ಪರಿಣೀತಿ-ರಾಘವ್ ಚಡ್ಡಾ ಮಾತ್ರವಲ್ಲ; ಈ ಸೆಲೆಬ್ರಿಟಿಗಳು ಮದುವೆ ಆಗೋಕೆ ರಾಜಸ್ಥಾನವನ್ನೇ ಆಯ್ಕೆ ಮಾಡಿಕೊಂಡಿದ್ರು

ಅದ್ದೂರಿಯಾಗಿ ಮದುವೆ ಕಾರ್ಯಗಳನ್ನು ಮಾಡಲಾಗುತ್ತದೆ. ಸೆಲೆಬ್ರಿಟಿಗಳು ಕೂಡ ಈ ಅದ್ದೂರಿ ಮದುವೆಗೆ ಆದ್ಯತೆ ನೀಡುತ್ತಾರೆ. ಅವರು ಮದುವೆ ಆಗೋಕೆ ತಮ್ಮ ಫೇವರಿಟ್ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮದುವೆ ಆಗೋಕೆ ಬಾಲಿವುಡ್​ನ ಸೆಲೆಬ್ರಿಟಿಗಳಿಗೆ ರಾಜಸ್ಥಾನವೇ ಹಾಟ್ ಸ್ಪಾಟ್.

ಪರಿಣೀತಿ-ರಾಘವ್ ಚಡ್ಡಾ ಮಾತ್ರವಲ್ಲ; ಈ ಸೆಲೆಬ್ರಿಟಿಗಳು ಮದುವೆ ಆಗೋಕೆ ರಾಜಸ್ಥಾನವನ್ನೇ ಆಯ್ಕೆ ಮಾಡಿಕೊಂಡಿದ್ರು
ಈ ಸೆಲೆಬ್ರಿಟಿಗಳು ಮದುವೆ ಆಗೋಕೆ ರಾಜಸ್ಥಾನವನ್ನೇ ಆಯ್ಕೆ ಮಾಡಿಕೊಂಡಿದ್ರು
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Sep 19, 2023 | 8:02 AM

ಮದುವೆ ಆಗೋಕೆ ಅನೇಕರು ತಮ್ಮದೇ ಆದ ಕನಸು ಕಂಡಿರುತ್ತಾರೆ. ಅದರಲ್ಲೂ ದುಡ್ಡಿದ್ದರಂತೂ ಕೇಳೋ ಮಾತೇ ಇಲ್ಲ. ಅದ್ದೂರಿಯಾಗಿ ಮದುವೆ ಕಾರ್ಯಗಳನ್ನು ಮಾಡಲಾಗುತ್ತದೆ. ಸೆಲೆಬ್ರಿಟಿಗಳು ಕೂಡ ಈ ಅದ್ದೂರಿ ಮದುವೆಗೆ ಆದ್ಯತೆ ನೀಡುತ್ತಾರೆ. ಅವರು ಮದುವೆ ಆಗೋಕೆ ತಮ್ಮ ಫೇವರಿಟ್ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮದುವೆ ಆಗೋಕೆ ಬಾಲಿವುಡ್​ನ ಸೆಲೆಬ್ರಿಟಿಗಳಿಗೆ ರಾಜಸ್ಥಾನವೇ ಹಾಟ್ ಸ್ಪಾಟ್. ಶೀಘ್ರವೇ ಮದುವೆ ಆಗಲಿರುವ ಪರಿಣೀತಿ ಚೋಪ್ರಾ (Pariniti Chopra) ಹಾಗೂ ರಾಘವ್ ಚಡ್ಡಾ ಕೂಡ ರಾಜಸ್ಥಾನ ಆಯ್ಕೆ ಮಾಡಿಕೊಂಡಿದ್ದಾರೆ. ರಾಜಸ್ಥಾನದಲ್ಲಿ ಮದುವೆ ಆದ ಬಗ್ಗೆ ಇಲ್ಲಿದೆ ಮಾಹಿತಿ.

ರಾಘವ್-ಪರಿಣೀತಿ

ಆಪ್ ನಾಯಕ ರಾಘವ್ ಚಡ್ಡಾ ಹಾಗೂ ನಟಿ ಪರಿಣೀತಿ ಚೋಪ್ರಾ ಸೆಪ್ಟೆಂಬರ್ 24ರಂದು ಮದುವೆ ಆಗಲಿದ್ದಾರೆ. ಅವರು ರಾಜಸ್ಥಾನದ ಉದಯ್​ಪುರ ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿರುವ ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ  ವಿವಾಹ ಕಾರ್ಯ ನಡೆಯಲಿದೆ. ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಕೂಡ ಮದುವೆಗೆ ಹಾಜರಿ ಹಾಕಲಿದ್ದಾರೆ. ಸಾಂಪ್ರದಾಯಿಕವಾಗಿ ಮದುವೆ ಕಾರ್ಯ ನಡೆಯಲಿದೆ.

ಕತ್ರಿನಾ ಕೈಫ್-ವಿಕ್ಕಿ ಕೌಶಲ್

ಬಾಲಿವುಡ್​ನ ಕ್ಯೂಟ್ ಕಪಲ್ ಎಂದೇ ಖ್ಯಾತಿ ಪಡೆದಿರುವ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಅವರು ಕಳೆದ ವರ್ಷ ಡಿಸೆಂಬರ್ 9ರಂದು ಮದುವೆ ಆದರು. ಸಿಕ್ಸ್ ಸೆನ್ಸ್ ಫೋರ್ಟ್​ನಲ್ಲಿ ಇವರ ಮದುವೆ ನಡೆದಿದೆ. ಕೇವಲ ಆಪ್ತರು ಹಾಗೂ ಕುಟುಂಬದವರು ಮಾತ್ರ ಮದುವೆಗೆ ಹಾಜರಿ ಹಾಕಿದ್ದರು. ವಯಸ್ಸಿನಲ್ಲಿ ಕತ್ರಿನಾಗಿಂತ ವಿಕ್ಕಿ ಸಣ್ಣವರು.

ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್

ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್ ಪಾಪ್ ಸಿಂಗರ್ ನಿಕ್ ಜೋನಸ್ ಇಬ್ಬರೂ ಮದುವೆ ಆಗಿದ್ದು ರಾಜಸ್ಥಾನದಲ್ಲಿ. ಜೋದ್​ಪುರದ ಉಮೈದ್ ಭವನ್ ಪ್ಯಾಲೇಸ್​ನಲ್ಲಿ ಪ್ರಿಯಾಂಕಾ ಹಾಗೂ ನಿಕ್ ಜೋನಸ್ ವಿವಾಹ ಆಗಿದ್ದಾರೆ. ಕ್ರೈಸ್ತ ಹಾಗೂ ಹಿಂದೂ ಸಂಪ್ರದಾಯದ ಪ್ರಕಾರ ಇವರ ಮದುವೆ ನಡೆದಿತ್ತು. ಈಗ ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ.

ಹನ್ಸಿಕಾ ಹಾಗೂ ಸೋಹೇಲ್ ಕತೂರಿಯಾ

ಹನ್ಸಿಕಾ ಮೋಟ್ವಾನಿ ಹಾಗೂ ಸೋಹೇಲ್ ಕತೂರಿಯಾ ಅವರು ವಿವಾಹ ಆಗಿದ್ದಾರೆ. ಇವರು ಮದುವೆಗೆ ಆಯ್ಕೆ ಮಾಡಿಕೊಂಡಿದ್ದು ರಾಜಸ್ಥಾನವನ್ನು. ಜೈಪುರದ ಮುಂಡೋತಾ ಫೋರ್ಟ್ ಆ್ಯಂಡ್ ಪ್ಯಾಲೆಸ್​ನಲ್ಲಿ ಈ ಮದುವೆ ನಡೆದಿತ್ತು. ಇಬ್ಬರೂ ಸುತ್ತಾಡಿಕೊಂಡು ಹಾಯಾಗಿದ್ದಾರೆ.

ರವೀನಾ ಟಂಡನ್-ಅನಿಲ್ ತಡಾನಿ

ನಟಿ ರವೀನ್ ಟಂಡನ್ ಅವರು ‘ಕೆಜಿಎಫ್ 2’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು 2004ರ ಫೆಬ್ರವರಿ 22ರಂದು ಸಿನಿಮಾ ಹಂಚಿಕೆದಾರ ಅನಿಲ್ ತಡಾನಿ ಅವರನ್ನು ಮದುವೆ ಆಗಿದ್ದಾರೆ. ಉದಯಪುರದ ಶಿವ ನಿವಾಸ ಪ್ಯಾಲೆಸ್​ನಲ್ಲಿ ನಡೆದಿತ್ತು. ಇವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.

ಶ್ರಿಯಾ ಶರಣ್ ಹಾಗೂ ಆ್ಯಂಡ್ರೇ ಕೊಸ್ಚೀವ್

‘ದೃಶ್ಯಂ 2’, ‘ಕಬ್ಜ’ ಮೊದಲಾದ ಸಿನಿಮಾಗಳಲ್ಲಿ ನಟಿಸಿರುವ ಶ್ರಿಯಾ ಶರಣ್ ಅವರು ತಮ್ಮ ಬಾಯ್​ಫ್ರೆಂಡ್​ ಆ್ಯಂಡ್ರೇ ಅವರನ್ನು ಮದುವೆ ಆದರು. 2018ರ ಮಾರ್ಚ್ 12ರಂದು ಅವರು ಮುಂಬೈನಲ್ಲಿ ಮದುವೆ ಆದರು. ಬಳಿಕ ಉದಯಪುರುದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ನೀಲ್ ನಿತಿನ್ ಮುಕೇಶ್ ಹಾಗೂ ರುಕ್ಮಿಣಿ ಸಹಾಯ್

ನಟ ನೀಲ್ ನಿತಿನ್ ಮುಕೇಶ್ ಹಾಗೂ ರುಕ್ಮಿಣಿ ಸಹಾಯ್ ಅವರು 2017ರ ಫೆಬ್ರವರಿ 9ರಂದು ಉದಯಪುರುದಲ್ಲಿ ಮದುವೆ ಆದರು. ಮದುವೆಗೂ ಮೊದಲು ಮೂರು ದಿನ ಕಾರ್ಯಕ್ರಮ ಇಲ್ಲಿ ನಡೆದಿತ್ತು.

ಇದನ್ನೂ ಓದಿ: ಇರಾ ಖಾನ್ ಹಂಚಿಕೊಂಡ ಈ ಫೋಟೋದಲ್ಲಿದ್ದಾರೆ ಮಾಜಿ ಸ್ಟಾರ್ ನಟ; ಯಾರೆಂದು ಗುರುತಿಸುತ್ತೀರಾ?

ಸಿದ್ದಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ

‘ಶೇರ್ಷಾ’ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಅವರು ಒಟ್ಟಾಗಿ ನಟಿಸಿದ್ದರು. ಈ ವೇಳೆ ಸೆಟ್​ನಲ್ಲಿ ಅವರಿಗೆ ಪ್ರೀತಿ ಮೂಡಿತ್ತು. ಹಲವು ವರ್ಷ ಇವರು ಡೇಟಿಂಗ್ ಮಾಡಿದರು. ಈಗ ಸಿದ್ದಾರ್ಥ್ ಹಾಗೂ ಕಿಯಾರಾ ಮದುವೆ ಆಗಿದ್ದಾರೆ. ಈ ವರ್ಷ ಫೆಬ್ರವರಿ 7ರಂದು ಜೈಸಲ್ಮೇರ್​ನಲ್ಲಿ ಸೂರ್ಯಗಢದ ಪ್ಯಾಲೆಸ್ ಹೊಟೆಲ್​ನಲ್ಲಿ ಮದುವೆ ಆಗಿದ್ದಾರೆ. ಅವರ ಮದುವೆ ಫೋಟೋ ಹಾಗೂ ವಿಡಿಯೋ ವೈರಲ್ ಆಗಿತ್ತು.

ಇರಾ ಖಾನ್-ನೂಪುರ್ ಶಿಖಾರೆ

ಆಮಿರ್ ಖಾನ್ ಮಗಳು ಇರಾ ಖಾನ್ ಹಾಗೂ ಅವರ ಬಾಯ್​ಫ್ರೆಂಡ್ ನೂಪರ್​ ಶಿಖಾರೆ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡರು. ಈಗ ಮುಂದಿನ ವರ್ಷ ಜನವರಿ 3ರಂದು ಇಬ್ಬರೂ ಮದುವೆ ಆಗುತ್ತಿದ್ದಾರೆ. ಇಬ್ಬರೂ ಮದುವೆಗೆ ಉದಯಪುರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಖತ್ ಅದ್ದೂರಿಯಾಗಿ ಮದುವೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ