AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ಸಿನಿಮಾ ನಕಲು ಎಂದು ಒಪ್ಪಿಕೊಂಡ ಕರಣ್ ಜೋಹರ್

Rocky Aur Rani Ki Prem Kahani: ಕರಣ್ ಜೋಹರ್ ನಿರ್ದೇಶನದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಹಿಟ್ ಎನಿಸಿಕೊಂಡಿದೆ. ಇತ್ತೀಚೆಗೆ ಕರಣ್ ನೀಡಿರುವ ಸಂದರ್ಶನದಲ್ಲಿ, ತಾವು ಬೇರೆ ಬೇರೆ ನಿರ್ದೇಶಕರ ಐಡಿಯಾ ನಕಲು ಮಾಡಿ ಈ ಸಿನಿಮಾ ನಿರ್ದೇಶಿಸಿರುವುದಾಗಿ ಹೇಳಿಕೊಂಡಿದ್ದಾರೆ.

ತಮ್ಮ ಸಿನಿಮಾ ನಕಲು ಎಂದು ಒಪ್ಪಿಕೊಂಡ ಕರಣ್ ಜೋಹರ್
ಕರಣ್ ಜೋಹರ್
Follow us
ಮಂಜುನಾಥ ಸಿ.
|

Updated on: Sep 07, 2023 | 6:58 PM

ಲೈಗರ್‘ (Liger) ಸಿನಿಮಾದ ಸಹ ನಿರ್ಮಾಣ ಮಾಡಿ ಭರ್ಜರಿಯಾಗಿ ಕೈ ಸುಟ್ಟುಕೊಂಟಿದ್ದ ನಟ, ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್​ಗೆ (Karan Johar) ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ತುಸು ಕೈ ಹಿಡಿದಿದೆ. ಆಲಿಯಾ ಭಟ್, ರಣ್ವೀರ್ ಸಿಂಗ್ ಅನ್ನು ಲೀಡ್ ನಟರನ್ನಾಗಿ ಹಾಕಿ ಸ್ವತಃ ತಾವೇ ಸಿನಿಮಾವನ್ನು ಕರಣ್ ಜೋಹರ್ ನಿರ್ದೇಶಿಸಿದ್ದರು. ತಮ್ಮ ಮಾಮೂಲಿ ಸ್ಟೈಲ್​ನಲ್ಲಿ ಅದ್ಧೂರಿಯಾಗಿ, ಕುಟುಂಬದ ಸುತ್ತ ಸಾಗುವ ಪ್ರೇಮ ಕತೆಯನ್ನು ಕರಣ್ ಜೋಹರ್ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದರು. ಆದರೆ ತಾವು ಸಿನಿಮಾದಲ್ಲಿ ಬೇರೆ ನಿರ್ದೇಶಕರ ಸಿನಿಮಾಗಳಿಂದ ದೃಶ್ಯಗಳನ್ನು, ಐಡಿಯಾಗಳನ್ನು ಕಾಪಿ ಮಾಡಿರುವುದಾಗಿ ಸ್ವತಃ ಕರಣ್ ಒಪ್ಪಿಕೊಂಡಿದ್ದಾರೆ.

‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಸಿನಿಮಾವು ಎರಡು ಭಿನ್ನ ಕುಟುಂಬದ, ಹಿನ್ನೆಲೆಯುಳ್ಳ ಯುವಕ-ಯುವತಿ ಪ್ರೀತಿಸಿ, ಮದುವೆಗೆ ಕುಟುಂಬದವರನ್ನು ಒಪ್ಪಿಸಲು ಯುವಕ, ಯುವತಿಯ ಮನೆಗೆ ಯುವತಿ, ಯುವಕನ ಮನೆಗೆ ಹೋಗಿ ಕೆಲ ಕಾಲ ತಂಗಿ ಅವರೊಟ್ಟಿಗೆ ಬಾಳಿ ಅವರೊಂದಿಗೆ ಹೊಂದಿಕೆ ಸಾಧಿಸಿ ಆ ನಂತರ ಮದುವೆಗೆ ಒಪ್ಪಿಗೆ ಪಡೆವ ಕತೆಯನ್ನು ಒಳಗೊಂಡಿದೆ. ಅದ್ಧೂರಿ ಸೆಟ್​ನಲ್ಲಿ ಬಹುತಾರಾಗಣದಲ್ಲಿ ಸಿನಿಮಾವನ್ನು ಕರಣ್ ಜೋಹರ್ ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿದ್ದಾರೆ.

ಸಿನಿಮಾ ಕುರಿತು ನೀಡಿರುವ ಸಂದರ್ಶನವೊಂರಲ್ಲಿ ಮಾತನಾಡಿರುವ ಕರಣ್ ಜೋಹರ್, ‘ನನ್ನ ಸಿನಿಮಾ ಕಾಪಿ ಎಂಬುದು ನೋಡಿದ ಹಲವರಿಗೆ ಗೊತ್ತಾಗಿದೆ. ಅದರಲ್ಲಿ ವಿಶೇಷವೇನೂ ಇಲ್ಲ. ಯಶ್ ರಾಜ್​ರ ಸಿನಿಮಾದಿಂದ ಹಾಡು ಕಾಪಿ ಮಾಡಿದ್ದೇನೆ. ಹಾಗೆಯೇ ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗಳಿಂದ ಸೆಟ್​ಗಳ ಐಡಿಯಾ, ಸೀನ್​ ಸೆಟಪ್​ಗಳನ್ನು ಕಾಪಿ ಮಾಡಿದ್ದೇನೆ” ಎಂದಿದ್ದಾರೆ.

ಇದನ್ನೂ ಓದಿ:Karan Johar: ಅಬ್ಬಬ್ಬಾ.. ಶರವೇಗದಲ್ಲಿ ಸಿನಿಮಾ ಮಾಡ್ತಿದ್ದಾರೆ ಕರಣ್ ಜೋಹರ್; 12 ತಿಂಗಳಲ್ಲಿ ರಿಲೀಸ್ ಆಗಲಿದೆ 7 ಸಿನಿಮಾ

ಸಂಜಯ್ ಲೀಲಾ ಬನ್ಸಾಲಿಯವರ ಸಿನಿಮಾಗಳ ಮಾದರಿಯಲ್ಲಿಯೇ ಕಲರ್ ಥೀಮ್ ವುಳ್ಳ ಅದ್ಧೂರಿ ಸೆಟ್​, ಅದ್ಧೂರಿ ನೃತ್ಯಗಳನ್ನು ಸಿನಿಮಾದಲ್ಲಿ ಕರಣ್ ಜೋಹರ್ ತೋರಿಸಿದ್ದಾರೆ. ಅದರಲ್ಲಿಯೂ ದುರ್ಗಾ ಮಾತೆಯ ಪೂಜೆಯ ಹಾಡು, ಅದಕ್ಕೆ ಹಾಕಲಾಗಿರುವ ಸೆಟ್​, ಸಂಜಯ್ ಲೀಲಾ ಬನ್ಸಾಲಿಯವರ ಯಥಾವತ್ತು ನಕಲು. ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಸಿನಿಮಾ ನೋಡಿದ ಹಲವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಎತ್ತಿದ್ದರು. ಇದೀಗ ಕರಣ್ ಜೋಹರ್, ಸ್ವತಃ ತಾವು ಸೀನ್​ಗಳನ್ನು, ಐಡಿಯಾಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ.

‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಸಿನಿಮಾ ಜುಲೈ 28ರಂದು ಬಿಡುಗಡೆ ಆಗಿತ್ತು. ಈ ಸಿನಿಮಾವು ವಿಶ್ವದಾದ್ಯಂತ ಸುಮಾರು 175 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾದಲ್ಲಿ ರಣ್ವೀರ್, ಆಲಿಯಾ ಹೊರತಾಗಿ ಜಯಾ ಬಚ್ಚನ್, ಶಬಾನಾ ಆಜ್ಮಿ, ಧರ್ಮೇಂದ್ರ, ನೀನಾ ಗುಪ್ತಾ ಇನ್ನೂ ಹಲವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ
ಪ್ರಧಾನಿ ಮೋದಿಯವರನ್ನು ಭೇಟಿಯಾದ ವೈಭವ್ ಸೂರ್ಯವಂಶಿ
ಪ್ರಧಾನಿ ಮೋದಿಯವರನ್ನು ಭೇಟಿಯಾದ ವೈಭವ್ ಸೂರ್ಯವಂಶಿ
ಪಾಕ್​ಗೆ ಬಿಎಸ್‌ಎಫ್ ನೀಡಿದ ಹೊಡೆತದಿಂದ ಹೊರಬರಲು ವರ್ಷವೇ ಬೇಕು; ಅಮಿತ್ ಶಾ
ಪಾಕ್​ಗೆ ಬಿಎಸ್‌ಎಫ್ ನೀಡಿದ ಹೊಡೆತದಿಂದ ಹೊರಬರಲು ವರ್ಷವೇ ಬೇಕು; ಅಮಿತ್ ಶಾ
ಕಮಲ್ ಹಾಸನ್ ಮೇಲೆ ಕನ್ನಡಿಗರ ಋಣ ಇದೆ, ಕ್ಷಮೆ ಕೇಳಬೇಕು: ಸಾಧುಕೋಕಿಲ
ಕಮಲ್ ಹಾಸನ್ ಮೇಲೆ ಕನ್ನಡಿಗರ ಋಣ ಇದೆ, ಕ್ಷಮೆ ಕೇಳಬೇಕು: ಸಾಧುಕೋಕಿಲ
ಕರಾವಳಿ ಪ್ರಾಂತ್ಯದ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ: ಡಿಕೆ ಶಿವಕುಮಾರ್
ಕರಾವಳಿ ಪ್ರಾಂತ್ಯದ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ: ಡಿಕೆ ಶಿವಕುಮಾರ್
ಮಂಗಳೂರು: ಭಾರಿ ಮಳೆಗೆ ದ್ವೀಪದಂತಾದ ಜಪ್ಪಿನಮೊಗರು
ಮಂಗಳೂರು: ಭಾರಿ ಮಳೆಗೆ ದ್ವೀಪದಂತಾದ ಜಪ್ಪಿನಮೊಗರು
ಕೋಮು ಗಲಭೆಗಳ ವಿಷಯದಲ್ಲಿ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸಿಎಂ ಸೂಚನೆ
ಕೋಮು ಗಲಭೆಗಳ ವಿಷಯದಲ್ಲಿ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸಿಎಂ ಸೂಚನೆ
Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ
Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು