AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣಿಯಲ್ಲಿ ನಡೆದ ಭೀಕರ ಘಟನೆಯನ್ನೇ ಸಿನಿಮಾ ಮಾಡಿದರು; ಗೆಲ್ಲುವ ಭರವಸೆಯಲ್ಲಿ ಅಕ್ಷಯ್ ಕುಮಾರ್

ಈ ವರ್ಷದ ಆರಂಭದಲ್ಲಿ ರಿಲೀಸ್ ಆದ ಅಕ್ಷಯ್ ಕುಮಾರ್ ನಟನೆಯ ‘ಸೆಲ್ಫೀ’ ಚಿತ್ರ ಸೋತಿದೆ. ಆ ಬಳಿಕ ರಿಲೀಸ್ ಆದ ಅವರ ಅಭಿನಯದ ‘ಒಹ್ ಮೈ ಗಾಡ್ 2’ ಚಿತ್ರ ಗೆದ್ದಿದೆ. ಈ ಸಿನಿಮಾ ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಹೊಸ ಸ್ಫೂರ್ತಿ ಸಿಕ್ಕಿದೆ.

ಗಣಿಯಲ್ಲಿ ನಡೆದ ಭೀಕರ ಘಟನೆಯನ್ನೇ ಸಿನಿಮಾ ಮಾಡಿದರು; ಗೆಲ್ಲುವ ಭರವಸೆಯಲ್ಲಿ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 07, 2023 | 11:53 AM

Share

ಅಕ್ಷಯ್ ಕುಮಾರ್ (Akshay Kumar) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಒಂದು ವರ್ಷದಲ್ಲಿ ಅವರ ನಟನೆಯ ಕನಿಷ್ಠ ಮೂರು ಸಿನಿಮಾಗಳಾದರೂ ರಿಲೀಸ್ ಆಗುತ್ತವೆ. ಈ ವರ್ಷ ಅಕ್ಷಯ್ ನಟನೆಯ ಮೂರನೇ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಹೌದು, ‘ಮಿಷನ್​ ರಾಣಿಗಂಜ್’ (Mission Raniganj Movie) ಚಿತ್ರ ಅಕ್ಟೋಬರ್ 6ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದ ಫಸ್ಟ್ ಪೋಸ್ಟರ್ ಗಮನ ಸೆಳೆಯುತ್ತಿದೆ. ಈ ಚಿತ್ರ ನೈಜ ಘಟನೆ ಆಧರಿಸಿ ಸಿದ್ಧಗೊಂಡಿರುವುದರಿಂದ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

ಅಕ್ಷಯ್ ಕುಮಾರ್ ಅವರು ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡರು. ಅವರಿಗೆ ಗೆಲುವೇ ಇಲ್ಲ ಎಂಬಂತಾಗಿತ್ತು. ಆದರೆ, ಜನರು ಅವರ ಸಿನಿಮಾ ನೋಡಲು ಬರುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ರಿಲೀಸ್ ಆದ ಅಕ್ಷಯ್ ಕುಮಾರ್ ನಟನೆಯ ‘ಸೆಲ್ಫೀ’ ಚಿತ್ರ ಸೋತಿದೆ. ಆ ಬಳಿಕ ರಿಲೀಸ್ ಆದ ಅವರ ಅಭಿನಯದ ‘ಒಹ್ ಮೈ ಗಾಡ್ 2’ ಚಿತ್ರ ಗೆದ್ದಿದೆ. ಈ ಸಿನಿಮಾ ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಹೊಸ ಸ್ಫೂರ್ತಿ ಸಿಕ್ಕಿದೆ.

‘ಮಿಷನ್ ರಾಣಿಗಂಜ್​’ ಥ್ರಿಲ್ಲಿಂಗ್ ಆಗಿರಲಿದೆ. ರಾಣಿಗಂಜ್​ನ ಕಲ್ಲಿದ್ದಲು ಗಣಿಯಲ್ಲಿ ನಡೆದ ರಕ್ಷಣಾ ಕಾರ್ಯದ ಘಟನೆಯನ್ನು ಈ ಸಿನಿಮಾ ಹೊಂದಿದೆ. ಜಸ್ವಂತ್ ಸಿಂಗ್ ಗಿಲ್ ಅವರು ರಾಣಿಗಂಜ್​ನ ಕಲ್ಲಿದ್ದಲು ಗಣಿಯಲ್ಲಿ ನಡೆದ ಮಿಷನ್ ಒಂದರ ಉಸ್ತುವಾರಿ ವಹಿಸಿದ್ದರು.

ಅದು 1989ರಲ್ಲಿ ನಡೆದ ಘಟನೆ. ಪ್ರವಾಹದಿಂದ ರಾಣಿಗಂಜ್ ಕಲ್ಲಿದ್ದಲು ಗಣಿ ಮುಳುಗಿ ಹೋಗಿತ್ತು. 350 ಅಡಿ ಆಳದಲ್ಲಿ ಅನೇಕರು ಸಿಲುಕಿದ್ದರು. ಗಣಿಯಲ್ಲಿ ಸಿಲುಕಿದ ಎಲ್ಲರನ್ನೂ ಜಸ್ವಂತ್ ಸಿಂಗ್ ಗಿಲ್ ರಕ್ಷಣೆ ಮಾಡಿದ್ದರು. ಈ ಮೂಲಕ ಹೀರೋ ಆದರು. ಈಗ ಜಸ್ವಂತ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ.

ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಪರಿಣೀತಿ ಚೋಪ್ರಾ, ಪವನ್ ಮಲ್ಹೋತ್ರಾ, ರವಿ ಕಿಶನ್, ವರುಣ್ ಬಡೋಲಾ, ರಾಜೇಶ್ ಶರ್ಮಾ, ವಿರೇಂದ್ರ ಸಕ್ಸೇನಾ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಅಕ್ಷಯ್ ಕುಮಾರ್ ಅವರು ಗೆಲುವಿನ ಭರವಸೆಯಲ್ಲಿ ಇದ್ದಾರೆ.

‘ಮಿಷನ್ ರಾಣಿಗಂಜ್’ ಚಿತ್ರದ ಮೊದಲ ಪೋಸ್ಟರ್ ಗಮನ ಸೆಳೆಯುತ್ತಿದೆ. ವಶು ಭಗ್ನಾನಿ, ಜಾಕಿ ಭಗ್ನಾನಿ, ದೀಪ್ಶಿಕಾ ದೇಶ್​ಮುಖ್, ಅಜಯ್ ಕಪೂರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಟಿನು ಸುರೇಶ್ ದೇಸಾಯಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಆಮಿರ್ ಖಾನ್-ಅಕ್ಷಯ್ ಕುಮಾರ್ ಒಟ್ಟಾಗಿ ತೆರೆ ಹಂಚಿಕೊಳ್ಳದಿರಲು ಈ ಘಟನೆಯೇ ಕಾರಣ..

ಈ ಮೊದಲು ಅನೇಕ ಬಯೋಪಿಕ್​ಗಳು ಬಂದಿವೆ. ಕೆಲವನ್ನು ಜನರು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವು ಸಿನಿಮಾಗಳನ್ನು ಜನರು ರಿಜೆಕ್ಟ್ ಮಾಡಿದ್ದಾರೆ. ಅಕ್ಷಯ್ ಕುಮಾರ್ ಈ ಚಿತ್ರದ ಮೂಲಕ ಗೆದ್ದರೆ ಅವರ ಮುಂದಿನ ಸಿನಿಮಾಗಳಿಗೆ ಸಹಕಾರಿ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!