AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧನುಶ್ ಹಾದಿ ಹಿಡಿದ ಸೂರ್ಯಾ, ಬಾಲಿವುಡ್​ ಪದಾರ್ಪಣೆಗೆ ಸಜ್ಜು

Suriya: ತಮಿಳಿನ ಸ್ಟಾರ್ ನಟ ಸೂರ್ಯ, ಬಾಲಿವುಡ್ ಪ್ರವೇಶಿಸಲು ಸಜ್ಜಾಗಿದ್ದಾರೆ. ಮಾಸ್ ಸಿನಿಮಾಗಳ ಜೊತೆಗೆ ಪರ್ಯಾಯ ಮಾದರಿಯ ಸಿನಿಮಾಗಳನ್ನು ಮಾಡುತ್ತಲೇ ಬರುತ್ತಿರುವ ಸೂರ್ಯ ಅಚಾನಕ್ಕಾಗಿ ಹಿಂದಿಗೆ ಹಾರಲು ಸಜ್ಜಾಗಿದ್ದಾರೆ. ಅಂದಹಾಗೆ ಸೂರ್ಯರಿಗೆ ಆಕ್ಷನ್ ಕಟ್ ಹೇಳಲಿರುವ ನಿರ್ದೇಶಕ ಯಾರು?

ಧನುಶ್ ಹಾದಿ ಹಿಡಿದ ಸೂರ್ಯಾ, ಬಾಲಿವುಡ್​ ಪದಾರ್ಪಣೆಗೆ ಸಜ್ಜು
ಸೂರ್ಯಾ
ಮಂಜುನಾಥ ಸಿ.
|

Updated on: Sep 16, 2023 | 9:50 PM

Share

ತಮಿಳಿನ ಸ್ಟಾರ್ ನಟ ಸೂರ್ಯ (Suriya), ತನ್ನ ವಾರಗೆಯ ಇತರೆ ನಟರಿಗಿಂತಲೂ ಬಹಳ ಭಿನ್ನ. ವಾರಗೆಯ ನಟರಾದ ವಿಜಯ್, ಅಜಿತ್, ವಿಶಾಲ್ ಇನ್ನಿತರರು ಮೈಂಡ್​ಲೆಸ್ ಮಾಸ್ ಸಿನಿಮಾಗಳ ಹಿಂದೆ ಬಿದ್ದು ಹಿಟ್ ಮೇಲೆ ಹಿಟ್ ಹೊಡೆಯುತ್ತಿದ್ದರೆ ಸೂರ್ಯಾ ಮಾತ್ರ ‘ಸೂರರೈ ಪೋಟ್ರು’, ‘ಜೈ ಭೀಮ್’ ಅಂಥಹಾ ಸಮಾಜಕ್ಕೆ ಪೂರಕವಾದ, ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಾತ್ರವಲ್ಲದೆ ‘ವಿಕ್ರಂ’ ಸಿನಿಮಾನಲ್ಲಿ ಪಕ್ಕಾ ವಿಲನ್ ಪಾತ್ರ ಮಾಡಿ ಹಲವರ ಹುಬ್ಬೇರುವಂತೆ ಮಾಡಿದ್ದಾರೆ. ಇದೀಗ ಸೂರ್ಯ ಹೊಸ ಹೆಜ್ಜೆ ಇಡಲು ಸಜ್ಜಾಗಿದ್ದು, ಸಹನಟ ಧನುಶ್ ಮಾದರಿಯಲ್ಲಿಯೇ ಬಾಲಿವುಡ್​ನಲ್ಲಿಯೂ ಮಿಂಚಲು ಸಜ್ಜಾಗುತ್ತಿದ್ದಾರೆ.

ಬಾಲಿವುಡ್​ನ ಹಿರಿಯ ನಿರ್ದೇಶಕರೊಬ್ಬರು ತಮ್ಮ ಮುಂದಿನ ಸಿನಿಮಾಕ್ಕೆ ಸೂರ್ಯ ಅವರನ್ನು ಕೇಳಿದ್ದು, ಸೂರ್ಯ ಸಹ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಹಿಂದಿಯ ಸೂಪರ್ ಹಿಟ್ ಸಿನಿಮಾಗಳಾದ ‘ಅಸ್ಕ್’, ‘ರಂಗ್​ ದೇ ಬಸಂತಿ’, ‘ಡೆಲ್ಲಿ 6’, ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶನದ ಹೊಸ ಸಿನಿಮಾದಲ್ಲಿ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಇದನ್ನೂ ಓದಿ:ಇಬ್ಬರು ಸೂಪರ್ ಸ್ಟಾರ್ ನಟರ ಸಿನಿಮಾದ ಭಾಗವಾಗುವ ಅವಕಾಶ ಕೈಬಿಟ್ಟ ನಾನಿ

ರಾಕೇಶ್ ಓಂಪ್ರಕಾಶ್ ಮೆಹ್ರಾ ‘ಕರ್ಣ’ ಹೆಸರಿನ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸೂರ್ಯ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಇಂದಷ್ಟೆ ಓಂ ಪ್ರಕಾಶ್ ಮೆಹ್ತಾ ಅವರ ಕಚೇರಿಯಲ್ಲಿ ಸೂರ್ಯ ಕಾಣಿಸಿಕೊಂಡಿದ್ದಾರೆ. ಓಂ ಪ್ರಕಾಶ್ ಹಾಗೂ ಸೂರ್ಯ ಇಬ್ಬರೂ ಪಾಪಾರಾಟ್ಜಿಗಳ ಮುಂದೆ ಬಂದು ಒಟ್ಟಿಗೆ ಫೋಸು ಸಹ ನೀಡಿದ್ದಾರೆ. ಈ ಇಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಿರುವ ಅನುಮಾನವನ್ನು ಇವರಿಬ್ಬರ ಈ ನಡೆ ಇನ್ನಷ್ಟು ಹೆಚ್ಚಿಸಿದೆ.

ಸೂರ್ಯಾ ತಮಿಳು ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ‘ಕನಗುವ’ ಹೆಸರಿನ ಬಹುಕೋಟಿ ಬಜೆಟ್​ನ ಸಿನಿಮಾದಲ್ಲಿ ಸೂರ್ಯಾ ನಟಿಸುತ್ತಿದ್ದಾರೆ. ಅದಾದ ಬಳಿಕ ಸುಧಾ ಕೊಂಗರಾ ನಿರ್ದೇಶನದ ಹೊಸ ಸಿನಿಮಾದಲ್ಲಿ ಸೂರ್ಯಾ ನಟಿಸಲಿದ್ದಾರೆ. ‘ಸೂರರೈ ಪೋಟ್ರು’ ಬಳಿಕ ಇವರಿಬ್ಬರ ಎರಡನೇ ಸಿನಿಮಾ ಇದಾಗಲಿದೆ. ಅದಾದ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದ ‘ವಿಕ್ರಂ 2’ ಸಿನಿಮಾದಲ್ಲಿ ವಿಲನ್ ಆಗಿ ಸೂರ್ಯಾ ನಟಿಸಲಿದ್ದಾರೆ. ಇವುಗಳ ನಡುವೆ ವೆಟ್ರಿಮಾರನ್ ನಿರ್ದೇಶನದ ‘ವಡಿವಾಸಲ್’ ಸಿನಿಮಾವನ್ನು ಸಹ ಪೂರ್ಣಗೊಳಿಸಬೇಕಿದೆ. ಈ ಎಲ್ಲ ಸಿನಿಮಾಗಳ ನಡುವೆ ಓಂ ಪ್ರಕಾಶ್ ಮೆಹ್ರಾ ಜೊತೆಗೆ ‘ಕರ್ಣ’ ಸಿನಿಮಾ ಯಾವಾಗ ಮಾಡುತ್ತಾರೆ ಎಂಬುದೇ ಕುತೂಹಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ