Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಲಿದ್ದಾರೆ ಸಮಂತಾ; ಆಫರ್ ಕೊಟ್ಟೋರು ಯಾರು?

ಸಮಂತಾ ಅವರು ‘ಖುಷಿ’ ಸಿನಿಮಾ ಸಕ್ಸಸ್ ಮೀಟ್​ನಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ನೇರವಾಗಿ ಮುಂಬೈಗೆ ಹೋದರು. ಪಾರ್ಟಿ ಒಂದರಲ್ಲಿ ಸಮಂತಾ ಹಾಗೂ ಕರಣ್ ಜೋಹರ್ ಭೇಟಿ ಆಗಿದ್ದಾರಂತೆ. ಈ ವೇಳೆ ಕರಣ್ ಅವರು ಸಿನಿಮಾ ಒಂದರ ಬಗ್ಗೆ ಚರ್ಚೆ ಮಾಡಿದ್ದಾರೆ. ಸಲ್ಮಾನ್ ಖಾನ್ ಜೊತೆ ನಟಿಸೋಕೆ ಸಮಂತಾಗೆ ಆಫರ್ ನೀಡಲಾಗಿದೆ.

ಬಾಲಿವುಡ್​ನಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಲಿದ್ದಾರೆ ಸಮಂತಾ; ಆಫರ್ ಕೊಟ್ಟೋರು ಯಾರು?
ಸಮಂತಾ-ಸಲ್ಮಾನ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on: Sep 19, 2023 | 6:30 AM

ಬಾಲಿವುಡ್ ನಟಿ ಸಮಂತಾ (Samantha) ಅವರು ಅಮೆರಿಕಕ್ಕೆ ತೆರಳಿದ್ದರು. ‘ಖುಷಿ’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಪ್ರಚಾರ ಮಾಡುವ ಬದಲು ಅವರು ಅಲ್ಲಿಗೆ ತೆರಳಿದ್ದು ಏಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಇದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಸದ್ಯ ಸಮಂತಾ ಮುಂಬೈನಲ್ಲಿದ್ದಾರೆ ಎನ್ನಲಾಗಿದೆ. ನ್ಯೂಯಾರ್ಕ್​ನಿಂದ ನೇರವಾಗಿ ಅವರು ಅಲ್ಲಿಗೆ ಹೋಗಿದ್ದಾರೆ. ಮೂಲಗಳ ಪ್ರಕಾರ ಸಮಂತಾ ಅವರು ಸಲ್ಮಾನ್ ಖಾನ್ ಜೊತೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ಕರಣ್ ಜೋಹರ್ ಅವರು ಬಂಡವಾಳ ಹೂಡಲಿದ್ದಾರಂತೆ.

ಸಮಂತಾ ಅವರು ‘ಖುಷಿ’ ಸಿನಿಮಾ ಸಕ್ಸಸ್ ಮೀಟ್​ನಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ನೇರವಾಗಿ ಮುಂಬೈಗೆ ಹೋದರು. ಪಾರ್ಟಿ ಒಂದರಲ್ಲಿ ಸಮಂತಾ ಹಾಗೂ ಕರಣ್ ಜೋಹರ್ ಭೇಟಿ ಆಗಿದ್ದಾರಂತೆ. ಈ ವೇಳೆ ಕರಣ್ ಅವರು ಸಿನಿಮಾ ಒಂದರ ಬಗ್ಗೆ ಚರ್ಚೆ ಮಾಡಿದ್ದಾರೆ. ಸಲ್ಮಾನ್ ಖಾನ್ ಜೊತೆ ನಟಿಸೋಕೆ ಸಮಂತಾಗೆ ಆಫರ್ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್ ಜೊತೆ ಸಲ್ಮಾನ್ ಖಾನ್ ಕೈ ಜೋಡಿಸಲಿದ್ದಾರಂತೆ. ಈ ವಿಚಾರ ಇತ್ತೀಚೆಗೆ ಚರ್ಚೆ ಆಗಿತ್ತು. ಇದಕ್ಕೆ ಸಲ್ಮಾನ್ ಖಾನ್ ಒಪ್ಪಿಗೆ ಸೂಚಿಸಿದ್ದಾರೆ. ಈ ಚಿತ್ರದಲ್ಲಿ ನಟಿಸೋಕೆ ಸಮಂತಾಗೆ ಆಫರ್ ನೀಡಲಾಗಿದೆ. ಅವರು ಈ ಚಿತ್ರ ಒಪ್ಪಿಕೊಂಡಿದ್ದಾರೆ ಎನ್ನುತ್ತಿವೆ ಮೂಲಗಳು. ಇದು ನಿಜವೇ ಆದಲ್ಲಿ ಸಮಂತಾ ಅಭಿಮಾನಿಗಳು ಖುಷಿಪಡಲಿದ್ದಾರೆ.

ಸಮಂತಾ ರುಥ್ ಪ್ರಭು ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು ಹಿಂದಿ ಚಿತ್ರರಂಗದತ್ತ ಒಲವು ತೋರುತ್ತಿದ್ದಾರೆ. ಹಿಂದಿ ವೆಬ್ ಸೀರಿಸ್​ಗಳಲ್ಲೂ ಅವರು ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ಜೊತೆ ನಟಿಸಿದರೆ ಹಿಂದಿಯಲ್ಲಿ ಸಮಂತಾ ಬೇಡಿಕೆ ಹೆಚ್ಚಲಿದೆ.

ಇದನ್ನೂ ಓದಿ: ವಿಚ್ಛೇದನ ಕೊಟ್ಟು ಹೋದ ಸಮಂತಾಗೆ ಅನಾರೋಗ್ಯ ಅಂತ ತಿಳಿದಾಗ ಮಾಜಿ ಪತಿ ನಾಗ ಚೈತನ್ಯ ಹೀಗೆಲ್ಲ ಮಾಡಿದ್ರಾ? 

‘ಜವಾನ್’ ಸಿನಿಮಾದಲ್ಲಿ ಸಮಂತಾ ನಟಿಸಬೇಕಿತ್ತು. ಆದರೆ, ಈ ಆಫರ್​ನ ಅವರು ರಿಜೆಕ್ಟ್ ಮಾಡಿದರು. ಆ ಬಳಿಕ ಸಮಂತಾ ಜಾಗಕ್ಕೆ ನಯನತಾರಾ ಬಂದರು. ಮೂಲಗಳ ಪ್ರಕಾರ ದೀಪಿಕಾ ಮಾಡಿದ ಪಾತ್ರದಲ್ಲಿ ನಟಿಸೋಕು ಸಮಂತಾಗೆ ಆಫರ್ ನೀಡಲಾಗಿತ್ತು. ಅದನ್ನು ಕೂಡ ಅವರು ರಿಜೆಕ್ಟ್ ಮಾಡಿದ್ದರು. ಈಗ ಸಲ್ಮಾನ್ ಖಾನ್ ಜೊತೆ ನಟಿಸೋ ಆಯ್ಕೆಯನ್ನು ಅವರು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ