‘ಜವಾನ್​’ ಚಿತ್ರ ಆಸ್ಕರ್​ಗೆ ಹೋಗಬೇಕು ಎಂದ ನಿರ್ದೇಶಕ ಅಟ್ಲಿ; ಟ್ರೋಲ್​ ಮಾಡಿದ ನೆಟ್ಟಿಗರು

ಭಾರತದ ಸಿನಿಮಾಗಳು ಆಸ್ಕರ್​ ಪ್ರಶಸ್ತಿ ಪಡೆಯುವುದು ಈಗ ಕೇವಲ ಕನಸಾಗಿ ಉಳಿದಿಲ್ಲ. ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್​ ಅವಾರ್ಡ್​ ಗೆದ್ದ ಬಳಿಕ ಬೇರೆ ಚಿತ್ರತಂಡಗಳು ಕೂಡ ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯಬೇಕು ಎಂದು ಪ್ರಯತ್ನ ಮಾಡುತ್ತಿವೆ. ಆ ಪೈಕಿ ‘ಜವಾನ್​’ ಚಿತ್ರತಂಡ ಕೂಡ ಇದೆ. ಈ ಬಗ್ಗೆ ನಿರ್ದೇಶಕ ಅಟ್ಲಿ ಮಾತನಾಡಿದ್ದಾರೆ.

‘ಜವಾನ್​’ ಚಿತ್ರ ಆಸ್ಕರ್​ಗೆ ಹೋಗಬೇಕು ಎಂದ ನಿರ್ದೇಶಕ ಅಟ್ಲಿ; ಟ್ರೋಲ್​ ಮಾಡಿದ ನೆಟ್ಟಿಗರು
ಅಟ್ಲಿ, ಶಾರುಖ್​ ಖಾನ್​
Follow us
|

Updated on: Sep 19, 2023 | 12:12 PM

ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾ (Jawan Movie) ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಯಶಸ್ಸು ಕಂಡಿದೆ. ನಿರ್ದೇಶಕ ಅಟ್ಲಿ (Atlee) ಅವರಿಗೆ ಬಾಲಿವುಡ್​ನಲ್ಲಿ ಈ ಸಿನಿಮಾದಿಂದ ಬೇಡಿಕೆ ಸೃಷ್ಟಿ ಆಗಿದೆ. ಶಾರುಖ್​ ಖಾನ್​ ಅವರಿಗೆ ಈ ವರ್ಷ ಸಿಕ್ಕಿರುವ ಎರಡನೇ ಗೆಲುವು ಇದು. ಈ ವರ್ಷ ಆರಂಭದಲ್ಲಿ ‘ಪಠಾಣ್​’ ಚಿತ್ರ ಗೆದ್ದಿತ್ತು. ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಆ ಸಿನಿಮಾ ಜಯಭೇರಿ ಬಾರಿಸಿತ್ತು. ಈಗ ‘ಜವಾನ್​’ ಕೂಡ ಸಾವಿರ ಕೋಟಿ ರೂಪಾಯಿ ಗಳಿಸುವತ್ತ ಮುನ್ನುಗ್ಗುತ್ತಿದೆ. ಈ ಸಿನಿಮಾವನ್ನು ಆಸ್ಕರ್​ (Oscar) ಸ್ಪರ್ಧೆಗೆ ಕಳಿಸಬೇಕು ಎಂದು ನಿರ್ದೇಶಕ ಅಟ್ಲಿ ಹೇಳಿದ್ದಾರೆ. ಆದರೆ ಈ ಮಾತನ್ನು ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ.

ಭಾರತದ ಸಿನಿಮಾಗಳು ಆಸ್ಕರ್​ ಪ್ರಶಸ್ತಿ ಪಡೆಯುವುದು ಈಗ ಕೇವಲ ಕನಸಾಗಿ ಉಳಿದಿಲ್ಲ. ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್​ ಅವಾರ್ಡ್​ ಗೆದ್ದ ಬಳಿಕ ಬೇರೆ ಚಿತ್ರತಂಡಗಳು ಕೂಡ ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯಬೇಕು ಎಂದು ಪ್ರಯತ್ನ ಮಾಡುತ್ತಿವೆ. ಆ ಪೈಕಿ ‘ಜವಾನ್​’ ಚಿತ್ರತಂಡ ಕೂಡ ಇದೆ. ಈ ಬಗ್ಗೆ ನಿರ್ದೇಶಕ ಅಟ್ಲಿ ಅವರು ಮಾತನಾಡಿದ್ದಾರೆ. ‘ಇ-ಟೈಮ್ಸ್​’ಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಆಲೋಚನೆ ಏನು ಎಂಬುದನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ‘ಜವಾನ್​’ ಸಿನಿಮಾದಲ್ಲಿ ಶಾರುಖ್​ ಜೊತೆ ಆ್ಯಕ್ಷನ್​ ಮೆರೆದ ಪ್ರಿಯಾಮಣಿ

‘ಎಲ್ಲವೂ ಅಂದುಕೊಂಡಂತೆ ಆದರೆ ಜವಾನ್​ ಸಿನಿಮಾ ಖಂಡಿತವಾಗಿ ಆಸ್ಕರ್​ ಸ್ಪರ್ಧೆಗೆ ಹೋಗಬೇಕು. ಚಿತ್ರರಂಗದಲ್ಲಿ ಇರುವ ಎಲ್ಲರೂ ಜಾಗತಿಕ ಮಟ್ಟದ ಮೇಲೆ ಗಮನ ಹರಿಸಬೇಕು. ಏನಾಗುತ್ತದೋ ನೋಡೋಣ. ಶಾರುಖ್​ ಖಾನ್​ ಕೂಡ ಈ ಸಂದರ್ಶನ ನೋಡುತ್ತಾರೆ ಎನಿಸುತ್ತದೆ. ನಮ್ಮ ಸಿನಿಮಾವನ್ನು ಆಸ್ಕರ್​ಗೆ ಕಳಿಸೋಣವೇ ಎಂದು ಅವರನ್ನು ನಾನು ಕೇಳುತ್ತೇನೆ’ ಎಂದಿದ್ದಾರೆ ಅಟ್ಲಿ.

ಇದನ್ನೂ ಓದಿ: Jawan Movie Review: ಶಾರುಖ್​ ಖಾನ್​ ಅಭಿಮಾನಿಗಳಿಗಾಗಿ ಅಟ್ಲಿ ಮಾಡಿದ ಮಿಕ್ಸ್​ ಮಸಾಲಾ ಸಿನಿಮಾ

ನಿರ್ದೇಶಕ ಅಟ್ಲಿ ಅವರ ಈ ಮಾತಿಗೆ ಹಿಂದಿ ಸಿನಿಮಾ ಪ್ರೇಕ್ಷಕರು ಬೆಂಬಲ ಸೂಚಿಸಿದ್ದಾರೆ. ‘ಜವಾನ್​’ ಸಿನಿಮಾಗೆ ಆಸ್ಕರ್​ ಗೆಲ್ಲುವ ಅರ್ಹತೆ ಇದೆ ಎಂದು ಶಾರುಖ್​ ಖಾನ್​ ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ದಕ್ಷಿಣ ಭಾರತದ ಮಂದಿಗೆ ಈ ವಿಚಾರದಲ್ಲಿ ಸಹಮತ ಇಲ್ಲ. ಯಾಕೆಂದರೆ, ಅನೇಕ ಸಿನಿಮಾಗಳನ್ನು ಮಿಕ್ಸ್​ ಮಾಡಿ ‘ಜವಾನ್​’ ಚಿತ್ರ ಮಾಡಲಾಗಿದೆ ಎಂಬುದು ಬಹುತೇಕರ ಅಭಿಪ್ರಾಯ. ಹಾಗಾಗಿ, ‘ಇದನ್ನು ಅತ್ಯುತ್ತಮ​ ಕಾಪಿ ಪೇಸ್ಟ್​ ವಿಭಾಗದಲ್ಲಿ ಸ್ಪರ್ಧೆಗೆ ಕಳಿಸಬಹುದು’ ಎಂದು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ಅದೇನೇ ಇರಲಿ, ‘ಜವಾನ್​’ ಸಿನಿಮಾ ಗೆದ್ದು ಬೀಗುತ್ತಿದೆ. ಈ ಚಿತ್ರದಲ್ಲಿ ನಟಿಸಿದ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್​ ಸೇತುಪತಿ ಮುಂತಾದ ಕಲಾವಿದರ ಖ್ಯಾತಿ ಹೆಚ್ಚಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಮೈಸೂರು: ಆಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ ಕೆಎಸ್​ಆರ್​ಟಿಸಿ ಬಸ್
ಮೈಸೂರು: ಆಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ ಕೆಎಸ್​ಆರ್​ಟಿಸಿ ಬಸ್
ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಶಿಫ್ಟ್​
ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಶಿಫ್ಟ್​
ಬೆಂಗಳೂರಿನಲ್ಲಿ ಸದ್ಯದಲ್ಲೇ ನೀರಿನ‌ ದರ ಏರಿಕೆ? ಡಿಕೆಶಿ ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಸದ್ಯದಲ್ಲೇ ನೀರಿನ‌ ದರ ಏರಿಕೆ? ಡಿಕೆಶಿ ಹೇಳಿದ್ದಿಷ್ಟು
ರೀಲ್ಸ್​ಗೆ ಯುವತಿ ಬಲಿ, 15 ಸೆಕೆಂಡ್‌ನಲ್ಲೇ ಹಾರಿ ಹೋಯ್ತು ಪ್ರಾಣ ಪಕ್ಷಿ
ರೀಲ್ಸ್​ಗೆ ಯುವತಿ ಬಲಿ, 15 ಸೆಕೆಂಡ್‌ನಲ್ಲೇ ಹಾರಿ ಹೋಯ್ತು ಪ್ರಾಣ ಪಕ್ಷಿ
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ಕುರಿತು ಕಮಿಷನರ್​ ಹೇಳಿದ್ದಿಷ್ಟು
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ಕುರಿತು ಕಮಿಷನರ್​ ಹೇಳಿದ್ದಿಷ್ಟು
ಕೊಲೆ ಪ್ರಕರಣದ ಸಾಕ್ಷ್ಯ ನಾಶಕ್ಕೆ ನಡೆದಿತ್ತು ಪ್ಲ್ಯಾನ್
ಕೊಲೆ ಪ್ರಕರಣದ ಸಾಕ್ಷ್ಯ ನಾಶಕ್ಕೆ ನಡೆದಿತ್ತು ಪ್ಲ್ಯಾನ್
ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದ ವಿಜಯೇಂದ್ರ
ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದ ವಿಜಯೇಂದ್ರ
ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ
ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ
ಪಾರ್ಟಿಯಲ್ಲಿ ದರ್ಶನ್, ಚಿಕ್ಕಣ್ಣ ಜೊತೆ ಇದ್ದ ಮತ್ತೋರ್ವ ಹೀರೋ ಇವರೇ ನೋಡಿ
ಪಾರ್ಟಿಯಲ್ಲಿ ದರ್ಶನ್, ಚಿಕ್ಕಣ್ಣ ಜೊತೆ ಇದ್ದ ಮತ್ತೋರ್ವ ಹೀರೋ ಇವರೇ ನೋಡಿ
ಆಧಾರ್ ಕಾರ್ಡ್ ಅಪ್​ಡೇಟ್ ಮಾಡಲು ಮತ್ತೊಂದು ಅವಕಾಶ
ಆಧಾರ್ ಕಾರ್ಡ್ ಅಪ್​ಡೇಟ್ ಮಾಡಲು ಮತ್ತೊಂದು ಅವಕಾಶ