ಸಾವಿರ ಕೋಟಿ ಕ್ಲಬ್ ಸೇರಲು ರೆಡಿ ಆದ ‘ಜವಾನ್’ ಸಿನಿಮಾ; ಭಾರತದಲ್ಲಿ ಎಷ್ಟು ಕೋಟಿ ರೂಪಾಯಿ?

ಸೆಪ್ಟೆಂಬರ್ 7ರಂದು ‘ಜವಾನ್’ ಸಿನಿಮಾ ರಿಲೀಸ್ ಆಯಿತು. ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳು ಭಾಷೆಗೂ ಡಬ್ ಆಗಿ ಚಿತ್ರ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಬಾಲಿವುಡ್​ ಹಾಗೂ ದಕ್ಷಿಣ ಭಾರತದ ಕಲಾವಿದರು ನಟಿಸಿರುವುದರಿಂದ ಭಾರತಾದ್ಯಂತ ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿದೆ. ಈ ಚಿತ್ರ ಭಾರತಾದ್ಯಂತ 477 ಕೋಟಿ ರೂಪಾಯಿ ಗಳಿಸಿದೆ.

ಸಾವಿರ ಕೋಟಿ ಕ್ಲಬ್ ಸೇರಲು ರೆಡಿ ಆದ ‘ಜವಾನ್’ ಸಿನಿಮಾ; ಭಾರತದಲ್ಲಿ ಎಷ್ಟು ಕೋಟಿ ರೂಪಾಯಿ?
ಶಾರುಖ್ ಖಾನ್
Follow us
| Edited By: Rajesh Duggumane

Updated on: Sep 18, 2023 | 12:39 PM

ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ (Jawan Movie) ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಶಾರುಖ್ ಖಾನ್ ವೃತ್ತಿ ಜೀವನಕ್ಕೆ ಮತ್ತೊಂದು ಹಿಟ್ ಸಿನಿಮಾ ಸೇರ್ಪಡೆ ಆಗಿದೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಅವರು ಹಲವು ಗೆಟಪ್​ನಲ್ಲಿ ಪ್ರೇಕ್ಷಕರ ಎದುರು ಬಂದಿದ್ದು ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ಸಿನಿಮಾ 11ನೇ ದಿನ ಅಂದರೆ ಭಾನುವಾರ (ಸೆಪ್ಟೆಂಬರ್ 17) 36 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಭಾರತದಲ್ಲಿ ಚಿತ್ರದ ಕಲೆಕ್ಷನ್ 477 ಕೋಟಿ ರೂಪಾಯಿ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ 500 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

ಸೆಪ್ಟೆಂಬರ್ 7ರಂದು ‘ಜವಾನ್’ ಸಿನಿಮಾ ರಿಲೀಸ್ ಆಯಿತು. ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳು ಭಾಷೆಗೂ ಡಬ್ ಆಗಿ ಚಿತ್ರ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಬಾಲಿವುಡ್​ ಹಾಗೂ ದಕ್ಷಿಣ ಭಾರತದ ಕಲಾವಿದರು ನಟಿಸಿರುವುದರಿಂದ ಭಾರತಾದ್ಯಂತ ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿದೆ. ಈ ಚಿತ್ರ ಭಾರತಾದ್ಯಂತ 477 ಕೋಟಿ ರೂಪಾಯಿ ಗಳಿಸಿದೆ. ವಿಶ್ವ ಮಾರುಕಟ್ಟೆಯಲ್ಲಿ ಸಿನಿಮಾದ ಗಳಿಕೆ 850 ಕೋಟಿ ರೂಪಾಯಿ ಸಮೀಪಿಸಿದೆ.

‘ಜವಾನ್’ ಸಿನಿಮಾಗೆ ಅಟ್ಲಿ ನಿರ್ದೇಶನ ಮಾಡಿದ್ದಾರೆ. ತಮಿಳಿನಲ್ಲಿ ಅವರು ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದ್ದರು. ಅವರು ಇದೇ ಮೊದಲ ಬಾರಿಗೆ ಬಾಲಿವುಡ್​ಗೆ ಕಾಲಿಟ್ಟು ತಮ್ಮ ಕೈಚಳಕ ತೋರಿಸಿದ್ದಾರೆ. ತಮಿಳಿನ ವಿಜಯ್ ಸೇತುಪತಿ ಹಾಗೂ ನಯನತಾರಾ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶಾರುಖ್ ಖಾನ್ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಸಾನ್ಯಾ ಮಲ್ಹೋತ್ರಾ, ದೀಪಿಕಾ ಪಡುಕೋಣೆ, ಪ್ರಿಯಾಮಣಿ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಗಣೇಶ ಚತುರ್ಥಿ ಸಂದರ್ಭದಲ್ಲಿ ಸಿನಿಮಾ ಆಗಿರುವುದರಿಂದ ಮತ್ತಷ್ಟು ಗಳಿಕೆ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ‘ಜವಾನ್’ ಚಿತ್ರಕ್ಕೆ ಸೀಕ್ವೆಲ್ ಮಾಡುವ ಇಚ್ಛೆ ವ್ಯಕ್ತಪಡಿಸಿದ ಅಟ್ಲಿ; ಕಾರಣ ತಿಳಿಸಿದ ನಿರ್ದೇಶಕ

11 ದಿನದ ಕಲೆಕ್ಷನ್ ಬಗ್ಗೆ ಇಲ್ಲಿದೆ ವಿವರ.

ಗುರುವಾರ (ಸೆಪ್ಟೆಂಬರ್ 07): ಹಿಂದಿ, ತಮಿಳು ತೆಲುಗು ಕಲೆಕ್ಷನ್ 75 ಕೋಟಿ ರೂಪಾಯಿ.

ಶುಕ್ರವಾರ (ಸೆಪ್ಟೆಂಬರ್ 08): ಹಿಂದಿ, ತಮಿಳು ತೆಲುಗು ಕಲೆಕ್ಷನ್ 53.23 ಕೋಟಿ ರೂಪಾಯಿ

ಶನಿವಾರ (ಸೆಪ್ಟೆಂಬರ್ 09): ಹಿಂದಿ, ತಮಿಳು ತೆಲುಗು ಕಲೆಕ್ಷನ್ 77.83 ಕೋಟಿ ರೂಪಾಯಿ

ಭಾನುವಾರ (ಸೆಪ್ಟೆಂಬರ್ 10): ಹಿಂದಿ, ತಮಿಳು ತೆಲುಗು ಕಲೆಕ್ಷನ್ 80.01 ಕೋಟಿ ರೂಪಾಯಿ

ಸೋಮವಾರ (ಸೆಪ್ಟೆಂಬರ್ 11): ಹಿಂದಿ, ತಮಿಳು ತೆಲುಗು ಕಲೆಕ್ಷನ್ 30.05 ಕೋಟಿ ರೂಪಾಯಿ

ಮಂಗಳವಾರ (ಸೆಪ್ಟೆಂಬರ್ 12): ಹಿಂದಿ, ತಮಿಳು ತೆಲುಗು ಕಲೆಕ್ಷನ್ 26 ಕೋಟಿ ರೂಪಾಯಿ

ಬುಧವಾರ (ಸೆಪ್ಟೆಂಬರ್ 13): ಹಿಂದಿ, ತಮಿಳು ತೆಲುಗು ಕಲೆಕ್ಷನ್ 21.3 ಕೋಟಿ ರೂಪಾಯಿ

ಎರಡನೇ ಗುರುವಾರ (ಸೆಪ್ಟೆಂಬರ್ 14): ಹಿಂದಿ, ತಮಿಳು ತೆಲುಗು ಕಲೆಕ್ಷನ್ 20.01 ಕೋಟಿ ರೂಪಾಯಿ.

ಎರಡನೇ ಶುಕ್ರವಾರ (ಸೆಪ್ಟೆಂಬರ್ 15): ಹಿಂದಿ, ತಮಿಳು ತೆಲುಗು ಕಲೆಕ್ಷನ್ 19.01 ಕೋಟಿ ರೂಪಾಯಿ.

ಎರಡನೇ ಶನಿವಾರ (ಸೆಪ್ಟೆಂಬರ್ 16): ಹಿಂದಿ, ತಮಿಳು ತೆಲುಗು ಕಲೆಕ್ಷನ್ 31.08 ಕೋಟಿ ರೂಪಾಯಿ.

ಎರಡನೇ ಭಾನುವಾರ (ಸೆಪ್ಟೆಂಬರ್ 17): ಹಿಂದಿ, ತಮಿಳು ತೆಲುಗು ಕಲೆಕ್ಷನ್ 36.52 ಕೋಟಿ ರೂಪಾಯಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ