಕಳಿಸಲಾಗಿದೆ. ತೆಲುಗು ಹಾಗೂ ಅಸ್ಸಾಮಿ ಭಾಷೆಯ ತಲಾ ಒಂದೊಂದು ಸಿನಿಮಾಗಳನ್ನು ಸಹ ಆಸ್ಕರ್​ಗೆ ಆರಿಸಿ ಕಳಿಸಲಾಗಿದೆ. ಕನ್ನಡದ ಯಾವೊಂದು ಸಿನಿಮಾವನ್ನು ಸಹ ಈವರೆಗೆ ಆಸ್ಕರ್​ಗೆ ಅಧಿಕೃತವಾಗಿ ಕಳಿಸಲಾಗಿಲ್ಲ.

ಈವರೆಗೆ ಆಸ್ಕರ್​ಗೆ ಕಳುಹಿಸಲಾದ 56 ಸಿನಿಮಾಗಳಲ್ಲಿ ಕೇವಲ ಮೂರು ಸಿನಿಮಾಗಳಷ್ಟೆ ಬೇರೆ-ಬೇರೆ ವಿಭಾಗಗಳಿಗೆ ನಾಮಿನೇಟ್ ಆಗಿವೆ. ಮೊದಲ ಸಿನಿಮಾ ‘ಮದರ್ ಇಂಡಿಯಾ’ 1988ರ ‘ಸಲಾಂ ಬಾಂಬೆ’ ಬಳಿಕ 2001ರ ‘ಲಗಾನ್’ ಈ ಮೂರೂ ಸಿನಿಮಾಗಳು ನಾಮಿನೇಟ್ ಆಗಿದ್ದವು. ಕಳೆದ ವರ್ಷ ಅಧಿಕೃತವಾಗಿ ಕಳಿಸಲಾಗಿದ್ದ ‘ಚೆಲ್ಲೋ ಶೋ’ ಸಿನಿಮಾ ಶಾರ್ಟ್ ಲಿಸ್ಟ್ ಆಗಿತ್ತಾದರೂ ನಾಮಿನೇಷನ್ ಹಂತ ತಲುಪಲು ವಿಫಲವಾಯ್ತು. ಕಳೆದ ವರ್ಷ ಅತ್ಯುತ್ತಮ ಹಾಡು ವಿಭಾಗದಲ್ಲಿ ಆಸ್ಕರ್ ಗೆದ್ದ ‘ಆರ್​ಆರ್​ಆರ್’ ಅಧಿಕೃತ ಆಯ್ಕೆ ಆಗಿರಲಿಲ್ಲ.

ಬೆಂಗಾಲಿ ನಿರ್ದೇಶಕ ಸತ್ಯಜಿತ್ ರೇ ಅವರ ಮೂರು ಸಿನಿಮಾಗಳು ಆಸ್ಕರ್​ಗೆ ಕಳಿಸಲ್ಪಟ್ಟಿದ್ದವು. ಕಮಲ್ ಹಾಸನ್ ನಟನೆಯ ಏಳು ಸಿನಿಮಾಗಳು ಈವರೆಗೆ ಆಸ್ಕರ್​ಗೆ ಕಳಿಸಲ್ಪಟ್ಟಿವೆ. ಜೊತೆಗೆ ನಟ ರಘುಬೀರ್ ಯಾದವ್ ನಟಿಸಿರುವ ಏಳು ಸಿನಿಮಾಗಳು ಸಹ ಆಸ್ಕರ್​ಗೆ ಕಳಿಸಲ್ಪಟ್ಟಿವೆ. ಆಮಿರ್ ಖಾನ್ ನಟನೆಯ ಎರಡು ಸಿನಿಮಾಗಳು ಹಾಗೂ ನಿರ್ಮಾಪಕರಾಗಿರುವ ಎರಡು ಸಿನಿಮಾಗಳನ್ನು ಆಸ್ಕರ್​ಗೆ ಕಳಿಸಲಾಗಿದೆ.

2024ರ ಆಸ್ಕರ್​ಗೆ ಭಾರತದಿಂದ ಮಲಯಾಳಂ ಸಿನಿಮಾ ‘2018’ ಅನ್ನು ಆರಿಸಿ ಕಳಿಸಲಾಗುತ್ತಿದೆ. ಕಳೆದ ಬಾರಿ ‘ಆರ್​ಆರ್​ಆರ್’ ಸಿನಿಮಾದ ‘ನಾಟು-ನಾಟು’ ಹಾಡು ಆಸ್ಕರ್ ಗೆದ್ದಿದೆ. ಈ ಬಾರಿ ‘2018’ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುತ್ತದೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ