ಜೀವ ಬೆದರಿಕೆ ಬಂದಾಗ ಬೆಂಬಲಿಸಿದ್ದು ಶಾರುಖ್ ಖಾನ್: ಕರಣ್ ಜೋಹರ್

Karan Johar: ತಮಗೆ ಜೀವ ಬೆದರಿಕೆ ಬಂದಿದ್ದ ಸಂದರ್ಭದಲ್ಲಿ ಶಾರುಖ್ ಖಾನ್ ಹೇಗೆ ತಮ್ಮ ಬೆಂಬಲಕ್ಕೆ ಬಂದರು ಮಾತ್ರವಲ್ಲದೆ, ನನಗಾಗಿ ತಾವು ಗುಂಡು ಹೊಡಿಸಿಕೊಳ್ಳಲು ಸಹ ಸಿದ್ಧರಾಗಿದ್ದರು ಎಂದು ಕರಣ್ ಹೇಳಿದ್ದಾರೆ.

ಜೀವ ಬೆದರಿಕೆ ಬಂದಾಗ ಬೆಂಬಲಿಸಿದ್ದು ಶಾರುಖ್ ಖಾನ್: ಕರಣ್ ಜೋಹರ್
Follow us
ಮಂಜುನಾಥ ಸಿ.
|

Updated on: Sep 17, 2023 | 8:09 PM

ನಿರ್ದೇಶಕ ಕರಣ್ ಜೋಹರ್​ಗೆ (Karan Johar) ಬಾಲಿವುಡ್​ನ (Bollywood) ದೊಡ್ಡ ಸ್ಟಾರ್ ನಟ-ನಟಿಯರೆಲ್ಲರೂ ಗೆಳೆಯರೇ. ಹೊಸ ಸ್ಟಾರ್ ನಟ-ನಟಿಯರೂ ಸಹ ಕರಣ್ ಜೊತೆ ಬಹಳ ಆತ್ಮೀಯರಾಗಿದ್ದಾರೆ. ಆದರೆ ಕರಣ್ ಜೋಹರ್​ರ ಅತ್ಯಂತ ಆತ್ಮೀಯ ಗೆಳೆಯರಲ್ಲಿ ನಟ ಶಾರುಖ್ ಖಾನ್ ಸಹ ಒಬ್ಬರು. ಈ ಇಬ್ಬರ ಗೆಳೆತನ ಬಹಳ ಹಳೆಯದ್ದು, ಐತಿಹಾಸಿಕ ‘ದಿಲ್ ವಾಲೆ ದುಲ್ಹನಿಯಾ ಲೇಜಾಯೆಂಗೆ’ ಸಿನಿಮಾದಲ್ಲಿ ಈ ಇಬ್ಬರೂ ಒಟ್ಟಿಗೆ ನಟಿಸಿದ್ದರು. ನಿರ್ದೇಶಕ ಆಗಬೇಕು ಎಂಬ ಕರಣ್​ರ ಕನಸಿಗೆ ನೀರುಣಿಸಿದ್ದು ಸ್ವತಃ ಶಾರುಖ್ ಖಾನ್. ಕೇವಲ ಸಿನಿಮಾಗಳ ವಿಷಯದಲ್ಲಿ ಮಾತ್ರವಲ್ಲ, ಜೀವಕ್ಕೆ ಅಪಾಯ ಬಂದಿದ್ದಾಗಲೂ ಶಾರುಖ್ ಖಾನ್ ತಮ್ಮ ಬೆಂಬಲಕ್ಕೆ ನಿಂತಿದ್ದ ವಿಷಯವನ್ನು ಕರಣ್ ಜೋಹರ್ ಬಿಚ್ಚಿಟ್ಟಿದ್ದಾರೆ.

ಕರಣ್ ತಮ್ಮ ಇತ್ತೀಚೆಗಿನ ಸಂದರ್ಶನದಲ್ಲಿ ಶಾರುಖ್ ಖಾನ್ ಬಗ್ಗೆ ಮಾತನಾಡುತ್ತಾ, ನಿರ್ದೇಶಕರಾಗಿ ತಮ್ಮ ‘ಕುಚ್​ ಕುಚ್ ಹೋತಾ ಹೈ’ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಕರಣ್ ಜೋಹರ್​ಗೆ ಜೀವ ಬೆದರಿಕೆ ಬಂದಿತ್ತಂತೆ. ಸಿನಿಮಾ ಬಿಡುಗಡೆ ಮಾಡಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದರಂತೆ. ಬೆದರಿಕೆ ಬಂದಿದ್ದ ಕಾರಣ, ಸಿನಿಮಾದ ಪ್ರೀಮಿಯರ್ ಶೋ ಅನ್ನು ಸರಳವಾಗಿ ಆಯೋಜನೆ ಮಾಡಲಾಗಿತ್ತಂತೆ, ಪೋಷಕರ ಒತ್ತಾಯದಿಂದಾಗಿ ಕರಣ್ ಜೋಹರ್ ಸಹ ರೆಡ್ ಕಾರ್ಪೆಟ್ ವಾಕ್ ಮಾಡದೆ ಪ್ರೀಮಿಯರ್ ನಡೆಯುತ್ತಿದ್ದ ಜಾಗದಲ್ಲಿಯೇ ಸಣ್ಣ ಕೊಠಡಿಯೊಂದರಲ್ಲಿ ಬೇಸರದಿಂದ ಕೂತುಬಿಟ್ಟಿದ್ದರಂತೆ.

ಕರಣ್ ಜೋಹರ್ ತಮ್ಮ ಮೊದಲ ಸಿನಿಮಾದ ಪ್ರೀಮಿಯರ್​ಗೆ ಮುಖ್ಯ ಅತಿಥಿಯಾಗಿ ಆಗಿನ ಲಿಜೆಂಡ್ ಶಮ್ಮಿ ಕಪೂರ್ ಅವರನ್ನು ಆಹ್ವಾನಿಸಿದ್ದರಂತೆ. ಅವರು ಸಹ ತಮ್ಮ ಬೆಂಜ್ ಕಾರಿನಲ್ಲಿ ಬಂದರಂತೆ, ಆ ಇಡೀಯ ವಾತಾವರಣವೇ ಅದ್ಭುತವಾಗಿತ್ತು. ಆಗ ಶಾರುಖ್ ಖಾನ್, ನನ್ನ ರೂಮಿಗೆ ಬಂದು ನನ್ನನ್ನು ಹೊರಗೆ ಕರೆದುಕೊಂಡು ಬಂದರು, ನನ್ನ ಮುಂದೆ ಅವರೇ ನಿಂತುಕೊಂಡರು, ”ಇದು ನಿನ್ನ ಕನಸು, ಕನಸು ನನಸಾಗುತ್ತಿದೆ, ಇದನ್ನು ನೋಡು ಖುಷಿ ಪಡು, ನಿನಗೆ ಏನೂ ಆಗುವುದಿಲ್ಲ, ನಾನು ಗ್ಯಾರೆಂಟಿ, ನನ್ನ ಹಿಂದೆಯೇ ನಿಂತುಕೋ, ನಿನಗೆ ಏನೂ ಆಗದು” ಎಂದಿದ್ದರಂತೆ.

ಇದನ್ನೂ ಓದಿ:ತಮ್ಮ ಸಿನಿಮಾ ನಕಲು ಎಂದು ಒಪ್ಪಿಕೊಂಡ ಕರಣ್ ಜೋಹರ್

ಶಾರುಖ್ ಖಾನ್ ಅಂದು ಬಲವಂತವಾಗಿ ನನ್ನನ್ನು ಹೊರಗೆ ಕರೆತರದೇ ಇದ್ದಿದ್ದರೆ ನನ್ನ ಕನಸು ನನಸಾಗುವುದನ್ನು ನಾನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಶಾರುಖ್ ಖಾನ್ ಅಂದು, ನನಗಾಗಿ ಬಂದೂಕಿನ ಗುಂಡು ಹೊಡೆಸಿಕೊಳ್ಳಲು ಸಹ ತಯಾರಾಗಿದ್ದರು, ಅಂದೇ ನನಗೆ ಅರಿವಾಗಿತ್ತು, ಇದು ಸಾಮಾನ್ಯ ಗೆಳೆತನ ಅಲ್ಲವೆಂದು ಕರಣ್ ಜೋಹರ್ ಹೇಳಿದ್ದಾರೆ. ತಾವು ಗೇ ಎಂಬುದನ್ನು ಸಹ ಕರಣ್ ಜೋಹರ್, ಶಾರುಖ್ ಖಾನ್​ಗೆ ಮೊದಲು ಹೇಳಿದ್ದರಂತೆ, ಶಾರುಖ್ ಖಾನ್ ಮಾತ್ರವೇ ನನ್ನನ್ನು ಆಗ ಗೌರವದಿಂದ ಕಂಡಿದ್ದರು ಎಂದು ಸಹ ಕರಣ್ ಹೇಳಿದ್ದರು, ಈ ವಿಷಯಗಳನ್ನು ತಮ್ಮ ಆತ್ಮಕತೆ ‘ಅನ್​ಸೂಟೆಬಲ್ ಬಾಯ್’ ಪುಸ್ತಕದಲ್ಲಿಯೂ ಬರೆದುಕೊಂಡಿದ್ದಾರೆ.

ಕರಣ್ ಜೋಹರ್ ನಿರ್ದೇಶನದ ‘ಕುಚ್​ ಕುಚ್ ಹೋತಾ ಹೈ’, ‘ಕಭಿ ಖುಷಿ ಕಭಿ ಗಮ್’, ‘ಕಭಿ ಅಲ್ವಿದಾ ನಾ ಕೆಹನಾ’, ‘ಮೈ ನೇಮ್ ಈಸ್ ಖಾನ್’, ‘ಏ ದಿಲ್ ಹೇ ಮುಷ್ಕಿಲ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕರಣ್ ನಿರ್ಮಾಣದ ಕೆಲವು ಸಿನಿಮಾಗಳಲ್ಲಿಯೂ ಶಾರುಖ್ ಖಾನ್ ನಟಿಸಿದ್ದಾರೆ, ಅತಿಥಿ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ