AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದಯಪುರದಲ್ಲಿ ನಡೆಯಲಿದೆ ಆಮಿರ್​ ಖಾನ್​ ಪುತ್ರಿ ಇರಾ ಖಾನ್​ ಮದುವೆ; ಜೋರಾಗಿದೆ ಸಿದ್ಧತೆ

ಆಮಿರ್ ಖಾನ್ ಪುತ್ರಿ ಇರಾ ಖಾನ್ ಅವರು ಸದ್ಯದಲ್ಲೇ ಮದುವೆ ಆಗಲಿದ್ದಾರೆ. ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರಂತೆಯೇ ಇರಾ ಕೂಡ ರಾಜಸ್ಥಾನದ ಉದಯಪುರದಲ್ಲಿ ಮದುವೆಯಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

ಉದಯಪುರದಲ್ಲಿ ನಡೆಯಲಿದೆ ಆಮಿರ್​ ಖಾನ್​ ಪುತ್ರಿ ಇರಾ ಖಾನ್​ ಮದುವೆ; ಜೋರಾಗಿದೆ ಸಿದ್ಧತೆ
ಇರಾ ಖಾನ್, ನೂಪುರ್​ ಶಿಖಾರೆ
Follow us
ಮದನ್​ ಕುಮಾರ್​
|

Updated on: Sep 18, 2023 | 4:06 PM

ಹಿಂದಿ ಚಿತ್ರರಂಗದಲ್ಲೀಗ ಮದುವೆಯ ಪರ್ವ. ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ರಾಜಸ್ಥಾನದ ಲೇಕ್ಸ್ ಸಿಟಿ ಅಂದರೆ ಉದಯಪುರದಲ್ಲಿ (Udaipur) ವಿವಾಹವಾಗಲಿದ್ದಾರೆ. ಇವರ ಮದುವೆಯ ಬಗ್ಗೆ ಹಲವು ಸುದ್ದಿಗಳು ಬರುತ್ತಿವೆ. ಅವರು ಆಯ್ಕೆ ಮಾಡಿಕೊಂಡಿರುವ ಸ್ಥಳದ ವಿಶೇಷತೆ ಬಗ್ಗೆಯೂ ಹಲವು ವರದಿಗಳು ಪ್ರಕಟ ಆಗುತ್ತಿವೆ. ಇದೀಗ ಬಿ-ಟೌನ್​ ಅಂಗಳದಲ್ಲಿ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಪರಿಣೀತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ರೀತಿಯೇ ಬಾಲಿವುಡ್​ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಅವರ ಪುತ್ರಿ ಇರಾ ಖಾನ್​ (Ira Khan) ಕೂಡ ಉದಯಪುರದಲ್ಲೇ ಮದುವೆ ಆಗಲಿದ್ದಾರೆ. ಪ್ರಿಯಕರ ನೂಪುರ್​ ಶಿಖಾರೆ (Nupur Shikhare) ಜೊತೆ ಅವರು ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಆಮಿರ್ ಖಾನ್ ಪುತ್ರಿ ಇರಾ ಖಾನ್​ ಕಳೆದ ವರ್ಷ ಗೆಳೆಯ ನೂಪುರ್ ಶಿಖಾರೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸದ್ಯ ಈ ಜೋಡಿ ಮದುವೆಯ ತಯಾರಿಯಲ್ಲಿ ಬ್ಯುಸಿಯಾಗಿದೆ. ಮೂಲಗಳ ಪ್ರಕಾರ, ಇರಾ ಖಾನ್​ ಮತ್ತು ನೂಪುರ್ ಶಿಖಾರೆ ಅವರ ಮದುವೆಗೆ ಬಹುತೇಕ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಇವರಿಬ್ಬರು ಉದಯಪುರದಲ್ಲಿಯೇ ಮದುವೆಯಾಗಲು ನಿರ್ಧರಿಸಿದ್ದಾರೆ. ಉದಯಪುರದಲ್ಲಿ ಅವರ ಮದುವೆಗೆ ಬರುವ ಅತಿಥಿಗಳ ಪಟ್ಟಿಯನ್ನು ಸಹ ಸಿದ್ಧಪಡಿಸಲಾಗಿದೆ ಎಂದು ಇರಾ ಅವರ ಆಪ್ತರೊಬ್ಬರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Ira Khan: 25ನೇ ವಸಂತಕ್ಕೆ ಕಾಲಿಟ್ಟ ಆಮಿರ್​ ಖಾನ್​ ಪುತ್ರಿ ಇರಾ ಖಾನ್​; ಜನ್ಮದಿನದಂದು ಭಾವಿ ಪತಿಗೆ ಸಿಹಿ ಮುತ್ತು

2024ರ ಜನವರಿ 3ರಂದು ಇರಾ ಮದುವೆ ಆಗಲಿದ್ದಾರೆ ಎಂದು ಈ ಕುಟುಂಬಕ್ಕೆ ಹತ್ತಿರವಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಇರಾ ಖಾನ್​ ಮತ್ತು ನೂಪುರ್​ ಶಿಖಾರೆ ಅವರು ಮೊದಲು ಕೋರ್ಟ್​ ಮ್ಯಾರೇಜ್​ ಮಾಡಿಕೊಳ್ಳಲಿದ್ದಾರೆ. ನಂತರ ಮದುವೆಯ ಸಂಭ್ರಮ ಮೂರು ದಿನಗಳವರೆಗೆ ಮುಂದುವರಿಯುತ್ತದೆ. ಈ ಜೋಡಿಯ ಬದುಕಿನ ಅತ್ಯಂತ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲು ಕುಟುಂಬ ಸದಸ್ಯರು ಮತ್ತು ಕೆಲವು ಸ್ನೇಹಿತರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇರಾ ಅವರ ಆಪ್ತರ ಪ್ರಕಾರ, ಆಮಿರ್ ಖಾನ್ ಅವರು ಮಗಳ ಮದುವೆಯ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ ಮತ್ತು ವೈಯಕ್ತಿಕವಾಗಿ ವಿವಾಹದ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಾಯ್​ಫ್ರೆಂಡ್​ ಜತೆ ಇರಾ ಖಾನ್​ ಬರ್ತ್​​ಡೇ ಆಚರಣೆ​; ಮತ್ತಷ್ಟು ಫೋಟೋ ಹಂಚಿಕೊಂಡ ಆಮಿರ್ ಮಗಳು  

ನೂಪುರ್ ಶಿಖಾರೆ ಅವರು ಫಿಟ್‌ನೆಸ್ ತರಬೇತುದಾರರಾಗಿದ್ದಾರೆ. ಅವರ ಮತ್ತು ಇರಾ ಭೇಟಿ ಜಿಮ್‌ನಲ್ಲಿಯೇ ಆಯಿತು ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರ. ಇರಾ ಖಾನ್​ಗೆ 17 ವರ್ಷ ಇರುವಾಗಲೇ ನೂಪುರ್​ ಶಿಖಾರೆ ತರಬೇತಿ ನೀಡಲು ಪ್ರಾರಂಭಿಸಿದ್ದರು. ಆ ಸಮಯದಲ್ಲಿ ಅವರ ನಡುವೆ ಸ್ನೇಹ ಬೆಳೆದು ಇಬ್ಬರೂ ಪರಸ್ಪರ ಡೇಟಿಂಗ್ ಮಾಡಲು ಆರಂಭಿಸಿದರು. ಕಳೆದ ವರ್ಷ ನವೆಂಬರ್‌ನಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇರಾ ಖಾನ್ ಇನ್ನೂ ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ಆಮಿರ್ ಖಾನ್ ಮತ್ತು ರೀನಾ ದತ್ತಾ ಅವರ ಪುತ್ರಿ ಎಂಬ ಕಾರಣಕ್ಕೆ ಅವರು ಆಗಾಗ ಸುದ್ದಿ ಆಗುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.