AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ವಿಚ್ಛೇದನ ಕೊಟ್ಟು ಹೋದ ಸಮಂತಾಗೆ ಅನಾರೋಗ್ಯ ಅಂತ ತಿಳಿದಾಗ ಮಾಜಿ ಪತಿ ನಾಗ ಚೈತನ್ಯ ಹೀಗೆಲ್ಲ ಮಾಡಿದ್ರಾ?

Samantha Health Problem: ಸಮಂತಾಗೆ ಆರೋಗ್ಯ ಕೈ ಕೊಟ್ಟಿದೆ ಎಂಬ ವಿಚಾರ ತಿಳಿದ ಬಳಿಕ ಅಭಿಮಾನಿಗಳಿಗೆ ಬೇಸರ ಆಗಿದೆ. ಅಲ್ಲದೇ, ಮಾಜಿ ಪತಿ ನಾಗ ಚೈತನ್ಯ ಬಗ್ಗೆಯೂ ಒಂದಷ್ಟು ಅಂತೆ-ಕಂತೆಗಳು ಹಬ್ಬಿವೆ.

Samantha: ವಿಚ್ಛೇದನ ಕೊಟ್ಟು ಹೋದ ಸಮಂತಾಗೆ ಅನಾರೋಗ್ಯ ಅಂತ ತಿಳಿದಾಗ ಮಾಜಿ ಪತಿ ನಾಗ ಚೈತನ್ಯ ಹೀಗೆಲ್ಲ ಮಾಡಿದ್ರಾ?
ಸಮಂತಾ, ನಾಗ ಚೈತನ್ಯ
TV9 Web
| Edited By: |

Updated on: Nov 04, 2022 | 9:27 AM

Share

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರ ವೈಯಕ್ತಿಕ ಜೀವನದ ಬಗ್ಗೆ ಸಖತ್​ ಚರ್ಚೆ ಆಗುತ್ತಿದೆ. ಅವರಿಗೆ ಈಗ ಅನಾರೋಗ್ಯ ಕಾಡುತ್ತಿದೆ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಈ ಸಂರ್ಭದಲ್ಲಿ ಅವರ ಮಾಜಿ ಪತಿ ನಾಗ ಚೈತನ್ಯ (Naga Chaitanya) ಬಗ್ಗೆಯೂ ಒಂದಷ್ಟು ಅಂತೆ-ಕಂತೆಗಳು ಹರಿದಾಡುತ್ತಿವೆ. ಈ ಸೆಲೆಬ್ರಿಟಿಗಳು ವಿಚ್ಛೇದನ ಪಡೆದು ಬಹಳ ತಿಂಗಳುಗಳು ಕಳೆದಿವೆ. ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಪರಸ್ಪರ ಅವರಿಬ್ಬರು ಮುಖ ನೋಡಿಕೊಂಡಿಲ್ಲ. ಸಾರ್ವಜನಿಕವಾಗಿ ಒಬ್ಬರ ಬಗ್ಗೆ ಮತ್ತೊಬ್ಬರು ಮಾತನಾಡಿಲ್ಲ. ಆದರೆ ಸಮಂತಾಗೆ ಅನಾರೋಗ್ಯದ (Samantha Health Condition) ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ನಾಗ ಚೈತನ್ಯ ಬಗ್ಗೆ ಗಾಸಿಪ್​ ಮಂದಿ ಇಲ್ಲಸಲ್ಲದ ಸುದ್ದಿ ಹಬ್ಬಿಸುತ್ತಿದ್ದಾರೆ.

ನಾಗ ಚೈತನ್ಯ ಮತ್ತು ಸಮಂತಾ ಅವರು ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆ ಆದವರು. ಆದರೆ ನಾಲ್ಕೇ ವರ್ಷಕ್ಕೆ ಅವರ ಸಂಸಾರ ಅಂತ್ಯವಾಯ್ತು. ಇಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ವಿಚ್ಛೇದನ ಪಡೆದುಕೊಂಡರು. ಮಾಜಿ ಪತ್ನಿ ಬಗ್ಗೆ ನಾಗ ಚೈತನ್ಯ ಅವರು ಈಗಲೂ ಕರುಣೆ ತೋರುತ್ತಿದ್ದಾರೆ ಎಂಬ ಗಾಸಿಪ್​ ಹರಡಿದೆ. ಅನಾರೋಗ್ಯದ ವಿಚಾರ ತಿಳಿಯುತ್ತಿದ್ದಂತೆಯೇ ನಾಗ ಚೈತನ್ಯ ಫೋನ್​ ಮಾಡಿದ್ರಂತೆ, ಆಸ್ಪತ್ರೆಗೆ ಹೋಗಿ ನೋಡಿಕೊಂಡು ಬಂದ್ರಂತೆ, ಆರೋಗ್ಯ ವಿಚಾರಿಸಿ ಕಾಳಜಿ ತೋರಿಸಿದ್ರಂತೆ ಎಂದೆಲ್ಲ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಆಸ್ಪತ್ರೆಯಲ್ಲಿ ಸಮಂತಾ ಅವರನ್ನು ನಾಗ ಚೈತನ್ಯ ಭೇಟಿ ಆಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಯಾವುದೇ ಫೋಟೋ ಅಥವಾ ವಿಡಿಯೋ ಸಿಕ್ಕಿಲ್ಲ. ಹಾಗಾಗಿ ಇಂಥ ವರದಿಯಲ್ಲಿ ಹುರುಳಿಲ್ಲ ಎಂದು ಅಭಿಮಾನಿಗಳು ಅರ್ಥ ಮಾಡಿಕೊಂಡಿದ್ದಾರೆ. ವೈಯಕ್ತಿಕ ವಿಚಾರಗಳ ಕುರಿತು ನಾಗ ಚೈತನ್ಯ ಸೈಲೆಂಟ್​ ಆಗಿದ್ದಾರೆ. ಮಾಜಿ ಪತ್ನಿ ಬಗ್ಗೆ ಅವರು ಯಾವುದೇ ರೀತಿಯ ಹೇಳಿಕೆಗಳನ್ನು ನೀಡುತ್ತಿಲ್ಲ.

ಇದನ್ನೂ ಓದಿ
Image
Naga Chaitanya: ‘ಸಮಂತಾ ಸಿಕ್ಕರೆ ತಬ್ಬಿಕೊಳ್ತೀನಿ, ಟ್ಯಾಟೂ ತೆಗೆಸಲ್ಲ’: ಹಳೇ ಹೆಂಡತಿ ಬಗ್ಗೆ ನಾಗ ಚೈತನ್ಯ ನೇರ ಮಾತು
Image
Samantha: ನಾಗ ಚೈತನ್ಯ ಜತೆ ವಾಸಿಸಿದ್ದ ಮನೆಯನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿದ ಸಮಂತಾ; ಏನಿದು ಸೆಂಟಿಮೆಂಟ್​?
Image
Samantha: ‘ನಾಗ ಚೈತನ್ಯಗೆ ಡಿವೋರ್ಸ್​ ನೀಡಿದ ಬಳಿಕ ಕಷ್ಟ ಆಯ್ತು’; ಕಡೆಗೂ ನಿಜ ಒಪ್ಪಿಕೊಂಡ ಸಮಂತಾ
Image
‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ-ಅಕ್ಷಯ್ ಕುಮಾರ್

ಸಮಂತಾ ಕೈಯಲ್ಲಿ ಹಲವು ಸಿನಿಮಾಗಳಿವೆ. ಅನಾರೋಗ್ಯದ ನಡುವೆಯೂ ಅವರು ಡಬ್ಬಿಂಗ್​ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಅವರು ಇತ್ತೀಚೆಗೆ ಸೋಶಿಯಲ್​ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಅವರು ನಟಿಸಿರುವ ‘ಯಶೋದ’ ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗಲಿದೆ. ಟ್ರೇಲರ್​ ಮೂಲಕ ಗಮನ ಸೆಳೆದಿರುವ ಈ ಸಿನಿಮಾ ನವೆಂಬರ್​ 11ರಂದು ತೆರೆಕಾಣಲಿದೆ.

ಬಹುನಿರೀಕ್ಷಿತ ‘ಶಾಕುಂತಲಂ’ ಸಿನಿಮಾದ ಕೆಲಸಗಳಲ್ಲೂ ಸಮಂತಾ ತೊಡಗಿಕೊಂಡಿದ್ದಾರೆ. ಇದಲ್ಲದೇ, ವಿಜಯ್​ ದೇವರಕೊಂಡ ಜೊತೆ ಅವರು ‘ಖುಷಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಮಾಂತಾ ಅವರ ಅನಾರೋಗ್ಯದ ಕಾರಣದಿಂದ ‘ಖುಷಿ’ ಚಿತ್ರದ ಶೂಟಿಂಗ್​ ಮುಂದೂಡಲ್ಪಟ್ಟಿದೆ. ಅವರು ಆದಷ್ಟು ಬೇಗ ಸಂಪೂರ್ಣವಾಗಿ ಚೇತರಿಸಿಕೊಂಡು ಮೊದಲಿನಂತಾಗಲಿ ಎಂದು ಅಭಿಮಾನಿಗಳು ಮತ್ತು ಆಪ್ತರು ಹಾರೈಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!