AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಿಣೀತಿ ಚೋಪ್ರಾ-ರಾಘವ್ ಚಡ್ಡಾ ಮದುವೆ ಕರೆಯೋಲೆ ಹೇಗಿದೆ ನೋಡಿ

ರಾಘವ್ ಮತ್ತು ಪರಿಣಿತಿ ಇದೇ ತಿಂಗಳ 24ರಂದು ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಪಂಜಾಬ್ ಸಂಪ್ರದಾಯದಂತೆ ಮದುವೆ ನಡೆಯಲಿದೆ. ವಿವಾಹ ಸಮಾರಂಭಗಳು ಸೆಪ್ಟೆಂಬರ್ 22ರಿಂದ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 24ರವರೆಗೆ ನಡೆಯಲಿದೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ರಿಸೆಪ್ಷನ್ ಕಾರ್ಡ್ ವೈರಲ್ ಆಗಿದೆ.

ಪರಿಣೀತಿ ಚೋಪ್ರಾ-ರಾಘವ್ ಚಡ್ಡಾ ಮದುವೆ ಕರೆಯೋಲೆ ಹೇಗಿದೆ ನೋಡಿ
ಪರಿಣೀತಿ, ರಾಘವ್
ರಾಜೇಶ್ ದುಗ್ಗುಮನೆ
|

Updated on:Sep 07, 2023 | 2:23 PM

Share

ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ (Rgahav Chadha) ಮತ್ತು ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಇದೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸೆಪ್ಟೆಂಬರ್ 24ರಂದು ಇವರ ವಿವಾಹ ಕಾರ್ಯ ರಾಜಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಲಿದೆ. ಸದ್ಯ ಎರಡೂ ಕುಟುಂಬಗಳು ಮದುವೆ ತಯಾರಿಯಲ್ಲಿ ನಿರತವಾಗಿವೆ. ಈ ನಡುವೆ ಪರಿಣೀತಿ ಮತ್ತು ರಾಘವ್ ಅವರ ರಿಸೆಪ್ಷನ್ ಕಾರ್ಡ್ ವೈರಲ್ ಆಗಿದೆ. ಇದರ ಪ್ರಕಾರ ಇಬ್ಬರ ಮದುವೆ ಕಾರ್ಯ ಉದಯಪುರದಲ್ಲಿ ನಡೆಯಲಿದ್ದು, ಚಂಡೀಗಢದಲ್ಲಿ ಆರತಕ್ಷತೆ ಹಮ್ಮಿಕೊಳ್ಳಲಾಗಿದೆ. ಆದರೆ, ಅವರ ಕಡೆಯಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ರಾಘವ್ ಮತ್ತು ಪರಿಣೀತಿ ಇದೇ ತಿಂಗಳ 24ರಂದು ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಪಂಜಾಬ್ ಸಂಪ್ರದಾಯದಂತೆ ಮದುವೆ ನಡೆಯಲಿದೆ. ವಿವಾಹ ಸಮಾರಂಭಗಳು ಸೆಪ್ಟೆಂಬರ್ 22ರಿಂದ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 24ರವರೆಗೆ ನಡೆಯಲಿದೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ರಿಸೆಪ್ಷನ್ ಕಾರ್ಡ್ ವೈರಲ್ ಆಗಿದೆ. ಮದುವೆಯ ಕುರಿತು ಸಂಪೂರ್ಣ ವಿವರ ಈ ಕಾರ್ಡ್​ನಲ್ಲಿದೆ. ಸೆಪ್ಟೆಂಬರ್ 30ರಂದು ಚಂಡೀಗಢದ ತಾಜ್ ಹೋಟೆಲ್‌ನಲ್ಲಿ ಆರತಕ್ಷತೆ ನಡೆಯಲಿದೆ. ಗುರುಗ್ರಾಮದಲ್ಲಿ ರಿಸೆಪ್ಷನ್ ನಡೆಯಲಿದೆ ಎಂದು ಈ ಹಿಂದೆ ವರದಿಯಾಗಿತ್ತು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಇತರ ರಾಜಕೀಯ ನಾಯಕರು ಉದಯಪುರಕ್ಕೆ ಬರಲಿದ್ದಾರೆ. ಅವರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಮದುವೆ ನಡೆಯುವ ಲೀಲಾ ಪ್ಯಾಲೇಸ್ ಬಳಿ ಇರುವ ಐಷಾರಾಮಿ ಹೋಟೆಲ್​ಗಳನ್ನು ಕಾಯ್ದಿರಿಸಲಾಗಿದೆ. ಪರಿಣೀತಿ ಕುಟುಂಬದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಕೂಡ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಐಷಾರಾಮಿ ಹೋಟೆಲ್​ನಲ್ಲಿ ಪರಿಣೀತಿ ಚೋಪ್ರಾ-ರಾಘವ್ ಚಡ್ಡಾ ಮದುವೆ; ಇಲ್ಲಿದೆ ವಿವರ

ಮೇ 13ರಂದು ದೆಹಲಿಯಲ್ಲಿ ರಾಘವ್ ಹಾಗೂ ಪರಿಣೀತಿ ನಿಶ್ಚಿತಾರ್ಥ ನೆರವೇರಿತ್ತು. ಈ ಮೂಲಕ ಪ್ರೀತಿ ವಿಚಾರವನ್ನು ಇವರು ಅಧಿಕೃತ ಮಾಡಿದ್ದರು. ಅಕ್ಟೋಬರ್ 6ರಂದು ಪರಿಣೀತಿ ನಟನೆಯ ‘ಮಿಷನ್ ರಾಣಿಗಂಜ್’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರಚಾರದಲ್ಲಿ ಅವರು ಭಾಗಿ ಆಗೋದು ಅನುಮಾನ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:56 pm, Thu, 7 September 23